Homeಕರ್ನಾಟಕಎನ್‍ಡಿಎ: 223, ಯುಪಿಎ: 187, ಇತರೆ: 133. ಇದು ಪೊಲಿಟಿಷಿಯನ್ಸ್ ಪೋಲ್ ವಿಡಿಯೋ ನೋಡಿ

ಎನ್‍ಡಿಎ: 223, ಯುಪಿಎ: 187, ಇತರೆ: 133. ಇದು ಪೊಲಿಟಿಷಿಯನ್ಸ್ ಪೋಲ್ ವಿಡಿಯೋ ನೋಡಿ

ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ...

- Advertisement -
- Advertisement -

| ನಾನುಗೌರಿ ಡೆಸ್ಕ್ |

ರಾಜಕೀಯ ಚಿಂತಕ ಸುಜಿತ್ ನಾಯರ್ ಮತ್ತು ಅವರ ತಂಡ ವಿಭಿನ್ನ ರೀತಿಯಲ್ಲಿ ಚುನಾವಣಾ ಸಮೀಕ್ಷೆ ಮಾಡುತ್ತದೆ. ಅದು ರಾಜಕೀಯ ಕಾರ್ಯಕರ್ತರ ಜೊತೆ ವರ್ಷ ಕಾಲ ಸಂಪರ್ಕ ಇಟ್ಟುಕೊಂಡು ಗ್ರೌಂಡ್‍ಲೆವೆಲ್ ಮಾಹಿತಿ ಆಧರಿಸಿ ಸಮೀಕ್ಷೆ ಮಾಡುತ್ತದೆ. ಅದರ ಪ್ರಕಾರ, 187 ಸೀಟು ಪಡೆಯಲಿರುವ ಯುಪಿಎಗೆ ಹೆಚ್ಚಿನ ಅಡ್ವಾಂಟ್ವೇಜ್ ಇದೆ…

ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ, ಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ಮಾಡಲಿವೆ ಎಂದು ಈ ತಂಡ ಮೊದಲೇ ಹೇಳಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ ಎಂದು ಸಾಕಷ್ಟು ಮೊದಲೇ ಹೇಳಿತ್ತು.

ಸುಜಿತ್‍ರವರು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿರುವ ವಿಡಿಯೋದ ಸಾರಾಂಶ ಇಲ್ಲಿದೆ.
ಕಳೆದ ಒಂದು ವರ್ಷದಿಂದ ಹಿರಿಯ ರಾಜಕೀಯ ನಾಯಕರು, ಮಧ್ಯಮ ಹಂತದ ನಾಯಕರು, ಕಾರ್ಯಕರ್ತರ ಜೊತೆ ಸಂಪರ್ಕ, ಚುನಾವಣೆ ವೇಳೆ ಬೂತ್ ಏಜೆಂಟರೊಂದಿಗೆ ಸಂಪರ್ಕ ಇಟ್ಟುಕೊಂಡು ಈ ಸಮೀಕ್ಷೆ ಮಾಡಲಾಗಿದೆ.

ಎನ್‍ಡಿಎ, ಯುಪಿಎ ಮತ್ತು ಎನ್‍ಎಪಿ( ಯುಪಿಎ, ಎನ್‍ಡಿಎ ಹೊರತಾದ ಪಕ್ಷಗಳು) ಎಂದು ವಿಭಾಗಿಸಿ, ರಾಜ್ಯವಾರು ಯಾವುದಕ್ಕೆ ಎಷ್ಟು ಸೀಟು ಎಂದು ವಿವರಿಸಲಾಗಿದೆ. ರಾಜ್ಯದ ಹೆಸರಿನ ಪಕ್ಕದ ಬ್ರಾಕೆಟಿನಲ್ಲಿ ಒಟ್ಟು ಸೀಟುಗಳ ಸಂಖ್ಯೆಯಿದೆ.

ಅಂಡಮಾನ್ ನಿಕೋಬಾರ್ (1)
ಎನ್‍ಡಿಎ: 0 ಯುಪಿಎ: 1

ಆಂಧಪ್ರದೇಶ (25)
ಎನ್‍ಡಿಎ: 0 ಯುಪಿಎ:2 ಎನ್‍ಎಪಿ: ವೈಎಸ್‍ಆರ್‍ಸಿ: 15, ಟಿಡಿಪಿ: 8

ಅರುಣಾಚಲ ಪ್ರದೇಶ (2)
ಎನ್ಡಿಎ: 1, ಎನ್‍ಎಪಿ: 1

ಛತ್ತೀಸ್‍ಗಡ್ (11)
ಎನ್ಡಿಎ: 04 ಯುಪಿಎ:07

ದಾದ್ರಾ (1)
ಎನ್‍ಡಿಎ: 1 ಯುಪಿಎ: 0

ಚಂಡಿಗಡ್ (1)
ಎನ್‍ಡಿಎ: 0, ಯುಪಿಎ: 1

ಬಿಹಾರ್ (40)
ಎನ್ಡಿಎ: 20 (ಬಿಜೆಪಿ: 8, ಜೆಡಿಯು: 11, ಎಲ್‍ಜೆಪಿ: 1), ಯುಪಿಎ: 19 ( ಕಾಂಗ್ರೆಸ್ 06, ಆರ್‍ಜೆಡಿ: 13), ಇತರೆ: 1

ಗೋವಾ (2)
ಎನ್‍ಡಿಎ: 1, ಯುಪಿಎ: 1

ಗುಜರಾತ್ (26)
ಎನ್‍ಡಿಎ: 19, ಯುಪಿಎ: 07

ದಾಮನ್-ಡಿಯು( 1)
ಎನ್‍ಡಿಎ : 1

ದೆಹಲಿ (7)
ಎನ್‍ಡಿಎ: 3, ಯುಪಿಎ: 1, ಇತರೆ (ಆಪ್): 3

ಜಮ್ಮು-ಕಾಶ್ಮೀರ (6)
ಎನ್‍ಡಿಎ: 02, ಯುಪಿಎ: 03, ಇತರೆ: 01

ಜಾರ್ಖಂಡ್( 14)
ಎನ್‍ಡಿಎ :04, ಯುಪಿಎ: 10 (ಕಾಂಗ್ರೆಸ್ :04, ಜೆಎಂಎಂ: 06)

ಹರ್ಯಾಣ (10)
ಎನ್‍ಡಿಎ: 03, ಯುಪಿಎ:À 06 ಇತರೆ: 01

ಹಿಮಾಚಲ ಪ್ರದೇಶ (4)
ಎನ್‍ಡಿಎ: 03, ಯುಪಿಎ: 01

ಲಕ್ಷದ್ವೀಪ (1)
ಎನ್ಡಿಎ: 0. ಯುಪಿಎ: 1

ಮಹಾರಾಷ್ಟ್ರ ( 48)
ಎನ್‍ಡಿಎ: 28 (ಬಿಜೆಪಿ: 16, ಶಿವಸೇನಾ: 12), ಯುಪಿಎ: 18 (ಕಾಂಗ್ರೆಸ್: 09, ಎನ್‍ಸಿಪಿ: 09),
ಇತರೆ: 02

ಕರ್ನಾಟಕ (28)
ಎನ್ಡಿಎ: 18, ಯುಪಿಎ: 10 (ಕಾಂಗ್ರೆಸ್ 07, ಜೆಡಿಎಸ್: 03)

ಕೇರಳ (20)
ಎನ್‍ಡಿಎ: 01, ಯುಪಿಎ: 13, ಇತರೆ( ಸಿಪಿಐ/ಸಿಪಿಎಂ): 06

ಮಿಜೊರಾಂ (1)
ಇತರೆ: 01

ಮಧ್ಯಪ್ರದೇಶ (29)
ಎನ್‍ಡಿಎ: 19, ಯುಪಿಎ: 10

ಮಣಿಪುರ (2)
ಯುಪಿಎ: 02

ಮೇಘಾಲಯ (2)
ಯುಪಿಎ: 02

ಪುದುಚೇರಿ (1)
ಯುಪಿಎ: 01

ಪಂಜಾಬ್ (13)
ಎನ್‍ಡಿಎ: 03, ಯುಪಿಎ: 09, ಇತರೆ(ಆಪ್): 01

ಒರಿಸ್ಸಾ (21)
ಎನ್‍ಡಿಎ: 06, ಯುಪಿಎ: 01, ಇತರೆ (ಬಿಜೆಡಿ): 14

ರಾಜಸ್ತಾನ್ ( 25)
ಎನ್‍ಡಿಎ: 16, ಯುಪಿಎ:09

ತಮಿಳುನಾಡು (39)
ಎನ್‍ಡಿಎ: 07 (ಬಿಜೆಪಿ: 1. ಎಐಎಡಿಎಂಕೆ: 6), ಯುಪಿಎ: 29 (ಡಿಎಂಕೆ: 25, ಕಾಂಗ್ರೆಸ್: 04),
ಇತರೆ: 01

ತೆಲಂಗಾಣ(17)
ಎನ್‍ಡಿಎ: 01, ಯುಪಿಎ: 02, ಇತರೆ: 13( ಟಿಆರ್‍ಎಸ್: 12, ಎಐಎಂಎಂ: 01)

ಸಿಕ್ಕಿಂ(1)
ಇತರೆ: 01

ಉತ್ತರಪ್ರದೇಶ(80)
ಎನ್‍ಡಿಎ: 40, ಯುಪಿಎ: 05, ಇತರೆ: 35 (ಬಿಎಸ್‍ಪಿ: 20, ಕಾಂಗ್ರೆಸ್: 15)

ಉತ್ತರಾಖಂಡ(5)
ಎನ್‍ಡಿಎ: 03, ಯುಪಿಎ: 02

ತ್ರಿಪುರ(2)
ಎನ್‍ಡಿಎ: 01, ಯುಪಿಎ: 01

ಪಶ್ಚಿಮ ಬಂಗಾಳ(42)
ಎನ್‍ಡಿಎ: 13, ಯುಪಿಎ:02, ಇತರೆ( ಟಿಎಂಸಿ): 27

ಯಾವ ಕೂಟಕ್ಕೆ ಎಷ್ಟು? ಎನ್‍ಡಿಎ:

223, ಯುಪಿಎ: 187, ಎನ್‍ಎಪಿ( ಇತರೆ): 133

ಎನ್‍ಡಿಎಗೆ ಸರಳ ಬಹುಮತಕ್ಕೆ 49 ಸೀಟು ಕೊರತೆ. ಅದು ಯಾರ ಬೆಂಬಲ ಪಡೆಯಬಹುದು?
ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಆಶ್ಚರ್ಯಕರವಾಗಿ ಬಿಎಸ್‍ಪಿ(20), ಇದೆಲ್ಲ ಸೇರಿದರೆ 62 ಸೀಟು.
ಆಗ ಎನ್ಡಿಎ: 223 + 62= 285 ( ಮಾಯಾವತಿಗೆ ಉಪ ಪ್ರಧಾನಿ ಪಟ್ಟ ಕೊಡಬಹುದು)

ಯುಪಿಎಗೆ ಸರಳ ಬಹುಮತಕ್ಕೆ 85 ಸೀಟುಗಳ ಕೊರತೆ. ಅದಕ್ಕೆ ಯಾರ್ಯಾರು ಬೆಂಬಲ ಕೊಡಬಹದು?
ಟಿಎಂಸಿ(27),ಟಿಡಿಪಿ(08), ಆಪ್(04), ಬಿಎಸ್‍ಪಿ(20), ಎಸ್‍ಪಿ(15), ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಇದೆಲ್ಲ ಸೇರಿದರೆ 116.
ಆಗ ಯುಪಿಎ: 187 + 116= 303,  ಅಡ್ವಂಟೇಜ್ ಎಂದರೆ, ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯನ್ನು ಇತರರಿಗೆ ಬಿಟ್ಟು ಕೊಡಲು ರೆಡಿ ಇರುವುದು. ಎನ್‍ಡಿಎದಲ್ಲಿ ಸದ್ಯಕ್ಕೆ ಇದು ಅಸಾಧ್ಯ.

ಇನ್ನು ಥರ್ಡ್ ಫ್ರಂಟ್ ವಿಚಾರ. ಈ ಸಲ ಇದು ಅಸಾಧ್ಯ ಅನಿಸುತ್ತದೆ. ಯುಪಿಎ ಮತ್ತು ಎನ್‍ಡಿಎಗಳಿಂದ ಸಮಾನ ದೂರ ಕಾಯ್ದುಕೊಂಡ ಈ ಗುಂಪಿಗೆ 133 ಸೀಟು ಸಿಗಲಿವೆ. ಯುಪಿಎ ಬಾಹ್ಯ ಬೆಂಬಲ ಪಡೆಯುವ ಸಾಧ್ಯತೆಯೂ ಅಷ್ಟಾಗಿಲ್ಲ. ಯುಪಿಎ ಮತ್ತು ಎನ್‍ಡಿಎನಲ್ಲಿರುವ ಮಿತ್ರಪಕ್ಷಗಳನ್ನು ಸೆಳೆಯುವುದೂ ಕಷ್ಟ…

ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ…
ಮೇ 23ಕ್ಕೆ ಕಾಯೋಣ…

ರಾಜಕಾರಣಿಗಳ ಎಕ್ಸಿಟ್ ಪೋಲ್: ಎನ್.ಡಿ.ಎ ಗೆ 223. ಇದೇ ಸತ್ಯಕ್ಕೆ ಹತ್ತಿರವಾ?

ಅವರೇನು ಹೇಳುತ್ತಾರೆ ನೋಡೋಣ. ವಿಡಿಯೋ ನೋಡಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....