| ನಾನುಗೌರಿ ಡೆಸ್ಕ್ |
ರಾಜಕೀಯ ಚಿಂತಕ ಸುಜಿತ್ ನಾಯರ್ ಮತ್ತು ಅವರ ತಂಡ ವಿಭಿನ್ನ ರೀತಿಯಲ್ಲಿ ಚುನಾವಣಾ ಸಮೀಕ್ಷೆ ಮಾಡುತ್ತದೆ. ಅದು ರಾಜಕೀಯ ಕಾರ್ಯಕರ್ತರ ಜೊತೆ ವರ್ಷ ಕಾಲ ಸಂಪರ್ಕ ಇಟ್ಟುಕೊಂಡು ಗ್ರೌಂಡ್‍ಲೆವೆಲ್ ಮಾಹಿತಿ ಆಧರಿಸಿ ಸಮೀಕ್ಷೆ ಮಾಡುತ್ತದೆ. ಅದರ ಪ್ರಕಾರ, 187 ಸೀಟು ಪಡೆಯಲಿರುವ ಯುಪಿಎಗೆ ಹೆಚ್ಚಿನ ಅಡ್ವಾಂಟ್ವೇಜ್ ಇದೆ…
ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ, ಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ಮಾಡಲಿವೆ ಎಂದು ಈ ತಂಡ ಮೊದಲೇ ಹೇಳಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ ಎಂದು ಸಾಕಷ್ಟು ಮೊದಲೇ ಹೇಳಿತ್ತು.
ಸುಜಿತ್‍ರವರು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿರುವ ವಿಡಿಯೋದ ಸಾರಾಂಶ ಇಲ್ಲಿದೆ.
ಕಳೆದ ಒಂದು ವರ್ಷದಿಂದ ಹಿರಿಯ ರಾಜಕೀಯ ನಾಯಕರು, ಮಧ್ಯಮ ಹಂತದ ನಾಯಕರು, ಕಾರ್ಯಕರ್ತರ ಜೊತೆ ಸಂಪರ್ಕ, ಚುನಾವಣೆ ವೇಳೆ ಬೂತ್ ಏಜೆಂಟರೊಂದಿಗೆ ಸಂಪರ್ಕ ಇಟ್ಟುಕೊಂಡು ಈ ಸಮೀಕ್ಷೆ ಮಾಡಲಾಗಿದೆ.
ಎನ್‍ಡಿಎ, ಯುಪಿಎ ಮತ್ತು ಎನ್‍ಎಪಿ( ಯುಪಿಎ, ಎನ್‍ಡಿಎ ಹೊರತಾದ ಪಕ್ಷಗಳು) ಎಂದು ವಿಭಾಗಿಸಿ, ರಾಜ್ಯವಾರು ಯಾವುದಕ್ಕೆ ಎಷ್ಟು ಸೀಟು ಎಂದು ವಿವರಿಸಲಾಗಿದೆ. ರಾಜ್ಯದ ಹೆಸರಿನ ಪಕ್ಕದ ಬ್ರಾಕೆಟಿನಲ್ಲಿ ಒಟ್ಟು ಸೀಟುಗಳ ಸಂಖ್ಯೆಯಿದೆ.
ಅಂಡಮಾನ್ ನಿಕೋಬಾರ್ (1)
ಎನ್‍ಡಿಎ: 0 ಯುಪಿಎ: 1
ಆಂಧಪ್ರದೇಶ (25)
ಎನ್‍ಡಿಎ: 0 ಯುಪಿಎ:2 ಎನ್‍ಎಪಿ: ವೈಎಸ್‍ಆರ್‍ಸಿ: 15, ಟಿಡಿಪಿ: 8
ಅರುಣಾಚಲ ಪ್ರದೇಶ (2)
ಎನ್ಡಿಎ: 1, ಎನ್‍ಎಪಿ: 1
ಛತ್ತೀಸ್‍ಗಡ್ (11)
ಎನ್ಡಿಎ: 04 ಯುಪಿಎ:07
ದಾದ್ರಾ (1)
ಎನ್‍ಡಿಎ: 1 ಯುಪಿಎ: 0
ಚಂಡಿಗಡ್ (1)
ಎನ್‍ಡಿಎ: 0, ಯುಪಿಎ: 1
ಬಿಹಾರ್ (40)
ಎನ್ಡಿಎ: 20 (ಬಿಜೆಪಿ: 8, ಜೆಡಿಯು: 11, ಎಲ್‍ಜೆಪಿ: 1), ಯುಪಿಎ: 19 ( ಕಾಂಗ್ರೆಸ್ 06, ಆರ್‍ಜೆಡಿ: 13), ಇತರೆ: 1
ಗೋವಾ (2)
ಎನ್‍ಡಿಎ: 1, ಯುಪಿಎ: 1
ಗುಜರಾತ್ (26)
ಎನ್‍ಡಿಎ: 19, ಯುಪಿಎ: 07
ದಾಮನ್-ಡಿಯು( 1)
ಎನ್‍ಡಿಎ : 1
ದೆಹಲಿ (7)
ಎನ್‍ಡಿಎ: 3, ಯುಪಿಎ: 1, ಇತರೆ (ಆಪ್): 3
ಜಮ್ಮು-ಕಾಶ್ಮೀರ (6)
ಎನ್‍ಡಿಎ: 02, ಯುಪಿಎ: 03, ಇತರೆ: 01
ಜಾರ್ಖಂಡ್( 14)
ಎನ್‍ಡಿಎ :04, ಯುಪಿಎ: 10 (ಕಾಂಗ್ರೆಸ್ :04, ಜೆಎಂಎಂ: 06)
ಹರ್ಯಾಣ (10)
ಎನ್‍ಡಿಎ: 03, ಯುಪಿಎ:À 06 ಇತರೆ: 01
ಹಿಮಾಚಲ ಪ್ರದೇಶ (4)
ಎನ್‍ಡಿಎ: 03, ಯುಪಿಎ: 01
ಲಕ್ಷದ್ವೀಪ (1)
ಎನ್ಡಿಎ: 0. ಯುಪಿಎ: 1
ಮಹಾರಾಷ್ಟ್ರ ( 48)
ಎನ್‍ಡಿಎ: 28 (ಬಿಜೆಪಿ: 16, ಶಿವಸೇನಾ: 12), ಯುಪಿಎ: 18 (ಕಾಂಗ್ರೆಸ್: 09, ಎನ್‍ಸಿಪಿ: 09),
ಇತರೆ: 02
ಕರ್ನಾಟಕ (28)
ಎನ್ಡಿಎ: 18, ಯುಪಿಎ: 10 (ಕಾಂಗ್ರೆಸ್ 07, ಜೆಡಿಎಸ್: 03)
ಕೇರಳ (20)
ಎನ್‍ಡಿಎ: 01, ಯುಪಿಎ: 13, ಇತರೆ( ಸಿಪಿಐ/ಸಿಪಿಎಂ): 06
ಮಿಜೊರಾಂ (1)
ಇತರೆ: 01
ಮಧ್ಯಪ್ರದೇಶ (29)
ಎನ್‍ಡಿಎ: 19, ಯುಪಿಎ: 10
ಮಣಿಪುರ (2)
ಯುಪಿಎ: 02
ಮೇಘಾಲಯ (2)
ಯುಪಿಎ: 02
ಪುದುಚೇರಿ (1)
ಯುಪಿಎ: 01
ಪಂಜಾಬ್ (13)
ಎನ್‍ಡಿಎ: 03, ಯುಪಿಎ: 09, ಇತರೆ(ಆಪ್): 01
ಒರಿಸ್ಸಾ (21)
ಎನ್‍ಡಿಎ: 06, ಯುಪಿಎ: 01, ಇತರೆ (ಬಿಜೆಡಿ): 14
ರಾಜಸ್ತಾನ್ ( 25)
ಎನ್‍ಡಿಎ: 16, ಯುಪಿಎ:09
ತಮಿಳುನಾಡು (39)
ಎನ್‍ಡಿಎ: 07 (ಬಿಜೆಪಿ: 1. ಎಐಎಡಿಎಂಕೆ: 6), ಯುಪಿಎ: 29 (ಡಿಎಂಕೆ: 25, ಕಾಂಗ್ರೆಸ್: 04),
ಇತರೆ: 01
ತೆಲಂಗಾಣ(17)
ಎನ್‍ಡಿಎ: 01, ಯುಪಿಎ: 02, ಇತರೆ: 13( ಟಿಆರ್‍ಎಸ್: 12, ಎಐಎಂಎಂ: 01)
ಸಿಕ್ಕಿಂ(1)
ಇತರೆ: 01
ಉತ್ತರಪ್ರದೇಶ(80)
ಎನ್‍ಡಿಎ: 40, ಯುಪಿಎ: 05, ಇತರೆ: 35 (ಬಿಎಸ್‍ಪಿ: 20, ಕಾಂಗ್ರೆಸ್: 15)
ಉತ್ತರಾಖಂಡ(5)
ಎನ್‍ಡಿಎ: 03, ಯುಪಿಎ: 02
ತ್ರಿಪುರ(2)
ಎನ್‍ಡಿಎ: 01, ಯುಪಿಎ: 01
ಪಶ್ಚಿಮ ಬಂಗಾಳ(42)
ಎನ್‍ಡಿಎ: 13, ಯುಪಿಎ:02, ಇತರೆ( ಟಿಎಂಸಿ): 27
ಯಾವ ಕೂಟಕ್ಕೆ ಎಷ್ಟು? ಎನ್‍ಡಿಎ:
223, ಯುಪಿಎ: 187, ಎನ್‍ಎಪಿ( ಇತರೆ): 133
ಎನ್‍ಡಿಎಗೆ ಸರಳ ಬಹುಮತಕ್ಕೆ 49 ಸೀಟು ಕೊರತೆ. ಅದು ಯಾರ ಬೆಂಬಲ ಪಡೆಯಬಹುದು?
ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಆಶ್ಚರ್ಯಕರವಾಗಿ ಬಿಎಸ್‍ಪಿ(20), ಇದೆಲ್ಲ ಸೇರಿದರೆ 62 ಸೀಟು.
ಆಗ ಎನ್ಡಿಎ: 223 + 62= 285 ( ಮಾಯಾವತಿಗೆ ಉಪ ಪ್ರಧಾನಿ ಪಟ್ಟ ಕೊಡಬಹುದು)
ಯುಪಿಎಗೆ ಸರಳ ಬಹುಮತಕ್ಕೆ 85 ಸೀಟುಗಳ ಕೊರತೆ. ಅದಕ್ಕೆ ಯಾರ್ಯಾರು ಬೆಂಬಲ ಕೊಡಬಹದು?
ಟಿಎಂಸಿ(27),ಟಿಡಿಪಿ(08), ಆಪ್(04), ಬಿಎಸ್‍ಪಿ(20), ಎಸ್‍ಪಿ(15), ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಇದೆಲ್ಲ ಸೇರಿದರೆ 116.
ಆಗ ಯುಪಿಎ: 187 + 116= 303, ಅಡ್ವಂಟೇಜ್ ಎಂದರೆ, ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯನ್ನು ಇತರರಿಗೆ ಬಿಟ್ಟು ಕೊಡಲು ರೆಡಿ ಇರುವುದು. ಎನ್‍ಡಿಎದಲ್ಲಿ ಸದ್ಯಕ್ಕೆ ಇದು ಅಸಾಧ್ಯ.
ಇನ್ನು ಥರ್ಡ್ ಫ್ರಂಟ್ ವಿಚಾರ. ಈ ಸಲ ಇದು ಅಸಾಧ್ಯ ಅನಿಸುತ್ತದೆ. ಯುಪಿಎ ಮತ್ತು ಎನ್‍ಡಿಎಗಳಿಂದ ಸಮಾನ ದೂರ ಕಾಯ್ದುಕೊಂಡ ಈ ಗುಂಪಿಗೆ 133 ಸೀಟು ಸಿಗಲಿವೆ. ಯುಪಿಎ ಬಾಹ್ಯ ಬೆಂಬಲ ಪಡೆಯುವ ಸಾಧ್ಯತೆಯೂ ಅಷ್ಟಾಗಿಲ್ಲ. ಯುಪಿಎ ಮತ್ತು ಎನ್‍ಡಿಎನಲ್ಲಿರುವ ಮಿತ್ರಪಕ್ಷಗಳನ್ನು ಸೆಳೆಯುವುದೂ ಕಷ್ಟ…
ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ…
ಮೇ 23ಕ್ಕೆ ಕಾಯೋಣ…
ರಾಜಕಾರಣಿಗಳ ಎಕ್ಸಿಟ್ ಪೋಲ್: ಎನ್.ಡಿ.ಎ ಗೆ 223. ಇದೇ ಸತ್ಯಕ್ಕೆ ಹತ್ತಿರವಾ?
ಅವರೇನು ಹೇಳುತ್ತಾರೆ ನೋಡೋಣ. ವಿಡಿಯೋ ನೋಡಿ



All the best Congress