ಹರಿಯಾಣ ಸರ್ಕಾರವು ರಾಜ್ಯದ ಒಂಬತ್ತು ಮಹಿಳಾ ಹಾಕಿ ಆಟಗಾರರಿಗೆ ತಲಾ 50 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ಹೇಳಿದ್ದಾರೆ. “ಹರಿಯಾಣದ ಒಲಿಂಪಿಕ್ ಮಹಿಳಾ ಹಾಕಿ ತಂಡದ ಒಂಬತ್ತು ಸದಸ್ಯರಿಗೆ ಹರಿಯಾಣ ಸರ್ಕಾರ ತಲಾ 50 ಲಕ್ಷ ರೂಪಾಯಿಗಳನ್ನು ನೀಡುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಟೋಕಿಯೊದಲ್ಲಿ ಶುಕ್ರವಾರ(ಇಂದು) ನಡೆದ ಕಂಚಿನ ಪದಕದ ಪ್ಲೇ-ಆಫ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-4 ಅಂತರದಲ್ಲಿ ಸೋತ ಭಾರತೀಯ ಮಹಿಳಾ ಹಾಕಿ ತಂಡ ಒಲಿಂಪಿಕ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಹಿಳಾ ತಂಡವನ್ನು ಮುಖ್ಯಮಂತ್ರಿ ಅಭಿನಂದಿಸಿದ್ದಾರೆ.
ಒಲಿಂಪಿಕ್ ಇತಿಹಾಸದಲ್ಲೇ ಭಾರತೀಯ ಮಹಿಳಾ ಹಾಕಿ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ತಲುಪಿತ್ತು. ಆದರೆ ಅರ್ಜೆಂಟೀನಾ ವಿರುದ್ದ ಸೆಣಸಿದರೂ, 1-2 ಅಂತರದಲ್ಲಿ ಸೋಲಬೇಕಾಗಿತ್ತು.
ಇದನ್ನೂ ಓದಿ: ‘ತಂಡದಲ್ಲಿ ದಲಿತರು ಹೆಚ್ಚು ಇದ್ದಿದ್ದರಿಂದ ಸೋಲಾಯಿತು!’; ಸಾಧಕಿ ವಂದನಾಗೆ ಜಾತಿ ನಿಂದನೆ
ಇಂದು ಭಾರತೀಯ ಆಟಗಾರರು ಮೊದಲಾರ್ಧದಲ್ಲಿ 3-2 ಮುನ್ನಡೆ ಸಾಧಿಸಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಗ್ರೇಟ್ ಬ್ರಿಟನ್ ಎರಡು ಗೋಲ್ ಹೊಡೆದು ಪಂದ್ಯವನ್ನು ಭಾರತದ ಕೈಯಿಂದ ಕಸಿದುಕೊಂಡಿತು.
मुख्यमंत्री श्री @mlkhattar ने #Tokyo2020 में भारतीय महिला #Hockey टीम के शानदार प्रदर्शन पर प्रशंसा करते हुए हॉकी टीम में शामिल हरियाणा की 9 बेटियों को 50-50 लाख रुपए प्रति खिलाड़ी नकद पुरस्कार देने की घोषणा की और टीम को बधाई व शुभकामनाएं दीं। pic.twitter.com/v4HPzCM9gZ
— CMO Haryana (@cmohry) August 6, 2021
ತಂಡದ ನಾಯಕಿ ರಾಣಿ ಅವರ ತಂದೆ ರಾಂಪಾಲ್ ಕುರುಕ್ಷೇತ್ರದ ತನ್ನ ಶಹಾಬಾದ್‌ನ ಮನೆಯಲ್ಲಿ ಮಾಧ್ಯಮಳೊಂದಿಗೆ ಮಾತನಾಡುತ್ತಾ, “ಭಾರತ ತಂಡವು ಚೆನ್ನಾಗಿ ಆಡಿತು, ಆದರೆ ದುರಾದೃಷ್ಟವಶಾತ್ ತನ್ನ ಮೊದಲ ಒಲಿಂಪಿಕ್ ಪದಕವನ್ನು ಪಡೆದುಕೊಳ್ಳಲು ವಿಫಲವಾಯಿತು” ಎಂದು ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ತಂಡವು ತೋರಿದ ಪ್ರದರ್ಶನವು ದೇಶದಲ್ಲಿ ಆಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಯುವ ಜನತೆ ಕ್ರೀಡೆಗೆ ತೆರೆದುಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಗೋಲ್‌ಕೀಪರ್ ಸವಿತಾ ಪುನಿಯಾ ಅವರ ತಂದೆ ಮಹೇಂದರ್ ಪುನಿಯಾ ಕೂಡಾ ನಿರಾಶೆಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. “ಪಂದ್ಯದ ಫಲಿತಾಂಶವು ಅವರ ಕಡೆ ಇಲ್ಲದಿರಬಹುದು, ಆದರೆ ಅವರು ಚೆನ್ನಾಗಿ ಆಡಿದರು” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ


