Homeಅಂತರಾಷ್ಟ್ರೀಯಚೀನಾದಲ್ಲಿ ಏರಿಕೆಯಾದ ಕೊರೊನಾ: ಸ್ಥಳೀಯವಾಗಿ 80 ಪ್ರಕರಣಗಳು ಪತ್ತೆ

ಚೀನಾದಲ್ಲಿ ಏರಿಕೆಯಾದ ಕೊರೊನಾ: ಸ್ಥಳೀಯವಾಗಿ 80 ಪ್ರಕರಣಗಳು ಪತ್ತೆ

- Advertisement -
- Advertisement -

ಚೀನಾದಲ್ಲಿ ಏಕಾಏಕಿ ಹೊಸ 124 ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿದ್ದು, ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸ್ಥಳೀಯವಾಗಿ 80 ಕೊರೊನಾ ಸೋಂಕಿತರಿದ್ದು, ಸೋಂಕು ಹರಡುವ ಆತಂಕ ಹೆಚ್ಚಾಗಿದೆ.

ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಆಗಸ್ಟ್ 5 ರಂದು ಚೀನಾದಲ್ಲಿ 124 ಹೊಸ ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿವೆ. ಇದರ ಹಿಂದಿನ ದಿನಕ್ಕಿಂತ 85 ಪ್ರಕರಣಗಳು ಹೆಚ್ಚಾಗಿದೆ ಎಂದು ತಿಳಿಸಿದೆ.

ಹೊಸದಾಗಿ ದೃಢಪಟ್ಟ 124 ಸೋಂಕುಗಳಲ್ಲಿ 80 ಪ್ರಕರಣಗಳು  ಸ್ಥಳೀಯವಾಗಿ ಹರಡಿದೆ ಎಂದು ಆರೋಗ್ಯ ಪ್ರಾಧಿಕಾರ ಹೇಳಿದೆ. ಕಳೆದ ದಿನ 62 ಸ್ಥಳೀಯ ಪ್ರಕರಣಗಳು ವರದಿಯಾಗಿದ್ದವು.

ಇದನ್ನೂ ಓದಿ: ಕೇರಳದಲ್ಲಿ ಕೊರೊನಾ ಏರಿಕೆ: ವೀಕೆಂಡ್ ಲಾಕ್‌ಡೌನ್, ಕೇಂದ್ರದಿಂದ ತಂಡ ರವಾನೆ

ಸ್ಥಳೀಯ ಪ್ರಕರಣಗಳು ಪೂರ್ವ ಜಿಯಾಂಗ್ಸು ಪ್ರಾಂತ್ಯದಲ್ಲಿ ಹೆಚ್ಚಾಗಿವೆ. ಈ ಪ್ರದೇಶದಲ್ಲಿ ಆಗಸ್ಟ್ 5 ಕ್ಕೆ 61 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಹಿಂದಿನ ದಿನಕ್ಕಿಂತ 40 ಪ್ರಕರಣಗಳು ಹೆಚ್ಚಾಗಿದೆ. ಇನ್ನು 58 ಲಕ್ಷಣರಹಿತ ಕೊರೊನಾ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಯಾವುದೇ ಸಾವುಗಳು ವರದಿಯಾಗಿಲ್ಲ.

ಇತ್ತ ಭಾರತದಲ್ಲೂ ದೈನಂದಿನ ಪ್ರಕರಣಗಳಲ್ಲಿ ಹೆಚ್ಚಳ ಕಾಣುತ್ತಿದ್ದು, ಅದರಲಗಲಿ ಕೇರಳದ ಪಾಲು ಹೆಚ್ಚಿದೆ. ಕರ್ನಾಟಕವು ಕೇರಳ ಮತ್ತು ಮಹರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ನೆಗಟಿವ್ ವರದಿ ಕಡ್ಡಾಯಗೊಳಿಸಿದೆ.


ಇದನ್ನೂ ಓದಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಏರಿಕೆ: 43,509 ಮಂದಿಗೆ ಸೋಂಕು, 634 ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...