Homeಮುಖಪುಟಹರಿಯಾಣ ಚುನಾವಣಾ ಫಲಿತಾಂಶ: ಅತ್ಯಾಚಾರ ಅಪರಾಧಿ ರಾಮ್ ರಹೀಮ್ ಪ್ರಭಾವವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ!

ಹರಿಯಾಣ ಚುನಾವಣಾ ಫಲಿತಾಂಶ: ಅತ್ಯಾಚಾರ ಅಪರಾಧಿ ರಾಮ್ ರಹೀಮ್ ಪ್ರಭಾವವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ!

- Advertisement -
- Advertisement -

ಅತ್ಯಾಚಾರ ಹಾಗೂ ಕೊಲೆ ಅಪರಾಧದಲ್ಲಿ ಜೈಲು ಪಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರಿಗೆ ಅಕ್ಟೋಬರ್ 1 ರಂದು 20 ದಿನಗಳ ಪೆರೋಲ್ ನೀಡಿದಾಗ ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಂದ ನೇರ ದಾಳಿಗೆ ಒಳಗಾಯಿತು.

ರಾಮ್ ರಹೀಮ್ ಅವರ 15ನೇ ಪೆರೋಲ್ ಕೂಡ ಚುನಾವಣೆಗೆ ಹೊಂದಿಕೆಯಾಗುತ್ತಿದ್ದಂತೆ, “ಬಿಜೆಪಿಯು ತನ್ನ ಬೆಂಬಲವನ್ನು ಪಡೆಯಲು ಅತ್ಯಾಚಾರ ಮತ್ತು ಕೊಲೆ ಅಪರಾಧಿಗೆ ಪೆರೋಲ್ ನೀಡಿದೆ” ಎಂದು ಆರೋಪಿಸಲಾಗಿದೆ. ಆದರೆ, ಕೇವಲ ಬಿಜೆಪಿಗಷ್ಟೇ ಅಲ್ಲ, ಕಾಂಗ್ರೆಸ್‌ಗೂ ಲಾಭ ಎಂಬುದನ್ನು ಚುನಾವಣಾ ಫಲಿತಾಂಶ ತೋರಿಸಿದೆ.

ಡೇರಾ ಅನುಯಾಯಿಗಳಿಗೆ ನೆಲೆಯಾಗಿದೆ ಎಂದು ನಂಬಲಾದ 28 ವಿಧಾನಸಭಾ ಕ್ಷೇತ್ರಗಳಲ್ಲಿ 15 ಕಾಂಗ್ರೆಸ್, 10 ಬಿಜೆಪಿ, ಎರಡು ಇಂಡಿಯನ್ ನ್ಯಾಷನಲ್ ಲೋಕದಳ ಮತ್ತು ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ.

ಅಂದರೆ, ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶೇ.53.57, ಬಿಜೆಪಿ ಶೇ.35.71, ಐಎನ್‌ಎಲ್‌ಡಿ ಶೇ.7 ಮತ್ತು ಸ್ವತಂತ್ರ ಅಭ್ಯರ್ಥಿ ಶೇ.3.57 ಮತಗಳನ್ನು ಗಳಿಸಿದ್ದಾರೆ. ಬಹುತೇಕ ಹರಿಯಾಣ ಕಾಂಗ್ರೆಸ್ ನಾಯಕರು ರಾಮ್ ರಹೀಮ್ ಪೆರೋಲ್ ಬಗ್ಗೆ ಧ್ವನಿಯೆತ್ತದಿರಲು ಇದೂ ಒಂದು ಕಾರಣವಾಗಿರಬಹುದು ಎಂಬ ಮಾತುಗಳು ಕೇಳಬಂದಿವೆ.

ಫತೇಹಾಬಾದ್, ಕೈತಾಲ್, ಕುರುಕ್ಷೇತ್ರ, ಸಿರ್ಸಾ, ಕರ್ನಾಲ್ ಮತ್ತು ಹಿಸಾರ್ ಎಂಬ ಆರು ಹರ್ಯಾಣ ಜಿಲ್ಲೆಗಳನ್ನು ವ್ಯಾಪಿಸಿರುವ ಈ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ.

ಫತೇಹಾಬಾದ್, ರತಿಯಾ, ತೋಹಾನಾ (ಅತಿ ಹೆಚ್ಚು ಡೇರಾ ಅನುಯಾಯಿಗಳನ್ನು ಹೊಂದಿರುವ), ಕಲಾಯತ್, ಕೈತಾಲ್, ಶಹಾಬಾದ್, ಥಾನೇಸರ್, ಪೆಹೋವಾ, ಕಲನ್‌ವಾಲಿ, ಸಿರ್ಸಾ, ಎಲೆನಾಬಾದ್, ಆದಂಪುರ, ಉಕ್ಲಾನಾ ಮತ್ತು ನಾರ್ನಾಂಡ್‌ಗಳಲ್ಲಿ ಕಾಂಗ್ರೆಸ್ ಗೆದ್ದಿದೆ.

ಹನ್ಸಿ, ಬರ್ವಾಲಾ, ಹಿಸಾರ್, ನಲ್ವಾ, ಅಸಂಧ್, ಘರೋಂಡಾ, ಕರ್ನಾಲ್, ಇಂದ್ರಿ, ನಿಲೋಖೇರಿ, ಲಾಡ್ವಾ ಮತ್ತು ಪುಂಡ್ರಿಯಲ್ಲಿ ಬಿಜೆಪಿ ಗೆದ್ದಿದೆ. ದಾಬ್ವಾಲಿ ಮತ್ತು ರಾನಿಯಾದಲ್ಲಿ ಐಎನ್‌ಎಲ್‌ಡಿ ಗೆದ್ದರೆ, ಹಿಸಾರ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಸಾವಿತ್ರಿ ಜಿಂದಾಲ್ ಗೆದ್ದಿದ್ದಾರೆ.

ಬಿಜೆಪಿಗೆ ಡೇರಾದ ಬೆಂಬಲ?

ಅಕ್ಟೋಬರ್ 3 ರಂದು ಡೇರಾ ಸಚ್ಚಾ ಸೌದಾ ಮುಖ್ಯಸ್ಥರು ಬಿಜೆಪಿಗೆ ಮತ ಹಾಕುವಂತೆ ಸಿರ್ಸಾದ ಡೇರಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಧ್ಯಮ ವರದಿಗಳು ಈ ಸಂದೇಶವನ್ನು ಸತ್ಸಂಗ (ಸಭೆ) ಸಮಯದಲ್ಲಿ ತಿಳಿಸಲಾಗಿದೆ ಎಂದು ಹೇಳುತ್ತದೆ. ಅಲ್ಲಿ ಅನುಯಾಯಿಗಳಿಗೆ ಕನಿಷ್ಠ ಐದು ಮತದಾರರನ್ನು ಬೂತ್‌ಗೆ ಕರೆತರಲು ಸೂಚಿಸಲಾಯಿತು ಎಂದು ತಿಳಿದುಬಂದಿದೆ.

ಗುರ್ಮೀತ್ ರಾಮ್ ರಹೀಮ್ ಈ ಸತ್ಸಂಗವನ್ನು ವಾಸ್ತವಿಕವಾಗಿ ಆಯೋಜಿಸಿದ್ದಾರೋ ಇಲ್ಲವೋ ಎಂಬುದು ಅಸ್ಪಷ್ಟವಾಗಿದೆ. ಏಕೆಂದರೆ, ಭಾರತದ ಚುನಾವಣಾ ಆಯೋಗವು ಆನ್‌ಲೈನ್‌ನಲ್ಲಿ ಸತ್ಸಂಗಗಳನ್ನು ಪ್ರಚಾರ ಮಾಡುವುದನ್ನು ಅಥವಾ ನಡೆಸುವುದನ್ನು ನಿಷೇಧಿಸಿದೆ.

ಡೇರಾ ಮೂಲಗಳು ಪಂಥದ ಅನುಯಾಯಿಗಳ ಸಂಖ್ಯೆ ಸುಮಾರು 1.25 ಕೋಟಿ ಎಂದು ಅಂದಾಜಿಸಿದೆ. ಅದರ 38 ಶಾಖೆಗಳಲ್ಲಿ 21 ಹರಿಯಾಣದಲ್ಲಿದೆ.

ಡೇರಾ ಸಚ್ಚಾ ಸೌಧದ ರಾಜಕೀಯ ಪ್ರಭಾವ

ಧಾರ್ಮಿಕ ಪಂಥವಾಗಿದ್ದರೂ, ಡೇರಾ ಸಚ್ಚಾ ಸೌದಾ ಗಮನಾರ್ಹ ರಾಜಕೀಯ ಹಿಡಿತವನ್ನು ಹೊಂದಿದೆ. ಗುರ್ಮೀತ್ ರಾಮ್ ರಹೀಮ್ ನೇತೃತ್ವದಲ್ಲಿ ರಾಜಕೀಯ ವಿಭಾಗವನ್ನು ನಿರ್ವಹಿಸುತ್ತಿದೆ. ಈ ಪಂಥವು ಈ ಹಿಂದೆ ಶಿರೋಮಣಿ ಅಕಾಲಿ ದಳ, ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. 2007 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ, ಡೇರಾ ಕಾಂಗ್ರೆಸ್ ಅನ್ನು ಬೆಂಬಲಿಸಿತು.

2014ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿತ್ತು. 2015 ರಲ್ಲಿ, ಡೇರಾ ದೆಹಲಿ ಮತ್ತು ಬಿಹಾರ ಚುನಾವಣೆಗಳಲ್ಲಿ ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸಿತು. ಅಂದಾಜು 3,000 ಅನುಯಾಯಿಗಳು ಬಿಹಾರದಲ್ಲಿ ಪಕ್ಷದ ಪರ ಪ್ರಚಾರ ಮಾಡಿದರು.

ಡೇರಾದ ರಾಜಕೀಯ ಪ್ರಭಾವವು ಅದರ ದೊಡ್ಡ ತಳ ಸಮುದಾಯದ ಅನುಯಾಯಿಗಳ ನೆಲೆಯಿಂದ ಹುಟ್ಟಿಕೊಂಡಿದೆ. ಇದು ಗಮನಾರ್ಹ ಸಂಖ್ಯೆಯ ದಲಿತರನ್ನು ಒಳಗೊಂಡಿದೆ. ಉದಾಹರಣೆಗೆ ಮಜಾಬಿ ಸಿಖ್‌ಗಳು (ಪರಿವರ್ತಿತ ಸಿಖ್ಖರು).

ರಾಜಕೀಯ ವಿಶ್ಲೇಷಕರು ಗಮನಿಸಿದಂತೆ ಹರಿಯಾಣದಲ್ಲಿ ಮೇಲ್ಜಾತಿ ಮತಗಳು ಸಾಮಾನ್ಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಿಭಜನೆಯಾಗುತ್ತವೆ. ಕೆಳಜಾತಿಯ ಡೇರಾ ಅನುಯಾಯಿಗಳು ತಮ್ಮ ನಾಯಕನ ಸೂಚನೆಗಳಿಗೆ ಅನುಗುಣವಾಗಿ ಮತ ಚಲಾಯಿಸುತ್ತಾರೆ.

ಇದನ್ನೂ ಓದಿ; ಅತ್ಯಾಚಾರಿಗಳನ್ನು ಬೆಂಬಲಿಸಿದ್ದ ಲಾಲ್‌ ಸಿಂಗ್‌ಗೆ ಸೋಲು : ಕಾಂಗ್ರೆಸ್‌ಗೆ ಮುಖಭಂಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...