ಭಾರತೀಯ ರಾಷ್ಟ್ರೀಯ ಲೋಕದಳದ ಹರ್ಯಾಣ ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಥಿ ಮತ್ತು ಪಕ್ಷದ ಕಾರ್ಯಕರ್ತರೋರ್ವರನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ರಾಜ್ಯದ ಜಜ್ಜರ್ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. INDIA ಒಕ್ಕೂಟದ ಜೊತೆ INLD ಮೈತ್ರಿ ಮಾತಕತೆ ಹಂತದಲ್ಲಿ ನಡೆದ ಈ ಘಟನೆಯು ಹರ್ಯಾಣದಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನೆಯನ್ನು ಹುಟ್ಟು ಹಾಕಿರುವುದರ ಜೊತೆಗೆ ಸಂಶಯಕ್ಕೆ ಕಾರಣವಾಗಿದೆ.
ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ಎಸ್‌ಯುವಿ ಕಾರಿನಲ್ಲಿ ತೆರಳುತ್ತಿದ್ದಾಗ ನಫೆ ಸಿಂಗ್ ರಾಥಿ ಮೇಲೆ ಫೈರಿಂಗ್ ಮಾಡಲಾಗಿದೆ. ಈ ದಾಳಿಯಲ್ಲಿ ನಫೆ ಸಿಂಗ್ ರಾಥಿ ಸೇರಿ ಇಬ್ಬರು ಮೃತಪಟ್ಟಿದ್ದು, ರಾಥಿಯ ಮೂವರು ಭದ್ರತಾ ಸಿಬ್ಬಂದಿಗಳಿಗೆ ಕೂಡ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಡೆದ ಈ ದಾಳಿಯಿಂದ ಬಿಜೆಪಿ ಆಡಳಿತದ ಹರ್ಯಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಐಎನ್‌ಎಲ್‌ಡಿ ನಾಯಕ ಅಭಯ್ ಚೌಟಾಲಾ, ರಾಥಿ ಅವರಿಗೆ ಜೀವ ಬೆದರಿಕೆ ಇದ್ದರೂ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಘಟನೆಯ ಹೊಣೆ ಹೊತ್ತು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ರಾಜ್ಯ ಗೃಹ ಸಚಿವ ಅನಿಲ್ ವಿಜ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ರಾಜ್ಯ ಘಟಕದ ಮುಖ್ಯಸ್ಥರಾಗಿರುವ, ಎರಡು ಬಾರಿ ಶಾಸಕರಿಗಿದ್ದ ನಫೆ ಸಿಂಗ್ ರಾಥಿ ಅವರಿಗೆ ಭದ್ರತೆಯನ್ನು ಒದಗಿಸಲಾಗಿಲ್ಲ, ಅವರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಭದ್ರತೆಯನ್ನು ಒದಗಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ಗೃಹ ಸಚಿವರಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿತ್ತು, ಆದರೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಹರ್ಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಅವರು ಮಾಜಿ ಶಾಸಕರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
ಐಎನ್‌ಎಲ್‌ಡಿ ರಾಜ್ಯಾಧ್ಯಕ್ಷ ನಫೆ ಸಿಂಗ್ ರಾಥಿ ಅವರನ್ನು ಹರ್ಯಾಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಸುದ್ದಿ ತುಂಬಾ ದುಃಖಕರವಾಗಿದೆ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಕಾನೂನು ಸುವ್ಯವಸ್ಥೆ ದಿವಾಳಿಯಾಗಿದೆ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ. ಇಂದು ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿಲ್ಲ. ಅಗಲಿದ ಆತ್ಮಕ್ಕೆ ನನ್ನ ಶ್ರದ್ಧಾಂಜಲಿ ಮತ್ತು ಕುಟುಂಬಕ್ಕೆ ಆಳವಾದ ಸಂತಾಪ. ಅವರ ಕುಟುಂಬದ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ದಾಳಿಯಲ್ಲಿ ಗಾಯಗೊಂಡಿರುವ ಭದ್ರತಾ ಸಿಬ್ಬಂದಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಭೂಪಿಂದರ್ ಸಿಂಗ್ ಹೂಡಾ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
हरियाणा में इनेलो प्रदेश अध्यक्ष श्री नफे सिंह राठी जी की गोली मार कर हत्या करने का समाचार बेहद दुःखद है।
यह प्रदेश की कानून व्यवस्था को दर्शाता है। इस घटना ने स्पष्ट कर दिया कि कानून व्यवस्था का दिवाला पिट चुका है। प्रदेश में आज कोई भी अपने आपको सुरक्षित महसूस नहीं कर पा रहा…
— Bhupinder S Hooda (@BhupinderShooda) February 25, 2024
ಆಮ್ ಆದ್ಮಿ ಪಕ್ಷದ ನಾಯಕ ಸುಶೀಲ್ ಗುಪ್ತಾ ಘಟನೆಯನ್ನು ಖಂಡಿಸಿ ಖಟ್ಟರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಹರ್ಯಾಣದಲ್ಲಿ ಕಾನೂನಿನ ಆಡಳಿತ ಕೊನೆಗೊಂಡಿದೆ ಮತ್ತು ಜಂಗಲ್ ರಾಜ್ ಮೇಲುಗೈ ಸಾಧಿಸಿದೆ. ಹರಿಯಾಣದಲ್ಲಿ ಇಂದು ಯಾರೂ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.
#WATCH | AAP Haryana President Sushil Gupta says, "Law and Order has ended in Haryana… We have received info from Jhajjar. The Haryana INLD president Nafe Singh and his associates have been shot dead. No one is safe in this state safe. Businessmen are shot and then extorted,… pic.twitter.com/C4iDa32XCh
— ANI (@ANI) February 25, 2024
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ ನಾಯಕಿ ಮಹುವಾ ಮೋಯಿತ್ರಾ, ಹರ್ಯಾಣದ ಐಎನ್‌ಎಲ್‌ಡಿ ಅಧ್ಯಕ್ಷ ಮತ್ತು ಮಾಜಿ ಶಾಸಕ ನಫೆ ಸಿಂಗ್ ರಾಥಿ ಅವರನ್ನು ಜಜ್ಜರ್ ಜಿಲ್ಲೆಯ ಬಹದ್ದೂರ್‌ಗಢದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವರದಿಗಳ ಪ್ರಕಾರ, ಅಪರಿಚಿತ ದಾಳಿಕೋರರು ಅವರ ಕಾರಿನ ಮೇಲೆ 40-50 ಸುತ್ತಿನ ಬುಲೆಟ್‌ಗಳನ್ನು ಹಾರಿಸಿದ್ದಾರೆ. ಐಎನ್‌ಎಲ್‌ಡಿ ಕಾಂಗ್ರೆಸ್‌ನೊಂದಿಗೆ ಅಂತಿಮ ಮಾತುಕತೆಯಲ್ಲಿತ್ತು ಮತ್ತು ಶೀಘ್ರದಲ್ಲೇ ಇಂಡಿಯಾ ಮೈತ್ರಿಗೆ ಸೇರುವ ನಿರೀಕ್ಷೆಯಿತ್ತು. ಈ ಘಟನೆ ಹರಿಯಾಣದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
Big Breaking:
Haryana INLD president and former MLA Nafe Singh Rathee was shot dead at Bahadurgarh in Jhajjar district. As per reports, 40-50 rounds of bullets fired on his car by Unknown attackers.
INLD was in final talks with Congress & was expected to join INDIA alliance… pic.twitter.com/8ssrOXwtx4
— Mahua Moitra Fans (@MahuaMoitraFans) February 25, 2024
ವೈದ್ಯರ ಹೇಳಿಕೆ:
ಐಎನ್‌ಎಲ್‌ಡಿ ನಾಯಕ ದಾಖಲಾಗಿರುವ ಬ್ರಹ್ಮ ಶಕ್ತಿ ಸಂಜೀವನಿ ಆಸ್ಪತ್ರೆಯ ಡಾ. ಮನೀಷ್ ಶರ್ಮಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾಜಿ ಶಾಸಕರು ಸೇರಿ ನಾಲ್ವರನ್ನು ಆಸ್ಪತ್ರೆಗೆ ಕರೆತರಲಾಯಿತು ಮತ್ತು ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರು ಮತ್ತು ಮೃತಪಟ್ಟರು. ನಾವು ನಮ್ಮಿಂದಾಗುವ ಎಲ್ಲಾ ಪ್ರಯತ್ನವನ್ನು ಮಾಡಿದ್ದೇವೆ. ಇನ್ನು ಭುಜ, ತೊಡೆ ಮತ್ತು ಎದೆಯ ಎಡಭಾಗದಲ್ಲಿ ಗುಂಡೇಟಿನಿಂದ ಗಾಯಗೊಂಡಿರುವ ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ. ಮಾಜಿ ಶಾಸಕ ನಫೆ ಸಿಂಗ್ ಮತ್ತು ಜೈಕಿಶನ್ ಎಂಬವರ ಕುತ್ತಿಗೆ, ಬೆನ್ನು ಮತ್ತು ಭುಜಕ್ಕೆ ಅನೇಕ ಸುತ್ತಿನ ಗುಂಡು ಹಾರಿಸಲಾಗಿದೆ. ಈ ರೀತಿಯ ದಾಳಿಯು ತೀವ್ರ ರಕ್ತಸ್ರಾವ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
#WATCH | Jhajjar: Dr Manish Sharma at Brahma Shakti Sanjeevani Hospital says, "In the evening, four people who had been shot were brought to Brahma Shakti Sanjeevani Hospital. Out of them, two had suffered heavy bleeding and were brought dead, still, we tried CPR but they… pic.twitter.com/wDVO5mbbIU
— ANI (@ANI) February 25, 2024
ಇದನ್ನು ಓದಿ: ‘ಸಂವಿಧಾನ, ರಾಷ್ಟ್ರೀಯ ಏಕತಾ ಸಮಾವೇಶ’ಕ್ಕೆ ಕರ್ನಾಟಕ ಸರಕಾರ ಆಹ್ವಾನಿಸಿದ್ದ ಯುಕೆಯ ಪ್ರಾಧ್ಯಾಪಕಿಗೆ ಭಾರತಕ್ಕೆ ಪ್ರವೇಶ ನಿರಾಕರಣೆ


