Homeಮುಖಪುಟಕೋಮುವಾದ, ಫ್ಯಾಸಿಸಂ ವಿರುದ್ಧ ಸಾಂಸ್ಕೃತಿಕ ವಲಯದ ಮಧ್ಯಸ್ಥಿಕೆ ಅತ್ಯಗತ್ಯ; ಪಿಣರಾಯಿ ವಿಜಯನ್

ಕೋಮುವಾದ, ಫ್ಯಾಸಿಸಂ ವಿರುದ್ಧ ಸಾಂಸ್ಕೃತಿಕ ವಲಯದ ಮಧ್ಯಸ್ಥಿಕೆ ಅತ್ಯಗತ್ಯ; ಪಿಣರಾಯಿ ವಿಜಯನ್

- Advertisement -
- Advertisement -

ಕೇರಳವು ಧಾರ್ಮಿಕ ಸಾಮರಸ್ಯ, ಸಹಬಾಳ್ವೆ ಮತ್ತು ಸಹೋದರತ್ವದ ಕೊನೆಯ ಕೇಂದ್ರವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದು, ದೇಶದಲ್ಲಿ ಕೋಮುವಾದ ಮತ್ತು ಫ್ಯಾಸಿಸಂ ವಿರುದ್ಧ ಹೋರಾಡಲು ಸಾಂಸ್ಕೃತಿಕ ವಲಯದ ನಾಯಕರನ್ನು ಒತ್ತಾಯಿಸಿದ್ದಾರೆ.

ಸರಕಾರದ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ʼನವ ಕೇರಳ ಸದಸ್ʼ ನ ಭಾಗವಾಗಿ ರಾಜ್ಯದ ಸಾಂಸ್ಕೃತಿಕ ಕ್ಷೇತ್ರದ ಜನರೊಂದಿಗೆ ಮುಖಾಮುಖಿ ಸಂವಾದದಲ್ಲಿ ಮಾತನಾಡಿದ ಸಿಎಂ ಪಿಣರಾಯ್‌ ವಿಜಯನ್, ದೇಶದ ಸಾಂಸ್ಕೃತಿಕ ಇತಿಹಾಸ ವೈವಿಧ್ಯತೆಯಿಂದ ಕೂಡಿದೆ. ಏಕರೂಪತೆಯ ಸಂಸ್ಕೃತಿಯನ್ನು ಹೇರಿದಾಗ  ಪ್ರಜಾಪ್ರಭುತ್ವವು ಫ್ಯಾಸಿಸಂಗೆ ಪರಿವರ್ತನೆಯಾಗುತ್ತದೆ ಎಂದು ಹೇಳಿದ್ದಾರೆ.

ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮದಂತಹ ಏಕರೂಪತೆಯ ಸಂಸ್ಕೃತಿಯನ್ನು ಹೇರಿದಾಗ ಪ್ರಜಾಪ್ರಭುತ್ವವು ಫ್ಯಾಸಿಸಂಗೆ ಪರಿವರ್ತನೆಯಾಗುತ್ತದೆ. ಆದ್ದರಿಂದ ಸಾಂಸ್ಕೃತಿಕ ವಲಯದಲ್ಲಿ ಒಕ್ಕೂಟದ ಮನೋಭಾವವನ್ನು ರಕ್ಷಿಸಬೇಕು ಎಂದು ಹೇಳಿದರು.

ಕೇರಳವು ಧಾರ್ಮಿಕ ಸಾಮರಸ್ಯ, ಸಹಬಾಳ್ವೆ ಮತ್ತು ಸಹೋದರತ್ವದ ಕೊನೆಯ ಕೇಂದ್ರವಾಗಿದೆ. ಅದನ್ನು ಕಳೆದುಕೊಳ್ಳಬಾರದು. ಕೇರಳದ ಸಹಜ ಸಂಸ್ಕೃತಿಯನ್ನು ಉಳಿಸಿಕೊಂಡು ಭಾರತ ಎಂಬ ಭಾವನೆಯನ್ನು ಬಲಪಡಿಸಲು ನಾವು ಶಕ್ತರಾಗಿರಬೇಕು. ಕೇರಳದ ಭವಿಷ್ಯದ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕ್ಷೇತ್ರದವರ ಅಭಿಪ್ರಾಯಗಳನ್ನು ಅತ್ಯಂತ ಮಹತ್ವದಿಂದ ಪರಿಗಣಿಸಬೇಕು. ಸಮಕಾಲೀನ ಭಾರತದಲ್ಲಿ ನೆಲೆಯೂರುತ್ತಿರುವ ವಿನಾಶಕಾರಿ ಕೋಮುವಾದವನ್ನು ಎದುರಿಸಲು ಸಾಂಸ್ಕೃತಿಕ ವಲಯದ ಪರಿಣಾಮಕಾರಿ ಮಧ್ಯಸ್ಥಿಕೆ ಅತ್ಯಗತ್ಯ ಎಂದು ಪಿಣರಾಯ್‌ ವಿಜಯನ್ ಹೇಳಿದ್ದಾರೆ.

ರಾಜಕೀಯ ಮತ್ತು ಸಾಂಸ್ಕೃತಿಕ ಭ್ರಾತೃತ್ವವೇ ಕೇರಳವನ್ನು ಇಂದಿನ ಸ್ಥಿತಿಗೆ ತಂದಿದೆ. ಕಲೆ ಮತ್ತು ಕಲಾವಿದ ಉಳಿಯಲು ಬಯಸಿದರೆ, ಬರಹಗಳು ಮತ್ತು ಬರಹಗಾರರು ಉಳಿಯಬೇಕಾದರೆ, ನಾವು ಜನರ ನಡುವಿನ ಏಕತೆಯ ಅಡಿಪಾಯವನ್ನು ನಾಶಪಡಿಸುವ ಶಕ್ತಿಗಳ ವಿರುದ್ಧ ಹೋರಾಡಬೇಕಾಗಿದೆ. ಫ್ಯಾಸಿಸಂ ನಮ್ಮ ಮನೆ ಬಾಗಿಲಿಗೆ ಬಂದ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಕೇರಳವು ಎಡಪಂಥೀಯ ಮನಸ್ಥಿತಿಯನ್ನು ಹೊಂದಿದೆ. ಇತರ ರಾಜ್ಯಗಳಿಗಿಂತ ಉತ್ತಮವಾದ ಅಭಿವೃದ್ಧಿ ಮತ್ತು ಉನ್ನತ ಜೀವನಮಟ್ಟಕ್ಕೆ ಕಾರಣವಾಗಿದೆ ಎಂದು ವಿಜಯನ್ ಹೇಳಿದ್ದು, ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ‘ಸಂವಿಧಾನ, ರಾಷ್ಟ್ರೀಯ ಏಕತಾ ಸಮಾವೇಶ’ಕ್ಕೆ ಕರ್ನಾಟಕ ಸರಕಾರ ಆಹ್ವಾನಿಸಿದ್ದ ಯುಕೆಯ ಪ್ರಾಧ್ಯಾಪಕಿಗೆ ಭಾರತಕ್ಕೆ ಪ್ರವೇಶ ನಿರಾಕರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...