Homeಮುಖಪುಟಹತ್ರಾಸ್ ಅತ್ಯಾಚಾರ: ಕೊಲೆಗೀಡಾದ ಯುವತಿಯ ಪೋಸ್ಟ್‌ಮಾರ್ಟಂ ರಿಪೋರ್ಟ್ ಏನು ಹೇಳುತ್ತಿದೆ?

ಹತ್ರಾಸ್ ಅತ್ಯಾಚಾರ: ಕೊಲೆಗೀಡಾದ ಯುವತಿಯ ಪೋಸ್ಟ್‌ಮಾರ್ಟಂ ರಿಪೋರ್ಟ್ ಏನು ಹೇಳುತ್ತಿದೆ?

ದೆಹಲಿ ಆಸ್ಪತ್ರೆ ನೀಡಿರುವ ಮರಣೋತ್ತರ ವರದಿಯಲ್ಲಿ, "ಹಲ್ಲೆ ಮಾಡಿರುವವರು ಆಕೆಯ ಕತ್ತನ್ನು ಹಿಸುಕಲು ಪ್ರಯತ್ನಿಸಿದ್ದಾರೆ. ಆದರೆ ಅದು ಆಕೆಯ ಸಾವಿಗೆ ಕಾರಣವಾಗಿಲ್ಲ. ಬೆನ್ನುಮೂಳೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ" ಎಂದು ಉಲ್ಲೇಖವಾಗಿದೆ.

- Advertisement -
- Advertisement -

ಸಾಮೂಹಿಕ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆಗೊಳಗಾಗಿ ಸಾವನಪ್ಪಿದ ದಲಿತ ಯುವತಿಯ ಪೋಸ್ಟ್‌ಮಾರ್ಟಂ ವರದಿಯ ಪ್ರಕಾರ, “ಕತ್ತು ಹಿಸುಕಲಾಗಿದ್ದು, ಆಕೆಯ ಬೆನ್ನುಮೂಳೆ ಮುರಿದಿತ್ತು” ಎಂದು ತಿಳಿದುಬಂದಿದೆ. ಆದರೆ ಅಂತಿಮ ವರದಿಯಲ್ಲಿ ಅತ್ಯಾಚಾರ ನಡೆದಿರುವುದರ ಬಗ್ಗೆ ಉಲ್ಲೇಖವಿಲ್ಲ!

ದೆಹಲಿ ಆಸ್ಪತ್ರೆ ನೀಡಿರುವ ಪೋಸ್ಟ್‌ಮಾರ್ಟಂ ವರದಿಯಲ್ಲಿ, “ಹಲ್ಲೆ ಮಾಡಿರುವವರು ಆಕೆಯ ಕತ್ತನ್ನು ಹಿಸುಕಲು ಪ್ರಯತ್ನಿಸಿದ್ದಾರೆ. ಆದರೆ ಅದು ಆಕೆಯ ಸಾವಿಗೆ ಕಾರಣವಾಗಿಲ್ಲ. ಬೆನ್ನುಮೂಳೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ” ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆ: ರಾಜ್ಯದಲ್ಲಿ ಸಿಡಿದೆದ್ದ ಆಕ್ರೋಶ -ತೀವ್ರಗೊಂಡ ಸರಣಿ ಪ್ರತಿಭಟನೆಗಳು

ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ, ಯುವತಿ ತನ್ನ ಹೊಲದಲ್ಲಿ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಆಕೆಯ ಬಟ್ಟೆಯಿಂದಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ಗಾಯಗಳು, ಮೂಳೆ ಮುರಿತ ಸೇರಿದಂತೆ ನಾಲಿಗೆ ತುಂಡಾಗಿದ್ದ ಯುವತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದರು. ಮಂಗಳವಾರ ದೆಹಲಿಗೆ ತೆರಳುವವರೆಗೂ ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿಡಲಾಗಿತ್ತು. ನಂತರ ಯುವತಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಅಂದು ಮಧ್ಯರಾತ್ರಿ ಪೊಲೀಸರು ಆಕೆಯ ಕುಟುಂಬದವರಿಗೂ ತಿಳಿಸದೇ ಶವಸಂಸ್ಕಾರ ಮಾಡಿದ್ದರು. ಇದರ ವಿರುದ್ಧ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಯುವತಿಯ ವೈದ್ಯಕೀಯ ದಾಖಲೆಗಳಲ್ಲಿ ಅತ್ಯಾಚಾರ ಮತ್ತು ಕತ್ತುಹಿಸುಕುವಿಕೆಯನ್ನು ಉಲ್ಲೇಖಿಸಲಾಗಿದೆ. ಆದರೆ ನಂತರದಲ್ಲಿ ಬೆನ್ನುಮೂಳೆಯ ತೊಂದರೆಯಿಂದ ಬಳಲುತ್ತಿದ್ದಳು ಎಂದು ವರದಿಯಲ್ಲಿ ಹೇಳಲಾಗಿದೆ. ಅಂತಿಮ ವರದಿಯಲ್ಲಿ, “ಕತ್ತುಹಿಸುಕುವಿಕೆಯ ನಂತರ ಬೆನ್ನುಮೂಳೆಯ ತೊಂದರೆಯೊಂದಿಗೆ, ಹೃದಯಬಡಿತ ನಿಂತುಹೋಗಿ ರಕ್ತ ಹೆಪ್ಪುಗಟ್ಟಿತ್ತು” ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ

ಅವಳ ಕುತ್ತಿಗೆಗೆ ಆದ ಗಾಯವು ಪಾರ್ಶ್ವವಾಯುವಿಗೆ ಕಾರಣವಾಗಿತ್ತು. ಹಾಗಾಗಿ ಆಕೆ ಉಸಿರಾಡಲು ಕಷ್ಟಪಡುತ್ತಿದ್ದಳು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

“ಅತ್ಯಾಚಾರ ನಡೆದಿರುವುದನ್ನು ದೃಢೀಕರಿಸಲು ವಿಧಿವಿಜ್ಞಾನ ವರದಿಗಳಿಗಾಗಿ ಕಾಯುತ್ತಿದ್ದೇವೆ. ಹಲ್ಲೆ ಮಾಡಿದವರು ಆಕೆಯ ಕತ್ತನ್ನು ಹಿಸುಕುತ್ತಿರುವಾಗ ಆಕೆ ತನ್ನ ನಾಲಿಗೆಯನ್ನು ಕಚ್ಚಿದ್ದರಿಂದ ನಾಲಿಗೆ ತುಂಡಾಗಿದೆ” ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ

ಯುವತಿಯ ಶವವನ್ನು ಮಧ್ಯರಾತ್ರಿಯಲ್ಲಿ ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್‌ನಲ್ಲಿರುವ ಹಳ್ಳಿಗೆ ಕೊಂಡೊಯ್ಯಲಾಯಿತು. ಪೊಲೀಸರು ಶವಸಂಸ್ಕಾರ ಮಾಡುತ್ತಿದ್ದಾರೆ ಎಂಬುದು ಕುಟುಂಬದವರಿಗೆ ತಿಳಿದನಂತರ ಇದನ್ನು ಕುಟುಂಬದವರು ಮತ್ತು ಗ್ರಾಮಸ್ಥರು ವಿರೋಧಿಸಿದ್ದಾರೆ. ಶವವನ್ನು ಮನೆಗೆ ತಂದು, ನಂತರ ಬೆಳಿಗ್ಗೆ ಶವಸಂಸ್ಕಾರ ಮಾಡುವಂತೆ ಆಕೆಯ ತಂದೆ ಬೇಡಿಕೊಂಡಿದ್ದಾರೆ.

ಆದರೂ, ಪ್ರತಿಭಟಿಸುತ್ತಿದ್ದವರನ್ನು ದೂರ ತಳ್ಳಿದ ಪೊಲೀಸರು ಸ್ಮಶಾನದ ಬಳಿಗೆ ವಾಹನವನ್ನು ತೆಗೆದುಕೊಂಡು ಹೋದರು. “ಕೊನೆಯ ವಿಧಿಗಳಿಗಾಗಿ ಶವವನ್ನು ಮನೆಗೆ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷ್ಕರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಬೆಳಿಗ್ಗೆ 2:30 ಕ್ಕೆ, ಆಕೆಯ ಕುಟುಂಬದ ಬಹುಪಾಲು ಜನ ಮನೆಯಲ್ಲಿದ್ದಾಗ, ಪೊಲೀಸರು ಶವವನ್ನು ಸುಟ್ಟಿದ್ದಾರೆ. ವರದಿಗಾರರನ್ನು, ಕುಟುಂಬ ಮತ್ತು ಗ್ರಾಮಸ್ಥರನ್ನು ದೂರವಿರಿಸಲು ಹತ್ರಾಸ್ ಪೊಲೀಸರು ಮಾನವ ಸರಪಳಿಯನ್ನು ರಚಿಸಿದರು. ಪೊಲೀಸರು ಮಾತ್ರ ಹಾಜರಿದ್ದರು. ಕುಟುಂಬದವರು ಅವಳನ್ನು ಕೊನೆಯ ಬಾರಿಯೂ ನೋಡಲಾಗಲಿಲ್ಲ. ಅವರನ್ನು ಮನೆಯಲ್ಲಿ ಬಂಧಿಸಲಾಗಿತ್ತು” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳ ಪರ ನಿಂತ ಸವರ್ಣ ಪರಿಷತ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...