ಶ್ರೀನಗರ: ಶನಿವಾರ ಮುಂಜಾನೆ ರಾಜೌರಿಯಲ್ಲಿ ಪಾಕಿಸ್ತಾನದ ತೀವ್ರ ಫಿರಂಗಿ ಗುಂಡಿನ ದಾಳಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಜಿಲ್ಲಾಧಿಕಾರಿ (Additional District Development Commissioner) ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
ರಾಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ (ADDC) ರಾಜ್ ಕುಮಾರ್ ಥಾಪಾ (55) ಅವರ ಮನೆಯ ಮೇಲೆ ಪಾಕಿಸ್ತಾನದ ಶೆಲ್ ಬಿದ್ದ ನಂತರ ಶನಿವಾರ ಬೆಳಿಗ್ಗೆ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು X ಪೋಸ್ಟ್ ನಲ್ಲಿ ತಮ್ಮ ಆಘಾತ ಮತ್ತು ಸಂತಾಪ ವ್ಯಕ್ತಪಡಿಸುತ್ತಾ, ಎಡಿಡಿಸಿ ಥಾಪಾ ಅವರು ಉಪಮುಖ್ಯಮಂತ್ರಿ ಸುರೀಂದರ್ ಕುಮಾರ್ ಚೌಧರಿ ಅವರೊಂದಿಗೆ ಜಿಲ್ಲೆಯಾದ್ಯಂತ ಪಾಕಿಸ್ತಾನವು ಭಾರತದ ಮೇಲೆ ನಡೆಸಿದ ದಾಳಿಗಳ ಹಲವಾರು ಸ್ಥಳಗಳನ್ನು, ವಿಶೇಷವಾಗಿ ಯುಟಿಯಲ್ಲಿ ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯನ್ನು ಪರಿಶೀಲಿಸಿದ್ದರು. ಇದಾದ ಒಂದು ದಿನದ ನಂತರ ಈ ದುರದೃಷ್ಟಕರ ಘಟನೆ ಸಂಭವಿಸಿದೆ ಎಂದು ಹೇಳಿದರು. ಥಾಪಾ ಅವರು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಆನ್‌ಲೈನ್ ಸಭೆಯ ಭಾಗವಾಗಿದ್ದರು.
“ರಾಜೌರಿಯಿಂದ ಬಂದಿರುವುದು ಆಘಾತಕಾರಿ ಸುದ್ದಿ. ನಾವು ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳ ಸಮರ್ಪಿತ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು ಮತ್ತು ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲಿಯೂ ಭಾಗವಹಿಸಿದ್ದರು. ಇಂದು ರಾಜೌರಿ ಪಟ್ಟಣವನ್ನು ಗುರಿಯಾಗಿಸಿಕೊಂಡು ಪಾಕ್ ಶೆಲ್ ದಾಳಿ ನಡೆಸಿದಾಗ ಅಧಿಕಾರಿಯ ನಿವಾಸಕ್ಕೆ ಗುಂಡು ಹಾರಿಸಲಾಯಿತು, ಇದರ ಪರಿಣಾಮ ನಮ್ಮ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಾಪಾ ಸಾವನ್ನಪ್ಪಿದರು. ಈ ಭೀಕರ ಜೀವಹಾನಿಯಿಂದ ನನಗೆ ಆಘಾತವಾಗಿದೆ ಮತ್ತು ದುಃಖವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಿಎಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಜನರು ಮನೆಯೊಳಗೆ ಇರುವಂತೆ ಅವರು ಮನವಿ ಮಾಡಿದರು. “ವದಂತಿಗಳನ್ನು ನಿರ್ಲಕ್ಷಿಸಿ, ಆಧಾರರಹಿತ ಅಥವಾ ಪರಿಶೀಲಿಸದ ಕಟ್ಟುಕಥೆಗಳನ್ನು ಹರಡಬೇಡಿ ಮತ್ತು ನಾವು ಇದನ್ನು ಒಟ್ಟಿಗೆ ಎದುರಿಸುತ್ತೇವೆ” ಎಂದು ಅವರು ಹೇಳಿದರು.
पाकिस्तान ने जम्मू कश्मीर के राजौरी में आबादी में गोलाबारी की। ये मकान एडिशनल डिप्टी कमिश्नर (IAS) राजकुमार थापा का है, जिसे गोलाबारी से तहस नहस कर दिया गया। इसमें थापा की मौत हो गई। https://t.co/YEwBEM0ElP pic.twitter.com/dmoJybCm8u
— Sachin Gupta (@SachinGuptaUP) May 10, 2025
ಥಾಪಾ ಅವರು ಜಮ್ಮು ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ 1989ರಲ್ಲಿ ಎಂಬಿಬಿಎಸ್ ಪದವೀಧರರಾಗಿದ್ದರು. ಪಾಕಿಸ್ತಾನವು ಸತತ ಎರಡನೇ ರಾತ್ರಿ ಭಾರತದ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಅನೇಕ ನಗರಗಳಲ್ಲಿ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ಗಳ ಗುಂಪನ್ನು ಉಡಾಯಿಸಿದ ಕೆಲ ಗಂಟೆಗಳ ನಂತರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ.
ಏತನ್ಮಧ್ಯೆ, ಪಾಕಿಸ್ತಾನ ವಾಯುಪಡೆಯ ಕ್ಷಿಪಣಿಗಳು ಶ್ರೀನಗರದ ಮೇಲೆ ದಾಳಿ ಮಾಡಿದಾಗ ಭಾರತವು “ಪರಿಣಾಮಕಾರಿಯಾಗಿ” ಎದುರೇಟು ನೀಡುತ್ತಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಪಿಎಎಫ್ ನಷ್ಟ ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ನಡೆಸಿದ ದಾಳಿ ಮತ್ತು ಭಾರತದ ಪ್ರತೀಕಾರದ ಕುರಿತು ಕೇಂದ್ರ ಸರ್ಕಾರ ಬೆಳಿಗ್ಗೆ 10 ಗಂಟೆಗೆ ವಿವರವಾದ ವಿವರಣೆಯನ್ನು ನೀಡಲಿದೆ.
ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನದಿಂದ 300- 400 ಡ್ರೋನ್‌ಗಳ ಬಳಕೆ: ಕರ್ನಲ್ ಸೋಫಿಯಾ ಖುರೇಷಿ


