Homeಅಂಕಣಗಳುಪುಟಕ್ಕಿಟ್ಟ ಪುಟಗಳುವಚನಗಳ ಮೂಲಕ ಮನೋವಿಜ್ಞಾನ ಹೇಳುವ ಮಾತೆ ಮಹಾದೇವಿಯವರ ಕಾದಂಬರಿ 'ಹೆಪ್ಪಿಟ್ಟ ಹಾಲು'

ವಚನಗಳ ಮೂಲಕ ಮನೋವಿಜ್ಞಾನ ಹೇಳುವ ಮಾತೆ ಮಹಾದೇವಿಯವರ ಕಾದಂಬರಿ ‘ಹೆಪ್ಪಿಟ್ಟ ಹಾಲು’

ತನ್ನ ದೌರ್ಬಲ್ಯವನ್ನು ನಿರಾಕರಿಸದೇ, ಅದನ್ನು ಹುಸಿ ಸಾಮರ್ಥ್ಯದಲ್ಲಿ ಮುಚ್ಚಿಕೊಳ್ಳದೇ, ಅಹಂಕಾರವಿಲ್ಲದೇ ಒಪ್ಪಿಕೊಳ್ಳುವುದು ಬರಿಯ ಆಧ್ಯಾತ್ಮಿಕತೆ ಮಾತ್ರವಲ್ಲ, ಸಹಜ ಮಾನಸಿಕ ಆರೋಗ್ಯಕ್ಕೆ ಅಗತ್ಯವಾದ ನಿಲುವು.

- Advertisement -
- Advertisement -

ಸಾಮಾನ್ಯವಾಗಿ ಒಬ್ಬ ತಾನು ಉನ್ನತಿಗೇರಿದಾಗ ತನ್ನ ಸಾಧನೆಯೆಂದು ಬೀಗುತ್ತಾನೆ. ಆದರೆ ತನ್ನ ಅವನತಿಗೆ ನೂರಾರು ಕಾರಣಗಳನ್ನು ಒಡ್ಡುತ್ತಾನೆ. ಅಷ್ಟೇ ಅಲ್ಲ, ಬೇರೆಯವರು ಕಾರಣ ಎಂದೂ, ತಾನೊಂದು ಬಲಿಪಶುವೆಂದು ಬಿಂಬಿಸಿಕೊಂಡು ಅನುಕಂಪ ಪಡೆಯಲು ಯತ್ನಿಸುತ್ತಾನೆ. ವಾಸ್ತವವಾಗಿ ಅದು ಅವನ ಒಲವು ಮತ್ತು ನಿಲುವುಗಳ ತಿಕ್ಕಾಟ, ಅವನದೇ ದೌರ್ಬಲ್ಯ ಮತ್ತು ಸಾಮರ್ಥ್ಯಗಳ ಹೊಯ್ದಾಟ, ಅವನ ಅಹಂಕಾರದ ಮೇಲಾಟ; ಇವುಗಳಿಂದ ತನ್ನ ಬದುಕನ್ನು ಗೊಂದಲಮಯವಾಗಿಸಿಕೊಳ್ಳುತ್ತಾನೆ ಮತ್ತು ಇತರರೊಂದಿಗಿನ ತನ್ನ ಸಂಬಂಧಗಳನ್ನು ಸಂಕೀರ್ಣಗೊಳಿಸಿಕೊಳ್ಳುತ್ತಾನೆ.

ಯಾವುದೇ ಒಬ್ಬ ವ್ಯಕ್ತಿಯು ತಾನು ನೈಸರ್ಗಿಕವಾಗಿ ತನ್ನೆಲ್ಲಾ ಆಸೆ ಮತ್ತು ಧೋರಣೆಗಳನ್ನು ನೇರವಾಗಿ ಪ್ರಕಟಿಸಲಾಗದಂತಹ ಸಾಮಾಜಿಕ ಕಟ್ಟುಪಾಡುಗಳಿವೆ. ಹಾಗೆಯೇ ಅವನದೇ ಆದಂತಹ ಮಾನಸಿಕ ಸಂಕೀರ್ಣತೆ (ಕಾಂಪ್ಲೆಕ್ಸ್)ಗಳೂ, ವ್ಯಕ್ತಿತ್ವದ ರಚನೆಯೂ ಮತ್ತು ಮನೋದೌರ್ಬಲ್ಯಗಳೂ ಇರುತ್ತವೆ. ಹೀಗೆ ತನ್ನ ಮಾನಸಿಕ ಒತ್ತಡಗಳು ಮತ್ತು ತನ್ನ ಬಗ್ಗೆ ಇರುವಂತಹ ಸಾಮಾಜಿಕ ನಿರೀಕ್ಷೆಗಳು; ಈವೆರಡೂ ಅವನಲ್ಲಿ ಒತ್ತಡವನ್ನು ಉಂಟುಮಾಡುತ್ತವೆ. ಶಾಲೆಗೆ ಹೋಗುವ ಮಗುವಿನಿಂದ ಹಿಡಿದು ಈಗಲೋ ಆಗಲೋ ಸಾಯುತ್ತಿರುವ ಹಣ್ಣುಹಣ್ಣಾದ ಮುದುಕನವರೆಗೂ ಈ ಒತ್ತಡಗಳು ತಪ್ಪಿದ್ದಲ್ಲ. ಯಾವುದೇ ಬಗೆಯ ಒತ್ತಡವನ್ನು ಎದುರಿಸುವುದಾದರೂ ಅದು ಹೋರಾಟವೇ. ಇಂತಹ ವ್ಯಕ್ತಿಯೊಳಗಿನ ಹೋರಾಟ, ಮಾನಸಿಕ ತುಮುಲ, ಸಾಂಪ್ರದಾಯಿಕ ಸಮಾಜದ ನಿರೀಕ್ಷೆಗಳ ಒತ್ತಡಗಳ ಕತೆಯೇ ಹೆಪ್ಪಿಟ್ಟ ಹಾಲು.

ಮಾತೆ ಮಹಾದೇವಿಯವರ ಮೊದಲ ಕಾದಂಬರಿ ಇದು. ಕಲ್ಯಾಣಿ, ನಿರಂಜನ, ಕುಸುಮ, ರಾಜನ್ ಮತ್ತು ಇತರ ಪಾತ್ರಗಳು ನಮ್ಮ ಸಮಾಜದಲ್ಲಿರುವ ಹಲವಾರು ನಮೂನೆಯ ವ್ಯಕ್ತಿಗಳ ಪ್ರತಿಮಾರೂಪಗಳು. ಪಾತ್ರಗಳ ಮೂಲಕ ಆತ್ಮಾವಲೋಕನಕ್ಕೆ ತೊಡಗುತ್ತಾ ನಮ್ಮನ್ನೇ ನೋಡಿಕೊಳ್ಳಲು ಹೋದರೆ ನಮ್ಮೊಳಗೇ ಇರುವ ದ್ವಂದ್ವ, ಸೆಳೆತ, ಸಂಕಲ್ಪ, ವಿಕಲ್ಪಗಳ ಮತ್ತು ದೌರ್ಬಲ್ಯಗಳ ಅನಾವರಣವಾಗುತ್ತಾ ಹೋಗುತ್ತದೆ.

ಕಲ್ಯಾಣಿಯೋ ಅಕ್ಕಮಹಾದೇವಿಯನ್ನು ಆದರ್ಶವಾಗಿರಿಸಿಕೊಂಡಿರುತ್ತಾಳೆ. ನಿರಂಜನನೊಂದಿಗಿನ ಅವಳ ಸಂಬಂಧವು ಹಿತವೂ ಹೌದು, ಹಿಂಸೆಯೂ ಹೌದು. ಇತ್ತ ನಿರಂಜನ ತನ್ನ ಸೆಳೆತಗಳನ್ನು ಮೀರಲಾಗದೇ ಮತ್ತೊಬ್ಬಳ ವ್ಯಾಮೋಹದಲ್ಲಿ ಸಿಲುಕುತ್ತಾನೆ. ಸೆಳೆತ ಮತ್ತು ಸಂಕಲ್ಪಗಳ ನಡುವಿನ ಹೊಯ್ದಾಟ ಒಂದು ಸಾಮಾನ್ಯ ಮಾನಸಿಕ ಸಂಘರ್ಷ. ಈ ಸಂಘರ್ಷದಲ್ಲಿ ತಾನು, ತನ್ನತನ ಮತ್ತು ತನ್ನ ಗಮ್ಯ ಇವುಗಳನ್ನು ಸ್ಥಿರಗೊಳಿಸಿಕೊಳ್ಳಲು ಪಡಬೇಕಾದ ಪಾಡು ಮನೋವೈಜ್ಞಾನಿಕವಾಗಿ, ತಾತ್ವಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ತನ್ನ ಇಚ್ಛೆಯ ವಿರುದ್ಧವಾಗಿ ಸೆಳೆಯುವ ಎಲ್ಲಾ ಶಕ್ತಿಗಳ ವಿರುದ್ಧ ಬಲಗಳಿಸಿಕೊಳ್ಳಲು ಮಾಡಬೇಕಾದ ಸಾಧನೆಯನ್ನು ಹಂತಹಂತವಾಗಿ ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುವುದಕ್ಕೆ ಕಲ್ಯಾಣಿಯು ಒಂದು ರೂಪಕವಾಗಿ ಪರಿಣಮಿಸುತ್ತಾಳೆ.

ತನ್ನ ದೌರ್ಬಲ್ಯವನ್ನು ನಿರಾಕರಿಸದೇ, ಅದನ್ನು ಹುಸಿ ಸಾಮರ್ಥ್ಯದಲ್ಲಿ ಮುಚ್ಚಿಕೊಳ್ಳದೇ, ಅಹಂಕಾರವಿಲ್ಲದೇ ಒಪ್ಪಿಕೊಳ್ಳುವುದು ಬರಿಯ ಆಧ್ಯಾತ್ಮಿಕತೆ ಮಾತ್ರವಲ್ಲ, ಸಹಜ ಮಾನಸಿಕ ಆರೋಗ್ಯಕ್ಕೆ ಅಗತ್ಯವಾದ ನಿಲುವು. ಕಾದಂಬರಿಯ ಸೊಗಸೇ ಆಧ್ಯಾತ್ಮ ಮತ್ತು ಮನಶಾಸ್ತ್ರಗಳನ್ನು ತಾತ್ವಿಕವಾಗಿ ಹೆಣೆದಿರುವುದು. ಉತ್ತಮ ಮಾನಸಿಕ ಆರೋಗ್ಯವುಳ್ಳವನು ಉತ್ತಮ ಆಧ್ಯಾತ್ಮಿಕ ಸಾಧಕನಾಗುತ್ತಾನೆ ಅಥವಾ ಪ್ರಾಮಾಣಿಕ ಆಧ್ಯಾತ್ಮಿಕ ಸಾಧಕನು ಸಹಜವಾಗಿ ಮಾನಸಿಕ ಆರೋಗ್ಯವನ್ನು ಹೊಂದಿರುತ್ತಾನೆ. ಇದು ಹೆಪ್ಪಿಟ್ಟ ಹಾಲಿನ ಕೆನೆ.

PC : Lingayat Religion, (ಮಾತೆ ಮಹಾದೇವಿ)

ಕಾದಂಬರಿಕಾರರು ಮೊದಲಿಗೆ ತಾವೇ ಒಂದು ಹೆಣ್ಣಾಗಿ ಸಮಾಜದಲ್ಲಿನ ತನ್ನ ಸ್ಥಾನ ಮತ್ತು ಸಮಾಜವು ಆರೋಪಿಸುವ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ನಂತರ ಆಧ್ಯಾತ್ಮಿಕವಾಗಿ ಅಕ್ಕಮಹಾದೇವಿಯನ್ನು ತಮ್ಮ ಮಾದರಿಯಾಗಿ ಮುಂದಿರಿಸಿಕೊಂಡು ಹೆಣ್ಣಿನ ಸಹಜತೆ ಮತ್ತು ಅನನ್ಯತೆ; ಈ ಎರಡನ್ನೂ ಸಮದೂಗಿಸುತ್ತಾ ಕೊನೆಗೆ ತಮ್ಮ ತಾತ್ವಿಕವಾದ ಗಮ್ಯವನ್ನು ತನ್ನ ಬದುಕಿನ ಕೇಂದ್ರವನ್ನಾಗಿಸಿಕೊಳ್ಳುತ್ತಾರೆ. ಮಾನುಷ ಸಹಜ ಮಾನಸಿಕ ತುಮುಲಗಳು ಮತ್ತು ಆಧ್ಯಾತ್ಮಿಕ ಸಾಧನೆಗಳು; ಈ ಎರಡೂ ಮಾತಾಜಿಯವರ ಅನುಭವಕ್ಕೆ ಮೀರಿದ್ದೇನಲ್ಲ. ಹಾಗಾಗಿಯೇ ಕಲ್ಯಾಣಿ ಪಾತ್ರದಲ್ಲಿ ಅವೆಲ್ಲವನ್ನೂ ಸಶಕ್ತವಾಗಿ ಅನಾವರಣ ಮಾಡಿದ್ದಾರೆ.

ಪಾತ್ರಗಳ ಸಂಭಾಷಣೆಯ ಶೈಲಿಯೂ ಕೂಡಾ ಹೊರನೋಟಕ್ಕೆ ನಾಟಕೀಯ ಎನಿಸಿದರೂ, ನುಡಿಯ ಧೋರಣೆಯನ್ನು ಅಲಂಕಾರದಲ್ಲಿ ಚಂದಗೊಳಿಸುವ ಪರಿ ಖುಷಿ ಕೊಡುತ್ತದೆ.

“ಕೂಡಿ ಜಗಳವಾಡಬಾರದು; ಜಗಳವಾಡಿಯೇ ಕೂಡುವುದು ಲೇಸು.”
“ಅತಿ ಸಲಿಗೆ ಅನೀತಿಗೆ ಎಡೆ ಮಾಡಿಕೊಡುತ್ತದೆ.”
“ನಾವು ಉಣ್ಣುವುದು ಪ್ರಸಾದ; ಅವರುಣ್ಣುವುದು ಭಿಕ್ಷೆ ಏನು?”

ಕಾದಂಬರಿಯುದ್ದಕ್ಕೂ ಶರಣರ ವಚನಗಳ ತಾತ್ವಿಕ ಚಿಂತನೆ ಮತ್ತು ಸಾಮಾಜಿಕ ಒಲವುಗಳನ್ನು ನೋಡುತ್ತಲೇ ಹೋಗುತ್ತೇವೆ. ಕಾರ್ಲ್‍ಮಾಕ್ಸ್ ಚಿಂತನೆಗಳೂ ಕೂಡಾ ಸ್ಪಷ್ಟವಾಗಿ ಧ್ವನಿಸುತ್ತದೆ.

ಮನವೇ ಸರ್ಪ, ತನುವೇ ಹೇಳಿಗೆ
ಹಾವಿನೊಡತಣ ಹುದುವಾಳಿಗೆ
ಇನ್ನಾವಾಗ ಕೊಂದಹುದೆಂದರಿಯೆ
ಇನ್ನಾವಾಗ ತಿಂದಹುದೆಂದರಿಯೆ

ಶರಣರ ವಚನಗಳಲ್ಲಿ ಸಾಮಾನ್ಯವಾಗಿ ಆಧ್ಯಾತ್ಮ, ಭಕ್ತಿ, ಸಾಮಾಜಿಕ ಒಲವು, ಶರಣ ತತ್ವಗಳೆಲ್ಲವನ್ನು ಮೀರಿ, ಮನೋವಿಜ್ಞಾನವನ್ನು ಹುಡುಕಿರುವ ಕಾದಂಬರಿ ಇದು.

ಅತ್ತ ಆಧ್ಯಾತ್ಮಿಕ ತೃಪ್ತಿಯನ್ನೂ ಪಡೆಯುತ್ತಿಲ್ಲ, ಇತ್ತ ಲೌಕಿಕ ಜನರು ಪಡುವ ತೃಪ್ತಿಯನ್ನೂ ಪಡೆಯುತ್ತಿಲ್ಲ ಎಂಬ ಮಾನಸಿಕ ಸಂಘರ್ಷವು ಸಾಮಾನ್ಯ ಒತ್ತಡವಲ್ಲ. ಎರಡರದ್ದೂ ಪರಿಚಯ ಇರುವ ಜನರದ್ದು ಬಲು ದೊಡ್ಡ ಸಮಸ್ಯೆ. ಅವರದ್ದೇ ಹೆಪ್ಪಿಟ್ಟ ಹಾಲಿನ ಕಲ್ಯಾಣಿಯು ಪ್ರತಿರೂಪ. ಆತ್ಮಾವಲೋಕನ ಎಂಬ ಕೀಲಿಕೈಯನ್ನು ಕಲ್ಯಾಣಿ ತನ್ನ ಬದುಕಿನುದ್ದಕ್ಕೂ ತೊಡಕಿಕೊಳ್ಳುವ ಬಂಧನಗಳಿಂದ ಬಿಡಿಸಿಕೊಳ್ಳಲು ಉಪಯೋಗಿಸುತ್ತಿರುತ್ತಾಳೆ. ತನ್ನ ತಾನು ನೋಡಿಕೊಳ್ಳುವುದು, ತನ್ನದೇ ವರ್ತನೆಗಳನ್ನು ತಾನು ಅಳೆಯುವುದು, ತನ್ನ ಮಾತಿನ ಒಳ ಹೊರಗನ್ನು ಪರೀಕ್ಷಿಸುವುದು, ತನ್ನದೇ ಬಾಧಕಗಳನ್ನು ಯಶಸ್ವೀ ಸಾಧಕರದೊಂದಿಗೆ ತುಲನೆ ಮಾಡಿಕೊಳ್ಳುವುದು; ಇವೆಲ್ಲಾ ಅವಳು ಅನುಸರಿಸುವ ವಿಧಾನಗಳು.

ಈ ಲೇಖನದ ಉದ್ದೇಶ ಹೆಪ್ಪಿಟ್ಟ ಹಾಲಿನ ಕತೆ ಹೇಳುವುದಲ್ಲ. ಅದರ ತಾತ್ವಿಕ ನಿಲುವನ್ನು ಮತ್ತು ಶಕ್ತಿಯನ್ನು ಪರಿಚಯಾತ್ಮಕವಾಗಿ ಹೇಳುವುದಷ್ಟೇ ಆಗಿದೆ. ಒಟ್ಟಿನಲ್ಲಿ ಮನೋವೈಜ್ಞಾನಿಕವಾಗಿ ಆಧ್ಯಾತ್ಮಿಕತೆಯನ್ನು, ಸಾಮಾಜಿಕವಾಗಿ ತಾತ್ವಿಕತೆಯನ್ನು ಹೇಳುವುದರಲ್ಲಿ ಮಾತೆ ಮಹಾದೇವಿಯವರು ಇಡೀ ಹೆಪ್ಪಿಟ್ಟ ಹಾಲಿನ ಕತೆಯನ್ನು ರೂಪಕವಾಗಿ ಬಳಸಿಕೊಂಡಿದ್ದಾರೆ. ಬದಲಾದ ಕಾಲಘಟ್ಟಗಳಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನವು ಪ್ರಗತಿಯನ್ನು ಹೊಂದಿದ್ದರೂ ಮನುಷ್ಯನ ಮನಸ್ಸು ಅದರ ಮೂಲಭೂತ ಸಮಸ್ಯೆಗಳಲ್ಲಿ ಬಳಲುತ್ತಲೇ ಇರುತ್ತದೆ. ಅದನ್ನು ಸರಿಪಡಿಸಿಕೊಳ್ಳುವ ಮೊದಲ ಹೆಜ್ಜೆಯೇ ಆತ್ಮಾವಲೋಕನ ಎಂಬುದನ್ನು ಕಲ್ಯಾಣಿ ನಿರೂಪಿಸುತ್ತಾಳೆ.

ದೇವರು, ಧರ್ಮ, ಸಿದ್ಧಾಂತ, ಧ್ಯಾನ; ಇವೆಲ್ಲವೂ ಮನುಷ್ಯರು ಪರಸ್ಪರ ಆರೋಗ್ಯಕರ ಮನಸ್ಥಿತಿಗಳಿಂದ ಉತ್ತಮ ಸಂಬಂಧವನ್ನು ಹೊಂದಿ ಸಮಾಜದಲ್ಲಿ ಆನಂದವಾಗಿರಬೇಕು ಮತ್ತು ವ್ಯಕ್ತಿಗತವಾಗಿ ತನ್ನ ಆತ್ಮಿಕ ಔನ್ನತ್ಯವನ್ನು ಪಡೆಯಬೇಕು, ಅಷ್ಟೇ. ಹೆಪ್ಪಿಟ್ಟ ಹಾಲಿನ ಮಧುರ ರುಚಿಯೂ ಅದೇ ಅಭಿರುಚಿಯನ್ನು ಪ್ರಚೋದಿಸುವುದು ಎಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ.


ಇದನ್ನೂ ಓದಿ: ಆರ್ಯ-ಅನಾರ್ಯರ ನಡುವಿನ ಕಾಳಗ ಮತ್ತು ಮಿಲನ: ಗೊಂಡಿಯರ ಸಂಭೂ ಶೇಖರ ಶಂಭೋ ಶಂಕರನಾದ ಕಥೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...