Homeಕರ್ನಾಟಕಹೇ ಹಿಂದೂ ಎದ್ದೇಳು: ಪೋಸ್ಟ್‌ ಕಾರ್ಡ್ ಪೋಸ್ಟರ್‌ಗೆ ನಾನಾ ರೂಪ!

ಹೇ ಹಿಂದೂ ಎದ್ದೇಳು: ಪೋಸ್ಟ್‌ ಕಾರ್ಡ್ ಪೋಸ್ಟರ್‌ಗೆ ನಾನಾ ರೂಪ!

‘ಹೇ ಹಿಂದೂ ಎದ್ದೇಳು’ ಪೋಸ್ಟರ್‌ಗೆ ಬೇರೆ ಬೇರೆ ರೂಪಗಳನ್ನು ನೀಡಲಾಗಿದೆ. ‘ಹೇ ದಲಿತ ಎದ್ದೇಳು’, ‘ಹೇ ಆದಿಮ ಎದ್ದೇಳು’ ಅವತರಣಿಕೆಗಳು ವೈರಲ್‌ ಆಗುತ್ತಿವೆ.

- Advertisement -
- Advertisement -

‘ಭೂತಾರಾಧನೆ ಹಿಂದೂ ಸಂಸ್ಕೃತಿಯಲ್ಲ’ ಎಂದು ನಟ ಚೇತನ್‌ ಅಹಿಂಸಾ ಹೇಳಿಕೆ ನೀಡಿದ ಬಳಿಕ ಸುಳ್ಳು ಸುದ್ದಿಗಳಿಗೆ ಹೆಸರಾದ ಬಲಪಂಥೀಯ ಫೇಸ್‌ಬುಕ್‌ ಪೇಜ್‌ ‘ಪೋಸ್ಟ್‌ಕಾರ್ಡ್’ನಲ್ಲಿ ‘ಹೇ ಹಿಂದೂ ಎದ್ದೇಳು’ ಎಂಬ ಪೋಸ್ಟರ್‌ ಹಾಕಲಾಗಿದ್ದು, ಅದನ್ನು ನಾನಾ ರೂಪದಲ್ಲಿ ಜನರು ವ್ಯಂಗ್ಯ ಮಾಡಿದ್ದಾರೆ.

ಕಾಂತಾರ ಸಿನಿಮಾದ ಚಿತ್ರವನ್ನು ಈ ಪೋಸ್ಟರ್‌ನಲ್ಲಿ ಬಳಸಲಾಗಿದೆ. “ಹೇ ಹಿಂದೂ, ಎದ್ದೇಳು” ಎಂದು ದೊಡ್ಡ ಶೀರ್ಷಿಕೆಯನ್ನು ನೀಡಿ, “ನಿನ್ನತನಕ್ಕೆ ಧಕ್ಕೆಯಾದಾಗ ನೀ ಸುಮ್ಮನಿದ್ದರೆ ನಿನ್ನ ಅಂತ್ಯಕ್ಕೆ ನೀನೇ ಕಾರಣವಾದಂತೆ” ಎಂದು ಬರೆಯಲಾಗಿದೆ.

May be an image of one or more people and text that says "ಹೇ ಹಿಂದೂ, ಎದ್ದೇಳು POST CARD CARD ನಿನ್ನತನಕ್ಕೆ ಧಕ್ಕೆಯಾದಾಗ ನೀ ಸುಮ್ಮನಿದ್ದರೆ ನಿನ್ನ ಅಂತ್ಯಕ್ಕೆ ನೀನೇ ಕಾರಣವಾದಂತೆ"

ಹಿಂದೂ- ಮುಸ್ಲಿಂ ಸಮುದಾಯಗಳ ನಡುವೆ ಒಡಕುಗಳನ್ನು ಮೂಡಿಸಲು ಈ ರೀತಿಯ ಪೋಸ್ಟ್‌ಗಳನ್ನು ‘ಪೋಸ್ಟ್‌ಕಾರ್ಡ್’ ನಿರಂತರ ಮಾಡುತ್ತಿರುವುದನ್ನು ಗಮನಿಸುತ್ತಾ ಬಂದಿರುವ ಜನರು, ‘ಹೇ ಹಿಂದೂ ಎದ್ದೇಳು’ ಎಂಬ ಟ್ಯಾಗ್‌ಲೈನ್‌ನಲ್ಲಿಯೇ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ಹೇ ಹಿಂದೂ ಎದ್ದೇಳು’ ಪೋಸ್ಟರ್‌ನ ವಿವಿಧ ಅವತರಣಿಕೆಗಳು ವೈರಲ್ ಆಗುತ್ತಿವೆ.

“ಹೇ ಹಿಂದೂ, ಎದ್ದೇಳು, ಪೆಟ್ರೋಲ್ ರೇಟು 105 ಆಗಿದೆ. ಗ್ಯಾಸ್ ಸಿಲಿಂಡರ್ 1100 ಆಗಿದೆ. ಡಾಲರ್ ಬೆಲೆ 83 ಆಗಿದೆ. ಎಲ್ಲಾ ಬೆಲೆ ಜಾಸ್ತಿ ಆಗ್ತಿದೆ. ಏಳು ಎದ್ದೇಳು, ಚುನಾವಣೆ ಬಂತು ಬಿಜೆಪಿಯನ್ನು ಸೋಲಿಸು” ಎಂಬ ಪೋಸ್ಟರ್‌ ಹರಿದಾಡಿದೆ.

ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿದಿರುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಸೇರಿದಂತೆ ಮೊದಲಾದ ಸಂಗತಿಗಳನ್ನು ಹೇ ಹಿಂದೂ ಎದ್ದೇಳು ಪೋಸ್ಟರ್‌ಗಳ ಮೂಲಕ ಮುನ್ನೆಲೆಗೆ ತರಲಾಗಿದೆ.

May be an image of one or more people and text that says "ಹೇ ಹಿಂದೂ ಎದ್ದೇಳು! POST CARD ಮೋದಿ ಆಡಳಿತದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 83 ಆಗಿದೆ, ನಿರುದ್ಯೋಗ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಸಾರ್ವಜನಿಕ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ, ಹೀಗೇ ಬಿಟ್ಟರೆ ಭಾರತದ ಜನರು ಬೀದಿ ಪಾಲಾಗುತ್ತಾರೆ"May be an image of one or more people and text that says "ಹೇ ಹಿಂದೂ ಎದ್ದೇಳು! POST CARD ಪೆಟ್ರೋಲ್-ಡೀಸೆಲ್, ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ... ನೀ ಸುಮ್ಮನೆ ಇದ್ದರೆ ನಿಮ್ಮನು ಮೋದಿ & ಗ್ಯಾಂಗ್ ಧರ್ಮದ ಹೆಸರಲ್ಲಿ ತಿರ್ಪೆ ಎತ್ತುವ ಹಾಗೆ ಮಾಡುತ್ತಾರೆ."May be an image of one or more people and text that says "ಹೇ ಹಿಂದೂ ಎದ್ದೇಳು! POST CARD ಭಾರತದ ಜಾಗತಿಕ ಹಸಿವಿನ ಸೂಚ್ಯಂಕ ಪಾಕ್, ಬಾಂಗ್ಲಾದೇಶ, ಶ್ರೀಲಂಕಾಕ್ಕಿಂತ ಕಳಪೆಯಾಗಿ 107ನೇ ಸ್ಥಾನಕ್ಕೆಕುಸಿದಿದೆ, ಹೀಗೇ ಬಿಟ್ಟರೆ ಮೋದಿ ಮತ್ತವರ ಗ್ಯಾಂಗ್ ಭಾರತದ ಹೆಸರನ್ನು ವಿಶ್ವ ಭೂಪಟದಿಂದ ಕಿತ್ತು ಹಾಕುತ್ತದೆ"‘ಹಿಂದೂ ನಾವೆಲ್ಲ ಒಂದು’ ಎನ್ನುವ ಸಂಘಪರಿವಾರ ದಲಿತರ ಮೇಲೆ ದೌರ್ಜನ್ಯವಾದಾಗ ಮೌನ ತಾಳಿರುವುದನ್ನು ಈ ಅಭಿಯಾನದಲ್ಲಿ ಪ್ರಶ್ನಿಸಲಾಗಿದೆ.

“ಹೇ ಹಿಂದೂ ಎದ್ದೇಳು, ರಾಮನಗರದಲ್ಲಿ ಒಬ್ಬ ದಲಿತ ಬಾಲಕಿಯ ಮೇಲೆ ನಿವೃತ್ತ ಪೊಲೀಸ್ ಪೇದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹೇ ಹಿಂದೂ ಎದ್ದೇಳು, ಸ್ವಾಮೀಜಿಯೊಬ್ಬರ ಮೇಲೆ ಅತ್ಯಾಚಾರದ ಆರೋಪ ಬಂದಿದೆ, ಧರ್ಮಸ್ಥಳದ ಬಳಿ ಬಜರಂಗದಳದ ಮುಖಂಡನೊಬ್ಬ ದಲಿತ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾನೆ. ಪೆದ್ದನಹಳ್ಳಿಯ ಇಬ್ಬರು ದಲಿತರ ಹೆಣ ರಾತ್ರೋರಾತ್ರಿ ಬಿದ್ದಿವೆ. ಹೇ ಹಿಂದೂ ಎದ್ದೇಳು, ಶಿಕ್ಷಕನೇ ದಲಿತ ಬಾಲಕನನ್ನು ಹೊಡೆದು ಕೊಂದಿದ್ದಾನೆ. ಹೇ ಹಿಂದೂ ಎದ್ದೇಳು, ಗುಬ್ಬಿಯಲ್ಲಿ ದೇವಸ್ಥಾನಕ್ಕೆ ಒಳಹೋದ ದಲಿತನಿಗೆ ಅರ್ಚಕ ಜಾತಿ ನಿಂದನೆ ಮಾಡಿದ್ದಾನೆ. ಹೇ ಹಿಂದೂ ಎದ್ದೇಳು, ದೇವರ ಕೋಲು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ ಛೀಮಾರಿ ಹಾಕಿದ್ದಾರೆ. ಹೇ ಹಿಂದೂ ಎದ್ದೇಳು, ಚಿಕ್ಕಮಗಳೂರಲ್ಲಿ ಗರ್ಭಿಣಿ ದಲಿತ ಮಹಿಳೆಗೆ ಹೊಡೆದು ಜಗತ್ತನೇ ನೋಡದ ಮಗುವನ್ನೇ ಕೊಲ್ಲಲಾಗಿದೆ” ಎಂಬ ಸಾಲುಗಳು ವೈರಲ್ ಆಗುತ್ತಿವೆ.

“ಹೇ, ಹಿಂದೂ ಎದ್ದೇಳು. ಚುನಾವಣೆ ಹತ್ತಿರವಾಗುತ್ತಿದೆ” ಎಂದು ಟೀಕಿಸಲಾಗಿದೆ.

ಲೇಖಕ ರುದ್ರ ಪುನೀತ್‌ ಆರ್‌.ಸಿ. ಅವರು ಬರೆದಿರುವ ಪೋಸ್ಟ್‌ಅನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. “ಏಳೋದೇನೋ ಏಳೋಣ, ಆದ್ರೆ ಯಾರ್ ಎಳ್ಬೇಕು ಅನ್ನೋದನ್ನ ಸ್ಪೆಸಿಫಿಕ್ ಆಗಿ ಹೇಳ್ಬೇಕಲ್ವಾ?” ಎಂದು ಪ್ರಶ್ನಿಸಿರುವ ಅವರು, “ಹೇ ಹಿಂದೂ ಎದ್ದೇಳು ಅಂದ್ರೆ, ಬ್ರಾಹ್ಮಣರು ಎಳ್ಬೇಕಾ ? ಕ್ಷತ್ರಿಯರು ಎಳ್ಬೇಕಾ? ವೈಶ್ಯರು ಎಳ್ಬೇಕಾ? ಲಿಂಗಾಯತರು? ಒಕ್ಕಲಿಗರು? ಗಾಣಿಗರು? ಕುಂಚಿಟಿಗರು? ಭಂಟರು? ಮೊಗವೀರರು? ಪೂಜಾರರು ಮಾದಿಗರು? ಹೊಲೆಯರು? ದಕ್ಕಲಿಗರು? ಲಂಬಾಣಿಗರು? ಭೋವಿಗಳು? ಕೊರಚ ಕೊರಮರು? ಅಲೆಮಾರಿಗಳು ಆದಿವಾಸಿಗಳು? ಹಂದಿಜೋಗಿ, ಮಾಂಗ್ ಗಾರುಡಿಗಳು? ಯಾರು ಏಳಬೇಕು” ಎಂದು ಕೇಳಿದ್ದಾರೆ.

“ನಾನು ಹಿಂದೂನೇ, ಎಲೆಕ್ಷನ್ ಬಂದಾಗ, ಯಾತ್ರೆ ಮೆರವಣಿಗೆ ರ್‍ಯಾಲಿ ನಡೆದಾಗ ಮಾತ್ರ. ಬಾಕಿ ಸಮಯದಲ್ಲಿ ನನ್ನನ್ನು ಒಂದು ಜಾತಿಗೆ ಕಟ್ಟಿಹಾಕಿ ಶೋಷಣೆ ಮಾಡ್ತಾರೆ. ನಾನೂ ಹಿಂದೂ ಅಂತೆ- ಆದರೆ ನಾನು ನನ್ನ ಮದುವೆಯಲ್ಲಿ ಕುದುರೆ ಏರಿದರೆ ನನ್ನನ್ನು ಹೊಡೆದು ಕೊಲ್ಲುತ್ತಾರೆ. ನಾನು ಹಿಂದೂ ಅಂತೆ- ಆದರೆ ಉಡುಪಿಯ ಕೋಟಾ ಬಳಿ ನನ್ನ ಮದುವೆಯಲ್ಲಿ ಡಿಜೆ ಹಾಕಿದ್ದಕ್ಕೆ ನನ್ನನ್ನು ಮದುಮಗ ಅಂತಲೂ ನೋಡದೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಬೆತ್ತಲೆ ನಿಲ್ಲಿಸುತ್ತಾರೆ. ನಾನು ಹಿಂದೂ ಅಂತೆ- ಕೆಎಎಸ್‌ ಪರೀಕ್ಷೆ ಬರೆದು ಬಂದು ನನ್ನ ಹಳ್ಳಿಗೆ ಬಸ್ ಸಿಗಲಿಲ್ಲವೆಂದು ಹತ್ತಿರವಿದ್ದ ದೇವಸ್ಥಾನವೊಂದರಲ್ಲಿ ಮಲಗಿದ್ದಕ್ಕೆ ನನ್ನನ್ನ ಕತ್ತೆಮೇಲೆ ಮೆರವಣಿಗೆ ಮಾಡುತ್ತಾರೆ. ನಾನು ಹಿಂದೂ ಅಂತೆ- ಆದರೆ ನನ್ನ ತಂಗಿ ದಾನಮ್ಮನ ಅತ್ಯಾಚಾರವಾದಾಗ ನಮ್ಮ ನ್ಯಾಯಕ್ಕಾಗಿ ಯಾರೂ ಬರಲಿಲ್ಲ. ನಾನು ಹಿಂದೂ ಅಂತೆ- ನನ್ನ ಕೇರಿಗಳು, ತಾಂಡಾಗಳು, ಓಣಿಗಳು, ಹಟ್ಟಿಗಳು, ಡೇರೆಗಳು ಈಗಲೂ ಊರಾಚೆ ಇವೆ”- ಹೀಗೆ ಹಲವಾರು ನೋವುಗಳನ್ನು ಪುನೀತ್‌ ವ್ಯಕ್ತಪಡಿಸಿದ್ದಾರೆ.

‘ಹೇ ಹಿಂದೂ ಎದ್ದೇಳು’ ರೀತಿಯಲ್ಲಿ ‘ಹೇ ದಲಿತ ಎದ್ದೇಳು’ ಅವತರಣಿಕೆಯನ್ನು ‘ನಾನೊಬ್ಬ ದಲಿತ’ ಪೇಜ್‌ ಪೋಸ್ಟ್‌ ಮಾಡಿದೆ. ನೂರಾರು ಜನರು ಈ ಪೋಸ್ಟರ್‌ಗಳನ್ನು ಶೇರ್‌ ಮಾಡುತ್ತಿದ್ದಾರೆ.

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು ಶಿಕ್ಷಕನೇ ದಲಿತ ಬಾಲಕನನ್ನು ಹೊಡೆದು ಕೊಂದಿದ್ದಾನೆ ಯೂಪಿಯಲ್ಲಿ..."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು... ರಾಮನಗರದಲ್ಲಿ ಒಬ್ಬ ದಲಿತ ಬಾಲಕಿಯ ಮೇಲೆ ನಿವೃತ್ತ ಪೊಲೀಸ್ ಪೇದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ..."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು... ಧರ್ಮಸ್ಥಳದ ಬಳಿ ಬಜರಂಗದಳದ ಮುಖಂಡನೊಬ್ಬ ದಲಿತ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾನೆ."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ದೇವರ ಎದ್ದೇಳು... ಕೋಲು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ ಛೀಮಾರಿ ಹಾಕಿದ್ದರು..."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು... ಗುಬ್ಬಿಯಲ್ಲಿ ದೇವಸ್ಥಾನಕ್ಕೆ ಒಳಹೋದ ದಲಿತರಿಗೆ ಅರ್ಚಕ ಜಾತಿ ನಿಂದನೆ ಮಾಡಿದ್ದಾನೆ...."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು... ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಹೆಣ ರಾತ್ರೋರಾತ್ರಿ ಬಿದ್ದವು..."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು ಚಿಕ್ಕಮಗಳೂರಲ್ಲಿ ಗರ್ಭಿಣಿ ದಲಿತ ಮಹಿಳೆಗೆ ಹೊಡೆದು ಜಗತ್ತನೇ ನೋಡದ ಕಂದಮ್ಮನನ್ನು ಕೊಂದಿದ್ದಾನೆ"

‘ನಾವು ಹೊಲೆಯರು- ಚಲವಾದೇರು’ ಪೇಜ್‌ನಲ್ಲಿ ‘ಎದ್ದೇಳು ಆದಿಮ’ ಅವತರಣಿಕೆಯನ್ನು ಪೋಸ್ಟ್‌ ಮಾಡಲಾಗಿದೆ.

“ಆರಂಬ ಮಾಡಿದ‌ ನಮ್ಮನು ಅಡಿಯಾಳಾಗಿಸಿಕೊಂಡಿದ್ದಾರೆ. ನಮ್ಮ ಮುಟ್ಟಿ ಮೈಲಿಗೆಯೆಂದು ಕೈ ತೊಳೆದುಕೊಂಡಿದ್ದಾರೆ. ನೆಡೆದ ದಾರಿಗೆ ಪಂಚಗವ್ಯ ಚೆಲ್ಲಿ ಶುಚಿಗೊಳಿಸಿದ್ದಾರೆ. ನಾವೆಲ್ಲ ಒಂದೇ ಎಂದು ತಲೆಸವರಿ, ನಮ್ಮ ಮೇಲಾದ ದೌರ್ಜನ್ಯಗಳ ಕಂಡು ಕಾಣದಂತೆ ಸುಮ್ಮನಿದ್ದಾರೆ. ನಮ್ಮ ಹೊಲತಿ ಮಾದಿಗಿತ್ತಿ ಕೊರತಿ ಪಾಣರತಿ ಊರದೇವರ ಮಾರಿದೇವರ ಬಿಸಿಲವ್ವ ಬೆಳ್ಳಿಪಣದವ್ವರನ್ನೆಲ್ಲಾ ಲಲಿತಾ ಗಾಯಿತ್ರಿ ಶಾಖಾಂಬರಿ ಶ್ವೇತಾವರಾಹಿಯಾಗಿಸಿಕೊಂಡಿದ್ದಾರೆ. ನಮ್ಮ ವಾಸ್ತವ್ಯದ ತೆಂಕಣ ದಿಕ್ಕನ್ನು ಕೆಟ್ಟ ದಿಕ್ಕೆಂದಿದ್ದಾರೆ. ಹೊಲಯ ಮಾದಿಗ ಕೊರಗ ಪಾಣ ಪಂಬದ ನಲಿಕೆ ಪರವರ ಹೆಸರಿನರ್ಥಗಳಗೆಡಿಸಿ ಆ ಹೆಸರುಗನ್ನ ಬಳಸಲು ಕೀಳರಿಮೆಗೆ ಬೀಳುವಂತ ಸ್ಥಿತಿ ನಿರ್ಮಿಸಿದ್ದಾರೆ. ನಮ್ಮ ಶೋಷಣೆಯ ಇತಿಹಾಸದೊಳಗೆ ನಮ್ಮ ವೈಭವದ ಇತಿಹಾಸವನ್ನು ಕರಗಿಸಿ ರಾಜಕೀಯ ದಾಳವಾಗಿಸಿಕೊಂಡಿದ್ದಾರೆ. ನಮ್ಮ ಊರದ್ಯಾವ್ರು ಮಾರಿದ್ಯಾವ್ರು ಭೂತಗಳ ಕ್ಷುದ್ರದೈವಗಳೆಂದು ಜರಿದಿದ್ದಾರೆ. ನಮ್ಮ ಇತಿಹಾಸವ ತಿದ್ದಿ ವಿರೂಪಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಏಳೋ ಆದಿಮ, ಎದ್ದೇಳು…” ಎಂದು ಪೋಸ್ಟ್‌ ಮಾಡಲಾಗಿದೆ.

ವಿವಿಧ ರೀತಿಯ ಪೋಸ್ಟರ್‌ಗಳು ವೈರಲ್ ಆಗುತ್ತಿದ್ದಂತೆ ಪೋಸ್ಟ್‌ ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಮತ್ತೊಂದು ಪೋಸ್ಟರ್‌ ಹಾಕಿ ಸ್ಪಷ್ಟನೆ ನೀಡಿದ್ದಾರೆ. “ಮನಸೋ ಇಚ್ಛೆ ಎಡಿಟ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...