Homeಮುಖಪುಟಹಿಮಾಚಲಪ್ರದೇಶ: ಪೂರ್ವ ಸೂಚನೆ ನೀಡದೆ 2 ಸಿಮೆಂಟ್‌ ಸ್ಥಾವರ ಸ್ಥಗಿತಗೊಳಿಸಿದ ಅದಾನಿ ಗ್ರೂಪ್‌; ಸೇಡಿನ ಕ್ರಮವೇ?

ಹಿಮಾಚಲಪ್ರದೇಶ: ಪೂರ್ವ ಸೂಚನೆ ನೀಡದೆ 2 ಸಿಮೆಂಟ್‌ ಸ್ಥಾವರ ಸ್ಥಗಿತಗೊಳಿಸಿದ ಅದಾನಿ ಗ್ರೂಪ್‌; ಸೇಡಿನ ಕ್ರಮವೇ?

ಈ ಘಟಕಗಳನ್ನು ಅವಲಂಬಿಸಿರುವ ಜನರು ಆತಂಕಕ್ಕೆ ಒಳಗಾಗಿದ್ದು ಅದಾನಿ ಗ್ರೂಪ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ, ಕಾಂಗ್ರೆಸ್ ಸರ್ಕಾರ ಶೋಕಾಸ್ ನೊಟೀಸ್‌ ನೀಡಿದೆ

- Advertisement -
- Advertisement -

“ಸಾರಿಗೆ ವೆಚ್ಚದ ನಷ್ಟವನ್ನು ಅನುಭವಿಸುತ್ತಿರುವ ಕಾರಣ ಹಿಮಾಚಲ ಪ್ರದೇಶದ ಎರಡು ಸಿಮೆಂಟ್ ಸ್ಥಾವರಗಳಲ್ಲಿ ಕೆಲಸಗಳನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ” ಎಂದು ಅದಾನಿ ಗ್ರೂಪ್ ಗುರುವಾರ ತಿಳಿಸಿದೆ.

ಬಿಲಾಸ್‌ಪುರ ಜಿಲ್ಲೆಯ ಗಾಗಲ್‌ನಲ್ಲಿರುವ ಎಸಿಸಿ ಸಿಮೆಂಟ್ ಪ್ಲಾಂಟ್ ಮತ್ತು ಸೋಲನ್ ಜಿಲ್ಲೆಯ ದರ್ಲಾಘಾಟ್‌ನ ಅಂಬುಜಾ ಸಿಮೆಂಟ್ ಪ್ಲಾಂಟ್ ಅನ್ನು ಸೆಪ್ಟೆಂಬರ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ವಾಧೀನಪಡಿಸಿಕೊಂಡಿದ್ದ ಅದಾನಿ ಗ್ರೂಪ್‌, ಈಗ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಸರ್ಕಾರಕ್ಕೆ ಯಾವುದೇ ಸೂಚನೆ ನೀಡದೆ ಸ್ಥಾವರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ತನ್ನ ನಿರ್ಧಾರಕ್ಕೆ ಹೆಚ್ಚಿನ ಸರಕು ಸಾಗಣೆ ದರವೇ ಕಾರಣ ಎಂದು ಅದಾನಿ ಗ್ರೂಪ್‌ ದೂರಿದೆ. ರಾಜ್ಯದಲ್ಲಿ ಸಿಮೆಂಟ್ ದರ ಇಳಿಸಲು ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸರ್ಕಾರದ ವಿರುದ್ಧದ ಸೇಡಿನ ಕ್ರಮವಾಗಿ ಈ ಬೆಳವಣಿಗೆಯಾಗಿದೆ ಎಂಬ ಚರ್ಚೆ ರಾಜ್ಯದಲ್ಲಿ ನಡೆಯುತ್ತಿದೆ.

ವೆಚ್ಚವನ್ನು ತಗ್ಗಿಸಲು ಕಂಪನಿಯು ಸಾರಿಗೆ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸುತ್ತಿದೆ. ದರ್ಲಘಟ್ಟದಲ್ಲಿ ಅಂಬುಜಾ ಸಿಮೆಂಟ್ ಸ್ಥಾವರವನ್ನು ನಡೆಸುತ್ತಿರುವ ಅಧಿಕಾರಿಗಳು ಸಾರಿಗೆ ಒಕ್ಕೂಟಗಳಿಗೆ ಪತ್ರ ಬರೆದಿದ್ದಾರೆ. “ವೆಚ್ಚವನ್ನು ಕಡಿಮೆ ಮಾಡಲು ತೀವ್ರ ಒತ್ತಡದಲ್ಲಿವೆ. ಪ್ರಸ್ತುತ ಮಾರುಕಟ್ಟೆ ಸನ್ನಿವೇಶದಲ್ಲಿ, ಹೆಚ್ಚಿನ ಸಾರಿಗೆ ವೆಚ್ಚದಿಂದಾಗಿ ನಾವು ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಕಷ್ಟಪಡುತ್ತಿದ್ದೇವೆ. ಪರಿಸ್ಥಿತಿ ಮುಂದುವರಿದರೆ ನಮ್ಮ ಘಟಕಗಳು ಕೆಲಸ ನಿರ್ವಹಿಸುವುದು ಕಷ್ಟವಾಗುತ್ತದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿರಿ: ಅದಾನಿ ಸಂಸ್ಥೆಗೆ ಅಕ್ರಮ ಭೂ ಮಂಜೂರಾತಿ: ಗುಜರಾತ್ ಸರ್ಕಾರಕ್ಕೆ 58 ಕೋಟಿ ರೂ ನಷ್ಟ

“ನಿಮ್ಮ ಕಟು ವರ್ತನೆಯಿಂದಾಗಿ ನಾವು ಅತಿಯಾದ ಸರಕುಗಳನ್ನು ಖರೀದಿಸಬೇಕಾಗಿದೆ. ಇದು ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿದೆ” ಎಂದು ಆಕ್ಷೇಪ ಎತ್ತಿದ್ದಾರೆ.

ಕಂಪನಿಯು ಸೋಲನ್ ಡೆಪ್ಯುಟಿ ಕಮಿಷನರ್‌ಗೆ ಪತ್ರ ಬರೆದು, ‘ಸಾರಿಗೆ, ಕೈಗಾರಿಕೆಗಳು, ಆಹಾರ, ನಾಗರಿಕ ಸರಬರಾಜು ಮತ್ತು ಹಣಕಾಸು ಕಾರ್ಯದರ್ಶಿಗಳನ್ನು ಒಳಗೊಂಡಿರುವ ಶಾಶ್ವತ ಸಮಿತಿ’ಯು ಸಿದ್ಧಪಡಿಸಿದ ವರದಿಯತ್ತ ಗಮನ ಸೆಳೆದಿದೆ. ‘ಹಿಮಾಚಲ ಪ್ರದೇಶದಲ್ಲಿ ಸರಕು ಸಾಗಣೆಯ ದರಗಳ ನಿಗದಿ’ ವರದಿಯನ್ನು ಸಮಿತಿ ನೀಡಿದೆ.

ಸದ್ಯ ಪ್ರತಿ ಕ್ವಿಂಟಲ್ ಸಿಮೆಂಟ್ ಸಾಗಣೆ ದರ ಗುಡ್ಡಗಾಡು ಪ್ರದೇಶಗಳಲ್ಲಿ ಕಿಲೋಮೀಟರ್‌ಗೆ ₹10.58 ಹಾಗೂ ಬಯಲು ಸೀಮೆಯಲ್ಲಿ ₹5.38 ಇದೆ.

ಸೋಲನ್ ಡಿಸ್ಟ್ರಿಕ್ಟ್ ಟ್ರಕ್ ಆಪರೇಟರ್ಸ್ ದರ್ಲಘಾಟ್ ಅಧ್ಯಕ್ಷ ಜೈ ದೇವ ಕೌಂದಲ್ ಮಾತನಾಡಿ, “ಬೆಟ್ಟ ಪ್ರದೇಶದಲ್ಲಿ ಪ್ರತಿ ಕ್ವಿಂಟಲ್‌ಗೆ ಪ್ರತಿ ಕಿಲೋಮೀಟರ್‌ಗೆ ₹ 6 ದರವನ್ನು ಕಡಿಮೆ ಮಾಡಲು ಕಂಪನಿಗಳು ನಮ್ಮನ್ನು ಕೇಳುತ್ತಿವೆ. ಬೆಟ್ಟ ಪ್ರದೇಶದಲ್ಲಿ ಇಂಧನ ಬಳಕೆ ಹೆಚ್ಚಿರುವುದರಿಂದ ಈ ದರಗಳಿಗೆ ಒಪ್ಪಿದರೆ ಟ್ರಕ್ ಮಾಲೀಕರು ಏನನ್ನು ಸಂಪಾದಿಸಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ಮುಖ್ಯ ಕಾರ್ಯದರ್ಶಿ ಆರ್‌.ಡಿ.ಧೀಮನ್, “ಇದು ಕಂಪನಿಯ ಆಡಳಿತ ಮತ್ತು ಸಾರಿಗೆ ಒಕ್ಕೂಟಗಳ ನಡುವಿನ ವಿಷಯವಾಗಿದೆ. ಬಿಲಾಸ್‌ಪುರ ಮತ್ತು ಸೋಲನ್‌ನ ಉಪ ಆಯುಕ್ತರನ್ನು ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದೇನೆ. ಪೂರ್ವ ಸೂಚನೆ ಇಲ್ಲದೆ ಸ್ಥಾವರಗಳನ್ನು ಮುಚ್ಚುವುದು ಕಾನೂನುಬಾಹಿರವಾಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಕಂಪನಿಯ ಅಧಿಕಾರಿಗಳು ಕರೆಗಳಿಗೆ ಅಥವಾ ಸಂದೇಶಗಳಿಗೆ ಸ್ಪಂದಿಸುತ್ತಿಲ್ಲ” ಎಂದು ದೂರಿದ್ದಾರೆ.

ಪೂರ್ವ ಸೂಚನೆ ಇಲ್ಲದೆ ರಾಜ್ಯದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಹಿಮಾಚಲ ಪ್ರದೇಶ ಸರ್ಕಾರವು ಎರಡು ಸಿಮೆಂಟ್ ಕಂಪನಿಗಳಿಗೂ  ಶೋಕಾಸ್ ನೋಟಿಸ್ ನೀಡಿದೆ.

ಸಾರಿಗೆ ಮತ್ತು ಕೈಗಾರಿಕಾ ಇಲಾಖೆಗಳ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿರುವ ಧೀಮನ್‌, ಸ್ಥಳೀಯರಲ್ಲಿ ಉಂಟಾಗಿರುವ ಆತಂಕವನ್ನು ಹೋಗಲಾಡಿಸಲು ಯತ್ನಿಸಿದ್ದಾರೆ.

ನಿರುದ್ಯೋಗ ಬಿಕ್ಕಟ್ಟು

ಸುಮಾರು 25,000 ಕುಟುಂಬಗಳು ನೇರವಾಗಿ ಮತ್ತು ಪರೋಕ್ಷವಾಗಿ ತಮ್ಮ ಜೀವನೋಪಾಯಕ್ಕಾಗಿ ಸಿಮೆಂಟ್ ಘಟಕವನ್ನು ಅವಲಂಬಿಸಿವೆ. ಕಂಪನಿಯು 530 ಸಾಮಾನ್ಯ ಉದ್ಯೋಗಿಗಳನ್ನು ಮತ್ತು 450 ಗುತ್ತಿಗೆ ನೌಕರರನ್ನು ಹೊಂದಿದೆ. ಬರ್ಮಾನಾದ ಸಿಮೆಂಟ್ ಕಾರ್ಖಾನೆಯಲ್ಲಿ ಸುಮಾರು 3,800 ಟ್ರಕ್ ನಿರ್ವಾಹಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 2,300 ಚಾಲಕರು ಬಿಲಾಸ್‌ಪುರ ಜಿಲ್ಲಾ ಟ್ರಕ್ ಆಪರೇಟರ್ ಟ್ರಾನ್ಸ್‌ಪೋರ್ಟ್ ಕೋ-ಆಪರೇಟಿವ್ ಸೊಸೈಟಿಯೊಂದಿಗೆ ಮತ್ತು 1,500 ಮಾಜಿ ಸೈನಿಕರ ಸಂಘದೊಂದಿಗೆ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ದರ್ಲಘಟ್ಟದಲ್ಲಿರುವ ಸಿಮೆಂಟ್ ಕಾರ್ಖಾನೆಯಲ್ಲಿ ಸುಮಾರು 2,000 ಟ್ರಕ್ಕರ್‌ಗಳು ಕೆಲಸ ಮಾಡುತ್ತಿದ್ದಾರೆ.

ಸ್ಥಾವರಗಳು ಸ್ಥಗಿತಗೊಂಡರೆ ಅವರೆಲ್ಲ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಬಿಲಾಸ್‌ಪುರದಿಂದ ಸ್ವರಘಾಟ್ ನಡುವೆ 600 ಮೆಕ್ಯಾನಿಕ್‌ಗಳು, ಟೈರ್ ಪಂಕ್ಚರ್ ರಿಪೇರಿ ಅಂಗಡಿಗಳು ಇರುವುದು ಗಮನಾರ್ಗ. ಈ ಭಾಗದಲ್ಲಿ ಟ್ರಕ್ಕರ್‌ಗಳನ್ನು ಅವಲಂಬಿಸಿರುವ ಸಣ್ಣ ಡಾಬಾಗಳು ಸಾಕಷ್ಟಿಸಿವೆ. ಇವುಗಳನ್ನು ಅವಲಂಬಿಸಿರುವವರ ಎಲ್ಲರ ಬದುಕು ಈಗ ಡೋಲಾಯಮಾನವಾಗಿದೆ.

ಸಿಮೆಂಟ್ ಕೊರತೆ ಸಾಧ್ಯತೆ

ಸ್ಥಾವರಗಳನ್ನು ಮುಚ್ಚುವುದರಿಂದಾಗಿ ಸಿಮೆಂಟ್ ಕೊರತೆ ಉಂಟಾಗಬಹುದು. ದಾರ್ಲಾಘಾಟ್‌ನಲ್ಲಿರುವ ಅಂಬುಜಾ ಸಿಮೆಂಟ್ ಸ್ಥಾವರವು ವರ್ಷಕ್ಕೆ 2 ಮಿಲಿಯನ್ ಟನ್‌ಗಳನ್ನು ಉತ್ಪಾದಿಸುತ್ತದೆ. ಪ್ರತಿದಿನ ಸುಮಾರು 5-6 ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ. ಬರ್ಮಾನಾ ಸ್ಥಾವರವು ದಿನಕ್ಕೆ 3,000 ಮೆಟ್ರಿಕ್ ಟನ್ ಸಿಮೆಂಟ್ ಅನ್ನು ಉತ್ಪಾದಿಸುತ್ತದೆ. ಎರಡು ಸ್ಥಾವರಗಳು ಉತ್ಪಾದಿಸುವ ಸಿಮೆಂಟ್ ಅನ್ನು ಹಿಮಾಚಲದ ಹೊರತಾಗಿ ಗುಜರಾತ್, ಬಂಗಾಳ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢಕ್ಕೆ ಸರಬರಾಜು ಮಾಡಲಾಗುತ್ತದೆ. 15,000 ಮೆಟ್ರಿಕ್ ಟನ್ ಸಿಮೆಂಟ್ ಮತ್ತು ಕ್ಲಿಂಕರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಬರ್ಮಾನಾ ಎಸಿಸಿ ಸ್ಥಾವರದಿಂದ ಸಿಮೆಂಟ್ ಅನ್ನು ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಟ್ರಕ್‌ಗಳ ಮೂಲಕ ಸರಬರಾಜು ಮಾಡಲಾಗುತ್ತದೆ.

ಅದಾನಿ ಗ್ರೂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಸಿಪಿಐ (ಎಂ) ಆಗ್ರಹ

ಅಂಬುಜಾ ಮತ್ತು ಎಸಿಸಿ ಸಿಮೆಂಟ್ ಸ್ಥಾವರಗಳಲ್ಲಿ ಕಾರ್ಯಾಚರಣೆಯನ್ನು ಹಠಾತ್ತನೆ ಸ್ಥಗಿತಗೊಳಿಸಿದ್ದಕ್ಕಾಗಿ ಅದಾನಿ ಗ್ರೂಪ್ ಅನ್ನು ಟೀಕಿಸಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಹಿಮಾಚಲ ಪ್ರದೇಶ ರಾಜ್ಯ ಸಮಿತಿಯು ಗ್ರೂಪ್‌ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನೂ ಓದಿರಿ: ಇಸ್ರೇಲ್‌ನ ಅತೀ ದೊಡ್ಡ ಬಂದರು ‘ಅದಾನಿ ಗ್ರೂಪ್’ ವಶಕ್ಕೆ

ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಓಂಕಾರ್ ಶಾದ್ ಮಾತನಾಡಿ, “ಸಿಮೆಂಟ್ ಸ್ಥಾವರಗಳನ್ನು ಸ್ಥಾಪಿಸುವುದಕ್ಕಾಗಿ ಜನರ ಬೆಲೆಬಾಳುವ ಭೂಮಿಯನ್ನು ಪಡೆಯಲಾಗಿದೆ. ಆದರೆ, ಇತ್ತೀಚೆಗಷ್ಟೇ ಎರಡು ಸ್ಥಾವರಗಳನ್ನು ಸ್ವಾಧೀನಪಡಿಸಿಕೊಂಡಿರುವ ಅದಾನಿ ಗ್ರೂಪ್ ಯಾವುದೇ ಕಾರಣವಿಲ್ಲದೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಸಾವಿರಾರು ಕಾರ್ಮಿಕರು ಮತ್ತು ಟ್ರಕ್ ಆಪರೇಟರ್‌ಗಳನ್ನು ಕಂಗಾಲಾಗಲಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹಿಮಾಚಲ ಪ್ರದೇಶದ ಸಿಮೆಂಟ್ ಕಂಪನಿಗಳು ಕಳೆದ ಎರಡು ವರ್ಷಗಳಿಂದ ಸಿಮೆಂಟ್ ಬೆಲೆಯನ್ನು ಅನಿಯಂತ್ರಿತವಾಗಿ ಏರಿಸುವ ಮೂಲಕ ಭಾರಿ ಲಾಭ ಗಳಿಸಿವೆ. ಹಿಮಾಚಲದಲ್ಲಿ ಉತ್ಪಾದಿಸುವ ಸಿಮೆಂಟ್ ಅನ್ನು ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ, ಇದು ರಾಜ್ಯದ ಜನರಿಗೆ ಮಾಡಿರುವ ಅನ್ಯಾಯ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...