Homeಮುಖಪುಟ’ಕ್ಯಾಪಿಟಲ್' ಮೇಲೆ ಬಲಪಂಥೀಯತೆಯ ದಾಳಿ; ಈ ವಿದ್ಯಮಾನಗಳಿಗೆ ಕಾರಣವಾಗಿದ್ದೇನು?

’ಕ್ಯಾಪಿಟಲ್’ ಮೇಲೆ ಬಲಪಂಥೀಯತೆಯ ದಾಳಿ; ಈ ವಿದ್ಯಮಾನಗಳಿಗೆ ಕಾರಣವಾಗಿದ್ದೇನು?

ಬಲಪಂಥೀಯ ಪ್ರಕಾರದಲ್ಲಿ ಹಲವು ಹೊಸ ರೂಪಗಳು ಹುಟ್ಟಿಕೊಂಡಿವೆ. ಈ ಬಲಪಂಥೀಯ ಗುಂಪುಗಳು ತಮ್ಮ ಸಮಾಜದಲ್ಲಿ ಕಾಣುವ ವಿಭಿನ್ನ ರೀತಿಯ ಬದಲಾವಣೆಗಳ ವಿರುದ್ಧ ಹೋರಾಡುತ್ತವೆ. ಇದು ಸ್ತ್ರೀವಾದ ಇರಬಹುದು ಅಥವಾ ವರ್ಣಭೇದ ವಿರೋಧಿ ನೀತಿ ಇರಬಹುದು. ಅವರು ಅಂತರ್ಜಾಲದ ಮೂಲಕ ಸಂಘಟಿತರಾಗಿದ್ದಾರೆ, ಭಾವೋದ್ರಿಕ್ತ ಅನುಯಾಯಿಗಳ ಜಾಲಗಳನ್ನು ರಚಿಸುತ್ತಾರೆ, ಅವರು ಈಗ ಇಂಟರ್ನೆಟ್ ಟ್ರೋಲ್‌ಗಳಿಂದ ಸಂಘಟಿತ ಸೇನಾಪಡೆಗಳಾಗಿ ವಿಕಸನಗೊಂಡಿದ್ದಾರೆ. ಈ ಗುಂಪುಗಳು ಒಗ್ಗಟ್ಟಾಗಿ ಜನವರಿ 6ರಂದು ಅಮೆರಿಕನ್ ಕ್ಯಾಪಿಟಲ್ ಮುತ್ತಿಗೆಯನ್ನು ಮುನ್ನಡೆಸಿದ್ದು.

- Advertisement -
- Advertisement -

2020 ಜನವರಿ 6ರಂದು, ಇತ್ತೀಚಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗು ಮಾಡಲು ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಟ್ರಂಪ್ ಬೆಂಬಲಿಗರು ’ಕ್ಯಾಪಿಟಲ್ ಮೇಲೆ ದಾಳಿ ನಡೆಸಿದರು. ಅವರು ಆ ಕಟ್ಟಡದ ಕೆಲವು ಭಾಗಗಳನ್ನು ಧ್ವಂಸಗೊಳಿಸಿದರು ಮತ್ತು ಹಲವು ಗಂಟೆಗಳ ಕಾಲ ಇಡೀ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದರು. ಟ್ರಂಪ್‌ನ ಸೋಲನ್ನು ಅಧಿಕೃತಗೊಳಿಸಲಿದ್ದ ಕಾಂಗ್ರೆಸ್‌ನ ಜಂಟಿ ಅಧಿವೇಶನಕ್ಕೂ ಅಡ್ಡಿಪಡಿಸಲು ಅವರು ಯತ್ನಿಸಿದರು.

ಈ ಘಟನೆ ನಡೆದ ಮುಂಜಾನೆಯಷ್ಟೇ ಟ್ರಂಪ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿ, ತನ್ನ ಬೆಂಬಲಿಗರನ್ನು ಪ್ರಚೋದಿಸಿ, ದೇಶವನ್ನು ವಾಪಸ್ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೇಳಿದ್ದರು. ಸಮಾವೇಶದಲ್ಲಿದ್ದ, ಟ್ರಂಪ್ ತಂಡದ ಅನೇಕರು, ಯುದ್ಧೋನ್ಮಾದದ ಸಂಕೇತಗಳನ್ನು ಬಳಸುತ್ತಾ ’ಕ್ಯಾಪಿಟಲ್‌’ಗೆ  ನುಗ್ಗಲು ಕರೆಕೊಟ್ಟರು. ಉಪಾಧ್ಯಕ್ಷ, ಮೈಕ್ ಪೆನ್ಸ್ ಅವರಿಗೆ ಫಲಿತಾಂಶ ತಡೆ ಹಿಡಿಯುವ ಅಧಿಕಾರ ಇದೆ ಎಂದು ಅವರು ಪದೇಪದೇ ಕರೆಕೊಡುತ್ತಿದ್ದರು.

PC : Business Standard

ಟ್ರಂಪ್ ಜನಸಮೂಹವನ್ನು ಮುನ್ನಡೆಸಲು ಹೋಗುತ್ತಾರೋ ಅಥವಾ ಅವರ ವಿರುದ್ಧ ನಿಲ್ಲುತ್ತಾರೋ ಎಂಬುದು ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ಧ್ವಂಸ ನಡೆಸುವವರನ್ನು ಹೊಗಳಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಆ ಜನರನ್ನು ಮಹಾನ್ ದೇಶಪ್ರೇಮಿಗಳೆಂದು ಕರೆದು ಶಾಂತಿಯಿಂದ ಮನೆಗೆ ಹೋಗಬೇಕೆಂದು ಹೇಳಿದರು. ಚುನಾವಣಾ ಫಲಿತಾಂಶವನ್ನು ಟೀಕಿಸಿದ ಅವರು, ಚುನಾವಣೆಯನ್ನು ತಮ್ಮಿಂದ ಕಳವು ಮಾಡಲಾಗುತ್ತಿದೆ ಎಂಬ ತಮ್ಮ ಆಪಾದನೆಯನ್ನು ಪುನರುಚ್ಚರಿಸಿದರು. ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ನಂತರ ಅಮಾನತುಗೊಳಿಸಲಾಯಿತು, ಮತ್ತು ಅವರು ಟಿವಿಯ ಮೂಲಕ ಮಾತ್ರ ಸಂವಹನ ನಡೆಸಲು ಸಾಧ್ಯವಾಯಿತು.

ಒತ್ತಡದಲ್ಲಿ, ಬಂಡಾಯವನ್ನು ನಿಗ್ರಹಿಸಲು ಅಮೆರಿಕನ್ ನ್ಯಾಷನಲ್ ಗಾರ್ಡ್‌ಅನ್ನು (ಅಮೆರಿಕನ್ ಸೈನ್ಯದ ಮೀಸಲು ಶಾಖೆ) ಬಳಸಲು ಟ್ರಂಪ್ ಒಪ್ಪಿಕೊಂಡರು. ಈ ಘಟನೆಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ. ದಂಗೆಯ ನಂತರ, ಅಧಿಕಾರದ ವರ್ಗಾವಣೆಯನ್ನು ಟ್ರಂಪ್ ಇನ್ನೂ ವಿರೋಧಿಸಬಹುದೆಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಅಧಿಕೃತ ಅವಧಿ ಜನವರಿ 19ರಂದು ಕೊನೆಗೊಳ್ಳುತ್ತದೆ.

ಟ್ರಂಪ್ ವಿದ್ಯಮಾನ : ಬಲಪಂಥೀಯ ಫುಡಾರಿತನದ ಬೆಳವಣಿಗೆಯಲ್ಲಿ ಟ್ರಂಪ್ ವಿಶಿಷ್ಟ ಸಂಕೇತವಾಗಿ ಹೊರಹೊಮ್ಮಿದ್ದಾರೆ. ತಮ್ಮಲ್ಲಿ ಯಾವುದೇ ಸತ್ವವಿಲ್ಲದಿದ್ದರೂ ಸಹ, ಕೆಲವು ಸ್ಥಾನಗಳಲ್ಲಿರುವ ಜನರು ಹೆಚ್ಚಿನ ಜನರಲ್ಲಿ ಉತ್ಸಾಹವನ್ನು, ತೀವ್ರ ಆಸಕ್ತಿಯನ್ನು ತುಂಬಲು ಸಶಕ್ತರಾಗಿರುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ, ಅವರ ಅನುಯಾಯಿಗಳು ಯುದ್ಧೋತ್ಸಾಹದಲ್ಲಿ ಅವರನ್ನು ಅನುಸರಿಸಲು ಸಾಧ್ಯವಿದೆ.

ಅವರ ಅನುಯಾಯಿಗಳನ್ನು ಹೊರತುಪಡಿಸಿ, ಎಲ್ಲರಿಗೂ, ಟ್ರಂಪ್ ಹಾಸ್ಯಾಸ್ಪದ ಬೃಹಸ್ಪತಿಯಾಗಿ ಕಾಣಿಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಯನ್ನು ಯಾರಾದರೂ ಏಕೆ ಹಿಂಬಾಲಿಸುತ್ತಾರೆ ಎಂಬುದು ಅತಿ ದೊಡ್ಡ ನಿಗೂಢ ಸಂಗತಿಯಂತೆ ಕಾಣುತ್ತದೆ. (ಅವರ ಅನುಯಾಯಿಗಳು ತೋರಿಸಿದ ಭಾವೋದ್ರೇಕಗಳು ಹೇಗೆ ಸಾಧ್ಯ ಎಂಬುದನ್ನು ಸದ್ಯಕ್ಕೆ ಹೊರತುಪಡಿಸಿದರು).

PC : Biography (ನೆಪೋಲಿಯನ್ ಬೊನಪಾರ್ಟೆ)

1848ರಲ್ಲಿ ಕಾರ್ಲ್ ಮಾರ್ಕ್ಸ್ ಯುರೋಪ್‌ಅನ್ನು ಅಧ್ಯಯನ ಮಾಡುತ್ತಿದ್ದರು. ಫ್ರಾನ್ಸ್ ಬಿಕ್ಕಟ್ಟಿನತ್ತ ಸಾಗುತ್ತಿರುವುದನ್ನು ಅವರು ಗಮನಿಸಿದರು. ಆ ಬಿಕ್ಕಟ್ಟಿನಲ್ಲಿ, ಪ್ಯಾರಿಸ್‌ನಲ್ಲಿ ಕಾರ್ಮಿಕರು ಕ್ರಾಂತಿಯನ್ನು ಕೋರುತ್ತಿದ್ದರು. ಆಡಳಿತ ವರ್ಗಗಳು ಸಂಘರ್ಷದಲ್ಲಿದ್ದವು ಮತ್ತು ಅವರಿಗೆ ಸಂಸತ್ತನ್ನು ಜಾರಿಯಲ್ಲಿಟ್ಟು ಮುಂದುವರಿಯಲು ಸಾಧ್ಯವಾಗಲಿಲ್ಲ. ಈ ಸಂಘರ್ಷದಲ್ಲಿ, ಮೂಲ ನೆಪೋಲಿಯನ್ ಬೊನಪಾರ್ಟೆಯ ಸೋದರಳಿಯ ನೆಪೋಲಿಯನ್ ಬೊನಪಾರ್ಟೆ ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿದರು. ಟ್ರಂಪ್ ಅವರಂತೆಯೇ, ಅವರು ನಯವಂಚಕ, ಅನೈತಿಕ ಮತ್ತು ’ಗಣ್ಯ ಹಿನ್ನೆಲೆಯಿಂದ ಬಂದವರು. ಫ್ರಾನ್ಸ್‌ಅನ್ನು ಶ್ರೇಷ್ಠತೆಗೆ ಮರುಕಳಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಪರಿಹರಿಸುವುದಾಗಿ ಹೇಳಿಕೊಂಡು ಅವರು ಅಧಿಕಾರಕ್ಕೆ ಬಂದರು. ಅಂತಿಮವಾಗಿ, ಅವರು ರಾಜಕೀಯ ದಂಗೆಯನ್ನು ನಡೆಸಿದರು. ಇದು ಅವರನ್ನು ಫ್ರಾನ್ಸ್‌ನ ರಾಜನಾಗಿ ಸ್ಥಾಪಿಸಲು ಕಾರಣವಾಯಿತಷ್ಟೇ. ದಶಕಗಳ ಕಾಲ ಫ್ರಾನ್ಸ್‌ನಲ್ಲಿ ಪ್ರಜಾಪ್ರಭುತ್ವ ಮತ್ತು ಮುಕ್ತ ಮಾಧ್ಯಮ ಕಾಣೆಯಾಯಿತು.

ಒಂದು ದೇಶದ ಗಣ್ಯರು ಇನ್ನು ಮೇಲೇರಲು ಸಾಧ್ಯವಾಗದ ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಒಬ್ಬ ವ್ಯಕ್ತಿಯು, ಪ್ರಜಾಪ್ರಭುತ್ವದ ಪ್ರಕ್ರಿಯೆಯ ಬಿಕ್ಕಟ್ಟನ್ನು ಬಗೆಹರಿಸುವ ಭರವಸೆ ನೀಡಿ, ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿ ಮತ್ತು ಸಂಕೀರ್ಣ ಸಮಸ್ಯೆಗಳಿಲ್ಲದ ಒಂದು ಪ್ರಾಚೀನ ಸಮಯಕ್ಕೆ ಕರೆದೊಯ್ಯಲು ಮುಂದಾಳತ್ವ ವಹಿಸಿ, ರಾಜಕೀಯವಾಗಿ ಮೇಲೇರಬಹುದು ಎಂದು ಮಾರ್ಕ್ಸ್ ಗಮನಿಸಿದ್ದರು. ಇದರ ಜೊತೆಗೆ ಚಿಂತಕರ ಅನುಮಾನ, ಚಿಂತನೆಗಿಂತಲೂ ಕ್ರಮಗಳಿಗೆ ಆದ್ಯತೆ ನೀಡುವುದು ಮತ್ತು ಅಂಚಿನಲ್ಲಿರುವ ದುರ್ಬಲ ಗುಂಪುಗಳನ್ನು ಅಪರಾಧೀಕರಿಸುವುದು ಸಹ ಸೇರಿಕೊಂಡಿರಬಹುದು.

ಅಲ್ಲದೆ ರಾಜಕೀಯವಾಗಿ ಮೇಲೇರುವ ವ್ಯಕ್ತಿಯು ವಿಶೇಷವಾಗಿ ಬುದ್ಧಿವಂತನಾಗಿರದೆ ಇರಬಹುದು ಮತ್ತು ಬಿಕ್ಕಟ್ಟನ್ನು ಕೊನೆಗೊಳಿಸಲು ಅವರು ಕೆಲಸ ಮಾಡದಿರಬಹುದು. ಅಂತಹ ಅನಿಶ್ಚಿತತೆ ಮತ್ತು ಸಂಘರ್ಷದ ಸಮಯದಲ್ಲಿ, ಪ್ರಗತಿಪರ ಶಕ್ತಿಗಳು ಸಹ ನಿವೃತ್ತಿ ಹೊಂದಬಹುದ.

ಅಮೆರಿಕದ ಬಿಕ್ಕಟ್ಟು : ಅಮೆರಿಕದಲ್ಲಿ, ಈ ಸಂಘರ್ಷವು ಬಹಳ ಸಮಯದಿಂದ ಘನೀಭವಿಸುತ್ತಿದೆ. 1970 ದಶಕದಿಂದಲೇ, ಅಮೆರಿಕದ ರಾಜಕೀಯ ವ್ಯವಸ್ಥೆಯು ಆಂತರಿಕ ಸಂಘರ್ಷದಲ್ಲಿ ಸಿಲುಕಿತು. ನವ-ಉದಾರವಾದವು ಸರ್ಕಾರದ ನೀತಿಯ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿತು. 1960ರ ದಶಕದ ಜನಪ್ರಿಯ ಹೋರಾಟಗಳಿಂದ ಬಿಳಿಯರ ಶ್ರೇಷ್ಠತೆಯ ಪ್ರಾಬಲ್ಯವನ್ನು ಸೋಲಿಸಲಾಯಿತು. ರಾಜಕೀಯ ವ್ಯವಸ್ಥೆಯು ಮೊದಲಿನಂತೆ ಕೃಷಿ ಮತ್ತು ಕೈಗಾರಿಕೆಗಳ ನಡುವಿನ ಸಂಘರ್ಷವನ್ನು ಅವಲಂಬಿಸಲಾರದೆ ಹೋಯಿತು. ಇದರ ಫಲವಾಗಿ, ಅಮೆರಿಕಾದ ರಾಜಕೀಯದಲ್ಲಿ ಹೊಸ ವಿಭಜನೆ ಉಂಟಾಗಿ, ಅದು ಸಂಪ್ರದಾಯದ ಪರವಾದ ಮತ್ತು ಬದಲಾವಣೆಯ ಪರವಾದ ಭಾಗವಾಗಿ ಒಡೆಯಿತು.

ಇದಕ್ಕೆ ಕ್ರಮವಾಗಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಅಲೈನ್ ಆದವು. ಹಳೆಯ ಕೃಷಿ ಪ್ರದೇಶಗಳು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಗುರುತಿಸಿಕೊಂಡರೆ, ಕೈಗಾರಿಕೀಕರಣಗೊಂಡ ವಲಯಗಳು ಕೆಲವು ಮಾರ್ಪಾಡುಗಳೊಂದಿಗೆ ಬದಲಾವಣೆಯೊಂದಿಗೆ ಗುರುತಿಸಿಕೊಂಡವು. ಇವೆರಡೂ ಅತಿ ಹೆಚ್ಚೇ ಎಂಬುವಷ್ಟು ವ್ಯಾಪಾರದ ಪರವಾದವು, ಆದರೆ ವಿಭಿನ್ನ ರೀತಿಯಲ್ಲಿ. ವರ್ಣಭೇದ ನೀತಿ ಮತ್ತು ಬಡತನದ ವಿರುದ್ಧದ ಹೋರಾಟಗಳು ಡೆಮಾಕ್ರಟಿಕ್ ಪಕ್ಷದೊಂದಿಗೆ ಗುರುತಿಸಿಕೊಂಡರೆ, ರಿಪಬ್ಲಿಕನ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಧರ್ಮ, ಫೆಡರಲಿಸಂ ಮತ್ತು ಸಂವಿಧಾನಗಳ ಮೂಲ-ಉದ್ದೇಶದ ಅರ್ಥ ಸೇರಿದಂತೆ ಸಾಂಪ್ರದಾಯಿಕ ಮೌಲ್ಯಗಳ ಹೋರಾಟಗಳು.

ಈ ಎರಡೂ ಬದಿಗಳ ನಡುವೆ ವೈರತ್ವದ ತೀವ್ರತೆ ಬೆಳೆಯಿತು. 2008ರಲ್ಲಿ, ಷೇರು ಮಾರುಕಟ್ಟೆ ಕುಸಿತದೊಂದಿಗೆ, ಅಮೆರಿಕದ ವ್ಯವಸ್ಥೆಯು ಅಸ್ಥಿರವಾದ ಬಿಕ್ಕಟ್ಟಿನಲ್ಲಿ ಸಿಲುಕಿತು. ಅಮೆರಿಕವನ್ನು ಉಳಿಸಬಲ್ಲ ಅತೀಂದ್ರಿಯ ವ್ಯಕ್ತಿತ್ವದ ಹುಡುಕಾಟವು ಶ್ರದ್ಧೆಯಿಂದ ಪ್ರಾರಂಭವಾಯಿತು. ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಸ್ತವ್ಯಸ್ತತೆಯನ್ನು ಕೊನೆಗಾಣಿಸುವ ಮತ್ತು ಅದನ್ನು ಉತ್ತಮ ಮಾರ್ಗಕ್ಕೆ ಬದಲಾಯಿಸುವ ಯಾರಾದರೂ ಅವರಿಗೆ ಅಗತ್ಯವಿತ್ತು. ಈ ವ್ಯಕ್ತಿಯು ಬಳಿ ಸರಳ ಸಂದೇಶ ಇತ್ತು ಮತ್ತು ಅದು ಅಮೆರಿಕವನ್ನು ಶ್ರೇಷ್ಠನನ್ನಾಗಿ ಮಾಡುತ್ತೇನೆ ಎಂಬುದಾಗಿತ್ತು. ಆ ವ್ಯಕ್ತಿ ಬರಾಕ್ ಒಬಾಮ. ಒಬಾಮಾ ಅವರು ವರ್ಚಸ್ವಿ ವ್ಯಕ್ತಿತ್ವ ಹೊಂದಿದ್ದರು ಮತ್ತು ಅಮೆರಿಕದ ಅಧಿಕಾರವನ್ನು ಮತ್ತು ಸ್ಥಾನಮಾನದ ಬಗ್ಗೆ ಗೌರವ ಇರಿಸಿಕೊಂಡು ಮುನ್ನಡೆಸಬಲ್ಲವರಾಗಿದ್ದರು. ಅಧಿಕಾರದಲ್ಲಿದ್ದರೂ, ಅವರು ವೈಯಕ್ತಿಕ ಕಾರ್ಯಸೂಚಿಯನ್ನು ಹೊಂದಿದ್ದಂತೆ ಕಾಣುತ್ತಿರಲಿಲ್ಲ ಮತ್ತು ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ ಅವರ ಅಧಿಕಾರ ಬೆರೆತುಹೋಯಿತು. ಆದ್ದರಿಂದ ಅವರು ಅಮೆರಿಕಾದ ಪ್ರಜಾಪ್ರಭುತ್ವದ ಬಿಕ್ಕಟ್ಟನ್ನು ಪರಿಹರಿಸಲಿಲ್ಲ, ಮತ್ತು ಅವರ ಅಂತಿಮ ಅಧ್ಯಕ್ಷೀಯ ಅವಧಿಯ ಕೊನೆಯಲ್ಲಿ, ಅವರನ್ನು ಅಧಿಕಾರಕ್ಕೆ ತಂದ ಸಮಸ್ಯೆಗಳು ಗಮನಹರಿಸದೆ ಉಳಿದಿದ್ದವು.

ಅಮೆರಿಕದ ರಾಜಕೀಯದ ಎರಡೂ ಬದಿಗಳು ಬಿಕ್ಕಟ್ಟಿನಲ್ಲಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೇರಿದರು. ಡೆಮಾಕ್ರಟಿಕ್ ಪಕ್ಷವು ಬದಲಾವಣೆಯ ಭರವಸೆಯನ್ನು ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ರಿಪಬ್ಲಿಕನ್‌ನ ಸಂಪ್ರದಾಯವಾದಿ ಪರ ವೇದಿಕೆ ಖಾಲಿಯಾಗಿ ಕಾಣಲಾರಂಭಿಸಿತು. ಬದಲಾಗುತ್ತಿರುವ ಜನಾಂಗೀಯ ಸಂಯೋಜನೆಗಳು, ಸಂವಿಧಾನದ ಅನ್ವಯಗಳು ಮತ್ತು ಭಯೋತ್ಪಾದನೆ ವಿರುದ್ಧದ ಯುದ್ಧದಿಂದ ಪ್ರಾರಂಭವಾಗಿ ಬೆಳೆಯುತ್ತಿದ್ದ ಕೇಂದ್ರೀಕರಣ ಸೇರಿದಂತೆ ಹಲವು ಬದಲಾವಣೆಗಳು ಎರಡೂ ಕಡೆಯವರನ್ನು ರಾಜಕೀಯವಾಗಿ ದಿವಾಳಿಯಾಗಿಸಿದವು.

PC : People.com

ಡೊನಾಲ್ಡ್ ಟ್ರಂಪ್ ನಿಜವಾದ ’ಬದಲಾವಣೆ’ಯಾಗಿ ಬಂದರು. ಅವರು ವೃತ್ತಿ ರಾಜಕಾರಣಿಯಾಗಿರಲಿಲ್ಲ, ಆದರೆ ಅವರು ರಾಜಕಾರಣಿಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅವರು ಸೂಕ್ಷ್ಮತೆ ಮತ್ತು ಸಮಗ್ರತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ, ಜನರು ಕೇಳಲು ಬಯಸಿದ್ದನ್ನು ಮಾತನಾಡಿದರು. ಟ್ವಿಟ್ಟರ್‌ಅನ್ನು ವೇದಿಕೆಯಾಗಿ ಬಳಸಿಕೊಂಡು, ಅವರು ತಮ್ಮ ಬೆಂಬಲಿಗ ಸಮುದಾಯದ ಜೊತೆಗೆ “ನೇರ-ಮಾತುಕತೆ”ಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಅವರು ಸಾಂಪ್ರದಾಯಿಕತೆಯ ಪರವಾದ ಸಂದೇಶವನ್ನು ಒತ್ತಿ ಹೇಳಿದರು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿ ಮಾಡುವ ಭರವಸೆ ನೀಡುವ ಮೂಲಕ ಅದರ ವಿರೋಧಾಭಾಸಗಳನ್ನು ಕಡಿತಗೊಳಿಸಿದರು.

ಅಂದಿನಿಂದ, ಬಲಪಂಥೀಯ ಪ್ರಕಾರದಲ್ಲಿ ಹಲವು ಹೊಸ ರೂಪಗಳು ಹುಟ್ಟಿಕೊಂಡಿವೆ. ಈ ಬಲಪಂಥೀಯ ಗುಂಪುಗಳು ತಮ್ಮ ಸಮಾಜದಲ್ಲಿ ಕಾಣುವ ವಿಭಿನ್ನ ರೀತಿಯ ಬದಲಾವಣೆಗಳ ವಿರುದ್ಧ ಹೋರಾಡುತ್ತವೆ. ಇದು ಸ್ತ್ರೀವಾದ ಇರಬಹುದು ಅಥವಾ ವರ್ಣಭೇದ ವಿರೋಧಿ ನೀತಿ ಇರಬಹುದು. ಅವರು ಅಂತರ್ಜಾಲದ ಮೂಲಕ ಸಂಘಟಿತರಾಗಿದ್ದಾರೆ, ಭಾವೋದ್ರಿಕ್ತ ಅನುಯಾಯಿಗಳ ಜಾಲಗಳನ್ನು ರಚಿಸುತ್ತಾರೆ, ಅವರು ಈಗ ಇಂಟರ್ನೆಟ್ ಟ್ರೋಲ್‌ಗಳಿಂದ ಸಂಘಟಿತ ಸೇನಾಪಡೆಗಳಾಗಿ ವಿಕಸನಗೊಂಡಿದ್ದಾರೆ. ಈ ಗುಂಪುಗಳು ಒಗ್ಗಟ್ಟಾಗಿ ಜನವರಿ 6ರಂದು ಅಮೆರಿಕನ್ ಕ್ಯಾಪಿಟಲ್ ಮುತ್ತಿಗೆಯನ್ನು ಮುನ್ನಡೆಸಿದ್ದು.

ಟಿಟ್ಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು, ಈಗ ಟ್ರಂಪ್‌ನನ್ನು ನಿಷೇಧಿಸಿರುವುದು, ಅಮೆರಿಕದ ವ್ಯಾಪಾರಿ ಗಣ್ಯರು ಟ್ರಂಪ್ ಅಧ್ಯಕ್ಷತೆ ವಿರುದ್ಧ ಕೊನೆಗೆ ತಿರುಗಿಬಿದ್ದಿರುವುದನ್ನು ತೋರಿಸುತ್ತದೆ, ಆದರೆ ಅವರು ರಾಜಕೀಯದಲ್ಲಿ ಮೇಲೇರಲು ಕಾರಣವಾದ ಮೂಲ ಸಮಸ್ಯೆಗಳು ಹಾಗೆಯೇ ಉಳಿದಿವೆ. ಟ್ರಂಪ್ ಹಿಂತಿರುಗಬಹುದು, ಅಥವಾ ವ್ಯವಸ್ಥೆಯ ಅಗತ್ಯತೆಗಳನ್ನು ಮನಗಂಡು ಉತ್ತಮವಾಗಿ ನಿಭಾಯಿಸುವ ಭರವಸೆ ನೀಡುವ ಮತ್ತೊಬ್ಬ ವರ್ಚಸ್ವಿ ನಾಯಕ ಉದ್ಭವಿಸಬಹುದು.

(ಕನ್ನಡಕ್ಕೆ ): ಮಲ್ಲನಗೌಡರ್

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ‘2 ಬಾರಿ ಮಹಾಭಿಯೋಗ’ – ಅಮೆರಿಕ ಇತಿಹಾಸದಲ್ಲಿ ಕಪ್ಪುಚುಕ್ಕೆಯಾದ ಟ್ರಂಪ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...