ಭಾನುವಾರ ಬುಡಾಪೆಸ್ಟ್‌ನಲ್ಲಿ ನಡೆದ 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯನಾಗಿರುವ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. 25 ವರ್ಷ ವಯಸ್ಸಿನ ಚೋಪ್ರಾ ಫೈನಲ್ ಸುತ್ತಿನಲ್ಲಿ 88.17 ಮೀಟರ್‌ಗಳಷ್ಟು ದೂರ ಜಾವೆಲಿನ್ ಎಸೆದು ಅಸಾಧಾರಣ ಸಾಧನೆಯೊಂದಿಗೆ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದರು. ಈವೆಂಟ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಎರಡನೇ ಸ್ಥಾನ ಗಳಿಸಿದ್ದಾರೆ.
ಪಾಕಿಸ್ತಾನದ ಪ್ರತಿಸ್ಪರ್ಧಿ ವಿರುದ್ಧ ಭಾರತೀಯ ಅಥ್ಲೆಟ್‌ವೊಬ್ಬನ ಗೆಲುವನ್ನು ಕೆಲವರು ಪಾಕ್ ವಿರುದ್ಧದ ಯುದ್ಧದ ಗೆಲುವು ಎಂಬಂತೆ ಬಿಂಬಿಸಿದ್ದರು. ಆದರೆ, ಚೋಪ್ರಾ ಅವರ ತಾಯಿ ಸರೋಜ್ ದೇವಿ ಅವರು, ”ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮಗ ಪಾಕಿಸ್ತಾನಿ ಎದುರಾಳಿಯ ವಿರುದ್ಧ ಗೆದ್ದ ಬಗ್ಗೆ ವರದಿಗಾರ ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರ ಎಲ್ಲರ ಹೃದಯವನ್ನು ತಟ್ಟಿದೆ.
ನೀರಜ್ ಚೋಪ್ರಾ ಅವರ ತಾಯಿ ತನ್ನ ಮಗನ ಗಮನಾರ್ಹ ಸಾಧನೆಯ ನಂತರ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದ ವೀಡಿಯೊ ಇದೀಗ ಭಾರೀ ವೈರಲ್ ಆಗಿದೆ.
”ಪಾಕಿಸ್ತಾನದ ಅಥ್ಲೇಟ್ ಅರ್ಷದ್ ವಿರುದ್ಧ ತಮ್ಮ ಮಗನ ವಿಜಯದ ಬಗ್ಗೆ ತಾವೆಷ್ಟು ಭಾವುಕರಾಗಿದ್ದೀರಿ?” ಎಂದು ವರದಿಗಾರ ಕೇಳಿದಾಗ, ”ನೋಡಿ, ಎಲ್ಲರೂ ಮೈದಾನದಲ್ಲಿ ಆಡಲು ಬಂದಿದ್ದಾರೆ. ಒಬ್ಬರು ಅಥವಾ ಇನ್ನೊಬ್ಬರು ಖಂಡಿತವಾಗಿಯೂ ಗೆಲ್ಲುತ್ತಾರೆ. ಹಾಗಾಗಿ ಇಲ್ಲಿ ಪಾಕಿಸ್ತಾನ ಅಥವಾ ಹರ್ಯಾಣದವರು ಎಂಬ ಪ್ರಶ್ನೆಯೇ ಇಲ್ಲ. ಇದು ಬಹಳ ಸಂತೋಷದ ವಿಷಯವಾಗಿದೆ. ಆ ಪಾಕಿಸ್ಥಾನಿ ಗೆದ್ದಿದ್ದರೂ ಬಹಳ ಸಂತೋಷವಾಗುತ್ತಿತ್ತು” ಎಂದು ಸರೋಜ್ ದೇವಿ ಹೇಳಿದ್ದಾರೆ.
”ನೀರಜ್ ಒಬ್ಬ ಪಾಕಿಸ್ತಾನಿ ಅಥ್ಲೇಟ್‌ನನ್ನು ಸೋಲಿಸಿ ಚಿನ್ನ ಗೆದ್ದಿದ್ದಕ್ಕೆ ಏನನ್ನಿಸುತ್ತದೆ?” ಎಂದು ವರದಿಗಾರರು ನೀರಜ್ ಚೋಪ್ರಾ ಅವರ ತಾಯಿ ಬಳಿ ಕೇಳಿದರು. ಅದಕ್ಕೆ ಅವರು,”ಒಬ್ಬ ಆಟಗಾರನು ಆಟಗಾರ ಅಷ್ಟೇ. ಅವನು ಎಲ್ಲಿಂದ ಬಂದಿದ್ದಾನೆ ಎಂಬುದು ಮುಖ್ಯವಲ್ಲ, ಪಾಕಿಸ್ತಾನಿ ಆಟಗಾರ(ನದೀಮ್) ಗೆಲುವು ಸಾಧಿಸಿದ್ದರೂ ನನಗೆ ಸಂತೋಷವಾಗುತ್ತಿತ್ತು” ಎಂದು ಹೇಳಿದ್ದಾರೆ.



Great thoughts mam
Its the real sportsmanship. We r really proud of Niraj for his great achievement and extremely proud of his mother’s statement of true sportsmanship attitude. Because of this attitude Niraji is world beater today. Hats off to both of u.Mother India is really grateful to u both .
super mam