Homeಮುಖಪುಟನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ... : ಮಿಸ್ರಿಯಾ ಐ. ಪಜೀರ್

ನಾ ಹ್ಯಾಂಗ ಮರೆಯಲಿ ನಿನ್ನ ಗಾಂಧಿ ತಾತ… : ಮಿಸ್ರಿಯಾ ಐ. ಪಜೀರ್

- Advertisement -
- Advertisement -

ಭಿನ್ನ ಸಾಮಾಜಿಕ ಮತ್ತು ಪ್ರಾದೇಶಿಕ ಹಿನ್ನೆಲೆಗಳ ಬರಹಗಾರರು ನಮ್ಮಲ್ಲಿ ಬರೆಯಬೇಕೆಂಬುದು ಸಂಪಾದಕೀಯ ತಂಡದ ಎಲ್ಲರ ಅನಿಸಿಕೆ. ಅದರಲ್ಲೂ ಹೊಸತಲೆಮಾರಿನ ಹಲವಾರು ಬರಹಗಾರ್ತಿಯರ ಬರಹಗಳು ಇಲ್ಲಿರಬೇಕು. ಅದಕ್ಕಾಗಿ ಯಾರನ್ನು ಕೇಳಬೇಕೆಂದು ಪಟ್ಟಿ ಮಾಡಲು ಹೋದರೆ, ಪಟ್ಟಿ ಬಹಳ ದೊಡ್ಡದೇ ಆಯಿತು. ಒಬ್ಬರ ಅಂಕಣವನ್ನಷ್ಟೇ ಪ್ರಕಟಿಸಿದರೆ ದೊಡ್ಡ ನಷ್ಟ ಎನಿಸಿತು. ಈಗಲೇ ಪುಟಗಳನ್ನು ಹಿಗ್ಗಿಸುವ ಸಾಧ್ಯತೆಯೂ ಇಲ್ಲ. ಹಾಗಾಗಿ ಪ್ರತಿ ವಾರ ಒಬ್ಬೊಬ್ಬರಿಂದ ಬರೆಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಈ ಜಾಗದಲ್ಲಿ ಹೊಸ ಬರಹಗಾರ್ತಿಯರು ಬರೆಯಲಿದ್ದಾರೆ.                                                                                                                    – ಸಂ.

ಸತ್ಯ ನುಡಿಯುವವರನ್ನು, ಗಾಂಧಿ ನಡೆದು ತೋರಿಸಿದ ಅಹಿಂಸಾ ಮಾರ್ಗದಲ್ಲಿ ಹೋರಾಡುವವರನ್ನು ದೇಶದ್ರೋಹಿಗಳನ್ನಾಗಿಯೂ, ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಿ ಹಿಂಸೆಯನ್ನೇ ಬಂಡವಾಳವಾಗಿಸಿಕೊಂಡವರನ್ನು ದೇಶಭಕ್ತರನ್ನಾಗಿಯೂ ಕಾಣುವ ಈ ದುರಂತ ದಿನಗಳಲ್ಲಿ ಬಾಲ್ಯದಲ್ಲಿ ನನ್ನ ಮನದಾಳದಲ್ಲಿ ಅಚ್ಚೊತ್ತಿದ ಗಾಂಧಿ ತಾತ ಕಾಡತೊಡಗಿದ್ದಾನೆ.

ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಗಾಂಧೀಜಿಯವರ ಹೆಸರು ಕೇಳದ ದಿನಗಳೇ ಇರಲಿಲ್ಲ. ಮಕ್ಕಳ ಹಾಡಿನ ಮೂಲಕವೋ, ಅಭಿನಯ ಗೀತೆಗಳ ಮೂಲಕವೋ ಒಂದಲ್ಲ ಒಂದು ರೀತಿಯಲ್ಲಿ ಬಾಪೂಜಿಯ ಹೆಸರು ಹೇಳುತ್ತಿದ್ದೆವು. ನಾನು ಗಾಂಧೀಜಿಯ ಕುರಿತಾಗಿ ಕಲಿತ ಮೊದಲ ಹಾಡು “ಗಾಂಧಿ ತಾತ ನನ್ನಜ್ಜ, ಬಗ್ಗಿ ಬಗ್ಗಿ ನಡೆದಿದ್ದ… ಖಾದಿ ಬಟ್ಟೆ ತೊಡುತ್ತಿದ್ದ…” ಈ ಹಾಡಿನಿಂದಾಗಿ ನಮಗಾಗಲೇ ಗಾಂಧಿ ನಮ್ಮವರೆಂಬ ಭಾವನೆ ಮನಸ್ಸಿನಲ್ಲಿ ಮೂಡಿತ್ತು. ನನ್ನ ನಾಲ್ಕರ ಹರೆಯದ ಪುಟ್ಟ ಮಗಳು ಶಹೀಮಳಿಗೂ ಇದೇ ಹಾಡನ್ನು ಹಾಡಿಸುತ್ತೇನೆ.

ಗಾಂಧಿ ಖಾದಿಬಟ್ಟೆಯನ್ನು ಯಾಕೆ ತೊಡುತ್ತಿದ್ದರು ಗೊತ್ತಾ? ಎಂದು ಟೀಚರ್ ಪ್ರಶ್ನೆಯನ್ನು ಕೇಳುತ್ತಿದ್ದರು. ಇಲ್ಲವೆಂದಾಗ, ಅವರು ಅದಕ್ಕೆ ಕೊಡುತ್ತಿದ್ದ ಉತ್ತರವು ಅಷ್ಟೇ ಪರಿಣಾಮಕಾರಿಯಾಗಿರುತ್ತಿತ್ತು. ಬೆಂಚಿನಲ್ಲಿ ನಮ್ಮ ಪಕ್ಕದಲ್ಲೇ ಕುಳಿತಿರುವ ಗೆಳತಿಯರನ್ನು ತೋರಿಸಿ, ಅವಳ ಬಟ್ಟೆಯನ್ನು ನೀನು ತೊಡಲು ಇಷ್ಟಪಡುತ್ತೀಯಾ? ತೊಡಬಾರದೆಂದಲ್ಲ, ಇಷ್ಟಪಡುತ್ತೀಯಾ? ಇಲ್ಲ ತಾನೇ? ಅದೇರೀತಿ ಗಾಂಧೀಜಿಯವರು ಬ್ರಿಟಿಷರು ತಯಾರಿಸಿದ ಬಟ್ಟೆಯನ್ನು ತೊಟ್ಟುಕೊಳ್ಳಲು ಇಷ್ಟಪಡದೇ, ತಾನೇ ಸ್ವತಃ ಚರಕದಿಂದ ನೂಲನ್ನು ನೇಯ್ದು ಹತ್ತಿ ಬಟ್ಟೆ ತಯಾರಿಸುತ್ತಿದ್ದರು ಹಾಗೂ ಇತರರಿಗೂ ಅದನ್ನೇ ಉಡಲು ಉತ್ತೇಜಿಸುತ್ತಿದ್ದರು ಎಂದಾಗ ನಾವು ಪುಳಕಗೊಳ್ಳುತ್ತಿದ್ದೆವು. ಇದು ಬ್ರಿಟಿಷರ ವಿರುದ್ಧದ ಹೋರಾಟ ಎಂಬುವುದನ್ನು ಅರ್ಥೈಸಿಕೊಳ್ಳುವಷ್ಟು ಪ್ರಬುದ್ಧತೆ ನಮಗಾಗ ಇರಲಿಲ್ಲ.

ಗಾಂಧೀಜಿಯ ಕುರಿತಾಗಿ ಹಲವಾರು ಹಾಡುಗಳಿದ್ದವು. ಅವರನ್ನು ನಾನು ಅರಿತದ್ದೇ ಹಾಡಿನ ಮೂಲಕ. ‘ಗಾಂಧೀ ತಾತನ ಆಶ್ರಮದಲ್ಲಿ ಇದ್ದವು ಮೂರು ಕೋತಿಗಳು, ನೀತಿಯ ಸಾರುವ ಕೋತಿಗಳು….’ ಈ ಹಾಡಿಗೆ ನಮ್ಮ ಟೀಚರು ತರಗತಿಯಲ್ಲಿ ಮೂವರನ್ನು ಕೋತಿಗಳನ್ನಾಗಿ ಮಾಡಿ ಕಣ್ಣು, ಕಿವಿ, ಬಾಯಿ ಮುಚ್ಚಿಕೊಳ್ಳಲು ಹೇಳುತ್ತಿದ್ದರು. ಉಳಿದವರೆಲ್ಲಾ ಸೇರಿ ಹಾಡುತ್ತಾ ಅಭಿನಯಿಸುತ್ತಿದ್ದೆವು. ತನ್ಮೂಲಕ ಕೆಟ್ಟದ್ದನ್ನು ಕೇಳಬಾರದು, ನೋಡಬಾರದು, ಆಡಬಾರದು ಎಂಬ ಗಾಂಧೀಜಿಯವರ ಬೋಧನೆಯನ್ನು ಕಲಿತೆವು.

‘ಪುಟ್ಟ ಕೌಮುದಿ, ಹಿಂದೂಸ್ತಾನಕ್ಕೆ ಹಿಂದಿರುಗಿದುದು’ ಎಂಬ ಪಾಠಗಳು ಬರಿಯ ಪಾಠವಾಗಿರದೆ ದೇಶಭಕ್ತನೆಂದರೆ ಗಾಂಧೀಜಿ, ಗಾಂಧೀಜಿಯೆಂದರೆ ದೇಶಭಕ್ತ ಎಂಬಷ್ಟು ಗಾಢವಾಗಿ ನಮ್ಮನ್ನಾವರಿಸಿತ್ತು. ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಸಾಕು, ಅಂದಿನ ಸಮಾರಂಭಕ್ಕೆ ಅತಿಥಿಗಳಾಗಿ ಬರುತ್ತಿದ್ದ ಗಣ್ಯರ ಬಾಯಲ್ಲೂ ಗಾಂಧೀಜಿ. ಮಕ್ಕಳ ಭಾಷಣದಲ್ಲೂ ಗಾಂಧೀಜಿ. ದೇಶಭಕ್ತಿ ಗೀತೆಯಲ್ಲೂ ಗಾಂಧೀಜಿ.

‘ಇದು ಬಾಪೂಜೀ ಬೆಳಗಿದ ಭಾರತ…’
ಹಾಗೆಯೇ
ಕಾಥೇವಾಡದ ಪೋರಬಂದರಿನಲ್ಲಿ ಜನಿಸಿದರು….
ಮೋಹನದಾಸ ಕರಮಚಂದ ಗಾಂಧಿ ಎಂಬವರು….
ಈ ಹಾಡಿನ ಕೊನೆಯಲ್ಲಿ
ಜನವರಿ ತಿಂಗಳ 30 ರಂದು……
ಇಹವನು ತ್ಯಜಿಸಿದರು.

ನಾಥೂರಾಮನ ಗುಂಡಿಗೆ ಸಿಲುಕಿ ಜಾಗವ ಎದೆಯಲ್ಲಿ ಎಂಬ ಸಾಲುಗಳಿದ್ದವು. ನಮಗೆ ಅದಾಗಲೇ ಗೋಡ್ಸೆಯ ಬಗ್ಗೆ ಮನದಲ್ಲಿ ಅಸಹನೆ ಮೂಡಲಾರಂಭಿಸಿತ್ತು. ಆಶ್ಚರ್ಯವೆಂದರೆ ನಮಗೆ ಇದನ್ನೆಲ್ಲಾ ಕಲಿಸಿದ ಟೀಚರ್ ಬ್ರಾಹ್ಮಣರಾಗಿದ್ದರು. ಅವರು ಯಾವತ್ತೂ ನಮಗೆ ಗಾಂಧೀಜಿಯ ಚಿತ್ರಣವನ್ನು ಕೆಟ್ಟದಾಗಿ ಚಿತ್ರಿಸಿಕೊಡಲಿಲ್ಲ. ಅವರೆಂದರೆ ‘ಮಹಾತ್ಮ’ ಅದರಾಚೆಗೆ ಯಾವುದೇ ಅನ್ಯ ಕಲ್ಪನೆಗಳಿರಲಿಲ್ಲ.

ಆ ಸುಂದರ ದಿನಗಳನ್ನು ಕೇಸರೀಕರಣವು ಅದೆಷ್ಟು ಬೇಗ ಧ್ವಂಸಗೊಳಿಸಿತೆಂದರೆ ನಾ ಕಲಿತ ಹಾಡುಗಳು ಈಗ ಯಾರ ಬಾಯಲ್ಲೂ ಕೇಳಸಿಗುವುದಿಲ್ಲ. ಶಾಲೆಯಲ್ಲಿ ಶಿಕ್ಷಕರೂ ಕೂಡಾ ಗಾಂಧೀಜಿಯ ತತ್ವಾದರ್ಶಗಳನ್ನು ಬೋಧಿಸುವ ಗೋಜಿಗೇ ಹೋಗುವುದಿಲ್ಲ. ಈಗಿನ ಮಕ್ಕಳು ಗಾಂಧೀಜಿಯ ಬಗ್ಗೆ ಬಹಳ ತುಚ್ಛವಾಗಿ ಮಾತನಾಡುವಷ್ಟರಮಟ್ಟಿಗೆ ಅವರ ಮೆದುಳು ತೊಳೆಯಲಾಗುತ್ತಿದೆ.

2 ವರ್ಷಗಳ ಹಿಂದೆ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬ್ರಾಹ್ಮಣ ಹುಡುಗನೊಬ್ಬ ನನ್ನ ಬಳಿಗೆ ಟ್ಯೂಷನ್‍ಗಾಗಿ ಬರುತ್ತಿದ್ದ. ಪ್ರತಿಯೊಂದು ವಿಚಾರಗಳನ್ನು ಪ್ರಶ್ನಿಸುವ ಗುಣ ಆತನಲ್ಲಿತ್ತು. ಇದನ್ನು ಗಮನಿಸಿದ ನಾನು “ನೀನು ವಿಚಾರವಾದಿಯಾಗುತ್ತಿ” ಎಂದಾಗ ಥಟ್ಟನೆ “ವಿಚಾರವಾದಿಯಾಗುವುದಿಲ್ಲ” ಎಂದ. ಆತನ ಪ್ರತಿಕ್ರಿಯೆಗೆ ಅವಾಕ್ಕಾದೆ. ಆತನ ವಯಸ್ಸಿನಲ್ಲಿ ನನಗೆ ವಿಚಾರವಾದಿ ಅಂದ್ರೆ ಏನೆಂದು ತಿಳಿಯುವುದು ಬಿಡಿ, ಆ ಪದವೇ ಗೊತ್ತಿರಲಿಲ್ಲ. ವ್ಯವಸ್ಥಿತವಾಗಿ ಎಳೆ ಮನಸ್ಸಿನೊಳಗೆ ಇದನ್ನೆಲ್ಲಾ ತುಂಬಿಕೊಡಲಾಗುತ್ತದೆ.

ಹೀಗೆ ಒಂದು ದಿನ ಆತ ನನ್ನಲ್ಲಿ ಕೆಲವೊಂದು ಆಘಾತಕಾರಿ ವಿಷಯಗಳನ್ನು ಮಾತಾಡಿದ. “ಅಕ್ಕ, ಗಾಂಧೀಜಿ ಒಳ್ಳೆಯವರೇ, ಕೆಟ್ಟವರೇ?” “ಒಳ್ಳೆಯವರು” ಎಂದೆ. ಇಲ್ಲ, “ಕೆಟ್ಟವರು” ಎಂದ. ಆತ ಯಾತಕ್ಕಾಗಿ ಆ ರೀತಿ ಹೇಳುತ್ತಿದ್ದಾನೆಂದು ತಿಳಿಯಲು ಪ್ರಯತ್ನಿಸಿದೆ. ಚಿನ್ನ ಧರಿಸಬಾರದು ಎಂಬುದಾಗಿ ಗಾಂಧೀಜಿ ಹೇಳಿದ್ದಾರೆಂಬುದು ಆತನಿಂದ ನಾನು ಪಡೆದ ಉತ್ತರವಾಗಿತ್ತು. ನಾನು, ನೀನು ಚಿನ್ನ ಧರಿಸುತ್ತಿಲ್ಲವೇ? ಹಾಗಿದ್ದರೆ ಅವರ್ಯಾಕೆ ನಿನಗೆ ಕೆಟ್ಟವರಾಗಿ ಕಾಣುತ್ತಾರೆ ಎಂದೆ. ಅವರನ್ನೇ ಏಕೆ ರಾಷ್ಟ್ರಪಿತನೆನ್ನಬೇಕು, ಬೇರೆ ಯಾರೂ ಇಲ್ಲವೇ? ಆತ ಮರುಪ್ರಶ್ನೆ ಹಾಕಿದ. ನಿನ್ನ ಪ್ರಕಾರ ಯಾರಾಗಬೇಕಿತ್ತು ಎಂದಾಗ ಮೌನವಾದ. ಸ್ವಲ್ಪ ಹೊತ್ತು ಕಳೆದು “ಅವರು ಕೂಡಾ ಕೊಲೆ ಮಾಡಿದ್ದಾರೆ” ಎಂದ. ಇದನ್ನು ಕೇಳಿಸಿಕೊಂಡ ನನಗೆ ಸಿಟ್ಟು ತಡೆಯಲಾಗಲಿಲ್ಲ. ಗಾಂಧಿ ಕೊಲೆಗಾರನಲ್ಲ, ಗಾಂಧಿಯನ್ನು ಗುಂಡಿಕ್ಕಿ ಕೊಂದ ಗೋಡ್ಸೆ ಕೊಲೆಗಾರ. ಆತನೊಬ್ಬ ದೇಶದ್ರೋಹಿ. ನಿನ್ನ ಪ್ರಕಾರ ಆತ ರಾಷ್ಟ್ರಪಿತನಾಗಬೇಕಿತ್ತು ತಾನೇ? ಎಂದು ಖಾರವಾಗಿಯೇ ಕೇಳಿದೆ. ಅಲ್ಲಿಂದ ಮುಂದೆ ಆತನಿಗೆ ಒಂದೊಂದೇ ವಿಚಾರಗಳನ್ನು ಸಾವಧಾನವಾಗಿ ಮನವರಿಕೆ ಮಾಡುತ್ತಾ ಬಂದೆ. ಇದನ್ನರಿತ ಆತನ ಹೆತ್ತವರು ನನ್ನ ಬಳಿ ಟ್ಯೂಷನ್ ಕೊಡಿಸುವುದನ್ನು ನಿಲ್ಲಿಸಿಯೇ ಬಿಟ್ಟರು.

ಸತ್ಯವನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡುವುದು ಬಹುದೊಡ್ಡ ಸವಾಲೇ ಸರಿ. ಹಾಗಾಗಿ ಗಾಂಧೀಜಿಯವರ ಆತ್ಮಕಥೆಯಾದ ‘ನನ್ನ ಸತ್ಯಾನ್ವೇಷಣೆ’ಯನ್ನು ಎಲ್ಲಾ ಹೆತ್ತವರೂ ಓದಲೇಬೇಕು, ಮಕ್ಕಳಿಗೂ ಓದಿಸಬೇಕು. ಮಹಾತ್ಮ ಗಾಂಧಿಯ ಬಗ್ಗೆ ನೂರು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರು ರಾಷ್ಟ್ರಪಿತನೆಂಬುದನ್ನು ಅಲ್ಲಗಳೆಯುವಂತೆಯೇ ಇಲ್ಲ. ಗಾಂಧಿಗೆ ಪರ್ಯಾಯವಾಗಿ ಇನ್ನೊಬ್ಬ ಗಾಂಧಿ ಹುಟ್ಟಲು ಸಾಧ್ಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...