Homeಚಳವಳಿಪನ್ಸಾರೆ, ದಾಭೋಲ್ಕರ್‌ ಹತ್ಯೆ ಪ್ರಕರಣದ ತನಿಖೆಗೆ ಇನ್ನೆಷ್ಟು ದಿನ ಬೇಕು?- ಬಾಂಬೆ ಹೈಕೋರ್ಟ್ ಪ್ರಶ್ನೆ

ಪನ್ಸಾರೆ, ದಾಭೋಲ್ಕರ್‌ ಹತ್ಯೆ ಪ್ರಕರಣದ ತನಿಖೆಗೆ ಇನ್ನೆಷ್ಟು ದಿನ ಬೇಕು?- ಬಾಂಬೆ ಹೈಕೋರ್ಟ್ ಪ್ರಶ್ನೆ

- Advertisement -
- Advertisement -

ಸಾಮಾಜಿಕ ಹೋರಾಟಗಾರರಾದ ಗೋವಿಂದ್ ಪನ್ಸಾರೆ ಮತ್ತು ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ತನಿಖೆ ಇನ್ನು ಎಷ್ಟು ದಿನ ಮುಂದುವರಿಯುತ್ತದೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಮಹಾರಾಷ್ಟ್ರ ಸಿಐಡಿ ಮತ್ತು ಸಿಬಿಐಗೆ ಕೇಳಿದೆ.

ಕಮ್ಯುನಿಸ್ಟ್ ನಾಯಕ ಪನ್ಸಾರೆ ಹತ್ಯೆಯ ಬಗ್ಗೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಸುತ್ತಿದ್ದು, ಖ್ಯಾತ ಮೂಡನಂಬಿಕೆ ವಿರೋಧಿ ಹೋರಾಟಗಾರ ದಾಭೋಲ್ಕರ್ ಅವರ ಹತ್ಯೆಯನ್ನು ಸಿಬಿಐ ತನಿಖೆ ನಡೆಸುತ್ತಿದೆ.

ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ನ್ಯಾಯಪೀಠವು, “ಸೂಕ್ಷ್ಮ ಪ್ರಕರಣಗಳಲ್ಲಿ” ದೇಶದ ನಾಗರಿಕರು ತನಿಖಾ ಸಂಸ್ಥೆಗಳು ಯಾವಾಗ ತನಿಖೆಯನ್ನು ಪೂರ್ಣಗೊಳಿಸುತ್ತವೆ ಮತ್ತು ಯಾವಾಗ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಯಲು ಬಯಸಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಬೆಳಗಾವಿ ಕನ್ನಡಿಗರದ್ದು, ವಿವಾದದಲ್ಲಿ ಮೋದಿ ಸೇರಿದಂತೆ ಯಾರ ಮಧ್ಯಸ್ಥಿತಿಕೆಯೂ ಬೇಡ: ಕುಮಾರಸ್ವಾಮಿ

“ಕರ್ನಾಟಕದಲ್ಲಿ ಇದೇ ರೀತಿಯ ಘಟನೆಯ ವಿಚಾರಣೆ (ಗೌರಿ ಲಂಕೇಶ್ ಹತ್ಯೆ) ಈಗಾಗಲೇ ಪ್ರಾರಂಭವಾಗಿದ್ದರೂ, ಮಹಾರಾಷ್ಟ್ರದಲ್ಲಿನ ಪ್ರಕರಣಗಳು ಒಂದೇ ರೀತಿಯ ಸ್ವರೂಪದ್ದಾಗಿದ್ದರೂ ತನಿಖೆ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

2013 ರ ಆಗಸ್ಟ್ 20 ರಂದು ಪುಣೆಯಲ್ಲಿ ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪನ್ಸಾರೆ ಅವರನ್ನು ಫೆಬ್ರವರಿ 16, 2015 ರಂದು ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಗುಂಡಿಕ್ಕಲಾಯಿತು, ಇದಾಗಿ ನಾಲ್ಕು ದಿನಗಳ ನಂತರ ಅವರು ನಿಧನರಾದರು. ಸಂಶೋಧಕ ಎಂ.ಎಂ. ಕಲ್ಬುರ್ಗಿ ಅವರನ್ನು ಆಗಸ್ಟ್ 30, 2015 ರಂದು ಗುಂಡಿಕ್ಕಿ ಕೊಲ್ಲಲಾಯಿತು.

ಈ ಮೂರು ಪ್ರಕರಣಗಳಿಗೂ, 2017 ರಲ್ಲಿ ಹತ್ಯೆಗೀಡಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೂ ಸಂಬಂಧವಿದೆ. ಈ ಹತ್ಯೆಗಳ ಹಿಂದೆ ಬಲಪಂಥೀಯ ಉಗ್ರಗಾಮಿಗಳ ಕೈವಾಡ ಇದೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.

ಇದನ್ನೂ ಓದಿ: ಆಂಧ್ರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಜಗನ್ ಪಕ್ಷಕ್ಕೆ ಭಾರೀ ಮುನ್ನಡೆ

ಎರಡು ತನಿಖೆಗಳ ನ್ಯಾಯಾಲಯದ ಮೇಲ್ವಿಚಾರಣೆ ಕೋರಿ ದಾಭೋಲ್ಕರ್ ಮತ್ತು ಪನ್ಸಾರೆ ಅವರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಸಿಬಿಐ ವಕೀಲ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು “ಸಾಧ್ಯವಾದಷ್ಟು ಪ್ರಯತ್ನವನ್ನು ತನಿಖಾ ಸಂಸ್ಥೆಗಳು ಮಾಡುತ್ತಿದೆ” ಎಂದು ಹೇಳಿದ್ದಾರೆ. ಆದರೆ ದಾಬೋಲ್ಕರ್ ಪ್ರಕರಣದಲ್ಲಿ ದುಷ್ಕರ್ಮಿಗಳು ಬಳಸಿದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಅದನ್ನು ಆರೋಪಿಗಳು ಥಾಣೆ ಸಮೀಪದ ಕೊಲ್ಲಿಯಲ್ಲಿ ಎಸೆದಿದ್ದಾರೆಂದು ಹೇಳಲಾಗಿದೆ.

ಮುಂದಿನ ವಿಚಾರಣೆಯ ಮೊದಲು ಸಿಬಿಐ ತನಿಖೆಯ ಹೊಸ ವರದಿಯನ್ನು ಸಲ್ಲಿಸುತ್ತದೆ ಎಂದು ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ.

ದಾಭೋಲ್ಕರ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಐವರು ಆರೋಪಿಗಳಲ್ಲಿ ಒಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ ಮತ್ತು ಇಬ್ಬರು ಆಪಾದಿತ ಶೂಟರ್‌ಗಳು ಸೇರಿದಂತೆ ಇತರರು ಬಂಧನದಲ್ಲಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನನ್ನ ಜನರ ನೋವಿಗಿಂತ ನನ್ನದು ದೊಡ್ಡದಲ್ಲ, ಎಂದಿಗೂ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ

ದಾಭೋಲ್ಕರ್‌ ಪ್ರಕರಣದಲ್ಲಿ ಸಿಬಿಐ ಮೂರು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ, ಆದರೆ ಪನ್ಸಾರೆ ಪ್ರಕರಣದ ಸಿಐಡಿ ತನಿಖೆಯಲ್ಲಿ ಯಾವುದೇ ಪ್ರಗತಿಯಿಲ್ಲ ಎಂದು ಅರ್ಜಿದಾರರ ಪರವಾಗಿ ವಕೀಲ ಅಭಯ್‌‌ ನ್ಯಾಯಾಲಯದಲ್ಲಿ ಹೇಳಿದ್ದಾರೆ.

“ಘಟನೆಗಳು 2013 ಮತ್ತು 2015 ರಲ್ಲಿ ನಡೆದವು. ನಾವು ಈಗ 2021 ರಲ್ಲಿದ್ದೇವೆ. ಇದು ಎಷ್ಟು ದಿನ ಮುಂದುವರಿಯುತ್ತದೆ?” ಎಂದು ಹೈಕೋರ್ಟ್ ಕೇಳಿದೆ.

“ನೀವು ಸ್ಪಷ್ಟವಾದ, ದೃಢವಾದ ಸೂಚನೆಗಳನ್ನು ತೆಗೆದುಕೊಂಡು, ಮುಂದಿನ ವಿಚಾರಣೆಯಂದು ತನಿಖೆಗಾಗಿ ನೀವು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಎಂಬುದರ ಕುರಿತು ಸಕಾರಾತ್ಮಕ ಹೇಳಿಕೆ ನೀಡಿ” ಎಂದು ಹೈಕೋರ್ಟ್ ಹೇಳಿದ್ದು, ವಿಚಾರಣೆಯನ್ನು ಮಾರ್ಚ್ 30 ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ..! “ಸಾಹುಕಾರ್” ಹೊರತುಪಡಿಸಿ..! – ಅನನ್ಯ ಬೆಂಗಳೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...