Homeಕರೋನಾ ತಲ್ಲಣಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

ಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

2016ರಲ್ಲಿ ನಮಗೆ ನಗದು ಕೊರತೆಯಿದ್ದಂತೆಯೇ, ಈಗ ನಾವು ಲಸಿಕೆ ಕೊರತೆಗೆ ಸಾಕ್ಷಿಯಾಗಿದ್ದೇವೆ ಎನ್ನುತ್ತಾರೆ ಅಜಾಜ್ ಅಶ್ರಫ್..

- Advertisement -
- Advertisement -

ಮೂಲ – ಅಜಾಜ್ ಅಶ್ರಫ್ (ಮಿಡ್‌ಡೇ.ಕಾಂ)

ನಾವು ಇಂದು ಸಾಕ್ಷಿಯಾಗುತ್ತಿರುವ ಆಡಳಿತದ ಕುಸಿತಕ್ಕೆ ನೋಟು ಅಮಾನ್ಯೀಕರಣ ಮುನ್ಸೂಚನೆ ನೀಡಿತು. 2016 ಈಗ ಮತ್ತೆ 2021ರಲ್ಲಿ ಪ್ರತಿಫಲಿಸುತ್ತಿದೆ ಮತ್ತು ಇನ್ನಷ್ಟು ವಿನಾಶಕಾರಿಯಾಗಿದೆ

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಈಗ ನಾವು ಸಿಕ್ಕಿದ್ದೇವೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸರತಿ ಸಾಲುಗಳು, ಸಹಾಯಕ್ಕಾಗಿ ಕುಟುಂಬ ಮತ್ತು ಸ್ನೇಹಿತರಿಗೆ ಕರೆಗಳು, ಕೆಲಸ ಸಿಗದ ದಿನಗೂಲಿ ಕಾರ್ಮಿಕರ ಗೋಳು, ರಾತ್ರಿಯಿಡೀ ಜಗತ್ತಿನಲ್ಲಿ ಬದಲಾಗುತ್ತಿರುವ ಗೊಂದಲಗಳು – ಈ ಎಲ್ಲ ಅನುಭವಗಳ ಮೂಲಕ ನಾವು, ಹಿಂದಿನ ತಪ್ಪುಗಳನ್ನು ನೆನೆಸಿಕೊಳ್ಳಬೇಕಿದೆ. ನಮ್ಮ ಮರೆವಿನಿಂದ ಆಚೆ ಬರಬೇಕಿದೆ.

ನಿಜವಾಗಿಯೂ, ಇಂತಹ ದುರದೃಷ್ಟಕರ ಸನ್ನೀವೇಶಗಳನ್ನು, ದುರಂತಗಳನ್ನು ನಾವು ಯಾವಾಗ ಅನುಭವಿಸಿದ್ದೇವೆ?

ಉತ್ತರ: 2016 ರ ನವೆಂಬರ್ 8 ರ ನಂತರದ ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15.41 ಲಕ್ಷ ಕೋಟಿ ರೂ.ಗಳ ಹಳೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದರು. ಒಬ್ಬ ವ್ಯಕ್ತಿಯು ಬ್ಯಾಂಕ್ ಅಥವಾ ಎಟಿಎಂನಿಂದ ವಾರಕ್ಕೆ ಕೇವಲ 24,000 ರೂಗಳನ್ನು ತೆಗೆಯಬಹುದು ಎಂದು ಅವರು ಆದೇಶಿಸಿದರು. ಮೋದಿಯವರು ತಾವು ರಾಷ್ಟ್ರವನ್ನು ಹೇಳಲಾಗದ ದುಃಖಕ್ಕೆ ಒಳಪಡಿಸುತ್ತಿದ್ದೇವೆಂದು ತಿಳಿದಿದ್ದರು, ಆದರೆ ಇದು ಕಪ್ಪು ಹಣ ಸಂಗ್ರಹಕಾರರನ್ನು ಮತ್ತು ಭಯೋತ್ಪಾದಕ ಹಣಕಾಸುದಾರರನ್ನು ಮತ್ತು ನಕಲಿ ಕರೆನ್ಸಿಯನ್ನು ತೊಡೆದುಹಾಕಲು ಅಗತ್ಯ ಎಂದು ಅವರು ಹೇಳಿದರು. “ಸಮಗ್ರತೆ ಮತ್ತು ವಿಶ್ವಾಸಾರ್ಹತೆಯ ಈ ಉತ್ಸವಕ್ಕೆ ನಾವು ಸೇರಿಕೊಳ್ಳೋಣ” ಎಂದು ಮೋದಿ ಉತ್ತೇಜಿಸಿದರು.

ನೆನಪಿದೆಯೇ? ನಿಸ್ಸಂಶಯವಾಗಿ, ನೀವು ಈಗ ನೆನಪು ಮಾಡಿಕೊಳ್ಳುತ್ತೀರಿ ಆ ದಿನಗಳನ್ನು.
ಖಚಿತವಾಗಿ, ಕೋವಿಡ್ -19 ಉಂಟು ಮಾಡಿದ ದುರಂತವನ್ನು ಹಣದ ಕೊರತೆಯಿಂದ ಬಳಲುವ ದೇಶದ ಜೊತೆ ಹೋಲಿಸಲಾಗುವುದಿಲ್ಲ. 2.7 ಲಕ್ಷ ಜನರ ಕೋವಿಡ್ ಸಾವಿನ ಸಂಖ್ಯೆಗೆ ಹೋಲಿಸಿದಾಗ ನೋಟು ಅಮಾನ್ಯೀಕರಣ ರೈಲು ಅಪಘಾತದಂತೆ ತೋರುತ್ತದೆ, ಇದರಲ್ಲಿ ಹೆಚ್ಚಿನ ಪ್ರಯಾಣಿಕರು ಬದುಕುಳಿದರು. ಆಸ್ಪತ್ರೆಯ ಹಾಸಿಗೆ ಅಥವಾ ಕೆಲವು ಲೀಟರ್ ಆಮ್ಲಜನಕ ಲಭ್ಯವಿಲ್ಲದ ಕಾರಣ ವ್ಯಕ್ತಿಯು ಸಾಯುವುದನ್ನು ನೋಡುವುದನ್ನು ಹಣರಹಿತ ಎಟಿಎಂ ಸ್ಥಿತಿಗೆ ಹೋಲಿಸಲೂ ಆಗುವುದಿಲ್ಲ.

ಆದರೂ, ಪಶ್ಚಾತ್ತಾಪದಲ್ಲಿ, ನಾವು ಇಂದು ಸಾಕ್ಷಿಯಾಗುತ್ತಿರುವ ಆಡಳಿತದ ಕುಸಿತವನ್ನು ನೋಟು ಅಮಾನ್ಯೀಕರಣದಲ್ಲೇ ನೋಡಬೇಕು. ಅದು ಈ ಸರ್ಕಾರದ ದುರ್ಬಲ ಆಡಳಿತದ ಮುನ್ಸೂಚನೆ ಆಗಿತ್ತು. ದೇಶದ ಬಹುತೇಕ ಕಪ್ಪು ಹಣವನ್ನು ಹೊಸ ಕರೆನ್ಸಿ ನೋಟುಗಳಿಗಾಗಿ ವಿನಿಮಯ ಮಾಡಿಕೊಳ್ಳಲಾಯಿತು. 2017 ರ ಮೊದಲ ನಾಲ್ಕು ತಿಂಗಳಲ್ಲಿ ಸುಮಾರು 1.5 ಮಿಲಿಯನ್ (15 ಲಕ್ಷ) ಉದ್ಯೋಗಗಳು ಕಾಣೆಯಾದವು. ನಿರುದ್ಯೋಗ ದರವು 2017-18ರಲ್ಲಿ 45 ವರ್ಷಗಳ ಗರಿಷ್ಠ 6.1 ಶೇಕಡಾವನ್ನು ಮುಟ್ಟಿತು ಮತ್ತು ಆರ್ಥಿಕತೆಯು ಕುಸಿಯಲು ಆರಂಭವಾಗಿತು.

ಆದರೂ ನಾವು ಮೋದಿಗೆ ದಂಡ ವಿಧಿಸುವ ಅಥವಾ ಪಾಠ ಕಲಿಸುವ ಬದಲು ಪ್ರಶಸ್ತಿ ನೀಡಲು ನಿರ್ಧರಿಸಿದೆವು.. ನವೆಂಬರ್ 8 ರ ನಂತರ ಮೂರು ತಿಂಗಳ ನಂತರ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿತು. ಮೋದಿ ಸುಲಭವಾಗಿ ಚುನಾವಣೆಗಳನ್ನು ಗೆಲ್ಲುವಲ್ಲಿ ಒಬ್ಬ ಪ್ರತಿಭೆ ಎಂದು ನಂಬುವಂತೆ ಅವರನ್ನು ಮುನ್ನೆಲೆಗೆ ತರಲಾಗಿತು. ಅವರು ಪ್ರಕಟಿಸುತ್ತಿದ್ದ ಅಪಕ್ವ ನೀತಿಗಳನ್ನು ಹಿನ್ನೆಲೆಗೆ ಸರಿಸಲಾಗಿತು. ಅವರ ಇಂತಹ ವರ್ತನೆ, ಆಡಳಿತ ಶೈಲಿಯೇ ಇವತ್ತು ಕೋವಿಡ್ -19 ಎಂಬ ನೈಸರ್ಗಿಕ ವಿಪತ್ತನ್ನು ಒಂದು ದುರಂತವನ್ನಾಗಿ ಮಾಡಿದೆ.

ಇದರ ಬಗ್ಗೆ ಯೋಚಿಸಿ: ಅಮಾನ್ಯೀಕರಣದ ಬಗ್ಗೆ ಯೋಚಿಸಿ. ವ್ಯವಸ್ಥೆಯಿಂದ ಈ ಮೊತ್ತವನ್ನು ಹೀರುವ ಮೊದಲು ಸರ್ಕಾರವು 15.41 ಲಕ್ಷ ಕೋಟಿ ರೂ.ಗೆ ಸಮನಾದ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಿ ಸಿದ್ಧಪಡಿಸಿಟ್ಟುಕೊಂಡಿದ್ದರೆ ಏನಾಗುತ್ತಿತ್ತು? ಜನರು ಅಥವಾ ಆರ್ಥಿಕತೆಯು ಅಷ್ಟೆಲ್ಲ ಸಂಕಷ್ಟ ಅನುಭವಿಸಬೇಕಾಗುತ್ತಿರಲಿಲ್ಲ. 2016 ರಲ್ಲಿ ನಡೆದ ಹುಚ್ಚಾಟದ ಆಡಳಿತ ನೀತಿಗಳೇ ಈಗ 2021 ರಲ್ಲಿ ಮರುಪ್ರಸಾರ ಆಗುತ್ತಿವೆ. ಕೋವಿಡ್‌ನ ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ಮೂರು-ನಾಲ್ಕು ತಿಂಗಳ ಅಂತರದಲ್ಲಿ ಲಸಿಕೆಗಳನ್ನು ಸಂಗ್ರಹಿಸುವ ಬದಲು, ಮೋದಿ ವೈರಸ್‌ನ ಮೇಲೆ ಭಾರತದ ವಿಜಯದ ಕಹಳೆ ಎಂದೆಲ್ಲ ಹೇಳುತ್ತಾ, ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿ, ಮತ್ತು ಕುಂಭಮೇಳವನ್ನು ಆಯೋಜಿಸಿ ಸಮಯವನ್ನು ವ್ಯರ್ಥ ಮಾಡಿದರು. ತದನಂತರ, ಎರಡನೇ ಅಲೆಯು ದೇಶವನ್ನು ಮುಳುಗಿಸಿದಾಗಲಷ್ಟೇ, ಎಲ್ಲಾ ವಯಸ್ಕರಿಗೆ ಲಸಿಕೆಗಳನ್ನು ನೀಡುವ ನಿರ್ಧಾರ ಮಾಡಲಾಗಿತು.

2016ರಲ್ಲಿ ಅಮಾನ್ಯವಾಗಿದ್ದನ್ನು ಬದಲಿಸಲು ನಮ್ಮಲ್ಲಿ ಸಾಕಷ್ಟು ಹೊಸ ಕರೆನ್ಸಿ ನೋಟುಗಳಿರಲಿಲ್ಲ. ಹಿಂಡಿನ ಪ್ರತಿರಕ್ಷೆ (herd immunity) ಯನ್ನು ಪಡೆದುಕೊಳ್ಳಲು ಭಾರತದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರಿಗೆ ನೀಡಲು ಸಾಕಷ್ಟು ಲಸಿಕೆಗಳನ್ನು ನಾವು ಈಗ ಹೊಂದಿಲ್ಲ. ಭಾರತವು ಮೇ 16 ರಂದು 18.21 ಕೋಟಿ ಜನರಿಗೆ ಲಸಿಕೆ ನೀಡಿತ್ತು, ಅದರಲ್ಲಿ ಕೇವಲ 4.04 ಕೋಟಿ ಜನರು ಮಾತ್ರ ಎರಡೂ ಲಸಿಕೆ ಪಡೆದಿದ್ದರು ಅಷ್ಟೇ. ನಾವು ಸಂಪೂರ್ಣ ರೋಗನಿರೋಧಕದಿಂದ ತಿಂಗಳುಗಳ ದೂರದಲ್ಲಿದ್ದೇವೆ. 2016ರಲ್ಲಿ ನಮಗೆ ನಗದು ಕೊರತೆಯಿದ್ದಂತೆಯೇ, ಈಗ ನಾವು ಲಸಿಕೆ ಕೊರತೆಗೆ ಸಾಕ್ಷಿಯಾಗಿದ್ದೇವೆ. ಸಾಕಷ್ಟು ಪ್ರಮಾಣಗಳಿಲ್ಲದಿದ್ದಾಗ ಲಸಿಕೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತೇವೆ ಎನ್ನುವುದಕ್ಕೆ ಅರ್ಥವಿದೆಯೇ?

ಕೋವಿಡ್ ದುರಂತದ ಹೊರೆ ಮತ್ತು ಆಪಾದನೆಯನ್ನು ಮರೆಮಾಚಲು ನೋಡಿದ ಕೇಂದ್ರ ಸರ್ಕಾರವು, ರಾಜ್ಯಗಳಿಗೆ ರೋಗನಿರೋಧಕ ಶಕ್ತಿ ಅಗತ್ಯವಿರುವ ಲಸಿಕೆಗಳ ದೊಡ್ಡ ಪಾಲನ್ನು ಸ್ವಂತವಾಗಿ ಪಡೆದುಕೊಳ್ಳುವಂತೆ ಕೇಳುವ ನೀತಿಯನ್ನು ಜಾರಿ ಮಾಡಲಾಗಿದೆ. ಕೇಂದ್ರ ಹೊಣೆಗಾರಿಕೆಯಿಂದ ಪಲಾಯನ ಮಾಡುತ್ತಿದೆ.

ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಕಳೆದ ವರ್ಷದ ರಾಷ್ಟ್ರೀಯ ಲಾಕ್ಡೌನ್ ಹೇರಿದ್ದು ಕಾಕತಾಳೀಯವೇನಲ್ಲ. ಅಲ್ಲಿ ಜನರ ಆರೋಗ್ಯಕ್ಕಿಂತ ಹೇಗಾದರೂ ಅಧಿಕಾರ ಕಬಳಿಸುವ ಹುನ್ನಾರವೇ ಮುಖ್ಯವಾಗಿತ್ತು. ಕೇವಲ ನಾಲ್ಕು ಗಂಟೆಗಳ ಅವಧಿ ನೀಡಿ ಘೋಷಿಸಲಾದ ಆ ಅವೈಜ್ಞಾನಿಕ, ಕಠಿಣ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ನೂರಾರು ಕಿಮೀ ಕಾಲ್ನಡಿಗೆಯಲ್ಲಿ ಹೋಗುವಂತೆ ಮಾಡಿತು.. ಆದರೂ, ತಿಂಗಳುಗಳ ನಂತರ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾದಳ-ಯು ಅಧಿಕಾರಕ್ಕೆ ಬಂದವು.

ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ತೊರೆದ 25 ಶಾಸಕರಲ್ಲಿ 18 ಮಂದಿ ಮತ್ತೆ ಚುನಾಯಿತರಾದರು, ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಂಡಿದೆ ಎಂದು ಖಚಿತಪಡಿಸಿತು. ಕೋವಿಡ್ ಎರಡನೇ ಅಲೆಯನ್ನು ನೋಡುವ ಮುನ್ನ ಪುದುಚೇರಿಯಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲಾಗಿತು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸಂಪನ್ಮೂಲದೊಂದಿಗೆ ಹೋರಾಡಿದರೂ ಆ ಪಕ್ಷಕ್ಕೆ ಹಿನ್ನಡೆಯಾಯಿತು. ಆದರೆ ಇದು ಎರಡನೇ ಅಲೆ ತೀವ್ರಗೊಳ್ಳಲೂ ಕಾರಣವಾಗಿತು.

ದೆಹಲಿಯು ಲಾಕ್ ಡೌನ್ ಆಗಿರುವಾಗಲೂ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸಲು ಮೋದಿ ನಿರಾಕರಿಸಿದ್ದಾರೆ. ಇದು ಸಾವಿನ ಮನೆಯಲ್ಲಿ ಮೋಜಿನ ಪಾರ್ಟಿ ನಡೆಸುವ ಕ್ರೌರ್ಯದಂತಿದೆ.

ನಮ್ಮ ಮರೆಗುಳಿತನ ಇವತ್ತಿನ ಅಧ್ವಾನಕ್ಕೆ ಕಾರಣವಾಗಿದೆ. ಡೆಮೊ (ನೋಟು ಅಮಾನ್ಯೀಕರಣ) ಕೋವಿಡ್ ದುರಂತಕ್ಕೆ ಕಾರಣವಾಯಿತು. ಮುಂದೆ ಸಂಭವಿಸಬಹುದಾದ ದುರಂತಗಳಿಗೆ ನಮ್ಮ ನಾಯಕರನ್ನು ಅನುಮತಿಸಿದ್ದೇವೆಯೇ?

(ಲೇಖಕರು ಹಿರಿಯ ಪತ್ರಕರ್ತ. ಅಭಿಪ್ರಾಯಗಳು ವೈಯಕ್ತಿಕ. ಕೃಪೆ: ಮಿಡ್ ಡೇ)


ಇದನ್ನೂ ಓದಿ: ಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...