Homeಗೌರಿ ಕಣ್ಣೋಟನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! - ಗೌರಿ ಕಣ್ಣೋಟ

ನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! – ಗೌರಿ ಕಣ್ಣೋಟ

- Advertisement -
- Advertisement -

ನನಗೆ ಅಚ್ಚರಿ ಮೂಡಿಸಿದ್ದು ಬಿಹಾರದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಅವರ ಸರ್ಕಾರದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ದಮನ. ಸಭ್ಯನಂತೆ ಸ್ವಚ್ಛಹಸ್ತನಂತೆ ಕಾಣುವ ನಿತೀಶ್ ಕುಮಾರ್ ಹೇಗೆ ತಮ್ಮ ರಾಜ್ಯದ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬುದನ್ನು ಕುರಿತು ‘ಓಪನ್’ ಪತ್ರಿಕೆಯಲ್ಲಿ ಒಂದು ಸುದೀರ್ಘವಾದ ವರದಿ ಪ್ರಕಟಗೊಂಡಿದೆ. ಅದನ್ನು ಓದಿದನಂತರ ನಿತೀಶ್ ಕುಮಾರ್ ಅವರ ಬಗ್ಗೆ ಅಚ್ಚರಿ ಆಯಿತು.

‘ಓಪನ್’ ಪತ್ರಿಕೆಯಲ್ಲಿ ಧೀರೇಂದ್ರ ಕೆ. ಝಾ ಎಂಬುವವರು ಬರೆದಿರುವ ವರದಿಯ ಸಾರಾಂಶ ಹೀಗಿದೆ:

ಇತ್ತೀಚೆಗೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಒಂದು ಮನೆಯ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರು. ಆ ದಾಳಿಯಲ್ಲಿ ಅವರಿಗೆ ಐದು ಕೋಟಿ ರೂಪಾಯಿಗಳು ಸಿಕ್ಕವಲ್ಲದೆ, ಪಾಟ್ನಾದಲ್ಲಿರುವ ಸುಮಾರು ಐವತ್ತು ಮನೆಗಳ ಖರೀದಿ ಪತ್ರಗಳೂ ಸಿಕ್ಕವು. ಐದು ಕೋಟಿಯಷ್ಟು ದೊಡ್ಡಮೊತ್ತ ಮತ್ತು ಐವತ್ತು ಮನೆಗಳ ದಾಖಲೆಗಳು ಸಿಕ್ಕಿದ್ದರೂ ಬಿಹಾರದ ಯಾವ ಪತ್ರಿಕೆಯೂ ಈ ದಾಳಿಯ ಬಗ್ಗೆ ವರದಿ ಮಾಡಲಿಲ್ಲ. ಅದಕ್ಕೆ ಕಾರಣ ಆ ಮನೆಯಲ್ಲಿ ವಾಸಿಸುತ್ತಿರುವಾತ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಆಪ್ತನಾಗಿರುವ ಮತ್ತು ನಿತೀಶ್‌ಕುಮಾರ್ ಅವರ ಸಂಯುಕ್ತ ಜನತಾದಳದ ಖಜಾಂಚಿ ಆಗಿರುವ ವಿನಯ್‌ಕುಮಾರ್ ಸಿನ್ಹಾ! ಅಂದಹಾಗೆ ನಿತೀಶ್‌ಕುಮಾರ್ ಅವರು ಮುಖ್ಯಮಂತ್ರಿ ಆಗುವತನಕ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಈಗ ಅದನ್ನು ತಮ್ಮ ಆಪ್ತನಿಗೆ ಬಿಟ್ಟುಕೊಟ್ಟಿದ್ದಾರೆ.

ಭ್ರಷ್ಟಾಚಾರ ಮತ್ತು ರಾಜಕೀಯ ವಾಸನೆ ಇರುವ ಈ ದಾಳಿಯ ಬಗ್ಗೆ ಯಾಕೆ ಬಿಹಾರದ ಪತ್ರಿಕೆಗಳು ವರದಿ ಮಾಡಲಿಲ್ಲ ಎಂದು ನೋಡಿದಾಗ ಇದು ಒಂದು ವಿಶೇಷ ಸಂಗತಿ ಅಲ್ಲವೆಂದೂ, ಇಂತಹ ‘ಮರೆಮಾಚುವ’ ಕೆಲಸದಲ್ಲಿ ಆ ರಾಜ್ಯದ ಪತ್ರಿಕೆಗಳೂ ದಿನನಿತ್ಯ ತೊಡಗಿವೆ ಎಂದೂ ಗೊತ್ತಾಯಿತು.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆದಾಗಿನಿಂದಲೂ ಅವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಲ್ಲಿನ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಅವರನ್ನು ಟೀಕೆ ಮಾಡುವ ಪತ್ರಿಕೆಗಳ ಆದಾಯ ಮೂಲಗಳನ್ನು ಕಡಿದು ಹಾಕುವಮೂಲಕ ಅಂತಹ ‘ದಾರಿ ತಪ್ಪಿದ’ ಮಾಧ್ಯಮಗಳನ್ನು ‘ಸರಿದಾರಿಗೆ’ ತರುತ್ತಿದ್ದಾರೆ. ಹಾಗೆ ‘ಸರಿ ದಾರಿಗೆ’ ಎಳೆಯಲ್ಪಟ್ಟ ಪತ್ರಿಕೆಗಳಲ್ಲಿ ‘ಪಿಂಡಾರ್’ ಎಂಬ ಉರ್ದು ಪತ್ರಿಕೆಯೂ ಒಂದು.

ಈ ‘ಪಿಂಡಾರ್’ ಪತ್ರಿಕೆಗೆ ಡಾ. ರೈಹಾನ್ ಘಾಣಿ ಎಂಬುವವರು ಸಂಪಾದಕರಾಗಿದ್ದರು. 2007ರಲ್ಲಿ ನಿತೀಶ್ ಕುಮಾರ್ ಅವರ ಪತ್ನಿ ಮಡಿದಾಗ ಆಕೆಯ ಅಂತ್ಯಸಂಸ್ಕಾರವನ್ನು ಒಂದು ರಾಜಕೀಯ ಸಭೆಯಾಗಿ ಮುಖ್ಯಮಂತ್ರಿ ಪರಿವರ್ತಿಸಿದ್ದರು. ಇದನ್ನು ಟೀಕಿಸಿ ಘಾಣಿ ಅವರು ಮಾಡಿದ ಈ ‘ಪ್ರಮಾದ’ಕ್ಕೆ ಮಾರನೆ ದಿನವೇ ಅವರಿಗೆ ಬಿಸಿಮುಟ್ಟಿಸಿದ್ದರು ನಿತೀಶ್ ಕುಮಾರ್ ‘ಪಿಂಡಾರ್’ ಪತ್ರಿಕೆಯ ಮಾಲೀಕರ ಮೇಲೆ ಒತ್ತಡ ತಂದು ಘಾಣಿ ಅವರನ್ನು ಸಂಪಾದಕ ಹುದ್ದೆಯಿಂದ ಓಡಿಸಲಾಯಿತು, ಅವರು ಹಲವಾರು ವರ್ಷಗಳಿಂದ ಬರೆಯುತ್ತಿದ್ದ ಅಂಕಣಕ್ಕೆ ಕತ್ತರಿ ಬಿತ್ತು. ಇಂತಹ ಅವಮಾನವನ್ನು ಸಹಿಸದೆ ಘಾಣಿ ಅವರು ರಾಜೀನಾಮೆ ಕೊಟ್ಟು ಆ ಪತ್ರಿಕೆಯಿಂದ ಹೊರಬಿದ್ದರು.

ಈ ಕತೆ ಅಲ್ಲಿಗೇ ಮುಗಿಯುವುದಿಲ್ಲ. ನಿತೀಶ್ ಕುಮಾರ್ ಅವರ ಆಸೆಗೆ ತಕ್ಕಂತೆ ‘ಪಿಂಡಾರ್’ ಪತ್ರಿಕೆಯ ಮಾಲೀಕ ಎ.ಕೆ.ಎಹಸಾನಿ ಅವರು ನಡೆದುಕೊಂಡಿದ್ದರಿಂದ ಆ ಪತ್ರಿಕೆಗೆ ಬಿಹಾರ ಸರ್ಕಾರದಿಂದ ಸಾಕಷ್ಟು ಲಾಭ ಸಿಕ್ಕಿತು. ಘಾಣಿ ಅವರು ಸಂಪಾದಕರಾಗಿದ್ದಾಗ 2007ರಲ್ಲಿ ‘ಪಿಂಡಾರ್’ ಪತ್ರಿಕೆಗೆ ಬಿಹಾರದ ಸರ್ಕಾರದಿಂದ ಕೇವಲ ಒಂದು ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಸಿಕ್ಕಿದ್ದವು. ಆದರೆ ಘಾಣಿ ಅವರು ಹೊರನಡೆದ ನಂತರ ಮಾಲೀಕ ಎಹಸಾನಿ ಅವರೇ ಸಂಪಾದಕರಾದ ನಂತರ ಅದೇ ಪತ್ರಿಕೆಗೆ 2008 ರಲ್ಲಿ 24 ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಹರಿದುಬಂದವು. ಅದರ ಮುಂದಿನ ವರ್ಷವೂ ‘ಪಿಂಡಾರ್’ ಪತ್ರಿಕೆ ನಿತೀಶ್ ಕುಮಾರ್ ಅವರ ತಾಳಕ್ಕೆ ಕುಣಿದಿದ್ದರಿಂದ 2009ರಲ್ಲಿ ಬರೋಬ್ಬರಿ 40 ಲಕ್ಷದ ಸರ್ಕಾರಿ ಜಾಹೀರಾತುಗಳು ಸಿಕ್ಕಿದವು. 2010ರಲ್ಲಿ ಅದು 48 ಲಕ್ಷಕ್ಕೆ ಏರಿತು! ಸಹಜವಾಗಿಯೇ ‘ಪಿಂಡಾರ್’ ಪತ್ರಿಕೆ ಇವತ್ತು ನಿತೀಶ್ ಕುಮಾರರ ಭಟ್ಟಂಗಿ ಪತ್ರಿಕೆಯಾಗಿದೆ.

ಅಂದಹಾಗೆ ಈ ವಿದ್ಯಮಾನ ಕೇವಲ ‘ಪಿಂಡಾರ್’ ಪತ್ರಿಕೆಗೆ ಸೀಮಿತವಾಗಿಲ್ಲ. ಬಿಹಾರ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಖಾಸಗಿ ಉದ್ಯಮ, ಕಾರ್ಖಾನೆ, ಸಂಸ್ಥೆಗಳು ಇಲ್ಲ ಆದ್ದರಿಂದ ಅಲ್ಲಿನ ಪತ್ರಿಕೆಗಳು ತಮ್ಮ ಉಳಿವಿಗಾಗಿ ಸರ್ಕಾರಿ ಜಾಹೀರಾತುಗಳನ್ನೇ ಅವಲಂಬಿಸಲೇಬೇಕಿದೆ. ಇದನ್ನೇ ತನ್ನ ಅಸ್ತ್ರವಾಗಿಸಿಕೊಂಡಿರುವ ನಿತೀಶ್‌ಕುಮಾರ್ ಅಲ್ಲಿನ ಪತ್ರಿಕೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ಅವರು ಅದೆಷ್ಟು ಚಾಕಚಕ್ಯತೆಯಿಂದ ಮಾಡಿದ್ದಾರೆಂಬುದು ಅಚ್ಚರಿ ಮೂಡಿಸುತ್ತದೆ.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗುವತನಕ ಆ ರಾಜ್ಯದ ಬಜೆಟ್‌ನಲ್ಲಿ ಸರ್ಕಾರಿ ಜಾಹೀರಾತುಗಳಿಗೆ ಕಡಿಮೆ ಹಣವನ್ನು ಎತ್ತಿಡಲಾಗುತ್ತಿತ್ತು. ಉದಾಹರಣೆಗೆ ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷ ಬಿಹಾರದಲ್ಲಿ ಅಧಿಕಾರದಲ್ಲಿದ್ದ 2005-06ರಲ್ಲಿ ಇಂತಹ ಜಾಹೀರಾತುಗಳಿಗೆ 4.5 ಕೋಟಿ ರೂಪಾಯಿಗಳನ್ನು ಸರ್ಕಾರಿ ಖಜಾನೆಯಿಂದ ವೆಚ್ಚ ಮಾಡಲಾಗಿತ್ತು. ಆದರೆ ನಿತೀಶ್‌ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಮರುವರ್ಷವೇ (2006-07ರಲ್ಲಿ) ಆ ಮೊತ್ತವನ್ನು 5.4 ಕೋಟಿಗಳಿಗೆ ಏರಿಸಲಾಯಿತು. 2007-08ರಲ್ಲಿ ಅದು ದುಪ್ಪಟ್ಟುಗೊಂಡು 9.65 ಕೋಟಿಯಾಯಿತು. 2008-09ರಲ್ಲಿ ಅದು ಮೂರುಪಟ್ಟು ಹೆಚ್ಚಾಗಿ 27.5 ಕೋಟಿಗೆ ಏರಿತು. 2009-10ರಲ್ಲಿ ಮತ್ತಷ್ಟು ಹೆಚ್ಚಾಗಿ 34.5 ಕೋಟಿ ರೂ. ಗೆ ಮುಟ್ಟಿತು.

ಇಷ್ಟು ದೊಡ್ಡ ಮೊತ್ತದಲ್ಲಿ ಯಾವ ಪತ್ರಿಕೆಗೆ ಎಷ್ಟು ಕೊಡಬೇಕೆಂಬ ನಿರ್ಧಾರವನ್ನು ಸ್ವತಃ ನಿತೀಶ್‌ಕುಮಾರ್ ಅವರೇ ತೆಗೆದುಕೊಳ್ಳುವುದರಿಂದ ಇವತ್ತು ಅಲ್ಲಿಯ ಬಹಳಷ್ಟು ಪತ್ರಿಕೆಗಳು ಅವರ ಹೊಗಳುಭಟ್ಟ ಪತ್ರಿಕೆಗಳಾಗಿ ಮಾರ್ಪಾಟುಗೊಂಡಿವೆ. ಇದರ ಬಗ್ಗೆ ‘ಪಿಂಡಾರ್’ ಪತ್ರಿಕೆಯ ಮಾಜಿ ಸಂಪಾದಕ ಘಾಣಿ ಅವರು ಹೇಳುವುದೇನೆಂದರೆ “ತುರ್ತುಪರಿಸ್ಥಿತಿ ಸಂದರ್ಭದಲ್ಲಿ ದೇಶದಾದ್ಯಂತ ಘೋಷಿತ ಪತ್ರಿಕಾ ಸೆನ್ಸಾರ್‌ಶಿಪ್ ಇತ್ತು. ಆದರೆ ನಿತೀಶ್‌ಕುಮಾರ್ ಆಡಳಿತದಡಿ ಬಿಹಾರದಲ್ಲಿ ಅಘೋಷಿತ ಸೆನ್ಸಾರ್‌ಶಿಪ್ ಜಾರಿಯಲ್ಲಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹಳಷ್ಟು ಅಪಾಯಕಾರಿ” ಎಂದು.

  • ಗೌರಿ ಲಂಕೇಶ್.

ಮೇ 2, 2012

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...