ಮಣಿಪುರದಲ್ಲಿ ಮಾನವೀಯತೆ ಸತ್ತಿದೆ. ನರೇಂದ್ರ ಮೋದಿಯವರೆ ನಿಮ್ಮ ಮೌನವನ್ನು ಭಾರತ ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರದ ಅಮಾನುಷ ವಿಡಿಯೋ ವೈರಲ್ ಆದ ಬೆನ್ನಲ್ಲೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅವರು, “ಮೋದಿ ಸರ್ಕಾರ ಮತ್ತು ಬಿಜೆಪಿ ರಾಜ್ಯದ ಸೂಕ್ಷ್ಮ ಸಾಮಾಜಿಕ ರಚನೆಯನ್ನು ನಾಶಪಡಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತವನ್ನು ಮೊಬೊಕ್ರಸಿಯಾಗಿ ಬದಲಾಯಿಸಿವೆ” ಎಂದಿದ್ದಾರೆ.
ನಿಮ್ಮ ಸರ್ಕಾರದಲ್ಲಿ ಯಾವುದೇ ಆತ್ಮಸಾಕ್ಷಿ ಅಥವಾ ಮರ್ಯಾದೆ ಉಳಿದಿದ್ದರೆ, ನೀವು ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಮಾತನಾಡಬೇಕು ಮತ್ತು ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ನಿಮ್ಮ ದ್ವಂದ್ವ ಅಸಮರ್ಥತೆಗೆ ಇತರರನ್ನು ದೂಷಿಸದೆ ಏನಾಯಿತು ಎಂದು ರಾಷ್ಟ್ರಕ್ಕೆ ತಿಳಿಸಬೇಕು ಎಂದು ಮೋದಿಯವರಿಗೆ ಖರ್ಗೆ ತಾಕೀತು ಮಾಡಿದ್ದಾರೆ.
Humanity has died in Manipur.
Modi Govt and the BJP has changed Democracy and the rule of law into Mobocracy by destroying the delicate social fabric of the state. @narendramodi ji,
India will never forgive your silence.
If there is any conscience or an iota of shame left…
— Mallikarjun Kharge (@kharge) July 20, 2023
ನೀವು ನಿಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ತ್ಯಜಿಸಿದ್ದೀರಿ. ಈ ಬಿಕ್ಕಟ್ಟಿನ ಸಮಯದಲ್ಲಿ, ನಾವು ಮಣಿಪುರದ ಜನರೊಂದಿಗೆ ಒಟ್ಟಾಗಿ ನಿಲ್ಲುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವೈರಲ್ ವಿಡಿಯೋ ತುಂಬಾ ಆಘಾತ ಉಂಟು ಮಾಡಿದೆ. ಈ ರೀತಿಯ ಘಟನೆಗಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಕೋಮುವಾದಿ ಗಲಭೆಗಳಲ್ಲಿ ಮಹಿಳೆಯರನ್ನು ಆಯುಧವಾಗಿ ಬಳಸಿಕೊಳ್ಳುವುದು ಅತಿ ದೊಡ್ಡ ಸಾಂವಿಧಾನಿಕ ದುರ್ಬಳಕೆಯಾಗಿದೆ. ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ತಿಳಿಸಿದ್ದಾರೆ.
ಟಿಎಂಸಿ ಸಂಸದೆ ಮೊಹುವ ಮೊಯಿತ್ರಾ ಟ್ವೀಟ್ ಮಾಡಿ, “ಮಣಿಪುರದಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ನಾವೆಲ್ಲರೂ ಯುದ್ಧ ಅಪರಾಧಗಳಿಗೆ ಸಾಕ್ಷಿಯಾಗಿದ್ದೇವೆ. ಇದು ನಮ್ಮ ದೇಶದಲ್ಲಿ ನಡೆಯುತ್ತಿದ್ದು, ಬಿಜೆಪಿಯು ಈ ಸ್ಥಿತಿಗೆ ದೇಶವನ್ನು ತಂದೊಡ್ಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವಿಟ್ ಮಾಡಿ, “ಮಣಿಪುರದಲ್ಲಿ ನಡೆದಿರುವ ಘಟನೆ ಅತ್ಯಂತ ನಾಚಿಕೆಗೇಡು ಮತ್ತು ಖಂಡನೀಯ. ಭಾರತೀಯ ಸಮಾಜದಲ್ಲಿ ಈ ರೀತಿಯ ಹೇಯ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಮಣಿಪುರದಲ್ಲಿ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ. ಮಣಿಪುರದ ಪರಿಸ್ಥಿತಿಯ ಬಗ್ಗೆ ಗಮನ ಹರಿಸುವಂತೆ ನಾನು ಪ್ರಧಾನಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಈ ಘಟನೆಯ ವಿಡಿಯೋದಲ್ಲಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಇಂತಹ ಕ್ರಿಮಿನಲ್ ಸ್ವಭಾವದವರಿಗೆ ಭಾರತದಲ್ಲಿ ಜಾಗ ಇರಬಾರದು” ಎಂದು ಆಗ್ರಹಿಸಿದ್ದಾರೆ.
मणिपुर की वारदात बेहद शर्मनाक और निंदनीय है। भारतीय समाज में इस तरह की घिनौनी हरकत बर्दाश्त नहीं की जा सकती।
मणिपुर के हालात बेहद चिंताजनक बनते जा रहे हैं। मैं प्रधानमंत्री जी से अपील करता हूँ कि वे मणिपुर के हालातों पर ध्यान दें। इस वारदात की वीडियो में दिख रहे दोषियों पर कड़ी…
— Arvind Kejriwal (@ArvindKejriwal) July 19, 2023
ವಿಡಿಯೋ ಡಿಲೀಟ್ ಮಾಡುವಂತೆ ಟ್ವಿಟರ್ ಮತ್ತು ಇತರ ಸಂಸ್ಥೆಗಳಿಗೆ ಸೂಚನೆ
ಆ ಅಮಾನವೀಯ ವಿಡಿಯೋ ಬುಧವಾರ ವೈರಲ್ ಆಗುತ್ತಿದ್ದಂತೆ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಆ ವೀಡಿಯೊವನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಸೂಚಿಸಿದೆ. ಈ ವಿಷಯವು ತನಿಖೆಯಲ್ಲಿರುತ್ತದೆ ಹಾಗಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಭಾರತೀಯ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ತಾಕೀತು ಮಾಡಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಹೇಯ ಕೃತ್ಯ: ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ


