Homeಮುಖಪುಟನನ್ನ ಹೆಸರು ನರೇಂದ್ರ ಮೋದಿಯಲ್ಲ, ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ: ರಾಹುಲ್ ಗಾಂಧಿ

ನನ್ನ ಹೆಸರು ನರೇಂದ್ರ ಮೋದಿಯಲ್ಲ, ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ: ರಾಹುಲ್ ಗಾಂಧಿ

- Advertisement -
- Advertisement -

ಅಸ್ಸಾಂ ಚುನಾವಣಾ ಪ್ರಚಾರದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, 24 ಗಂಟೆ ಪ್ರಧಾನಿ ಮೋದಿಯವರು ಸುಳ್ಳು ಹೇಳುತ್ತಾರೆ. ನಾನು ಸುಳ್ಳು ಹೇಳುವ ನರೇಂದ್ರ ಮೋದಿಯಲ್ಲ, ಸತ್ಯವನ್ನು ಕೇಳಲು ಇಷ್ಟಪಟ್ಟರೆ ನನ್ನ ಮಾತುಗಳನ್ನು ಕೇಳಿ ಎಂದು ಬುಧವಾರ ನಡೆದ ರ್‍ಯಾಲಿಯಲ್ಲಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ನಾನು ನಿಮಗೆ ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ನನ್ನ ಹೆಸರು ನರೇಂದ್ರ ಮೋದಿ ಅಲ್ಲ. ಅಸ್ಸಾಂ, ರೈತರು ಅಥವಾ ಇನ್ನಾವುದೇ ವಿಷಯದ ಬಗ್ಗೆ ಅವರು ಸುಳ್ಳು ಹೇಳುವುದನ್ನು ಕೇಳಲು ಬಯಸಿದರೆ, ಟಿವಿ ಆನ್ ಮಾಡಿ, ಅವರು ಭಾರತಕ್ಕೆ ದಿನದ 24 ಗಂಟೆಯು ಸುಳ್ಳು ಹೇಳುತ್ತಾರೆ” ಎಂದಿದ್ದಾರೆ.

ಮುಂದುವರಿದು, “ನರೇಂದ್ರ ಮೋದಿಯವರ ಸುಳ್ಳಗಳನ್ನು ಬಿಟ್ಟು ನೀವು ಸತ್ಯವನ್ನು ಕೇಳಲು ಬಯಸಿದರೇ, ನನ್ನ ಮಾತುಗಳನ್ನು ಕೇಳಿ “ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ‘ಬಿರಿಯಾನಿ’ ಚಿತ್ರ ಬಿಡುಗಡೆಗೆ ಥಿಯೇಟರ್ ಮಾಲೀಕರ ಹಿಂದೇಟು: ಮಲಯಾಳಂ ನಿರ್ದೇಶಕನ ಆಕ್ರೋಶ

“ನಾವು ನೀಡಿದ ಭರವಸೆಯಂತೆ, ಛತ್ತೀಸ್‌ಗಢದಲ್ಲಿ ಅಧಿಕಾರ ವಹಿಸಿಕೊಂಡ ಆರು ಗಂಟೆಗಳಲ್ಲಿ ಕೃಷಿ ಸಾಲವನ್ನು ಮನ್ನಾ ಮಾಡಿದ್ದೇವೆ, ಹಿಂದಿನ ಯುಪಿಎ ಸರ್ಕಾರವು ರೈತರ 70,000 ಕೋಟಿ ರೂ.ಗಳ ಕೃಷಿ ಸಾಲವನ್ನು ಮನ್ನಾ ಮಾಡಿದೆ” ಎಂದು ಹೇಳಿದ್ದಾರೆ.

“ವಿವಿಧ ಭಾಷೆಗಳು, ಜನಾಂಗಗಳು ಮತ್ತು ಸಿದ್ಧಾಂತಗಳ ಜನರು ನನ್ನ ಮಾತುಗಳನ್ನು ಶಾಂತಿಯುತವಾಗಿ ಕೇಳುತ್ತಿದ್ದಾರೆ, ಏಕೆಂದರೆ ಇದು ಅಸ್ಸಾಂ. ಆದರೆ ಬಿಜೆಪಿ ಒಬ್ಬ ಸಹೋದರನನ್ನು ಇನ್ನೊಬ್ಬರ ವಿರುದ್ಧ ಹೋರಾಡುವಂತೆ ಮಾಡುತ್ತದೆ ಮತ್ತು ದ್ವೇಷವನ್ನು ಹರಡುತ್ತದೆ. ಆದರೆ, ಹೊರಗಿನವರಿಗೆ ಚಹಾ ತೋಟದ ಒಪ್ಪಂದಗಳನ್ನು ನೀಡುತ್ತಾರೆ” ಎಂದು ಆರೋಪಿಸಿದ್ದಾರೆ.

ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ತನ್ನದೇ ಆದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ. ಅಸ್ಸಾಂ ರಾಜ್ಯವನ್ನು ನಾಗ್ಪುರ (ಆರ್‌ಎಸ್‌ಎಸ್‌ ಪ್ರಧಾನ ಕಚೇರಿ) ಅಥವಾ ದೆಹಲಿಯಿಂದ ನಿಯಂತ್ರಿಸಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.

39 ವಿಧಾನಸಭಾ ಕ್ಷೇತ್ರಗಳ ಅಸ್ಸಾಂ ವಿಧಾನಸಭಾ ಚುನಾವಣೆಗೆ ಗುರುವಾರ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 6 ರಂದು ಮೂರನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿವೆ.


ಇದನ್ನೂ ಓದಿ: ಚುನಾವಣಾ ಪ್ರಚಾರ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಪತ್ನಿಯ ಫೋಟೋ ಬಳಸಿದ ಬಿಜೆಪಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...