Homeಮುಖಪುಟಕುನಾಲ್, ಮುನಾವರ್ ನಿಮಗಾಗಿ ಒಂದು ಶೋ ಏರ್ಪಡಿಸುತ್ತೇನೆ, ಆದರೆ ಒಂದೇ ಷರತ್ತು: ದಿಗ್ವಿಜಯ್ ಸಿಂಗ್

ಕುನಾಲ್, ಮುನಾವರ್ ನಿಮಗಾಗಿ ಒಂದು ಶೋ ಏರ್ಪಡಿಸುತ್ತೇನೆ, ಆದರೆ ಒಂದೇ ಷರತ್ತು: ದಿಗ್ವಿಜಯ್ ಸಿಂಗ್

- Advertisement -
- Advertisement -

ಭಾರತದ ಖ್ಯಾತ ಸ್ಟ್ಯಾಂಡಪ್‌ ಕಾಮೆಡಿಯನ್‌ಗಳಾದ ಕುನಾಲ್ ಕಮ್ರ ಮತ್ತು ಮುನಾವರ್ ಫಾರೂಕಿಯವರ ಹಲವಾರು ಶೋಗಳು ಬಲಪಂಥೀಯ ಹಿಂದುತ್ವ ಕಾರ್ಯಕರ್ತರ ಗಲಾಟೆಯಿಂದ ರದ್ದಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ “ಕುನಾಲ್, ಮುನಾವರ್ ನಾನು ನಿಮಗಾಗಿ ಭೋಪಾಲ್‌ನಲ್ಲಿ ಒಂದು ಶೋ ಏರ್ಪಡಿಸುತ್ತೇನೆ. ಅದರ ಎಲ್ಲಾ ಜವಾಬ್ದಾರಿ ನನ್ನದಾಗಿರುತ್ತದೆ. ಆದರೆ ನಿಮ್ಮ ಕಾಮಿಡಿಯ ವಿಷಯ ಕೇವಲ ದಿಗ್ವಿಜಯ್ ಸಿಂಗ್ ಆಗಿರಬೇಕು ಎಂಬುದು ನನ್ನ ಒಂದೇ ಷರತ್ತು” ಎಂದು ತಿಳಿಸಿದ್ದಾರೆ.

“ಈ ಪ್ರದರ್ಶನಕ್ಕೆ ಸಂಘಿಗಳು ಆಕ್ಷೇಪಿಸಬಾರದು!! ಭಯಪಡಬೇಡ ಬನ್ನಿ!! ನಿಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ಮತ್ತು ಸಮಯವನ್ನು ನೀಡಿ. ನಿಮ್ಮ ಎಲ್ಲಾ ಷರತ್ತುಗಳನ್ನು ಸ್ವೀಕರಿಸಲಾಗಿದೆ” ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದು, ಕುನಾಲ್ ಕ್ರಮರವರ ಬಿಬಿಸಿಯೊಂದಿಗಿನ ಸಂದರ್ಶನದ ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ.

ಗುಜರಾತ್‌ನ ಸ್ಟ್ಯಾಂಡಪ್‌ ಕಾಮೆಡಿಯನ್‌ ಆದ ಮುನಾವರ್ ಫಾರೂಕಿಯವರ 12 ಶೋಗಳನ್ನು ಬಲಪಂಥೀಯರ ಬೆದರಿಕೆಯ ಕಾರಣ ನೀಡಿ ಪೊಲೀಸರು ರದ್ದುಪಡಿಸಿದ್ದರು. ಅದೇ ರೀತಿ ಡಿಸೆಂಬರ್ 1ರಿಂದ 19ರ ನಡುವೆ ಬೆಂಗಳೂರಿನ ಜೆಪಿ ನಗರದ ಸ್ಥಳವೊಂದರಲ್ಲಿ ‘ಕುನಾಲ್ ಕಮ್ರಾ ಲೈವ್’ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ಕಮ್ರಾ ಪ್ರದರ್ಶಿಸಲು ಸಜ್ಜಾಗಿದ್ದರು. ಆದರೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ನಡೆದ ನಂತರ ಅವರ ಶೋಗಳನ್ನು ಸಹ ರದ್ದುಪಡಿಸಲಾಗಿತ್ತು.

ಈ ಕುರಿತು ಬಿಬಿಸಿ ಸಂದರ್ಶನದಲ್ಲಿ ಮಾತನಾಡಿದ್ದ ಕುನಾಲ್ “ಬೆಂಗಳೂರು ನನಗೆ ಬಹುಮುಖ್ಯ ನಗರ. ನನ್ನ ವೈರಲ್ ವಿಡಿಯೋಗಳು ಬೆಂಗಳೂರಿನಲ್ಲಿ ಪ್ರದರ್ಶಿತವಾಗಿದ್ದವು. ಇದು ಲಿಬರಲ್‌ಗಳಿರುವ ನಗರವಾಗಿತ್ತು. ಆದರೆ ಮೊದಲ ಬಾರಿಗೆ ಇಲ್ಲಿ ನನ್ನ ಶೋ ರದ್ದುಗೊಂಡಿದೆ. ಯಾರ ಬಳಿ ಅಧಿಕಾರವಿರುತ್ತದೊ ಅವರಿಗೆ ನಗುವುದು ಸಹ ಇಷ್ಟವಾಗುವುದಿಲ್ಲ. ಅವರು ಎಷ್ಟು ಪ್ರದರ್ಶನ ರದ್ದುಗೊಳಿಸುತ್ತಾರೋ ನೋಡುತ್ತೇನೆ. ನಾನು ಹೆದರುವುದಿಲ್ಲ, ಶೋ ಮಾಡಿಯೇ ಮಾಡುತ್ತೇನೆ. ನೀವೆಷ್ಟು ರದ್ದುಗೊಳಿಸುತ್ತಿರಿ ನೋಡೋಬಿಡೋಣ” ಎಂದಿದ್ದರು.

ನನ್ನ ಶೋ ರದ್ದಾದ ವಿಷಯ ಕೇಳಿ ನಗುಬಂತು. ಏಕೆಂದರೆ 40-50 ಜನ ಕೂತು ಟಿಕೆಟ್ ಖರೀದಿಸಿ ಕಾಮಿಡಿ ಶೋ ನೋಡುತ್ತಾರೆ. ಆದರೆ ಶೋ ನೋಡಲು ಇಷ್ಟಪಡದವರು ಶೋ ನಡೆಯಬಾರದೆಂದು ಧಮಕಿ ಹಾಕುತ್ತಾರೆ. ಟಿಕೆಟ್ ಖರೀದಿಸಿ ಶೋ ನೋಡುವವರಿಗೆ, ಕಲಾವಿದರಿಗೆ ಸರ್ಕಾರ ರಕ್ಷಣೆ ನೀಡದೆ ನೋಡದವರ ಧಮಕಿಗೆ ಹೆದರುತ್ತದೆ ಎಂದರೆ ನಗದೇ ಇರಲು ಸಾಧ್ಯವೇ? ಎಂದು ಕಮ್ರ ಹೇಳಿದ್ದಾರೆ.

ಒಂದು ಕಡೆ ಪ್ರಧಾನಿಗಳು ಹೇಳುತ್ತಾರೆ, ದೇಶ ಬಹಳ ಗಂಭೀರವಾಗಿದೆ. ಹ್ಯೂಮರ್ ಎಂಬುದು ಕಾಣೆಯಾಗುತ್ತಿದೆ. ಜನ ನಗುತ್ತಿಲ್ಲ ಎಂದು. ಇನ್ನೊಂದು ಕಡೆ ಜನರನ್ನು ನಗಿಸಲು ಶೋ ಮಾಡಿದರೆ ಪ್ರಧಾನಿಗಳ ಅನುಯಾಯಿಗಳೇ ಅದನ್ನು ರದ್ದುಗೊಳಿಸುತ್ತಾರೆ. ಇವರ ಚುನಾವಣಾ ರ್ಯಾಲಿಗಳಲ್ಲಿನ ಭಾಷಣ ಕೇಳಲು ಜನರಿಗೆ ದುಡ್ಡು ಕೊಟ್ಟು ಕರೆತರುತ್ತಾರೆ. ಆದರೆ ದುಡ್ಡು ಕೊಟ್ಟು ನಮ್ಮ ಕಾಮಿಡಿ ಕೇಳಲು ಬರುವವರಿಗೆ ಬೆದರಿಕೆಯೊಡ್ಡಿ ಶೋ ಕ್ಯಾನ್ಸಲ್ ಮಾಡುತ್ತಾರೆ. ಇದಕ್ಕೆ ಏನನ್ನಬೇಕು ಎಂದು ಕುನಾಲ್ ಪ್ರಶ್ನಿಸಿದ್ದಾರೆ.

ಹಾಗಾಗಿ ಇದಕ್ಕೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್ ತನ್ನ ಮೇಲೆ ಕಾಮಿಡಿ ಮಾಡಿ. ಆ ಶೋ ಏರ್ಪಡಿಸುತ್ತೇನೆ ಎಂದು ಆಹ್ವಾನಿಸಿದ್ದಾರೆ.


ಇದನ್ನೂ ಓದಿ; ಮುನವ್ವರ್ ಫಾರೂಕಿ ಮತ್ತು ಮಾಬ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...