“ದಿಲ್, ಜಾನ್ ಔರ್ ಖೂನ್” ನೊಂದಿಗೆ ಇಂಡಿಯಾ ಮೈತ್ರಿಯು ಸಂವಿಧಾನವನ್ನು ರಕ್ಷಿಸುತ್ತದೆ; ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ಮೇಲಿನ ಶೇಕಡಾ 50 ರಷ್ಟು ಮಿತಿಯನ್ನು ಕೊನೆಗೊಳಿಸಲಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ಬನ್ಸ್‌ಗಾಂವ್‌ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, “ಸಂವಿಧಾನವನ್ನು ರಕ್ಷಿಸುವ ಇಂಡಿಯಾ ಬಣ ಒಂದು ಕಡೆ ಮತ್ತು ಸಂವಿಧಾನವನ್ನು ಮುಗಿಸಲು ಬಯಸುವವರು ಗುಂಪು ಇನ್ನೊಂದೆಡೆ. ಇಂಡಿಯಾ ಬಣವು “ದಿಲ್, ಜಾನ್ ಔರ್ ಖೂನ್ (ಹೃದಯ, ಜೀವನ ಮತ್ತು ರಕ್ತ)” ನೊಂದಿಗೆ ಸಂವಿಧಾನವನ್ನು ರಕ್ಷಿಸುತ್ತದೆ.ಮೈತ್ರಿ ಸರ್ಕಾರವು ಮೀಸಲಾತಿಯ ಮೇಲಿನ 50 ಪ್ರತಿಶತ ಮಿತಿಯನ್ನು ಕೊನೆಗೊಳಿಸುತ್ತದೆ” ಎಂದು ಹೇಳಿದರು.
ಇಂಡಿಯಾ ಬಣವು ಅಧಿಕಾರಕ್ಕೆ ಬಂದ ನಂತರ, ಅಗ್ನಿಪಥ್ ಯೋಜನೆಯನ್ನು ಹರಿದು ಕಸದ ಬುಟ್ಟಿಗೆ ಎಸೆಯುತ್ತದೆ ಎಂದು ರಾಹುಲ್ ಹೇಳಿದರು.
ಮೂರು ಸಶಸ್ತ್ರ ಸೇವೆಗಳ ವಯಸ್ಸಿನ ವಿವರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಿಬ್ಬಂದಿಗಳ ಅಲ್ಪಾವಧಿಯ ಸೇರ್ಪಡೆಗಾಗಿ ಸರ್ಕಾರವು ಜೂನ್ 2022 ರಲ್ಲಿ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಹೊರತಂದಿದೆ. ಇದು 17 ಮತ್ತು ಅರ್ಧ ವರ್ಷ, 21ರ ನಡುವಿನ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳವರೆಗೆ ನೇಮಿಸಿಕೊಳ್ಳಲು ಒದಗಿಸುತ್ತದೆ ಮತ್ತು ಅವರಲ್ಲಿ ಶೇಕಡಾ 25 ರಷ್ಟನ್ನು ಇನ್ನೂ 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ.
ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರ “ದೇವರು ಕಳುಹಿಸಿದ” ಹೇಳಿಕೆಯನ್ನು ಲೇವಡಿ ಮಾಡಿದರು. “ದೇವರು ಮೋದಿಯನ್ನು ಅದಾನಿಗೆ ಸಹಾಯ ಮಾಡಲು ಕಳುಹಿಸಿದ್ದಾರೆ ;ಮಬಡವರಿಗೆ ಅಲ್ಲ” ಎಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇಂಡಿಯಾ ಒಕ್ಕೂಟವು ದೇಶದ ಆರ್ಥಿಕತೆಯನ್ನು “ಜಂಪ್‌ಸ್ಟಾರ್ಟ್” ಮಾಡುತ್ತದೆ ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ; ‘ಕಾನೂನಿನ ಆಳ್ವಿಕೆಯನ್ನು ಮೋದಿ ಕೊನೆಗೊಳಿಸಿದ್ದಾರೆ…’; ದಲಿತ ಕುಟುಂಬದ ಸದಸ್ಯರ ಹತ್ಯೆಗೆ ರಾಹುಲ್ ಆಕ್ರೋಶ


