Homeಆರೋಗ್ಯಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ...

ಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ

ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದಿದೆ.

- Advertisement -
- Advertisement -

ಕೊಕಕೋಲಾದಲ್ಲಿರುವ ಪೌಷ್ಠಿಕಾಂಶಗಳಾವುವು ಎಂದು ಕೇಳಿದಾಗ ಆ ಕಂಪನಿಯವ ಇದರಲ್ಲಿ ಮಾರಾಟವೊಂದೇ ಪೌಷ್ಠಿಕಾಂಶ (marketing is the only nutrient) ಎಂದು ಉತ್ತರಿಸುತ್ತಾನೆ. ಒಂದು ಬಾಟಲಿ ಕೊಕಕೋಲಾ ಅಥವಾ ಪೆಪ್ಸಿಯಲ್ಲಿ ಸುಮಾರು 45 ಗ್ರಾಂ ಸಕ್ಕರೆ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಮತ್ತು ಕೃತಕ ಬಣ್ಣವಷ್ಟೇ ಇರುವುದರಿಂದ ಮಾರಾಟ ತಂತ್ರವೇ ಇದರ ನಿಜವಾದ ಅಸ್ತ್ರ. ಇದಕ್ಕೆ ಮೊದಲು ಜನರನ್ನು ವ್ಯಸನಿಗಳನ್ನಾಗಿಸಲು ಸ್ವಲ್ಪ ಕೊಕೇನ್ ಕೂಡ ಬಳಸಲಾಗುತ್ತಿತ್ತು. ಇದನ್ನು ವ್ಯಾಪಾರ ಜಗತ್ತಿನಲ್ಲಿ ಬ್ರೈನ್ ವಾಷಿಂಗ್ ಬದಲು ಬ್ರ್ಯಾಂಡ್ ವಾಷಿಂಗ್ ಎನ್ನುತ್ತಾರೆ. ಸ್ನೇಹಿತರೊಬ್ಬರು ಮಕ್ಕಳ ಹಾಲಿನ ಪುಡಿ ಮಾಡುವ ಕಂಪೆನಿಯಲ್ಲಿ ವಿಜ್ಞಾನಿಯಾಗಿದ್ದರು. ಅವರಿಗೆ ಮಕ್ಕಳ ಹಾಲಿನ ಪುಡಿಯಲ್ಲಿ ಸಕ್ಕರೆಯನ್ನು (ಸುಕ್ರೋಸ್) ಏಕೆ ಬಳಸುವಿರಿ, ತಾಯಿಯ ಹಾಲಿನಲ್ಲಿ ಇದು ಇಲ್ಲವಲ್ಲ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಇದು: ನಮ್ಮ ಹಾಲಿನ ಪುಡಿಯನ್ನು ಒಮ್ಮೆ ಹಸುಗೂಸುಗಳು ಕುಡಿದ ಮೇಲೆ ತಾಯಿಯ ಹಾಲನ್ನ ಬಯಸುವುದಿಲ್ಲ ಎಂದು.

ಸಕ್ಕರೆಯನ್ನು ಇಂದು ನೂತನ ತಂಬಾಕು ಎಂದೇ ಆರೋಗ್ಯ ವ್ಯವಸ್ಥೆಯಲ್ಲಿ ಪರಿಗಣಿಸಲಾಗುತ್ತಿದೆ. ರಾಬರ್ಟ್ ಲಸ್ಟಿಕ್ ಸುಮಾರು 10 ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಕ್ಕರೆ ಎಂಬ ಕಹಿ ಸತ್ಯ (sugar, the bitter truth) ಎಂಬ ಭಾಷಣದಲ್ಲಿ ಸಕ್ಕರೆ ತಂದಿರುವ ಅನಾರೋಗ್ಯ ಅವಾಂತರವನ್ನು ವಿಶ್ಲೇಷಿಸಿದ್ದರು. ಇದನ್ನು ಸುಮಾರು 1 ಕೋಟಿಗೂ ಹೆಚ್ಚು ಜನ ಗಮನಿಸಿದ್ದಾರೆ. ಒಂದು ವೈಜ್ಞಾನಿಕ ಪರೀಕ್ಷೆಯಲ್ಲಿ 2 ಗುಂಪಿನ ಇಲಿಗಳನ್ನು ಬಳಸಿ ಒಂದು ಇಲಿಗಳ ಗುಂಪಿಗೆ ಹಣ್ಣು ತರಕಾರಿಗಳನ್ನ ಕೊಟ್ಟು, ಇನ್ನೊಂದು ಗುಂಪಿನ ಇಲಿಗಳಿಗೆ ಸಕ್ಕರೆ ಕೊಟ್ಟು ಪಳಗಿಸಿ, ಸ್ವಲ್ಪ ಕಾಲದ ನಂತರ ಈ ಎರಡೂ ಗುಂಪಿನ ಇಲಿಗಳ ಮೇಲೆ ಮೈ ಸುಡುವ ಲೇಸರ್ ಬೆಳಕನ್ನು ಹಾಯಿಸಿದಾಗ, ಹಣ್ಣು, ತರಕಾರಿ ತಿನ್ನುವ ಇಲಿಗಳು ಜೀವಭಯದಿಂದ, ಜೀವವಿದ್ರೆ ಮುಂದೆ ತಿನ್ನಬಹುದೆಂದು ಚಂಗನೆ ಹಾರಿ ಓಡಿಹೋದವು. ಆದರೆ ಸಕ್ಕರೆಗೆ ಪಳಗಿದ್ದ ಇಲಿಯ ಗುಂಪು ಮೈ ಸುಟ್ಟರೂ ಸಕ್ಕರೆಯನ್ನು ತಿನ್ನುತ್ತಲೇ ಇದ್ದವು. ಈ ಪ್ರಯೋಗದಿಂದ ತಿಳಿದುಬಂದದ್ದೇನೆಂದರೆ ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು. ಇದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದು ಹೇಳಿರುವುದಲ್ಲದೆ ಇನ್ನೂ ಉತ್ತಮವಾದ ಮತ್ತು ನಿಜವಾದ ಆರೋಗ್ಯಕ್ಕಾಗಿ ಅದನ್ನು ಶೇ.5ಕ್ಕಿಂತ ಕಮ್ಮಿ ಮಾಡಿಕೊಂಡರೆ ಒಳಿತೆಂದು ಸ್ಪಷ್ಟವಾಗಿ ಹೇಳಿದೆ. ಶೇ.5ರಷ್ಟು ಶಕ್ತಿಯನ್ನು ಸಕ್ಕರೆಯಿಂದಲೇ ಪಡೆಯಲೇಬೇಕೆಂದೇನಲ್ಲ, ಬಳಸಲೇಬೇಕಾದರೂ ಅಷ್ಟರೊಳಗೆ ನಿಯಂತ್ರಿಸಿ ಎನ್ನುವುದಾಗಿದೆ. ಇದರ ಅರ್ಥ ದಿನಕ್ಕೆ 25 ಗ್ರಾಂಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ.

ಈ 25 ಗ್ರಾಂ ಸಕ್ಕರೆ ಒಂದು ದಿನಕ್ಕೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರವಾಗಿ ಭಾರತದ 138 ಕೋಟಿ ಜನರಿಗೆ 12 ಮಿಲಿಯನ್ ಟನ್ ಸಕ್ಕರೆ ಬೇಕಾಗುತ್ತದೆ. ಅಥವಾ ಶೇ.10 ರಷ್ಟು ಗರಿಷ್ಠ ಸಕ್ಕರೆಯನ್ನು ಲೆಕ್ಕ ಹಾಕಿದರೂ 24 ಮಿಲಿಯನ್ ಟನ್ ಸಾಕು. ಹನ್ನೆರಡಲ್ಲ 24 ಟನ್ನೂ ಅಲ್ಲ, ನಮ್ಮಲ್ಲಿ ಸುಮಾರು 35 ಮಿಲಿಯನ್ ಟನ್ ಸಕ್ಕರೆಯನ್ನು ಪ್ರತಿವರ್ಷ ಉತ್ಪಾದಿಸುತ್ತೇವೆ. ‘ಬೇಕಾಗಿರುವ’ ಹನ್ನೆರಡು ಮಿಲಿಯನ್ ಟನ್‍ಗಿಂತ ಮೂರು ಪಟ್ಟು ಸಕ್ಕರೆಯ ಉತ್ಪಾದನೆಯಾಗುತ್ತಿದೆ. ಜಗತ್ತಿನ ಮಧುಮೇಹ ರಾಜಧಾನಿಯೆಂದು ಭಾರತವನ್ನು ಕರೆಯುತ್ತಾರೆ. ವಯಸ್ಕರಿಗೆ ಸುಮಾರು ಶೇ.14 ರಷ್ಟು ಜನರಲ್ಲಿ ಮಧುಮೇಹ ರೋಗವಿದೆ. ಸುಮಾರು 40 ವರ್ಷಕ್ಕೆ ಮಧುಮೇಹ ಬಂದರೆ ಸುಮಾರು 10 ಲಕ್ಷ ರೂಪಾಯಿ ಆರೋಗ್ಯಕ್ಕೆ ಖರ್ಚು ಮಾಡಬೇಕಾಗುತ್ತದೆ. ಈ 35 ಮಿಲಿಯನ್ ಟನ್ ಸಕ್ಕರೆಗಾಗಿ 350 ಮಿಲಿಯನ್ ಟನ್ ಕಬ್ಬನ್ನು ಬೆಳೆಯಲು ಸುಮಾರು 5 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಬಳಸಲಾಗುತ್ತಿದೆ. ಮಹಾರಾಷ್ಟ್ರದಂತಹ ರಾಜ್ಯದಲ್ಲಿರುವ ಸುಮಾರು 1800 ಲಕ್ಷ ಕೋಟಿಯಷ್ಟು ಜನರ ತೆರಿಗೆ ಹಣದಿಂದ ಖರ್ಚು ಮಾಡಿ ಕಟ್ಟಿರುವ ಅಣೆಕಟ್ಟಿನಿಂದ ಶೇ.80ರಷ್ಟು ನೀರು ಕೇವಲ ಕಬ್ಬಿನ ಗದ್ದೆಗೆ ಹರಿಯುತ್ತದೆ. Sugar cane is a water guzzler, diabetes inducer. ಕಬ್ಬಿನಿಂದ ಬರುವ ಸಕ್ಕರೆಯಾಗಲಿ ಅಥವಾ ಸಾರಾಯಿಯಾಗಲಿ ಪರಿಸರಕ್ಕೆ ಮತ್ತು ಮನುಕುಲಕ್ಕೆ ಎಲ್ಲಾ ರೀತಿಯಿಂದಲೂ ಮಾರಕವೇ ಆಗಿದೆ.

ಮನುಷ್ಯನ ದೇಹದಲ್ಲಿ ಸುಮಾರು 5 ಲೀಟರ್ ರಕ್ತವಿದ್ದು, ಅದಕ್ಕೆ ಕೇವಲ 5 ಗ್ರಾಂ ಸಕ್ಕರೆಯನ್ನು ಮಾತ್ರ ಶೇಖರಿಸಲು ಸಾಮರ್ಥ್ಯವಿರುವುದು. ನಾವು ಸುಲಭವಾಗಿ ಬಳಸುವ ಸಕ್ಕರೆ ರಕ್ತಕ್ಕೆ ಶೀಘ್ರವಾಗಿ ಪ್ರವಾಹವಾಗಿ ದೇಹದ ಶೇಖರಣಾ ಸಾಮರ್ಥ್ಯವನ್ನು ಮೀರಿದಾಗ ಇನ್ಸುಲಿನ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗಿ ಈ ಸಕ್ಕರೆಯ ಪ್ರವಾಹವನ್ನು ಕೊಬ್ಬಾಗಿ ನಿರಂತರವಾಗಿ ಪರಿವರ್ತಿಸಬೇಕಾಗುತ್ತದೆ. ಹೀಗೆ ಸತತವಾಗಿ ದುಡಿದ ಇನ್ಸುಲಿನ್ ಉತ್ಪಾದಿಸುವ ಪ್ಯಾಂಕ್ರಿಯಾಸ್ ಅಥವಾ ಇನ್ಸುಲಿನ್ ಹೇಳಿದ ಮಾತಿನಂತೆ ಸಕ್ಕರೆಯನ್ನು ಬೇರೆಡೆಗೆ ಶೇಖರಿಸುವ ಜೀವಕೋಶಗಳು ಸೋತು ದೇಹದ ಸಂವಾಹಕಗಳು ಹಳಿ ತಪ್ಪಿದಾಗ ಉಂಟಾಗುವುದೇ ಮಧುಮೇಹ ರೋಗ. ಮನುಷ್ಯ ಅನುವಂಶಿಕವಾಗಿ ಸಕ್ಕರೆಯನ್ನು ರಕ್ತದಲ್ಲಿ ಹಿಡಿದಿಡಲು ಸಾಮರ್ಥ್ಯವಿಲ್ಲದಿರುವ ವಿದ್ಯಮಾನ, ಮಂಗನಿಂದ ಮಾನವನಾದ ವಿಕಾಸವಾದ ಅಡಗಿದೆ ಎನ್ನುತ್ತಾರೆ. ಹಣ್ಣು ಹಂಪಲನ್ನು ತಿನ್ನುವ ನಮ್ಮ “ಪೂರ್ವಾಶ್ರಮದಲ್ಲಿ” ಸಕ್ಕರೆಯನ್ನು ಹಿಡಿದಿಡುವ ಪ್ರಮೇಯವೇ ಒದಗಿರಲಿಲ್ಲ. ಅವಶ್ಯಕತೆ ಇಲ್ಲದ್ದು ವಿಕಾಸವಾಗುವ ಅವಕಾಶವಿರಲಿಲ್ಲ. ಹಾಗಾಗಿ ಇಂದಿಗೆ ನಾವು ಹೆಚ್ಚು ಸಕ್ಕರೆ ಬಳಸುವುದು ನಮ್ಮ ದೈಹಿಕ ಚಟುವಟಿಕೆಯ ಕಾರ್ಯವೈಖರಿಯ ಮತ್ತು ಬದುಕಿನ ಜೀವನಶೈಲಿಗೆ ವಿರುದ್ಧವಾದದ್ದು.

ಹಣ್ಣಿನಿಂದ ಸಕ್ಕರೆ ಬರುವಾಗ ಇಂತಹ ಸಮಸ್ಯೆ ಇರದಿರಲು ಕಾರಣ ಹಣ್ಣಿನಲ್ಲಿರುವ ಅಂಶ ಸುಮಾರು ಶೇ.10 ರಷ್ಟು ಸಕ್ಕರೆ ಜೊತೆ ಸುಮಾರು 85 ರಿಂದ 90 ರಷ್ಟು ನೀರೆ ಆಗಿರುತ್ತದೆ. ಹೀಗಾಗಿ ಹೊಟ್ಟೆ ತುಂಬಿ ಹೆಚ್ಚು ತಿನ್ನಲಾಗದು. ತಿನ್ನುವ ಆಹಾರವೇ ನಿಮ್ಮನ್ನು ನಿಯಂತ್ರಿಸುತ್ತದೆ. ಇದೇ ಕಬ್ಬಿನಿಂದ ಜಗಿದು ರಸದಲ್ಲಿರುವ ಸಕ್ಕರೆಯನ್ನು ತೆಗೆದುಕೊಳ್ಳಬೇಕಾದರೆ 10 ಗ್ರಾಂ ಸಕ್ಕರೆಗೆ 100 ಗ್ರಾಂ ಕಬ್ಬನ್ನು ಜಗಿದು ರಸ ಹೀರಲು ಕಾಲು ಗಂಟೆ ಬೇಕಾಗಬಹುದು – ಹಲ್ಲು ಗಟ್ಟಿ ಇದ್ದರೆ. ಅದೇ ನಾವು 2 ಚಮಚ ಸಕ್ಕರೆ ಹಾಕಿಕೊಳ್ಳಲು ಯಾವುದೇ ಆಲೋಚನೆ ಮಾಡುವುದಿಲ್ಲ. ಯಾವುದೇ ಆಹಾರ ಪದಾರ್ಥ ಶುದ್ಧವಾದಾಗ ಸತ್ವ ಹೀನವಾಗುತ್ತದೆ. Pure is junk. ಅದು ಆಹಾರಕ್ಕೂ ಮತ್ತು ಶುದ್ಧ ಮನುಷ್ಯರಿಗೂ ಅನ್ವಯ.

ಈಗ ಸಕ್ಕರೆಯ ಪರವಾಗಿ ವಕಾಲತ್ತು ವಹಿಸಲು ಹುಟ್ಟುಹಾಕಲಾಗಿರುವ ಮೀಟಾ.ಆರ್ಗ್ ಈ ಎಲ್ಲಾ ನಗ್ನ ಸತ್ಯಗಳ ವಿರುದ್ಧ ಹಿಂದೆ ಹೇಗೆ ತಂಬಾಕು ಲಾಬಿ ಸಿಗರೇಟಿನ ಪರ ಅಪಾರವಾದ ಪ್ರಚಾರ ಮಾಡಿತ್ತೋ ಹಾಗೆಯೇ ಮುಂದುವರಿಯುತ್ತಿದೆ. ತಂಬಾಕು ಲಾಬಿ ಸಿಗರೇಟಿಗೂ ಕ್ಯಾನ್ಸರ್‌ಗೂ ಸಂಬಂಧವೇ ಇಲ್ಲವೆಂದು ಸುಮಾರು 100 ವರ್ಷಗಳ ಕಾಲ “ವೈಜ್ಞಾನಿಕ” ಸಂಶೋಧನೆಗಳನ್ನು ಮಾಡಿ ಪ್ರಕಟಿಸಿತು. ಅನೇಕ ಲಾಬಿಗಳನ್ನು ಸೃಷ್ಟಿಮಾಡಿತ್ತು. ತಂಬಾಕಿನ ಪರವಾಗಿ ಅನೇಕ ಪುಸ್ತಕಗಳನ್ನು ಬರೆಯಲಾಯಿತು. ಡನ್‍ಹಿಲ್ ಎಂಬುವ ವ್ಯಕ್ತಿ ಜಂಟಲ್ ಆರ್ಟ್ ಆಫ್ ಸ್ಮೋಕಿಂಗ್ ಎನ್ನುವ ಪುಸ್ತಕ ಬರೆದ. ಕೊಕಕೋಲಾ ಕಂಪೆನಿಯವರು ಸಕ್ಕರೆ ಪರ ಇದೇ ರೀತಿಯ ವಕಾಲತ್ತನ್ನು ವಹಿಸುತ್ತಾರೆ. ಅನೇಕ ಬಾರಿ ಇಂತಹ ಲಾಬಿಗಳಿಗೆ ಕೊಕಕೋಲಾ ಮತ್ತು ಪೆಪ್ಸಿಯಂತಹ ಕಂಪೆನಿಗಳಿಂದ ಹಣ ಹೂಡಿಕೆಯಾಗುತ್ತದೆ. ಕೋಲಾ ಕಂಪೆನಿಗಳು ಹೇಳುವುದು ನಮ್ಮ ಕೋಲಾ ಕುಡಿದು ಸುಮಾರು 2 ಕಿ.ಮೀ ಓಡಿದರೆ ಯಾವ ಬೊಜ್ಜು ಬರುವುದಿಲ್ಲ ಎಂದು. ಸೋಮಾರಿಗಳು ಕೊಕಕೋಲಾ ಕುಡಿದು ಬೇಜವಾಬ್ದಾರಿಯಿಂದ ಕೊಕಕೋಲಾದಿಂದ ಬೊಜ್ಜು ಬರುತ್ತದೆ ಎಂದು ಹೇಳುತ್ತಾರೆ ಎನ್ನುವುದು ಅವರ ವಾದ. ಹೊರನೋಟಕ್ಕೆ ಸರಿ ಕಂಡರೂ ಅವರ ದೂರ್ತ ಆಲೋಚನೆ ಮತ್ತು ಅವರ ದುರುದ್ದೇಶ ಸ್ಪಷ್ಟವಾಗಿ ಗೋಚರವಾಗುತ್ತದೆ.

ಸಕ್ಕರೆ ಮತ್ತು ಕಬ್ಬನ್ನು ಮುಕ್ಕಾಲು ಭಾಗ ಕಮ್ಮಿ ಮಾಡಿ ಭಾರತೀಯರ ಆರೋಗ್ಯ, ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ, ಪರಿಸರ ಪಾಲನೆಗಾಗಿ ಎಲ್ಲರೂ ಒಟ್ಟಾಗಿ ಚರ್ಚೆ ನಡೆಸಿ ಆರೋಗ್ಯಕರ ಕ್ರಮಗಳಿಗೆ ಮುಂದಾಗಬೇಕಿರುವ ತುರ್ತು ನಮ್ಮ ಮುಂದಿದೆ.


ಇದನ್ನೂ ಓದಿ: ಕನ್ನಡಕ್ಕೆ ಕನ್ನಡದ್ದೆ ಊಟ ಉಂಟಾ? ಡಾ. ಕೆ.ಸಿ ರಘು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...