ಅಲೋಪತಿ ಮತ್ತು ಅಲೋಪತಿ ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ (IMA) ರಾಮದೇವ್ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿ, 15 ದಿನಗಳಲ್ಲಿ ರಾಮದೇವ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ. ವಿಫಲವಾದಾಗ ಯೋಗ ಗುರುಗಳಿಂದ 1,000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದೆ.
ಐಎಂಎ (ಉತ್ತರಾಖಂಡ) ಕಾರ್ಯದರ್ಶಿ ಅಜಯ್ ಖನ್ನಾ ಅವರ ಪರವಾಗಿ ನೀಡಲಾದ ಆರು ಪುಟಗಳ ನೋಟೀಸ್‌ನಲ್ಲಿ, ’ರಾಮದೇವ್ ಹೇಳಿಕೆಗಳಿಂದ ಅಲೋಪತಿ ವೈದ್ಯಕೀಯ ಕ್ಷೇತ್ರದ ಗೌರವ ಮತ್ತು ಘನತೆಗೆ ಹಾನಿಯಾಗಿದೆ. ಜೊತೆಗೆ ಈ ಕ್ಷೇತ್ರದ ಸುಮಾರು 2 ಸಾವಿರ ವೈದ್ಯರಿಗೆ ಅಪಮಾನವಾಗಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಜನರಿಗೆ ಒಮ್ಮೆ ಕೋವ್ಯಾಕ್ಸಿನ್, ಒಮ್ಮೆ ಕೋವಿಶೀಲ್ಡ್ ಲಸಿಕೆ ನೀಡಿದ ಅಧಿಕಾರಿಗಳು!
ಭಾರತೀಯ ದಂಡ ಸಂಹಿತೆಯ 499 ರ ಸೆಕ್ಷನ್ ಅಡಿಯಲ್ಲಿ ರಾಮದೇವ್ ಟೀಕೆಗಳನ್ನು “ಕ್ರಿಮಿನಲ್ ಆಕ್ಟ್” ಎಂದು ಹೇಳುವ ಮೂಲಕ, ನೋಟಿಸ್ ತಲುಪಿದ 15 ದಿನಗಳೊಳಗೆ ಅವರರು ಲಿಖಿತ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ, ಇಲ್ಲದಿದ್ದರೆ 1,000 ಕೋಟಿ ರೂ.ಗಳ ಪರಿಹಾರವನ್ನು ನೀಡಬೇಕು. ಐಎಂಎ ಪ್ರತಿ ಸದಸ್ಯನಿಗೆ 50 ಲಕ್ಷ ರೂ.ದಂತೆ ಒಂದು ಸಾವಿರ ಕೋಟಿ ರೂ. ಮಾನನಷ್ಟ ಪರಿಹಾರಕ್ಕೆ ಆಗ್ರಹಿಸಲಾಗಿದೆ ಎಂದಿದ್ದಾರೆ.
ಕೋವಿಡ್‌ಗೆ ಪರಿಣಾಮಕಾರಿ ಔಷಧಿಯಾಗಿ ರಾಮ್‌ದೇವ್ ಸಂಸ್ಥೆಯ ಉತ್ಪನ್ನವಾದ “ಕೊರೊನಿಲ್ ಕಿಟ್” ಅನ್ನು ಅನುಮೋದಿಸುವ ಎಲ್ಲಾ “ದಾರಿತಪ್ಪಿಸುವ” ಜಾಹೀರಾತನ್ನು ಹಿಂಪಡೆಯಲು ನೋಟಿಸ್ ಆಗ್ರಹಿಸಿದೆ. ಇದರಲ್ಲಿ ವಿಫಲವಾದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಲಾಗಿದೆ.
ಬಾಬಾ ರಾಮದೇವ್ ಅಲೋಪತಿ ಕಾರಣಕ್ಕೆ ಕೋವಿಡ್ ಸೋಂಕಿನಿಂದ ಲಕ್ಷಾಂತರ ಜನ ಸತ್ತರು, ಅಲೊಪಥಿಕ್ ವಿಧಾನ ಅಯೋಗ್ಯ ಎಂಬಂತೆ ಮಾತಾಡಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ತಮ್ಮ ಹೇಳಿಕೆ ವಾಪಸ್ ಪಡೆದಿದ್ದಾರೆ.
ಇದನ್ನೂ ಓದಿ: ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯನ್ನು ಅಸ್ಸೆಂಬ್ಲಿಗೆ ಸೇರಿಸುವುದೇ?; ಶಾಸಕ ಅಖಿಲ್ ಗೊಗಯ್ ಬಗ್ಗೆ ಅಸ್ಸಾಂ ಸಿಎಂ


