ಅನ್ಯಧರ್ಮೀಯ ಜೋಡಿಗಳನ್ನು ಬೆದರಿಸಿ, ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪಾರ್ಕ್ನ ಹೊರಗೆ ಬೈಕ್ ಮೇಲೆ ಕುಳಿತಿದ್ದ ಜೋಡಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಘಟನೆ, ಜೋಡಿ ಉದ್ಯಾನವನದ ಹೊರಗೆ ಸ್ಕೂಟರ್‌ನಲ್ಲಿ ಪರಸ್ಪರ ಎದುರಾಗಿ ಕುಳಿತಿದ್ದಾಗ ನಡೆದಿದೆ.
ಕಿತ್ತಳೆ ಬಣ್ಣದ ಟೀ ಶರ್ಟ್ ಧರಿಸಿದ್ದ ವ್ಯಕ್ತಿ ಮತ್ತು ಬುರ್ಖಾ ಧರಿಸಿದ್ದ ಯುವತಿಯು ಕೆಲವು ಯುವಕರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅವರಲ್ಲಿ ಒರ್ವ ಯುವತಿಯ ವೀಡಿಯೊವನ್ನು ಸೆರೆಹಿಡಿಯುತ್ತಿರುವುದನ್ನು ನೋಡಲಾಗಿದೆ. ಆರೋಪಿಗಳು ಮೊದಲು ಯುವತಿಯ ಕುಟುಂಬಕ್ಕೆ ಆಕೆ ಇರುವ ಸ್ಥಳದ ಬಗ್ಗೆ ತಿಳಿದಿರುವ ಬಗ್ಗೆ ಪ್ರಶ್ನಿಸಿದರು. ನಂತರ ಅವರು ಆ ವ್ಯಕ್ತಿಗೆ ಬೇರೆ ಧರ್ಮದ ಮಹಿಳೆಯೊಂದಿಗೆ ಏಕೆ ಸುತ್ತಾಡುತ್ತಿದ್ದೀರಿ ಎಂದು ಕೇಳಿದರು. ನಂತರ, ಜೋಡಿ ಮೇಲೆ ದೌರ್ಜನ್ಯ ಎಸಗಿದರು.
ದೃಶ್ಯಾವಳಿಯಲ್ಲಿ, ಪುರುಷರ ಗುಂಪು ಯುವತಿಯನ್ನು ಬೆದರಿಸಿ, ಬುರ್ಖಾ ಧರಿಸಿಕೊಂಡು ಪುರುಷನೊಂದಿಗೆ ಕುಳಿತಿರುವುದಕ್ಕೆ ನಿಮಗೆ ನಾಚಿಕೆಯಾಗುತ್ತಿಲ್ಲವೇ ಎಂದು ಕೇಳಿದರು.
“ಜೋಡಿ ಸ್ಕೂಟರ್‌ನಲ್ಲಿ ಕುಳಿತಿದ್ದಾಗ ಐದು ಜನರು ಅವರನ್ನು ಪ್ರಶ್ನಿಸಿದರು. ಹುಡುಗಿ ಬುರ್ಖಾ ಧರಿಸಿದ್ದಳು. ಯುವತಿಯಿಂದ ನಮಗೆ ದೂರು ಬಂದಿದ್ದು, ಅದರ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ…. ನಾವು ತನಿಖೆ ಮುಂದುವರಿಸಿದ್ದೇವೆ” ಎಂದು ಉಪ ಪೊಲೀಸ್ ಆಯುಕ್ತ ಗಿರೀಶ್ ಹೇಳಿದರು.
ಘಟನೆ ಹಿಂಸಾತ್ಮಕವಾಗಿಲ್ಲ ಎಂದು ಪೊಲೀಸರು ಹೇಳಿದ್ದರೂ, ಮತ್ತೊಂದು ವೀಡಿಯೊದಲ್ಲಿ ಆರೋಪಿಗಳು ಆ ವ್ಯಕ್ತಿಯನ್ನು ಸುತ್ತುವರೆದು ಹೊಡೆಯುವುದನ್ನು ದಾಖಲಾಗಿದೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಓರ್ವ ಬಾಲಾಪರಾಧಿಯೂ ಸೇರಿದ್ದಾನೆ.
“ಅವರು ಮುಖ್ಯವಾಗಿ ಯುವತಿಯನ್ನು ಅಲ್ಲಿ ಏಕೆ ಕುಳಿತಿದ್ದಾಳೆ ಎಂದು ಕೇಳಿದರು. ತನಿಖೆಯ ಸಮಯದಲ್ಲಿ ನಮಗೆ ಹೆಚ್ಚಿನ ಮಾಹಿತಿ ಸಿಗುತ್ತದೆ” ಎಂದು ಡಿಸಿಪಿ ಹೇಳಿದರು.
“ನಾವು ಯುವತಿಯಿಂದ ದೂರು ಸ್ವೀಕರಿಸಿದ್ದೇವೆ, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಒಬ್ಬ ಬಾಲಾಪರಾಧಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದೇವೆ” ಎಂದು ಗಿರೀಶ್ ಸುದ್ದಿಗಾರರಿಗೆ ತಿಳಿಸಿದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಯಾವುದೇ ನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ ಎಂದು ಹೇಳಿದರು. “ಇದು ಬಿಹಾರ ಅಥವಾ ಉತ್ತರ ಪ್ರದೇಶ ಅಥವಾ ಮಧ್ಯಪ್ರದೇಶ ಅಲ್ಲ; ಕರ್ನಾಟಕ ಪ್ರಗತಿಪರ ರಾಜ್ಯ” ಎಂದು ಅವರು ಹೇಳಿದರು.
ಹರಿಯಾಣ| ದಲಿತ ವರನ ಮದುವೆ ಮೆರವಣಿಗೆಗೆ ಅಡ್ಡಿ; 8 ಜನರ ವಿರುದ್ಧ ಪ್ರಕರಣ ದಾಖಲು
Please all Gowrie fans Mangalore. …Wante to taxi hire mangalore please contact me Aastha Tours and Taxi service mangalore contact no 805797684