ವಾಟ್ಸಾಪ್ ಸ್ಟೇಟಸ್‌ನಲ್ಲಿ ಪ್ರಾಣಿ ಬಲಿಯ ಚಿತ್ರವನ್ನು ಹಂಚಿಕೊಂಡ ಆರೋಪದಲ್ಲಿ ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಒಡೆತನದ ಜವಳಿ ಅಂಗಡಿಯನ್ನು ಹಿಂದುತ್ವವಾದಿಗಳ ಗುಂಪೊಂದು ಲೂಟಿ ಮಾಡಿ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ದಾಳಿಗೊಳಗಾದ ವ್ಯಕ್ತಿಯನ್ನು ಜಾವೇದ್ ಎಂದು ಗುರುತಿಸಲಾಗಿದ್ದು, ಮೂಲತಃ ಉತ್ತರ ಪ್ರದೇಶದ ಸಹರಾನ್‌ಪುರದವರು. ಜಾವೇದ್ ಹಲವಾರು ವರ್ಷಗಳಿಂದ ನಹಾನ್‌ನಲ್ಲಿ ತನ್ನ ವ್ಯಾಪಾರವನ್ನು ನಡೆಸುತ್ತಿದ್ದರು. ಪೊಲೀಸರು ನೋಡುತ್ತಿರುವಾಗಲೇ ಅಂಗಡಿ ಧ್ವಂಸ ನಡೆದಿರುವುದನ್ನು ವಿಡಿಯೋಗಳು ತೋರಿಸುತ್ತವೆ.
ಅಂಗಡಿಯನ್ನು ಧ್ವಂಸಗೊಳಿಸಿದ ನಂತರ ಜನಸಂದಣಿಯು ಜಿಲ್ಲಾಧಿಕಾರಿ ಕಚೇರಿಯತ್ತ ಸಾಗಿದ್ದು, ‘ಗೋಲಿ ಮಾರೋ ಸಾಲೋ ಕೋ’ ಮತ್ತು ‘ಜೈ ಶ್ರೀ ರಾಮ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ವರ್ತಕರ ಸಂಘ ಸೇರಿದಂತೆ ಹಿಂದುತ್ವ ಗುಂಪುಗಳು ಪಟ್ಟಣದಲ್ಲಿ ಗಲಭೆ ಉಂಟುಮಾಡಿದ ಒಂದು ದಿನದ ನಂತರ ಈ ದಾಳಿ ಸಂಭವಿಸಿದೆ. ಪ್ರಾಣಿ ಹತ್ಯೆಯ ಫೋಟೋಗಳು ತಮ್ಮ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಹಿಂದುತ್ವವಾದಿಗಳ ಗುಂಪು ಪೊಲೀಸರಿಗೆ ದೂರು ನೀಡಿದ್ದು, ಅಂಗಡಿಯ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ.
After looting and vandalizing the Muslim youth's shop, the Hindu community gathered outside the Nahan DC office, shouting slogans like "Goli Maaro saalo ko" and "Jai Shri Ram".#HimachalPradesh pic.twitter.com/rtGMb8sBGT
— Meer Faisal (@meerfaisal001) June 19, 2024
ಇದನ್ನು ಓದಿ: ಭಾರತದಿಂದ ಯುಎಇಗೆ ಈ ಬಾರಿ 4,300 ಮಿಲಿಯನೇರ್‌ಗಳ ವಲಸೆ ಸಾಧ್ಯತೆ: ವರದಿ


