Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮೋದಿ ಆಡಳಿತದಲ್ಲಿ ಜನರ ಮೇಲಿನ ಹಲ್ಲೆ ಅಧಿಕವಾಗಿದೆ: ಎಚ್.ಎಸ್.ದೊರೆಸ್ವಾಮಿ

ಮೋದಿ ಆಡಳಿತದಲ್ಲಿ ಜನರ ಮೇಲಿನ ಹಲ್ಲೆ ಅಧಿಕವಾಗಿದೆ: ಎಚ್.ಎಸ್.ದೊರೆಸ್ವಾಮಿ

- Advertisement -
- Advertisement -

ಆಡಳಿತ ನಡೆಸುವವರು ಸರ್ವಾಧಿಕಾರಿಗಳಂತೆ ದರ್ಪದಿಂದ ನಡೆಸಿಕೊಳ್ಳುವುದನ್ನು ಭಾರತೀಯ ಜನತೆ ಮತ್ತು ಭಾರತದ ವಿಚಾರವಂತ ಗಣ್ಯರು ನಿಸ್ಸಹಾಯಕರಂತೆ, ಮೂಕಪ್ರೇಕ್ಷಕರಂತೆ ನೋಡಿ, ಕೈಕಟ್ಟಿ ಕೂರುತ್ತಾರಾ…?

ಪ್ರದರ್ಶನ ಪಿತಾಮಹ ಮೋದಿಯವರು ಗಳಿಗೆಗೊಂದು ನಾಟಕ ಮಾಡುತ್ತಾರೆ, ಪ್ರಹಸನ ಮಾಡುತ್ತಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ತಬ್ಬಿಕೊಂಡಿದ್ದೋ ತಬ್ಬಿಕೊಂಡಿದ್ದು. ಇಷ್ಟು cheap ಆಗಿ ಬಿಟ್ಟರೇ ಈ ಇಬ್ಬರೂ?

ಬ್ರಿಟನ್ನಿನ ಮಹಾರಾಣಿ ಯಾರದಾದರೂ ಕೈ ಕುಲುಕಬೇಕಾದರೆ ಕೈಗೆ ಕೈಚೀಲ ಹಾಕಿಕೊಳ್ಳುತ್ತಾರೆ. ಕೈ ಕುಲುಕುವವನಿಗೆ ಯಾವ ಚರ್ಮರೋಗ ಇದೆಯೋ ಎಂದು ಹೆದರಿಕೆ. ಮೋದಿ, ಟ್ರಂಪ್‍ಗಳಿಗೆ ಅದೆಷ್ಟು ಕಾಯಿಲೆ ಇದೆಯೋ? ಆದರೂ ಒಬ್ಬರನ್ನೊಬ್ಬರನ್ನು ತಬ್ಬಿಕೊಳ್ಳುವುದರಲ್ಲಿ ಅವರ ಅಟ್ಟಹಾಸವೆಷ್ಟು? ಸಭ್ಯತೆ ಮೀರಿ ನಡೆದುಕೊಳ್ಳುವುದು ಅವರಿಗೆ ಭೂಷಣವಲ್ಲ. ಟ್ರಂಪ್, ಮೋದಿಯವರನ್ನು ಭಾರತದ ರಾಷ್ಟ್ರಪಿತ ಮಾಡಿದ. ಗಾಂಧೀಜಿ ಸೋಗು ಹಾಕಿದ್ದು ರಾಷ್ಟ್ರಪಿತ, ಮೋದಿಯೇ ಅಸಲಿ ರಾಷ್ಟ್ರಪಿತ. ಗಾಂಧೀಜಿ ಹತ್ಯೆಯಾದ 72 ವರ್ಷಗಳ ಮೇಲೆ ಅಮೆರಿಕದ ಅಧ್ಯಕ್ಷರು ಮೋದಿಯವರನ್ನೇ ನಿಜವಾದ ರಾಷ್ಟ್ರಪಿತ ಮಾಡಿದ್ದಾರೆ. ನಕಲಿ ರಾಷ್ಟ್ರಪಿತ ಗಾಂಧೀಜಿಯನ್ನು ಬಯಲಿಗೆಳೆದು ಅಸಲಿ ಮೋದಿಯನ್ನು ರಾಷ್ಟ್ರಪಿತನ ಸ್ಥಾನದಲ್ಲಿ ಕೂಡಿಸಿದ ಟ್ರಂಪ್‍ಗೆ ಆರ್‍ಎಸ್‍ಎಸ್ ಕೃತಜ್ಞತೆಗಳನ್ನು ಅರ್ಪಿಸಬೇಕು. ಮುಂದೆ ಒಂದು ದಿನ ನಿಜವಾದ ರಾಮ ಮೋದಿಯೇ ಹೊರತು ಅಯೋಧ್ಯೆ ರಾಮನಲ್ಲ ಎನ್ನುವ ಕಾಲ ಬರಲೂಬಹುದು.

ಸೆಕ್ಷನ್ 370 ನ್ನು ಹಿಂಪಡೆದು ಕಾಶ್ಮೀರವನ್ನು ಒಡೆದು, ಪ್ರಜಾಪ್ರಭುತ್ವವನ್ನು ಕೊನೆಗಾಣಿಸಿ ಕಾಶ್ಮೀರವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳುವ ಮೋದಿ ಸರ್ಕಾರದ ವಿರುದ್ಧ 250 ಭಾರತೀಯ ಗಣ್ಯರು ಮೋದಿಯವರಿಗೆ ಪತ್ರ ಬರೆದಿದ್ದಾರೆ. ಶಿಕ್ಷಣ ತಜ್ಞರು, ಪತ್ರಕರ್ತರು, ರಾಜಕೀಯ ನಾಯಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಾಶ್ಮೀರದ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕು. ಅಲ್ಲಿ ವಿಧಾನಸಭೆಯ ಚುನಾವಣೆ ನಡೆಸಬೇಕು. 370ನೇ ವಿಧಿಯನ್ನು ರದ್ದುಪಡಿಸುವ ವಿಚಾರದಲ್ಲಿ ಅಲ್ಲಿಯ ಪ್ರಜೆಗಳ ಅಭಿಪ್ರಾಯವನ್ನು ಪಡೆದೇ ಮುಂದುವರೆಯಬೇಕು. ಅಲ್ಲಿಯ ಗಣ್ಯರ ಅಭಿಪ್ರಾಯವನ್ನು ಪಡೆಯದೇ ನಿರ್ಧಾರಕ್ಕೆ ಬಂದಿರುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ. ಕಣಿವೆ ರಾಜ್ಯದಲ್ಲಿನ ನಾಯಕರನ್ನು ಗೃಹಬಂಧನದಲ್ಲಿಟ್ಟು, ಸುದ್ದಿ ಮಾಧ್ಯಮಗಳನ್ನು ಅಡಗಿಸಿಟ್ಟು, ಭಾರತದ ಇತರ ಭಾಗಗಳಿಗೆ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬ ಸುದ್ದಿ ಹರಡದಂತೆ ತಡೆಗಟ್ಟಿರುವುದು ಸರಿಯಲ್ಲ ಎಂದೂ ಈ ಗಣ್ಯರು ಮೋದಿಯವರಿಗೆ ಬರೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ 45 ಜನ ಗಣ್ಯರ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ನ್ಯಾಯಾಲಯಕ್ಕೆ ಹೋಗಿದ್ದನ್ನು ಖಂಡಿಸಿ ಚಲನಚಿತ್ರ ಪ್ರಮುಖರು, ಕಲಾವಿದರು, ಪತ್ರಿಕಾ ಪ್ರತಿನಿಧಿಗಳು ಮೊದಿಯವರಿಗೆ ಪತ್ರ ಬರೆದು ಮೋದಿಯವರ ಆಡಳಿತ ರೀತಿಯನ್ನ ಒಪ್ಪದವರ ಮೇಲೆ ರಾಜದ್ರೋಹ ಆಪಾದನೆ ಹೊರಿಸುವುದು ಎಷ್ಟು ಸರಿ? ಪ್ರಧಾನಮಂತ್ರಿಯನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗೆ ಇಲ್ಲವೇ? ಎಂದು ನೂರಾರು ಗಣ್ಯರು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಆ 49 ಗಣ್ಯರ ಮೇಲೆ ಹಾಕಿದ್ದ ಮೊಕದ್ದಮೆಯನ್ನು ಹಿಂಪಡೆಯಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆಡಳಿತ ನಡೆಸುವವರು ಸರ್ವಾಧಿಕಾರಿಗಳಂತೆ ದರ್ಪದಿಂದ ನಡೆಸಿಕೊಳ್ಳುವುದನ್ನು ಭಾರತೀಯ ಜನತೆ ಮತ್ತು ಭಾರತದ ವಿಚಾರವಂತ ಗಣ್ಯರು ನಿಸ್ಸಹಾಯಕರಂತೆ, ಮೂಕಪ್ರೇಕ್ಷಕರಂತೆ ನೋಡಿ, ಕೈಕಟ್ಟಿ ಕೂಡುವುದಿಲ್ಲ. ಬದಲಿಗೆ ಸರ್ಕಾರದ ಹುಚ್ಚಾಟಗಳನ್ನು ಪ್ರತಿಭಟಿಸುತ್ತಾರೆ. ಹಿಟ್ಲರ್‍ಗಿರಿ ಬೆಳೆಯಲು ಬಿಡುವುದಿಲ್ಲ ಎಂಬುದು ಮೇಲೆ ಹೇಳಿದ ಎರಡು ಪ್ರಕರಣಗಳಿಂದ ಸಾಬೀತಾಗಿದೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ‘Halt the hate’ ಎಂದು ಭಾರತ ಸರ್ಕಾರಕ್ಕೆ ತಿಳಿಸಿದೆ. ದ್ವೇಷಾಪರಾಧ, ಗುಂಪು ಹಲ್ಲೆಯಂತಹ ಕೃತ್ಯಗಳು 2017-18ರಲ್ಲಿ ಕಡಿಮೆ ಇದ್ದದ್ದು 2019ರ ಮೊದಲ ಆರು ತಿಂಗಳಲ್ಲಿ ಅತಿಹೆಚ್ಚು ಘಟನೆಗಳು ನಡೆದಿವೆ.

2015ರಲ್ಲಿ ದ್ವೇಷಾಪರಾಧಗಳು 51 ಇತ್ತು. 2016ರಲ್ಲಿ 240, 2017ರಲ್ಲಿ 212, 2018ರಲ್ಲಿ 210 ಕೃತ್ಯಗಳು ಸಂಭವಿಸಿದ್ದರೆ 2019ರ ಮೊದಲ ಆರು ತಿಂಗಳಲ್ಲೇ 180 ಕೃತ್ಯಗಳು ನಡೆದಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿ ಆಮ್ನೆಸ್ಟಿ ತನ್ನ ಕಳವಳ ವ್ಯಕ್ತಪಡಿಸಿದೆ. ನಡೆದಿರುವ ಒಟ್ಟು 180 ಪ್ರಕರಣಗಳಲ್ಲಿ ಧರ್ಮದ ಹೆಸರಿನಲ್ಲಿ 44 ಕೃತ್ಯಗಳು ನಡೆದಿವೆ. ಈ ಪೈಕಿ 40 ಪ್ರಕರಣಗಳು ಮುಸ್ಲಿಮರ ಮೇಲೆ, 4 ಕೃತ್ಯಗಳು ಕ್ರಿಶ್ಚಿಯನ್ನರ ಮೇಲೆ ನಡೆದಿವೆ. ಮೋದಿ ಇದುವರೆಗೂ ಈ ದುಷ್ಕೃತ್ಯ ನಡೆಯುತ್ತಿದ್ದರೂ ಒಮ್ಮೆಯೂ ಅದರ ಬಗೆಗೆ ಬಾಯಿ ಬಿಟ್ಟಿಲ್ಲ. ಮೋದಿಯ ಈ ದಿವ್ಯ ಮೌನವನ್ನು ದುಷ್ಕೃತ್ಯ ನಡೆಯುತ್ತಿರುವುದಕ್ಕೆ ಮೋದಿಯವರ ಸಮ್ಮತಿ ಇದೆಯೆಂದು ಅರ್ಥೈಸಬೇಕಾದಿತು.

ಇದಲ್ಲದೆ 2000 ದಿಂದ 2018ರ ನಡುವೆ ಭಾರತದಲ್ಲಿ ಕರ್ತವ್ಯನಿರತರಾಗಿದ್ದ 64 ಪತ್ರಕರ್ತರ ಹತ್ಯೆ ಆಗಿದೆ. ಪತ್ರಕರ್ತರ ವಿರುದ್ಧ ವಿವಿಧ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ. 12 ರಾಜ್ಯಗಳಲ್ಲಿ 2000-2018ರ ಮಧ್ಯೆ ತಮ್ಮ ವಿಮರ್ಶಾತ್ಮಕ ಬರವಣಿಗೆಗಾಗಿ 21 ಪತ್ರಕರ್ತರ ಮೇಲೆ ಖಟ್ಲೆ ಹೂಡಲಾಗಿದೆ. 2017ರ ಸೆಪ್ಟಂಬರ್‌ 5 ರಂದು ತಮ್ಮ ಮನೆಗೆ ಪ್ರವೇಶ ಮಾಡುವಾಗಲೇ ‘ಗೌರಿ ಲಂಕೇಶ್’ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್‍ರನ್ನು ಹತ್ಯೆ ಮಾಡಲಾಯಿತು. ಹಾಗೂ 2018ರ ಜೂನ್14 ರಂದು ರೈಸಿಂಗ್ ಕಾಶ್ಮೀರದ ಸಂಪಾದಕರಾದ ಶುಜಾತ್ ಬುಕಾರಿಯವರ ಹತ್ಯೆಯಾಯಿತು. ಹಲ್ಲೆಗೊಳಗಾದ 65 ಪತ್ರಕರ್ತರ ವ್ಯಕ್ತಿ ವಿವರಗಳನ್ನು ‘Silencing Journalists’ ಎಂಬ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಒಟ್ಟಿನಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ವರ್ಗದ ಜನರ ಮೇಲೂ ಹಲ್ಲೆ ಮಾಡುವುದು ಅಧಿಕಗೊಂಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...