Homeಅಂತರಾಷ್ಟ್ರೀಯಸಂಚಾರ ನಿರ್ಬಂಧ ತೆರವಿಗೆ ಚೀನಾ ಜೊತೆ ಭಾರತ ಮಾತುಕತೆ

ಸಂಚಾರ ನಿರ್ಬಂಧ ತೆರವಿಗೆ ಚೀನಾ ಜೊತೆ ಭಾರತ ಮಾತುಕತೆ

- Advertisement -
- Advertisement -

ಭಾರತ ಮತ್ತು ಚೀನಾ ದೇಶಗಳ ನಡುವೆ ಸಂಪರ್ಕ ಕಡಿದು ಸರಿ ಸುಮಾರು ಒಂದೂವರೆ ವರ್ಷಗಳಾಗುತ್ತ ಬಂತು. 2019 ರಲ್ಲಿ ಚೈನಾದ ವುಹಾನ್‌ ನಗರದಲ್ಲಿ ಕೊರೋನಾ ಸಾಂಕ್ರಾಮಿಕ ತೀವ್ರಗೊಂಡಾಗಿನಿಂದ ಭಾರತ ಮತ್ತು ಚೀನಾ ನಡುವೆ ವಿಮಾನಯಾನ ಸಂಪರ್ಕ ನಿಂತು ಹೋಗಿದೆ. ಮೊದಲು ಭಾರತ ಚೀನಾದಿಂದ ಭಾರತ ಪ್ರವೇಶಕ್ಕೆ ನಿಷೇಧ ಹೇರಿತ್ತು. ಚೈನಾದಲ್ಲಿ ಕೊರೋನಾ ಸೋಂಕು ಇಳಿಮುಖವಾದ ಮೇಲೆ ಭಾರತದಲ್ಲಿ ಕೊರೋನಾ ಸಾಂಕ್ರಾಮಿಕದ ಅಟ್ಟಹಾಸ ಆರಂಭವಾಗಿತ್ತು. ಹಾಗಾಗಿ ಚೀನಾ ಭಾರತದ ನಾಗರಿಕರಿಗೆ ಚೀನಾ ಪ್ರವೇಶವನ್ನು ನಿಷೇಧಿಸಿತ್ತು. ಆ ನಿಷೇಧ ಸುಮಾರು 1 ವರ್ಷದಿಂದ ಹಾಗೆಯೇ ಮುಂದುವರೆದಿದೆ. ಏಪ್ರೀಲ್‌ ಮೇ ಹೊತ್ತಿಗೆ ಚೀನಾ ಭಾರತದ ಮೇಲಿನ ಸಂಚಾರ ನಿರ್ಬಂಧವನ್ನು ಸಡಿಲಿಸುವುದಾಗಿ ಹೇಳಿತ್ತು. ಕೊರೋನಾ ಎರಡನೇ ಅಲೆಯ ಕಾರಣದಿಂದ ಅದು ಸಾಧ್ಯವಾಗಿಲ್ಲ.

ಸಂಚಾರ ನಿರ್ಬಂಧದಿಂದಾಗಿ ಚೀನಾ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂರಾರು ಉದ್ಯೋಗಿಗಳು, ಚೀನಾದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಓದುತ್ತಿರುವ ಭಾರತದ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಚೀನಾಗೆ ತೆರಳಲಾಗದೇ 1 ವರ್ಷದಿಂದ ಭಾರತದಲ್ಲೇ ಕುಳಿತಿದ್ದಾರೆ. ಇವರೆಲ್ಲರೂ ಚೀನಾ ಸಂಚಾರ ನಿರ್ಬಂಧವನ್ನು ಹಿಂಪಡೆಯುವ ದಿನಗಳಿಗಾಗಿ ಕಾಯುತ್ತಿದ್ದಾರೆ. ಮತ್ತೊಂದೆಡೆ ಚೀನಾ ಭಾರತ ಮೂಲದ ವಿದ್ಯಾರ್ಥಿಗಳ ಮತ್ತು ಉದ್ಯೋಗಿಗಳ ವೀಸಾವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದು ಕೂಡ ವಿದ್ಯಾರ್ಥಿಗಳಿಗೆ ಚೀನಾಕ್ಕೆ ತೆರಳಲು ತೊಡಕಾಗಿ ಪರಿಣಮಿಸಿದೆ.

ಇದನ್ನೂ ಓದಿ : ಆದಾನಿಗೆ ಲಾಭ ಮಾಡಲು ವಿದ್ಯುತ್‍ ದರ ಏರಿಕೆ: ದೆಹಲಿಯಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಇಲ್ಲ?

ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಮತ್ತು ನೌಕರ ಸಮಸ್ಯೆಗೆ ಸ್ಪಂದಿಸಿದ್ದು ಚೀನಾ ವಿದೇಶಾಂಗ ಇಲಾಖೆ ಜೊತೆ ಮಾತುಕತೆ ಆರಂಭಿಸಿದೆ. ‌ ಭಾರತದೊಂದಿಗಿನ ಸಂಚಾರ ನಿರ್ಬಂಧವನ್ನು ಸಡಿಲಿಸುವಂತೆ ಚೀನಾ ಸರ್ಕಾರಕ್ಕೆ ಮನವಿಯನ್ನು ಮಾಡಿದೆ. ಚೀನಾದ ಎಲ್ಲಾ ಸಂಚಾರ ನಿಯಮಗಳನ್ನು ಪಾಲಿಸುವ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ವೀಸಾ ನೀಡುವಂತೆ ಭಾರತೀಯ ವಿದೇಶಾಂಗ ಇಲಾಖೆ ಚೀನಾ ವಿದೇಶಾಂಗ ಇಲಾಖೆ ಜೊತೆ ಗುರುವಾರ ಜೂನ್‌ 10 ರಂದು ಮಾತುಕತೆ ನಡೆಸಿದೆ. ಚೀನಾದ ಸಂಚಾರ ನಿಯಮಗಳಲ್ಲಿ ಚೀನಾ ದೇಶದ ವ್ಯಾಕ್ಸೀನ್‌ ಡೋಸ್ ಪಡೆದುಕೊಳ್ಳುವುದೂ ಸಹ ಸೇರಿದೆ.

ಭಾರತ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಾಮ್‌ ಬಗ್ಚಿ ಭಾರತ-ಚೀನಾ ಸಂಚಾರ ನಿರ್ಬಂಧಗಳನ್ನು ತೆರವುಗೊಳಿಸುವ ವಿಷಯದ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಚೀನಾ ಸರ್ಕಾರದ ಜೊತೆ ನಾವು ಸತತ ಸಂಪರ್ಕದಲ್ಲಿದ್ದೇವೆ. ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಲು ವಿದೇಶಾಂಗ ಇಲಾಖೆ ಸತತ ಪ್ರಯತ್ನ ನಡೆಸುತ್ತಿದೆ. ಅನೇಕರು ಈಗಾಗಲೇ ಚೀನಾ ತಯಾರಿತ ವ್ಯಾಕ್ಸೀನ್‌ ಪಡೆದು ಚೀನಾ ದೇಶದ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಜೂನ್‌ ಅತ್ಯಂತ ವೇಳೆಗೆ ಎಲ್ಲಾ ಗೊಂದಲಗಳು ಬಗೆಹರಿಯುವ ನಿರೀಕ್ಷೆ ಇದೆ ಎಂದು” ಅವರು ಮಾಹಿತಿಯನ್ನು ನೀಡಿದ್ದಾರೆ.


ಇದನ್ನೂ ಓದಿ: ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ದಕ್ಷಿಣ ಆಫ್ರಿಕಾದ ಜೈಲಿನಲ್ಲಿ ಬಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Fact Check : ದೋಸೆ ಕುರಿತ ರಾಹುಲ್ ಗಾಂಧಿಯ ಭಾಷಣದ ವಿಡಿಯೋ ಎಡಿಟೆಡ್

0
ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಆಯೋಜಿಸಿದ್ದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಮಾಡಿದ್ದು ಎನ್ನಲಾದ ಭಾಷಣದ ವಿಡಿಯೋವೊಂದು ವೈರಲ್ ಆಗಿದೆ. ಹದಿನಾರು ನಿಮಿಷದ ವಿಡಿಯೋದಲ್ಲಿ "ನೀವು, ನನಗೆ ದೋಸೆ...