ಹರಿಯಾಣ
PC: Zee5

ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವುದು ಒಂದೆಡೆಯಾದರೆ, ಮತ್ತೊಂದು ಕಡೆ ಈ ಹೋರಾಟವನ್ನು ಬೆಂಬಲಿಸಿ ಹರಿಯಾಣ ಹಾಗೂ ಪಂಜಾಬ್‌ನ ಹಳ್ಳಿ ಹಳ್ಳಿಗಳಲ್ಲಿ ಬೃಹತ್ ಪ್ರತಿಭಟನೆಗಳು ಜರುಗುತ್ತಿವೆ. ಈ ಕಾನೂನುಗಳನ್ನು ಸಂಪೂರ್ಣವಾಗಿ ರೈತ ವಿರೋಧಿ ಎಂದು ಆ ಜನರು ಭಾವಿಸಿದ್ದಾರೆ. ಇವುಗಳನ್ನು ಬೆಂಬಲಿಸುವ ರಾಜಕೀಯ ನಾಯಕರು ಹಾಗೂ ಬಿಜೆಪಿ-ಜೆಜೆಪಿ ಶಾಸಕರು ಭೇಟಿ ನೀಡಿದ ಸ್ಥಳಗಳಲ್ಲೆಲ್ಲಾ ಪ್ರತಿಭಟನೆ ನಡೆಸುತ್ತಾ, ಮುತ್ತಿಗೆ ಹಾಕುತ್ತಾ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.

ಇದೇ ರೀತಿ ಪದೇ ಪದೇ ರೈತರ ಪ್ರತಿಭಟನೆಯನ್ನು ಎದುರಿಸುತ್ತಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ರವರಿಗೆ ಈ ರೈತ ಹೋರಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವರು ರೈತ ಪ್ರತಿಭಟನೆಯನ್ನು ಎದುರಿಸಲಾಗದೇ ವರ್ಚುವಲ್‌ ಕಾರ್ಯಕ್ರಮಗಳ ಮೊರೆ ಹೋಗಿದ್ದಾರೆ! ಈ ಹಿನ್ನೆಲೆಯಲ್ಲಿ ಗುರುವಾರ 16 ಜಿಲ್ಲೆಗಳಲ್ಲಿ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಯನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಿದ್ದಾರೆ ಎನ್ನಲಾಗಿದೆ.

ಇದೇ ಕಾರ್ಯಕ್ರಮದ ಭಾಗವಾಗಿ ದಾದ್ರಿಗೆ ಭೇಟಿ ನೀಡಿದ್ದ ಹರಿಯಾಣ ಮಹಿಳಾ ಅಭಿವೃದ್ದಿ ಇಲಾಖೆಯ ಅಧ್ಯಕ್ಷರಾದ ಬಬಿತಾ ಪೋಗಾಟ್‌ ಹಾಗೂ ಕೈತಾಲ್‌ಗೆ ತೆರಳಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಮಲೇಶ್ ಧಂಡಾ ವಿರುದ್ಧ ರೈತರು ಕಪ್ಪು ಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ರೈತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರಿಂದ ಬಬಿತಾ ಪೋಗಾಟ್‌ ನಿರ್ಗಮಿಸಲು ಆಡಳಿತವು ಬೇರೆ ಮಾರ್ಗವನ್ನು ಬಳಸಿದೆ ಎಂದು ರೈತರು ತಿಳಿಸಿದ್ದಾರೆ.

ಬಬಿತಾ ಅವರ ಆಪ್ತ ಸಹವರ್ತಿ ರಾಹುಲ್‌ ಪೋಗಾಟ್‌ ಮಾತನಾಡಿ, ರೈತ ಪ್ರತಿಭಟನಾಕಾರರನ್ನು ಮುಖಾಮುಖಿಯಾಗುವುದನ್ನು ತಪ್ಪಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಆಡಳಿತವು ಅವರನ್ನು ಬೇರೆ ಮಾರ್ಗದಲ್ಲಿ ಕಳುಹಿಸಿದೆ ಎಂದು ಹೇಳಿದ್ದಾರೆ.

ಈ ನಡುವೆ ಕೈತಾಲ್‌ನ ಬಿಕೆಯು ಅಧ್ಯಕ್ಷ ಹೋಶಿಯಾರ್‌ ಸಿಂಗ್‌ ಗಿಲ್‌, ಬಿಜೆಪಿಯ ಕಮಲೇಶ್‌ ಧಂಡಾ ಸ್ಥಳೀಯ ಸರ್ಕಾರಿ ಕಚೇರಿಗೆ ಭೇಟಿನೀಡಿದ ಸಂದರ್ಭದಲ್ಲಿ ಕಪ್ಪು ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದರು. ರೈತ ಮಹಿಳೆಯರು ಸೇರಿದಂತೆ ಎರಡು ಟ್ರ್ಯಾಕ್ಟರ್‌ ಟ್ಯ್ರಾಲಿಗಳಲ್ಲಿ ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜೂನ್‌ 5 ರಂದು ಕರ್ನಾಲ್‌ನಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಖಟ್ಟರ್‌ರವರಿಂದ ಗಿಡ ನೆಡುವ ಕಾರ್ಯಕ್ರಮ ನಿಗದಿಯಾಗಿತ್ತು. ಅಲ್ಲಿ ಪ್ರತಿಭಟನೆಗೆ ರೈತರು ಸಹ ಸಜ್ಜುಗೊಂಡಿದ್ದರು. ಇದರ ಸುಳಿವು ಅರಿತ ಮುಖ್ಯಮಂತ್ರಿಗಳು ರೈತರ ಪ್ರತಿಭಟನೆಯನ್ನು ಎದುರಿಸಲಾರದೇ ಒಂದೂವರೆ ಗಂಟೆ ಮುಂಚೆಯೇ ಸ್ಥಳಕ್ಕೆ ಆಗಮಿಸಿ ಗಡಿಬಿಡಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಹೊರಟು ಹೋಗಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಮದುವೆ ಮತ್ತು ಶವಸಂಸ್ಕಾರಗಳಂತಹ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಿಜೆಪಿ ನಾಯಕರ ಭೇಟಿಯನ್ನು ವಿರೋಧಿಸದಿರಲು ಸಂಯುಕ್ತ ಕಿಸಾನ್‌ ಮೋರ್ಚಾ ನಿರ್ಧರಿಸಿದೆ. ಆದರೆ, ಅವರ ರಾಜಕೀಯ ಅಥವಾ ಆಡಳಿತವು ಆಯೋಜಿಸಿರುವ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲಾ ನಾವು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ನಂಬರ್‌ದಾರ್‌ ತಿಳಿಸಿದ್ದಾರೆ.

ಕೃಪೆ: ಅನ್ನದ ಋಣ


ಇದನ್ನೂ ಓದಿ: ರೈತ ಹೋರಾಟದಿಂದ ನಾವು ಸ್ಥಳೀಯ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಿದ್ದೇವೆ: ಪಂಜಾಬ್ ಬಿಜೆಪಿ ಮುಖಂಡ ಅನಿಲ್ ಜೋಶಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here