ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದ್ದು, ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟಿನ ನಡುವೆ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಯ ರಕ್ಷಣೆ ಮುಖ್ಯವಾಗಿದ್ದು, ಮಂಗಳವಾರ ಬೆಳಿಗ್ಗೆ ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.
ವಾಯುಪಡೆಯ ವಿಶೇಷ ವಿಮಾನವು ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್) ಪಡೆಯನ್ನು ವಾಪಸ್ ಕರೆತರಲಾಗಿದೆ. 120 ಕ್ಕೂ ಹೆಚ್ಚು ಭಾರತೀಯ ಅಧಿಕಾರಿಗಳನ್ನು ವಾಪಸ್ ಕರೆತರಲಾಗಿದೆ.
48 ವರ್ಷಗಳ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ್ದು, ಕಳೆದ 48 ಗಂಟೆಗಳಲ್ಲಿ ದೇಶದ ಪರಿಸ್ಥಿತಿ ಹಲವು ಸವಾಲುಗಳನ್ನು ಎದುರಿಸಿಸುತ್ತಿದೆ. ದೇಶವನ್ನು ತೊರೆಯಲು ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಐವರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
“ನಡೆಯುತ್ತಿರುವ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಕಾಬೂಲ್‌ನಲ್ಲಿರುವ ನಮ್ಮ ರಾಯಭಾರಿ ಮತ್ತು ಭಾರತೀಯ ಸಿಬ್ಬಂದಿಯನ್ನು ತಕ್ಷಣವೇ ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ 200 ಸಿಖ್ಖರನ್ನು ರಕ್ಷಿಸುವಂತೆ ಕೇಂದ್ರಕ್ಕೆ ಅಮರಿಂದರ್ ಸಿಂಗ್ ಮನವಿ
In view of the prevailing circumstances, it has been decided that our Ambassador in Kabul and his Indian staff will move to India immediately.
— Arindam Bagchi (@MEAIndia) August 17, 2021
ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸ್ಥಳಾಂತರಿಸಲು ಭಾನುವಾರ ಎರಡು ವಿಮಾನಗಳನ್ನು ನಿಯೋಜಿಸಲಾಗಿತ್ತು. 45 ಸಿಬ್ಬಂದಿಯೊಂದಿಗೆ ಮೊದಲ ಐಎಎಫ್ ಸಿ -17 ವಿಮಾನ ಸೋಮವಾರ ದೇಶಕ್ಕೆ ಮರಳಿದೆ. ಆದರೆ, ರಸ್ತೆಗಳು ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸ್ಥಗಿತಗೊಂಡಿರುವುದರಿಂದ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆಯಿಂದಾಗಿ ಉಳಿದ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳು, ಇತರ ಸಿಬ್ಬಂದಿ ಮತ್ತು ಐಟಿಬಿಪಿ ಪಡೆಗಳನ್ನು ಹಿಂದಕ್ಕೆ ಕರೆತರಲು ಸಾಧ್ಯವಾಗಿರಲಿಲ್ಲ.
ಭಾರತೀಯ ರಾಯಭಾರ ಕಚೇರಿಯೂ ತಾಲಿಬಾನ್ ಕಣ್ಗಾವಲಿನಲ್ಲಿದೆ ಎಂದು ವರದಿಯಾಗಿದೆ. ತಾಲಿಬಾನ್ ಪಡೆಯು ಶಾಹೀರ್ ವೀಸಾ ಏಜೆನ್ಸಿಯ ಮೇಲೆಯೂ ದಾಳಿ ನಡೆಸಿದೆ, ಇದರಿಂದ ಭಾರತಕ್ಕೆ ಪ್ರಯಾಣಿಸಲು ಬಯಸುವವರಿಗೆ ತೊಂದರೆಯುಂಟಾಗಿದೆ ಎಂದು ಮೂಲಗಳು ತಿಳಿಸಿವೆ.
#WATCH | Indian Air Force C-17 aircraft that took off from Kabul, Afghanistan with Indian officials, lands in Jamnagar, Gujarat. pic.twitter.com/1w3HFYef6b
— ANI (@ANI) August 17, 2021
ತಾಲಿಬಾನ್ ನಿಯಂತ್ರಿತ ದೇಶವನ್ನು ತೊರೆಯಲು ಇಚ್ಛಿಸುವ ಅಫ್ಘಾನಿಸ್ತಾನದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಭಾರತವು ಹೊಸ ಮಾದರಿಯ “ಇ-ಎರ್ಮಜನ್ಸಿ ಎಕ್ಸ್-ಮಿಸ್ಕ್ ವೀಸಾ” ಎಲೆಕ್ಟ್ರಾನಿಕ್ ವೀಸಾವನ್ನು ಘೋಷಿಸಿದೆ.
ಸಾವಿರಾರು ಜನರು ಅಫ್ಘಾನಿಸ್ತಾನದಿಂದ ಹೊರ ದೇಶಕ್ಕೆ ಹೊರಡಬಹುದಾದ ಏಕೈಕ ದಾರಿಯಾದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದು, ನೂಕು ನುಗ್ಗಲು ಉಂಟಾಗಿದೆ. ವಿಮಾನ ನಿಲ್ದಾಣವು ಅಮೆರಿಕಾ ಭದ್ರತಾ ಪಡೆಗಳ ನಿಯಂತ್ರಣದಲ್ಲಿದ್ದು, ಅಮೆರಿಕಾ ಅಲ್ಲಿ ಆರು ಸಾವಿರ ಯೋಧರನ್ನು ನೇಮಿಸಿದೆ. ನೂಕು ನುಗ್ಗಲನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಕೂಡಾ ನಡೆದಿದೆ ಎಂದು ವರದಿಯಾಗಿದೆ. ಇದರ ಮಧ್ಯೆ ಅಫ್ಘಾನ್ ವಿಮಾನ ನಿಲ್ದಾಣದಲ್ಲಿ ಐವರು ಮೃತಪಟ್ಟಿರುವುದು ಕೂಡಾ ವರದಿಯಾಗಿದೆ.
ಇದನ್ನೂ ಓದಿ: ಅಫ್ಘಾನ್ ಪತನ: ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು; ಟೇಕಾಫ್ ಆದ ವಿಮಾನದಿಂದ ಬಿದ್ದ ಜನರು!



Hai