ಕೇರಳದಲ್ಲಿ ಬಲಪಂಥೀಯ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತ್ ಮಾತಾ ಕೀ ಜೈ’ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದಾಗ ಸಭಿಕರು ನಿರೀಕ್ಷಿತ ಉತ್ಸಾಹ ತೋರಿಸದ ಹಿನ್ನೆಲೆ ಮುಜುಗರಕ್ಕೆ ಒಳಗಾಗುವುದರ ಜೊತೆ ಸಚಿವರು ತಾಳ್ಮೆ ಕಳೆದುಕೊಂಡಿದ್ದು, ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗದ ಮಹಿಳೆಯನ್ನು ಸಭೆಯಿಂದ ತೆರಳುವಂತೆ ಸೂಚಿಸಿದ್ದಾರೆ.
ಶನಿವಾರ ಕೋಝಿಕ್ಕೋಡ್‌ನಲ್ಲಿ ನಡೆದ ಯುವ ಸಮಾವೇಶದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗದ ಕಾರಣ ಕಾರ್ಯಕ್ರಮದಿಂದ ಹೊರಹೋಗುವಂತೆ ಮಹಿಳೆಗೆ ಸೂಚಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಬಿಜೆಪಿಯ ಹಿರಿಯ ನಾಯಕಿ ಮತ್ತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮೊದಲು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ. ಅದನ್ನು ಪುನರಾವರ್ತನೆ ಮಾಡುವಂತೆ ಸಭೆಯಲ್ಲಿದ್ದವರಲ್ಲಿ ಕೇಳಿಕೊಂಡಿದ್ದಾರೆ. ಇದಕ್ಕೆ ಜನರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದರಿಂದ ಅವರು ಮತ್ತೆ ಭಾರತ್ ಮಾತಾ ಕೀ ಜೈ ಹೇಳಿದ್ದಾರೆ. ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರದ ಕಾರಣ ಭಾರತ ನನ್ನ ತಾಯಿ ಮಾತ್ರವೇ? ನಿಮ್ಮ ಮಾತಾ ಅಲ್ವ ಎಂದು ಪ್ರಶ್ನಿಸಿದ್ದಾರೆ. ನಂತರ ಅವರು ‘ಹಳದಿ ಉಡುಗೆ ತೊಟ್ಟ ಮಹಿಳೆ’ಯಗೆ ಕೈ ತೋರಿಸಿ ನಿಲ್ಲುವಂತೆ ಸೂಚಿಸಿದ್ದಾರೆ. ಭಾರತ್ ನಿಮ್ಮ ತಾಯಿ ಅಲ್ವ? ಎಂದು ಕೇಳಿ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿದ್ದಾರೆ. ಆದರೆ ಮಹಿಳೆ ಅದಕ್ಕೆ ಗಟ್ಟಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಕಾರ್ಯಕ್ರಮದಿಂದ ಹೊರಹೋಗುವಂತೆ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪತ್ರಕರ್ತ ಮೊಹಮ್ಮದ್ ಜುಬೈರ್, ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಅವರು ಕೋಝಿಕ್ಕೋಡ್‌ನಲ್ಲಿ ತಮ್ಮ “ಭಾರತ್ ಮಾತಾ ಕಿ ಜೈ” ಘೋಷಣೆಗಳಿಗೆ ಜೋರಾಗಿ ಪ್ರತಿಕ್ರಿಯೆ ಸಿಗದ ಕಾರಣ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಬಳಿಕ ಅವರು ಓರ್ವ ಮಹಿಳೆಯನ್ನು ಸಭೆಯಿಂದ ಹೊರಹೋಗುವಂತೆ ಹೇಳಿದ್ದಾರೆ. ಇದು ಎಂತಹ ದುರಹಂಕಾರ ಎಂದು ಪ್ರಶ್ನಿಸಿದ್ದಾರೆ.
Union Minister and BJP leader Meenakshi Lekhi loses her cool at Kerala audience for not responding loud enough to her "Bharat Mata ki Jai" chants in Kozhikode. She later asks the lady in the audience to leave the house. What arrogance! pic.twitter.com/xheHDEtwRX
— Mohammed Zubair (@zoo_bear) February 3, 2024
ಇದನ್ನು ಓದಿ: ಅಪರಾಧ ತಡೆಯಬೇಕಾದ ದೆಹಲಿ ಪೊಲೀಸರು ನಾಟಕವಾಡುತ್ತಿದ್ದಾರೆ: ಅರವಿಂದ್ ಕೇಜ್ರಿವಾಲ್


