ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಜಾರ್ಖಂಡ್‌ನಾದ್ಯಂತ ಎಲ್ಲಾ ಆಸ್ಪತ್ರೆಗಳು, ವೈದ್ಯರು ಮತ್ತು ವೈದ್ಯಕೀಯ ಸಂಪನ್ಮೂಲಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದ್ದು, ಸರ್ಕಾರಿ ವೈದ್ಯರ ರಜೆಗಳನ್ನು ರದ್ದುಪಡಿಸಲಾಗಿದೆ ಎಂದು ವರದಿಯಾಗಿದೆ. ಎಲ್ಲಾ ಸಿವಿಲ್ ಸರ್ಜನ್‌ಗಳು ಮತ್ತು ಸರ್ಕಾರಿ ವೈದ್ಯರು ತಮ್ಮ ಕೆಲಸದ ಸ್ಥಳಗಳಲ್ಲಿ 24×7 ಲಭ್ಯವಿರುವಂತೆ ನಿರ್ದೇಶಿಸಲಾಗಿದೆ ಎಂದು ಅದು ಹೇಳಿದೆ. ಭಾರತ-ಪಾಕ್
“ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಸರ್ಕಾರಿ ವೈದ್ಯರ ರಜೆಗಳನ್ನು ರದ್ದುಪಡಿಸಲಾಗಿದೆ. ಇದರೊಂದಿಗೆ, ಮೊದಲ ಬಾರಿಗೆ, ಎಲ್ಲಿಯೂ ವೈದ್ಯಕೀಯ ತೊಂದರೆ ಉಂಟಾಗದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳು 24 ಗಂಟೆಗಳ ಕಾಲ ಕರ್ತವ್ಯದಲ್ಲಿರಲು ರಾಜ್ಯ ಸರ್ಕಾರ ನಿರ್ದೇಶಿಸಿದೆ” ಎಂದು ಆರೋಗ್ಯ ಸಚಿವ ಡಾ. ಇರ್ಫಾನ್ ಅನ್ಸಾರಿ ಹೇಳಿದ್ದಾರೆ.
ರಾಜ್ಯದ ಕಂಟೋನ್ಮೆಂಟ್ ಮತ್ತು ಗಡಿ ಪ್ರದೇಶಗಳಲ್ಲಿನ ಆಸ್ಪತ್ರೆಗಳಿಗೆ ವಿಶೇಷ ಬಜೆಟ್‌ಅನ್ನು ನಿಗದಿಪಡಿಸಲಾಗಿದೆ ಮತ್ತು ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ, ಉಪಕರಣಗಳು ಮತ್ತು ಔಷಧಿಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್‌ನ ವೈದ್ಯರು ರಾಜ್ಯದ ನಾಗರಿಕರನ್ನು ರಕ್ಷಿಸಲು ಮಾತ್ರವಲ್ಲದೆ, ಅಗತ್ಯವಿದ್ದರೆ ಗಡಿಗಳಿಗೆ ಹೋಗಿ ಸೈನ್ಯದೊಂದಿಗೆ ನಿಲ್ಲಲು ಸಹ ಸಿದ್ಧರಾಗಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
“ಇದು ಕೇವಲ ವೈದ್ಯಕೀಯ ಸಲಹೆಯಲ್ಲ, ಬದಲಾಗಿ ಜಾರ್ಖಂಡ್‌ನಿಂದ ರಾಷ್ಟ್ರಕ್ಕೆ ನೀಡಲಾಗುವ ಪ್ರತಿಜ್ಞೆ. ಪ್ರತಿಯೊಂದು ಜೀವವನ್ನು ರಕ್ಷಿಸಿ, ಪ್ರತಿಯೊಂದು ಪರಿಸ್ಥಿತಿಯಲ್ಲೂ ಸೇವೆ ಸಲ್ಲಿಸಿ” ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಈ ನಡುವೆ, ಆರೋಗ್ಯ ಸಚಿವರು ತಮ್ಮ ನಾಲ್ಕು ತಿಂಗಳ ಸಂಬಳವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಗಳಿಗೆ ದಾನ ಮಾಡಲು ಮುಂದಾಗಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯು ಮಾನವೀಯತೆಯ ಮೇಲಿನ ದಾಳಿ ಮಾತ್ರವಲ್ಲ, ಅದು ಭಾರತದ ಆತ್ಮ ಮತ್ತು ಪ್ರತಿಯೊಬ್ಬ ಭಾರತೀಯನ ಮೇಲೆ ದಾಳಿ ಮಾಡಿದೆ. ಈ ಘಟನೆ ನನ್ನನ್ನು ತೀವ್ರವಾಗಿ ಬೆಚ್ಚಿಬೀಳಿಸಿದೆ ಎಂದು ಸಚಿವ ಅನ್ಸಾರಿ ಹೇಳಿದ್ದಾರೆ.
“ದುಃಖದಲ್ಲಿರುವ ಕುಟುಂಬಗಳೊಂದಿಗೆ ನಿಲ್ಲುವುದು ನನ್ನ ಕರ್ತವ್ಯ …… ಹುತಾತ್ಮರ ತ್ಯಾಗ ಅಮೂಲ್ಯವಾದುದು ….. ನನ್ನ ಹೃದಯವು ಕುಟುಂಬಗಳಿಗೆ ಮಿಡಿಯುತ್ತದೆ” ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಅನ್ಸಾರಿ ತಮ್ಮಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಭಾರತ-ಪಾಕ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮೇ 20 ಸಾರ್ವತ್ರಿಕ ಮುಷ್ಕರ | ಬೀದಿಗಿಳಿಯಲಿರುವ ರಾಜ್ಯದ ಲಕ್ಷಾಂತರ ರೈತ, ಕಾರ್ಮಿಕರು
ಮೇ 20 ಸಾರ್ವತ್ರಿಕ ಮುಷ್ಕರ | ಬೀದಿಗಿಳಿಯಲಿರುವ ರಾಜ್ಯದ ಲಕ್ಷಾಂತರ ರೈತ, ಕಾರ್ಮಿಕರು