ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ತನ್ನ ದೇಶದ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳದಂತೆ ಕಟ್ಟೆಚ್ಚರ ನೀಡಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಂತರ ಈ ಪ್ರಯಾಣ ನಿರ್ದೇಶನಗಳು ಬಂದಿವೆ.
ತನ್ನ ದೇಶದ ನಾಗರಿಕರಿಗೆ ಎಚ್ಚರಿಕೆ ನೀಡಿರುವ ಅಮೆರಿಕ, ತನ್ನ ದೇಶದ ಪ್ರಯಾಣಿಕರಿಗೆ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ತೆರಳದಂತೆ ಸೂಚಿಸಿದೆ. ಭಾರತ-ಪಾಕಿಸ್ತಾನ ಗಡಿ ಮತ್ತು ನಿಯಂತ್ರಣ ರೇಖೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆಯೂ ಅದು ನಾಗರಿಕರಿಗೆ ಸಲಹೆ ನೀಡಿದೆ.
ಅಮೆರಿಕ ವಿದೇಶಾಂಗ ಇಲಾಖೆಯು, ಪಾಕಿಸ್ತಾನಕ್ಕೆ ಸಾಮಾನ್ಯವಾಗಿ ಪ್ರಯಾಣವನ್ನು ಮರುಪರಿಶೀಲಿಸಿ ಎಂಬ ಸಲಹೆಯನ್ನು ಸಹ ನೀಡಿದೆ. “ಅಮೆರಿಕದ ನಾಗರಿಕರು ಸುರಕ್ಷಿತವಾಗಿ ಪ್ರಯಾಣ ರದ್ದು ಮಾಡುವುದು ಸಾಧ್ಯವಾದರೆ ಸಕ್ರಿಯ ಸಂಘರ್ಷದ ಪ್ರದೇಶಗಳನ್ನು ತೊರೆಯಲು ಅಥವಾ ಸ್ಥಳದಲ್ಲಿ ಆಶ್ರಯ ಪಡೆಯಲು ನಾವು ಸಲಹೆ ನೀಡುತ್ತೇವೆ” ಎಂದು ಉಲ್ಲೇಖಿಸಿದೆ.
ಭಾರತ ಮತ್ತು ಪಾಕಿಸ್ತಾನದ ಹಲವು ಪ್ರದೇಶಗಳಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣ ಎಚ್ಚರಿಕೆ ನೀಡಿದ ದೇಶಗಳ ಪಟ್ಟಿ ಹೀಗಿದೆ:
ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಕೆನಡಾ, ಆಸ್ಟ್ರೇಲಿಯಾ, ಚೀನಾ, ಸಿಂಗಾಪುರ, ನೆದರ್ಲ್ಯಾಂಡ್ಸ್, ಸ್ವೀಡನ್ ದೇಶಗಳು ಸೇರಿವೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ದೇಶದ ಹಲವಾರು ವಿಮಾನ ನಿಲ್ದಾಣಗಳು ಸ್ಥಗಿತಗೊಂಡ ನಂತರ ದೈನಂದಿನ ದೇಶೀಯ ವಿಮಾನ ಸಂಚಾರದ ಕನಿಷ್ಠ ಶೇಕಡಾ 11 ರಷ್ಟು ಪರಿಣಾಮ ಬೀರಿದೆ ಎಂದು ಶುಕ್ರವಾರ ದತ್ತಾಂಶಗಳು ತೋರಿಸಿವೆ.
ಉದ್ಯಮದ ಮಾಹಿತಿಯ ಪ್ರಕಾರ, ಸರಾಸರಿ ದೈನಂದಿನ ದೇಶೀಯ ವಿಮಾನಗಳು ಏಪ್ರಿಲ್‌ನಲ್ಲಿ 3,265 ರಿಂದ 2,907 ಕ್ಕೆ ಇಳಿದಿವೆ (ಮೇ 8 ರಂತೆ). ಮೇ 9–10 ರ ಅವಧಿಯಲ್ಲಿ ಸುಮಾರು 670 ವಿಮಾನಯಾನ ಮಾರ್ಗಗಳು ಪರಿಣಾಮ ಬೀರುತ್ತವೆ. ಇದರಲ್ಲಿ ಫ್ಲೈಟ್‌ರಾಡರ್ 24 ಡೇಟಾ ಪ್ರಕಾರ, ಮುಚ್ಚಲ್ಪಟ್ಟ 24 ವಿಮಾನ ನಿಲ್ದಾಣಗಳಲ್ಲಿ 334 ಒಳಬರುವ ಮತ್ತು 336 ಹೊರಹೋಗುವ ವಿಮಾನಗಳು ಸೇರಿವೆ.
ಶ್ರೀನಗರ, ಚಂಡೀಗಢ, ಅಮೃತಸರ, ಜಮ್ಮು ಮತ್ತು ಲೇಹ್ ವಿಮಾನ ನಿಲ್ದಾಣಗಳು ಹೆಚ್ಚು ಪರಿಣಾಮ ಬೀರುವ ಮಾರ್ಗಗಳಾಗಿವೆ. ಇತರ ಪ್ರಭಾವಿತ ವಿಮಾನ ನಿಲ್ದಾಣಗಳಲ್ಲಿ ಪಟಿಯಾಲ, ಭುಂತರ್, ಪಠಾಣ್‌ಕೋಟ್, ಬಿಕಾನೇರ್, ಜೈಸಲ್ಮೇರ್, ಮುಂದ್ರಾ, ಕೆಶೋದ್ ಮತ್ತು ರಾಜ್‌ಕೋಟ್ ಸೇರಿವೆ.
ಗಡಿ ಪ್ರದೇಶಗಳ ನಾಗರಿಕರಿಗೆ ರಕ್ಷಣೆ ಬೇಕು: ‘ಜಮಾತೆ-ಇ-ಇಸ್ಲಾಮಿ ಹಿಂದ್’ ಸಂಘಟನೆ ಆಗ್ರಹ


