ಕೊರೊನಾ ಸಾಂಕ್ರಮಿಕದ ನಡುವೆಯು ವಿಶ್ವದಾದ್ಯಂತ ಸೈನ್ಯಗಳಿಗೆ ಮಾಡಿರುವ ಖರ್ಚು 2021ರಲ್ಲಿ ಸಾರ್ವಕಾಲಿಕ ಗರಿಷ್ಠ ಮೊತ್ತವನ್ನು ತಲುಪಿದೆ ಎಂದು ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಸೋಮವಾರ ಹೇಳಿದೆ. ಈ ಮೊತ್ತವು 2.1 ಟ್ರಿಲಿಯನ್ ಡಾಲರ್ ಎಂದು ಅದು ಹೇಳಿದೆ. ವಿಶ್ವದಲ್ಲಿ ಸೈನ್ಯಕ್ಕೆ ಅತೀ ಹೆಚ್ಚು ಖರ್ಚು ಮಾಡುವ ದೇಶಗಳಲ್ಲಿ ಅಮೆರಿಕಾ, ಚೀನಾ ನಂತರ ಭಾರತವು ಮೂರನೇ ಸ್ಥಾನದಲ್ಲಿ ಇದೆ ಎಂದು SIPRI ಹೇಳಿದೆ.
“ಒಟ್ಟು ಜಾಗತಿಕ ಮಿಲಿಟರಿ ವೆಚ್ಚವು 2021 ರಲ್ಲಿ 0.7% ದಷ್ಟು ಹೆಚ್ಚಾಗಿದ್ದು, 2113 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. ಅಮೆರಿಕಾ, ಚೀನಾ, ಭಾರತ, ಇಂಗ್ಲೇಂಡ್ ಮತ್ತು ರಷ್ಯಾ 2021 ರಲ್ಲಿ ಸೈನ್ಯದ ಮೇಲೆ ಅತೀ ಹೆಚ್ಚು ಖರ್ಚು ಮಾಡಿರುವ ದೇಶಗಳಾಗಿವೆ. ಈ ಐದು ದೇಶಗಳು ಒಟ್ಟಾಗಿ 62% ದಷ್ಟು ಖರ್ಚು ಮಾಡಿವೆ” ಸ್ಟಾಕ್‌ಹೋಮ್ ತನ್ನ ಹೇಳಿಕೆಯಲ್ಲಿ ಹೇಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಕೊರೊನಾ ಆರ್ಥಿಕ ಕುಸಿತದ ನಡುವೆಯೂ, ವಿಶ್ವ ಮಿಲಿಟರಿ ವೆಚ್ಚವು ದಾಖಲೆಯ ಮಟ್ಟವನ್ನು ತಲುಪಿದೆ” ಎಂದು SIPRI ಯ ಮಿಲಿಟರಿ ವೆಚ್ಚ ಮತ್ತು ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಯಕ್ರಮದ ಹಿರಿಯ ಸಂಶೋಧಕ ಡಾ ಡಿಯಾಗೋ ಲೋಪೆಸ್ ಡಾ ಸಿಲ್ವಾ ಹೇಳಿದ್ದಾರೆ.
ಇದನ್ನೂ ಓದಿ: ನವವಿವಾಹಿತ ದಲಿತ ದಂಪತಿಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಅರ್ಚಕನ ಬಂಧನ
2021 ರಲ್ಲಿ ಅಮೇರಿಕಾ ತನ್ನ ಸೈನ್ಯಕ್ಕೆ 801 ಬಿಲಿಯನ್ ಡಾಲರ್ ಖರ್ಚು ಮಾಡಿದ್ದು, 2020 ಕ್ಕೆ ಹೋಲಿಸಿದರೆ ಇದು 1.4% ದಷ್ಟು ಕಡಿಮೆಯಾಗಿದೆ ಎಂದು ಹೇಳಿಕೆ ತಿಳಿಸಿದೆ. 2012 ರಿಂದ 2021 ರ ಅವಧಿಯಲ್ಲಿ, ಅಮೆರಿಕಾ ಮಿಲಿಟರಿ ಸಂಶೋಧನೆ ಮತ್ತು ಅಭಿವೃದ್ಧಿಗೆ 24% ದಷ್ಟು ಹಣವನ್ನು ಹೆಚ್ಚಿಸಿದೆ. ಶಸ್ತ್ರಾಸ್ತ್ರ ಖರೀದಿಯ ಮೇಲಿನ ವೆಚ್ಚವನ್ನು 6.4% ದಷ್ಟು ಕಡಿಮೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎರಡನೇ ಸ್ಥಾನದಲ್ಲಿರುವ ಚೀನಾಕ್ಕೆ 293 ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಿದೆ. 2020 ಹೋಲಿಸಿದರೆ 4.7% ಹೆಚ್ಚಳವಾಗಿದೆ.
ಭಾರತದ ಮಿಲಿಟರಿ ವೆಚ್ಚವು ಕಳೆದ ವರ್ಷ 7,660 ಕೋಟಿ ಡಾಲರ್ ಇದ್ದು ಮೂರನೇ ಸ್ಥಾನದಲ್ಲಿದೆ. 2020 ಕ್ಕೆ ಹೋಲಿಸಿದರೆ ಈ ಮೊತ್ತವು 0.9% ಹೆಚ್ಚಳವಾಗಿದೆ.
ಇದನ್ನೂ ಓದಿ: ಉರ್ದು ಭಾಷೆ ಬಾರದೆ ಇದ್ದಿದ್ದು ಚಂದ್ರು ಕೊಲೆಗೆ ಕಾರಣವಲ್ಲ: ಗುಪ್ತಚರ ಇಲಾಖೆ ವರದಿ
ಸ್ಟಾಕ್‌ಹೋಮ್ ಮೂಲದ ಸಂಸ್ಥೆಯ ಪ್ರಕಾರ, 7,660 ಕೋಟಿ ಡಾಲರ್ ಭಾರತದ ಸೈನ್ಯದ ವೆಚ್ಚವು ವಿಶ್ವದಲ್ಲೇ ಮೂರನೇ ಅತ್ಯಧಿಕ ಸ್ಥಾನದಲ್ಲಿದೆ. ಇದು 2020 ರಿಂದ 0.9% ರಷ್ಟು ಮತ್ತು 2012 ರಿಂದ 33% ರಷ್ಟು ಹೆಚ್ಚಾಗಿದೆ. ಸ್ಥಳೀಯ ಶಸ್ತ್ರಾಸ್ತ್ರ ಉದ್ಯಮವನ್ನು ಬಲಪಡಿಸುವ ಪ್ರಯತ್ನದಲ್ಲಿರುವ ಭಾರತವು, 2021 ರ ಮಿಲಿಟರಿ ಬಜೆಟ್‌ನಲ್ಲಿ 64% ಬಂಡವಾಳವನ್ನು ದೇಶೀಯವಾಗಿ ಉತ್ಪಾದಿಸಿದ ಶಸ್ತ್ರಾಸ್ತ್ರಗಳ ಸ್ವಾಧೀನಕ್ಕೆ ಮೀಸಲಿಡಲಾಗಿದೆ.


