Homeಮುಖಪುಟನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ...

ನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ…

ಯುವ ಉದ್ಯಮಿಯೊಬ್ಬ ಇಂದು ಚಹಾ ಅಂಗಡಿ ಮತ್ತು ರೆಸ್ಟೋರೆಂಟ್‌ನಲ್ಲಿ ಅಡುಗೆ ಮತ್ತು ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ 2016 ರಲ್ಲಿ ಭಾರತ ಸರ್ಕಾರವು ರಾತ್ರೋರಾತ್ರಿ ಘೋಷಿಸಿದ ನೋಟ್ ಬ್ಯಾನ್.

- Advertisement -
- Advertisement -

24 ನೇ ವಯಸ್ಸಿನಲ್ಲಿ ನಿಜೀಶ್ ಸಹದೇವನ್ ಅವರ ಜೀವನವು ತುಂಬಾ ಆರಾಮದಾಯಕವಾಗಿದ್ದವು. ಕೇರಳದ ತ್ರಿಶೂರ್‌ನಲ್ಲಿ ನೈಸರ್ಗಿಕ ರಸಗೊಬ್ಬರಗಳನ್ನು ತಯಾರಿಸುವ ಎಸ್‌ವಿಆರ್ ಆಗ್ರೋ ಪ್ರಾಡಕ್ಟ್ಸ್ ಕಂಪನಿಯ ಮಾಜಿ ಮಾಲೀಕರಾದ ಅವರು ಯೋಗ್ಯ ಲಾಭ ಗಳಿಸುತ್ತಾ 462 ಉದ್ಯೋಗಿಗಳಿಗೆ ಕೆಲಸ ನೀಡಿದ್ದರು.

“ನಾನು 18 ವರ್ಷದವನಿದ್ದಾಗ ವ್ಯವಹಾರವನ್ನು ಪ್ರಾರಂಭಿಸಿದೆ. ನನ್ನ ರಸಗೊಬ್ಬರವೂ ಸಸ್ಯಗಳಿಗೆ, ಬೇರುಗಳಿಗೆ, ಎಲೆಗಳಿಗೆ ಮತ್ತು ತರಕಾರಿಗಳ ಮೇಲೆ ಬಳಸಬಹುದಾದ ಅತ್ಯಂತ ಪರಿಣಾಮಕಾರಿ ಪಾಚಿ ಆಧಾರಿತ ಹಸಿರು ಗೊಬ್ಬರವಾಗಿದೆ. ಆದರೆ ಈಗ ನನ್ನಲ್ಲಿ ಉಳಿದಿರುವುದು ಉತ್ಪನ್ನದ ಪೇಟೆಂಟ್ ಮಾತ್ರ” ಎಂದು ನಿಜೀಶ್ ಸಹದೇವನ್ ಹೇಳುತ್ತಾರೆ.

ಬ್ಯಾಚುಲರ್ ಇನ್ ಟೆಕ್ನಾಲಜಿ (ಬಿಟೆಕ್) ಮುಗಿಸಿ, ತನ್ನ ಉತ್ಪನ್ನದ ಪ್ರಯೋಜನಗಳನ್ನು ಕಂಡುಕೊಂಡ ನಂತರ ನಿಜೀಶ್ ಸಹದೇವನ್ ತಾನೊಬ್ಬ ಉದ್ಯಮಿಯಾಗಲು ನಿರ್ಧರಿಸಿದರು. ಈ ರಸಗೊಬ್ಬರವು ಹ್ಯೂಮಿಕ್ ಆಮ್ಲದ ಜೊತೆ ಸಸ್ಯಶಾಸ್ತ್ರೀಯ ಪೋಷಕಾಂಶಗಳು, ಸಾಗರದ ಮತ್ತು ಪ್ರಾಣಿಯ ಪ್ರೋಟೀನ್‌ಗಳೊಂದಿಗೆ ಸಂಯೋಜಿಸಿದ್ದರಿಂದ ಅದು ಗರಿಷ್ಠ ಬೆಳೆ ಉತ್ಪಾದನೆಗೆ ಕಾರಣವಾಗುವಂತೆ ತಯಾರಿಸಲಾಗಿತ್ತು.

“ಕೇರಳ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮ ಯೋಜನೆಯ ಕಾರ್ಯಕ್ರಮದಡಿಯ ಸಹಾಯದಿಂದ ಕೆಲವೇ ಸಾವಿರ ರುಪಾಯಿಗಳ ಹೂಡಿಕೆಯೊಂದಿಗೆ ನನ್ನ ಉದ್ಯಮವನ್ನು ಪ್ರಾರಂಭಿಸಿದೆ. ನನ್ನ ಉತ್ಪನ್ನದ ಒಂದು ಬಾಟಲಿಗೆ 500 ರೂ ವೆಚ್ಚವಾಗುತ್ತಿತ್ತು ಹಾಗೂ 2,000 ಸಸ್ಯಗಳಲ್ಲಿ ಬಳಸಬಹುದಾಗಿತ್ತು” ಎಂದು ನಿಜೀಶ್ ಸಹದೇವನ್ ವಿವರಿಸುತ್ತಾರೆ. ಅವರ ಉತ್ಪನ್ನವನ್ನು ರೈತರು ಸ್ವೀಕರಿಸುವುರ ಮೂಲಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ 250 ಸಿಬ್ಬಂದಿಯನ್ನು ನೇಮಿಸಿ ವ್ಯವಹಾರವನ್ನು ವಿಸ್ತರಿಸಲು ಸಹಾಯ ಮಾಡಿತು. ನಿಜೀಶ್ ಸಹದೇವನ್ “ಉತ್ಪನ್ನವು ಅದ್ಭುತವಾಗಿದ್ದರಿಂದ ಅದು ತುಂಬಾ ವೇಗವಾಗಿ ಮಾರಾಟವಾಯಿತು” ಎಂದು ಹೇಳುತ್ತಾರೆ.

ಇಂದು 32 ವರ್ಷದ ಅವರು ತನ್ನ ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ದುಬೈನ ಕರಾಮಾದಲ್ಲಿರುವ “ಎರಾನೊಜ್ಲಿ ಮೂಸಕಂಡೆ ಚಾಯಕ್ಕಡ” ಎಂಬ ಚಹಾ ಅಂಗಡಿ ಮತ್ತು ರೆಸ್ಟೋರೆಂಟ್‌ನಲ್ಲಿ ಅಡುಗೆ ಮತ್ತು ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ 2016 ರಲ್ಲಿ ಭಾರತ ಸರ್ಕಾರವು ರಾತ್ರೋರಾತ್ರಿ ಘೋಷಿಸಿದ ನೋಟ್ ಬ್ಯಾನ್. ಇದರಿಂದಾಗಿ ನಿಜೀಶ್ ಸಹದೇವನ್ ಜೀವನವೇ ಅಲ್ಲೋಲಕಲ್ಲೋಲವಾಗಿದೆ.

ತನ್ನ ವ್ಯವಹಾರದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದ ನಿಜೀಶ್ ಗಲ್ಫ್ ಮೂಲದ ದೊಡ್ಡ ಗ್ರಾಹಕರನ್ನು ಕಳೆದುಕೊಂಡ ನಂತರ, ತಮಿಳುನಾಡಿನ ಪೊಲ್ಲಾಚಿಯಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮಾರಾಟ ಮಾಡಬೇಕಾಯಿತು. ನಂತರ ತನ್ನ ಎಲ್ಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿ ಅವರ ಪೂರ್ವಜರ ಮನೆಯನ್ನು ಸಹ ಮಾರಾಟ ಮಾಡಿದರು. “ನನ್ನ ವ್ಯವಹಾರವನ್ನು ಬೆಳೆಸಲು ನಾನು ತೆಗೆದುಕೊಂಡ ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ನನ್ನ ತಂದೆಯನ್ನು ಸಮಾಧಿ ಮಾಡಿದ ಭೂಮಿಯನ್ನು ಸಹಃ ನಾನು ಮಾರಾಟ ಮಾಡಬೇಕಾಯಿತು” ಎಂದು ನಿಜೀಶ್ ಸಹದೇವನ್ ವಿವರಿಸಿದರು.

“ನಾನು ಪರೋಟ ಬೇಯಿಸುತ್ತೇನೆ, ಚಹಾ ತಯಾರಿಸುತ್ತೇನೆ ಮತ್ತು ರೆಸ್ಟೋರೆಂಟ್‌ನಲ್ಲಿ ಡೆಲೆವರಿ ಮಾಡುತ್ತೇನೆ” ಎಂದು ಅವರು ಹೇಳುತ್ತಾರೆ. ಈಗ ಕೆಲಸ ಸಿಕ್ಕಿರುವುದರಿಂದ “ನನ್ನ ಬಾಲ್ಯದ ಗೆಳೆಯನಿಗೆ ಧನ್ಯವಾದಗಳು” ಎಂದು ಈ ಕೇರಳಿಗ ತಮ್ಮ ಕಥೆಯನ್ನು ದುಬೈ ಪತ್ರಿಕೆ “ಖಲೀಜ್ ಟೈಮ್ಸ್” ಜೊತೆ ಹಂಚಿಕೊಂಡಿದ್ದಾರೆ.

ಕಷ್ಟದ ಸಮಯ

“2016 ರಲ್ಲಿ, ಗಲ್ಫ್ ಮೂಲದ ಹೊಸ ಗ್ರಾಹಕರು ನನ್ನ ಉತ್ಪನ್ನವನ್ನು ಟನ್ನುಗಳ ಲೆಕ್ಕದಲ್ಲಿ ಕೊಳ್ಳುತ್ತೇವೆ ಎಂದು ಒಪ್ಪಿದ್ದರಿಂದ, ನಾನು 3 ಕೋಟಿ ರೂ ಸಾಲವನ್ನು ಪಡೆದು ಇನ್ನೂ ಐದು ಕಾರ್ಖಾನೆಗಳನ್ನು ತೆರೆದೆ” ಎಂದು ಅವರು ವಿವರಿಸುತ್ತಾರೆ. ಮುಂದಿನ 10 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವ ಲೆಕ್ಕಹಾಕುತ್ತಾ, ಸಹದೇವನ್ ತನ್ನ ವ್ಯವಹಾರವನ್ನು ವಿಸ್ತರಿಸಲು ಪ್ರಾರಂಭಿಸಿದರು.

“ನನ್ನ ಇಡೀ ಜೀವನವು ನವೆಂಬರ್ 2016 ರಲ್ಲಿ ನಿಂತುಹೋಯಿತು. ನೋಟು ಅಮಾನ್ಯೀಕರಣದಿಂದಾಗಿ ರಾತ್ರೋರಾತ್ರಿ ಗ್ರಾಹಕರು ಕೊಳ್ಳಲು ಹಿಂದೆ ಸರಿದರು. ಬೃಹತ್ ಮಟ್ಟದಲ್ಲಿ ಉತ್ಪಾದನೆಯಾಗಿತ್ತು, ಆದರೆ ಅದನ್ನು ಕೊಳ್ಳಲು ಯಾರೂ ಇರಲಿಲ್ಲ” ಎಂದು ಅವರು ಹೇಳುತ್ತಾರೆ. ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡುವ ಅನಿವಾರ್ಯತೆ ಬಂದಾಗ ಸಹದೇವನ್ ತನ್ನ ಒಡೆತನದ ಎಲ್ಲವನ್ನೂ ಮಾರಾಟ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ರಕ್ಷಣೆಗೆ ಬಂದ ಬಾಲ್ಯದ ಗೆಳೆಯ

ತನ್ನ ಮಾಜಿ ಪತ್ನಿಯೊಂದಿಗೆ  ವಿಚ್ಛೇದನದ ನಂತರ, ಸಹದೇವನ್ ಅವರ ಬಾಲ್ಯ ಸ್ನೇಹಿತ ದುಬೈ ಮೂಲದ ಉದ್ಯಮಿ ಅಬ್ದುಲ್ ರಶೀದ್ ದುಬೈಗೆ ಹೋಗುವಂತೆ ಸೂಚಿಸಿದರು. ಆಗ ರಶೀದ್ ತಮ್ಮ ಉದ್ಯಮವನ್ನು ಆಹಾರ ಮತ್ತು ಪಾನೀಯ ಕ್ಷೇತ್ರಕ್ಕೆ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದರು. “ಅವನು ನನ್ನ ಅವಸ್ಥೆಯನ್ನು ನೋಡಿ, ಆದಷ್ಟು ಬೇಗ ನನಗಾಗಿ ಈ ಚಹಾ ಅಂಗಡಿಯನ್ನು ಮಾಡಿ ಕೊಟ್ಟ. ರಶೀದ್ ನನಗೆ ದೇವರಿದ್ದಂತೆ. ಅಂದು ಅವನು ಇಲ್ಲದಿರುತ್ತಿದ್ದರೆ, ನಾನು ಇಲ್ಲಿ ಇರುತ್ತಿರಲಿಲ್ಲ. ಅವನು ನನ್ನನ್ನು ಮೇಲಕ್ಕೆತ್ತಿದ” ಎನ್ನುತ್ತಾರಲ್ಲದೆ ಇಂದು ನಾನು ನನ್ನ ಸಾಲಗಳನ್ನು ಮರುಪಾವತಿಸಿದ್ದೇನೆ ಮತ್ತು ನನ್ನ ವಯಸ್ಸಾದ ತಾಯಿಗೆ ಮನೆ ಮಾಡಿ ಕೊಟ್ಟಿದ್ದೇನೆ ಎನ್ನುತ್ತಾರೆ.

ಎಷ್ಟರಮಟ್ಟಿಗೆಂದರೆ, ಸಹದೇವನ್ ತನ್ನ ಐಫೋನ್‌ನಲ್ಲಿ ರಶೀದ್ ಹೆಸರನ್ನು ‘ಗಾಡ್’ ಎಂದು ಸೇವ್ ಮಾಡಿಟ್ಟುಕೊಂಡಿದ್ದಾರೆ. ಆರು ತಿಂಗಳಷ್ಟೇ ಆಗಿರುವ ಇವರ ರೆಸ್ಟೋರೆಂಟ್ ಚಹಾ, ತಿಂಡಿಗಳು ಮತ್ತು ಕೇರಳದ ಮಲಬಾರ್ ಪದ್ಧತಿಯ ಅಡುಗೆಗಳು ಬಹಳ ಬೇಗನೇ ಜನಪ್ರಿಯತೆಯನ್ನು ಗಳಿಸಿವೆ. “ನಾನು ಈ ವ್ಯವಹಾರವನ್ನು ಸ್ವಲ್ಪ ಸಮಯದ ನಂತರ ಪ್ರಾರಂಭಿಸಲು ಬಯಸಿದ್ದೆ, ಆದರೆ ನಿಜೀಶ್‌ಗೆ ಬಂದ ಕಷ್ಟ ನೋಡಿ ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ” ಎಂದು ರಶೀದ್ ಹೇಳುತ್ತಾರೆ.

ಈಗ, ಕರಮಾದ ಕಾಲುದಾರಿಗಳಲ್ಲಿರುವ ಈ ಪುಟ್ಟ ಚಹಾ ಅಂಗಡಿಯು ಯುಎಇಯಲ್ಲಿ ಯಶಸ್ವಿ ಬ್ರಾಂಡ್ ಆಗಿ ಬೆಳೆಯುತ್ತದೆ ಎಂದು ಸಹದೇವನ್ ಆಶಿಸಿದ್ದಾರೆ. ಅವರು ತಮ್ಮ ಜೀವನ ಕಥೆಯನ್ನು ಚಲನಚಿತ್ರವನ್ನಾಗಿ ಪರಿವರ್ತಿಸುವ ಆಶಯವನ್ನೂ ಹೊಂದಿದ್ದಾರೆ. “ನನ್ನ ಬಿಡುವಿನ ವೇಳೆಯಲ್ಲಿ ನಾನು ಚಲನಚಿತ್ರ ಸ್ಕ್ರಿಪ್ಟ್‌ಗಳನ್ನು ಬರೆಯುತ್ತೇನೆ. ಒಂದು ದಿನ ಚಲನಚಿತ್ರ ನಿರ್ಮಾಪಕನಾಗಲು ನಾನು ಬಯಸುತ್ತೇನೆ” ಎಂದು ಅವರು ಹೇಳುತ್ತಾರೆ.

ಅನುವಾದ: ಬಾಪು

ಕೃಪೆ: ಖಲೀಜ್ ಟೈಮ್ಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...