Homeಅಂತರಾಷ್ಟ್ರೀಯಅಪ್ಲಿಕೇಶನ್‌ಗಳ ನಿಷೇಧದ ನಂತರ ಹೊಸ ವ್ಯಾಪಾರ ನಿರ್ಬಂಧಗಳನ್ನು ಹೇರಿದ ಭಾರತ

ಅಪ್ಲಿಕೇಶನ್‌ಗಳ ನಿಷೇಧದ ನಂತರ ಹೊಸ ವ್ಯಾಪಾರ ನಿರ್ಬಂಧಗಳನ್ನು ಹೇರಿದ ಭಾರತ

ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ರಾಷ್ಟ್ರಗಳ ಕಂಪೆನಿಗಳು ಕೈಗಾರಿಕಾ ಇಲಾಖೆಯಲ್ಲಿ ನೋಂದಾಯಿಸುವವರೆಗೆ ಸರಕು ಮತ್ತು ಸೇವೆಗಳಿಗಾಗಿ ಸರ್ಕಾರದ ಒಪ್ಪಂದಗಳಿಗೆ ಬಿಡ್ಡಿಂಗ್ ಮಾಡುವುದನ್ನು ನಿರ್ಬಂಧಿಸಲಾಗಿದೆ.

- Advertisement -
- Advertisement -

ಗಡಿ ಸಂಘರ್ಷದ ನಂತರ ಚೀನಾದೊಟ್ಟಿಗಿನ ವ್ಯವಹಾರಗಳನ್ನು ಹೊರಗಿಡುವುದು ಮತ್ತು ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಶಿಥಿಲಗೊಳಿಸುವ ಉದ್ದೇಶದಿಂದ ಭಾರತ ತನ್ನ ನೆರೆಹೊರೆ ದೇಶಗಳ ಮೇಲೆ ಹೊಸ ವ್ಯಾಪಾರ ನಿರ್ಬಂಧಗಳನ್ನು ಹೇರಿದೆ.

ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ರಾಷ್ಟ್ರಗಳ ಕಂಪೆನಿಗಳು ಕೈಗಾರಿಕಾ ಇಲಾಖೆಯಲ್ಲಿ ನೋಂದಾಯಿಸುವವರೆಗೆ ಸರಕು ಮತ್ತು ಸೇವೆಗಳಿಗಾಗಿ ಸರ್ಕಾರದ ಒಪ್ಪಂದಗಳಿಗೆ ಬಿಡ್ಡಿಂಗ್ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹಿಂದೆ, ಟೆಂಡರ್‌ಗಳಿಗೆ ಬಿಡ್ಡಿಂಗ್ ಮಾಡುವಾಗ ಸರಬರಾಜುದಾರರು ಸರ್ಕಾರದ ಇ-ಮಾರ್ಕೆಟ್ ‌ಪ್ಲೇಸ್‌ನಲ್ಲಿ ಮೂಲದ ದೇಶವನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಿದ್ದರು.

ಭಾರತದ ಚೀನಾ ಅವಲಂಬನೆಯನ್ನು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಸರಣಿಯಲ್ಲಿ ಈ ಕ್ರಮವು ಇತ್ತೀಚಿನದ್ದಾಗಿದೆ. ಇದಕ್ಕೂ ಮೊದಲು ಸರ್ಕಾರವು 59 ಚೀನೀ ಆ್ಯಪ್‌ಗಳ ಬಳಕೆಯನ್ನು ನಿಷೇಧಿಸಿತ್ತು.

ಗಡಿ ಸಂಘರ್ಷವನ್ನು ತಗ್ಗಿಸಲು ಎರಡೂ ರಾಷ್ಟ್ರಗಳು ಮಾತುಕತೆಗಳಲ್ಲಿ ತೊಡಗಿರುವ ಈ ಸಮಯದಲ್ಲಿ ಭಾರತ ಸರ್ಕಾರ ಇಂತಹ ನಿರ್ಧಾರವನ್ನು ಕೈಗೊಂಡಿದೆ. ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಸೈನಿಕರ ನಿಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಚೀನಾದ ಕಡೆಯವರು ಪ್ರಾಮಾಣಿಕರಾಗಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ಭಾರತ ಗುರುವಾರ ಹೇಳಿದೆ.

ಇತ್ತೀಚಿನ ನಡೆಯ ಇತರ ಪ್ರಮುಖ ಅಂಶಗಳು:

  • ಡಿಸೆಂಬರ್ 31 ರವರೆಗೆ ಕೊರೊನಾ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸುವುದು ಸೇರಿದಂತೆ ಕೆಲವು ಸಂದರ್ಭಗಳಲ್ಲಿ ನಿಯಮಗಳನ್ನು ಸಡಿಲಿಸಲಾಗಿದೆ.
  • ಎಲ್ಲಾ ಹೊಸ ಟೆಂಡರ್‌ಗಳಿಗೆ ಅನ್ವಯಿಸುವ ಹೊಸ ನಿಯಮಗಳು; ಟೆಂಡರ್‌ಗಳನ್ನು ಈಗಾಗಲೇ ಆಹ್ವಾನಿಸಿರುವ ಸಂದರ್ಭಗಳಲ್ಲಿ, ಅರ್ಹತೆಯ ಮೌಲ್ಯಮಾಪನದ ಆರಂಭಿಕ ಹಂತವು ಪೂರ್ಣಗೊಳ್ಳದಿದ್ದರೆ, ನೋಂದಾಯಿಸದ ಬಿಡ್‌ದಾರರು ಅರ್ಹತೆ ಪಡೆಯುವುದಿಲ್ಲ.
  • ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ರಾಷ್ಟ್ರಗಳಿಂದ ನೋಂದಾಯಿಸದ ಘಟಕಗಳಿಗೆ ಉಪ ಗುತ್ತಿಗೆ ನೀಡಲು ಕೂಡಾ ಗುತ್ತಿಗೆದಾರರಿಗೆ ಅವಕಾಶವಿರುವುದಿಲ್ಲ.
  • ಮೊದಲ ಹಂತದ ಮೌಲ್ಯಮಾಪನ ಪೂರ್ಣಗೊಂಡರೆ ಟೆಂಡರ್‌ಗಳನ್ನು ರದ್ದುಗೊಳಿಸಲಾಗುತ್ತದೆ.
  • ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವ ಸರ್ಕಾರಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಗಳಿಗೆ ಹೊಸ ನಿಯಮಗಳು ಅನ್ವಯಿಸುತ್ತದೆ.
  • ರಾಜ್ಯ ಸರ್ಕಾರಗಳು ಸಮರ್ಥ ಪ್ರಾಧಿಕಾರವನ್ನು ನೇಮಿಸಿ ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದಕ್ಕಾಗಿ ರಾಜಕೀಯ ಮತ್ತು ಭದ್ರತಾ ಅನುಮತಿ ಕಡ್ಡಾಯವಾಗಿದೆ.

ಭಾರತ 2019 ರಲ್ಲಿ ಚೀನಾದಿಂದ 70 ಬಿಲಿಯನ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದು, ದ್ವಿಪಕ್ಷೀಯ ವ್ಯಾಪಾರ ಕೊರತೆಯ ನಂತರ ಸುಮಾರು 50 ಬಿಲಿಯನ್ ಆಗಿತ್ತು.


ಇದನ್ನೂ ಓದಿ: ಚೀನಾ ಕಂಪೆನಿ ಸಹಿತ 50 ಹೂಡಿಕೆಗಳನ್ನು ಪರಿಶೀಲಿಸುತ್ತಿರುವ ಕೇಂದ್ರ ಸರ್ಕಾರ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...