Homeಅಂತರಾಷ್ಟ್ರೀಯಸುದೀರ್ಘ 11 ಗಂಟೆ ಸಭೆ ನಡೆಸಿದ ಇಂಡೋ-ಚೀನಾ ಲೆಫ್ಟಿನೆಂಟ್ ಕಮಾಂಡರ್‌ಗಳು

ಸುದೀರ್ಘ 11 ಗಂಟೆ ಸಭೆ ನಡೆಸಿದ ಇಂಡೋ-ಚೀನಾ ಲೆಫ್ಟಿನೆಂಟ್ ಕಮಾಂಡರ್‌ಗಳು

- Advertisement -
- Advertisement -

ಭಾರತೀಯ ಸೇನೆ ಮತ್ತು ಚೀನೀ ಸೇನೆಯ ಉನ್ನತ ಮಿಲಿಟರಿ ಅಧಿಕಾರಿಗಳು ಎರಡೂ ಸೈನ್ಯಗಳ ನಡುವೆ ಶಾಂತಿ ಸ್ಥಾಪಿಸಲು ಸೋಮವಾರ (ಜೂನ್ 23) ಎರಡನೇ ಸುತ್ತಿನ ಮ್ಯಾರಥಾನ್ ಸಭೆಯನ್ನು ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಬದಿಯಲ್ಲಿರುವ ಮೊಲ್ಡೊದಲ್ಲಿ ನಡೆಸಿದ್ದಾರೆ.

ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ಕೆಲ ದಿನಗಳ ನಂತರ ಈ ಮಾತುಕತೆ ನಡೆಯುತ್ತಿದೆ.

ಸೋಮವಾರದ ಸಭೆಯಲ್ಲಿ ಚೀನಾದೊಂದಿಗಿನ ಸಮಸ್ಯೆಯನ್ನು ಎತ್ತಿ ತೋರಿಸಿದ ಭಾರತ, ಪೂರ್ವ ಲಡಾಖ್‌ನ ಎಲ್ಲಾ ಘರ್ಷಣೆ ಸ್ಥಳಗಳಿಂದ, ವಿಶೇಷವಾಗಿ ಚೀನಿ ಸೇನೆ ಸ್ಥಾಪಿಸಿರುವ ಬಂಕರ್‌ಗಳು ಮತ್ತು ವೀಕ್ಷಣಾ ಪೋಸ್ಟ್‌ಗಳನ್ನು , ಪಾಂಗೊಂಗ್ ತ್ಸೊದ ಫಿಂಗರ್ ಪ್ರದೇಶದಿಂದ ಚೀನಾದ ಸೈನ್ಯವನ್ನು ತಕ್ಷಣ ಹಿಂದೆ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿದೆ ಎಂದು ವರದಿಗಳು ತಿಳಿಸಿವೆ.

ಲೇಹ್ ಕಮಾಂಡರ್ 14 ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಪ್ರದೇಶದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ನೇತೃತ್ವದ ನಿಯೋಗಗಳ ನಡುವೆ ಈ ಸಭೆ ನಡೆದಿದೆ.

ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ನಂತರ ನಡೆದ ಮೊದಲ ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆ ಇದಾಗಿದೆ.

ಬೆಳಿಗ್ಗೆ 11.30 ಕ್ಕೆ ಪ್ರಾರಂಭವಾದ ಮಾತುಕತೆ ರಾತ್ರಿ 10.15 ರವರೆಗೆ ಸರಿ ಸುಮಾರು ಹನ್ನೊಂದು ಗಂಟೆಗಳ ಕಾಲ ಈ ಸಭೆ ನಡೆದವು ಎನ್ನಲಾಗಿದೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಪೂರ್ವ ಲಡಾಖ್‌ನಲ್ಲಿ ಸೈನ್ಯವನ್ನು ನಿಷ್ಕ್ರಿಯಗೊಳಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದ್ದು, ಈ ಮಾತುಕತೆಯ ಫಲಿತಾಂಶದ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.

ಇದಲ್ಲದೆ, ಸೋಮವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಉನ್ನತ ಸೇನಾ ಕಮಾಂಡರ್‌ಗಳು ಪೂರ್ವ ಲಡಾಕ್ ನಿಲುಗಡೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆಯ ಒಟ್ಟಾರೆ ಪರಿಸ್ಥಿತಿಯ ಬಗ್ಗೆ ವಿವರವಾದ ಚರ್ಚೆಯನ್ನು ನಡೆಸಿದ್ದಾರೆಂದು ದಿ ಫೆಡರಲ್ ವರದಿ ಮಾಡಿದೆ.


ಓದಿ: ವಾಟ್ಸಾಪ್‌ ಮೆಸೇಜನ್ನು ನಂಬಿ ಭಾರತ-ಚೀನಾ ಸಂಘರ್ಷದ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ’ಟೈಮ್ಸ್ ನೌ’


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...