ಬೈರುತ್ ನ ಬಂದರು ಸ್ಫೋಟದಿಂದಾಗಿ ರಾಜಧಾನಿಯು ಧ್ವಂಸಗೊಂಡ ನಂತರ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಲೆಬನಾನ್ ಮಾಹಿತಿ ಸಚಿವೆ ಮನಲ್ ಅಬ್ದೆಲ್ ಸಮದ್ ರಾಜೀನಾಮೆ ನೀಡಿದ್ದಾರೆ.
“ಬೃಹತ್ ಬೈರುತ್ ದುರಂತದ ನಂತರ, ನಾನು ಸರ್ಕಾರಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ಅವರು ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಾಗೆಯೇ ತಾವು ಸಾವು ನೋವುಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದಕ್ಕೆ ಲೆಬನಾನಿನ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದರು.
ಲೆಬನಾನ್‌ನ ಮರೋನೈಟ್ ಚರ್ಚ್‌ನ ಮುಖ್ಯಸ್ಥರು, ಆಗಸ್ಟ್ 4 ರ ಸ್ಫೋಟದ ಕಾರಣಕ್ಕಾಗಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿ ಸರ್ಕಾರ ವಜಾಗೊಳಿಸಲು ಆಗ್ರಹಿಸಿದ್ದಾರೆ.
ಸ್ಫೋಟದಿಂದ ಉದ್ರೇಕಗೊಂಡ ಲೆಬನಾನಿನ ಪ್ರತಿಭಟನಾಕಾರರು ರ್ಯಾಲಿ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಹಸನ್ ಡಯಾಬ್ ಅವರ ಸಂಪುಟದ ಮೇಲೆ ಒತ್ತಡ ಹೇರಲು ಪ್ರತಿಭಟನೆಗಳು ನಡೆಯುತ್ತಿವೆ.
“ಶಾಸಕರೊಬ್ಬರು ಅಥವಾ ಸಚಿವರೊಬ್ಬರು ರಾಜೀನಾಮೆ ನೀಡಿದರೆ ಸಾಲದು” ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ಸರ್ಕಾರವು ರಾಜೀನಾಮೆ ನೀಡುವುದು ಅವಶ್ಯಕ, ಏಕೆಂದರೆ ಅದು ದೇಶವನ್ನು ಮುಂದೆ ಸಾಗಿಸಲು ಅಸಮರ್ಥವಾಗಿದೆ ಎದು ಒತ್ತಾಯಿಸಿದ್ದಾರೆ. ಸ್ಫೋಟದ ನಂತರ ಕನಿಷ್ಠ ಆರು ಶಾಸಕರು ರಾಜಿನಾಮೆ ನೀಡಿದ್ದಾರೆ.
ಇದನ್ನೂ ಓದಿ: ಲೆಬನಾನ್ ಬೈರುತ್ ಬಂದರಿನಲ್ಲಿ ಬೃಹತ್ ಸ್ಫೋಟ!
ಬೈರುತ್ ಸ್ಪೋಟ: 700 ಟನ್ ಸ್ಫೋಟಕ ರಾಸಾಯನಿಕದ ಬಗ್ಗೆ ಚಿಂತೆಯಲ್ಲಿರುವ ಚೆನ್ನೈ


