Homeಕರ್ನಾಟಕಮಕ್ಕಳ ಮನೋವಿಕಾಸಕ್ಕಾಗಿಯೇ ಸ್ಥಾಪಿತವಾದ ‘ಎಲ್ಲರ ಪುಸ್ತಕ’ ಪ್ರಕಾಶನದಿಂದ ವಿನೂತನ ಪ್ರಯೋಗ

ಮಕ್ಕಳ ಮನೋವಿಕಾಸಕ್ಕಾಗಿಯೇ ಸ್ಥಾಪಿತವಾದ ‘ಎಲ್ಲರ ಪುಸ್ತಕ’ ಪ್ರಕಾಶನದಿಂದ ವಿನೂತನ ಪ್ರಯೋಗ

ಮಕ್ಕಳಿಗಾಗಿಯೇ ಪುಸ್ತಕಗಳನ್ನು ಹೊರತರಲು ಸ್ಥಾಪಿತವಾಗಿರುವ ‘ಎಲ್ಲರ ಪುಸ್ತಕ’ ಪ್ರಕಾಶನ| ಮಕ್ಕಳ ದಿನಾಚರಣೆಯ ವಿಶೇಷ ವರದಿ

- Advertisement -
- Advertisement -

“ನನ್ನ ಮಗಳು ಸುರಗಿಗಾಗಿ ಕನ್ನಡದಲ್ಲಿ ಚಿತ್ರಪುಸ್ತಕಗಳನ್ನು ಹುಡುಕಲಾರಂಭಿಸಿದೆ. ಇಂಗ್ಲಿಷ್‌ನಲ್ಲಿ ಮಕ್ಕಳಿಗಾಗಿ ಚಿತ್ರ ಪುಸ್ತಕಗಳು ಸಿಗುತ್ತಿದ್ದವು. ಆದರೆ ಕನ್ನಡದಲ್ಲಿ ಇಲ್ಲದಿರುವುದನ್ನು ಗಮನಿಸಿದೆ. ನನ್ನ ಮಗಳಿಗಾಗಿ ಚಿತ್ರ ಪುಸ್ತಕವನ್ನು ಬರೆದೆ. ಇದೇ ಪುಸ್ತಕವನ್ನು ನನ್ನಲ್ಲಿ ಕಲಿಯುತ್ತಿದ್ದ ಮಕ್ಕಳಿಗೂ ತೋರಿಸಿದಾಗ ಆ ಮಕ್ಕಳು ಬಹಳ ಖುಷಿಪಡುತ್ತಿದ್ದರು. ಹೀಗಾಗಿ ಇಂತಹ ಪುಸ್ತಕಗಳನ್ನು ಹೊರತರಬೇಕೆಂದು ನಿರ್ಧರಿಸಿ, ‘ಎಲ್ಲರ ಪುಸ್ತಕ’ ಎಂಬ ಪ್ರಕಾಶನ ಆರಂಭಿಸಲಾಯಿತು” ಎನ್ನುತ್ತಾರೆ ಚಿತ್ರ ಕಲಾವಿದೆ, ಶಿಕ್ಷಕಿ ವನಿತಾ ಅಣ್ಣಯ್ಯ ಯಾಜಿ.

ಮೂಲತಃ ಹೊನ್ನಾವರದವರಾದ ವನಿತಾ ಯಾಜಿಯವರು ನೀನಾಸಂ ವಿದ್ಯಾರ್ಥಿಯೂ ಹೌದು.  ನೀನಾಸಂ ಮತ್ತು ಶಾಂತಿನಿಕೇತನದಲ್ಲಿ ಕಲೆ ಮತ್ತು ನಟನೆಯನ್ನು ಅಭ್ಯಾಸ ಮಾಡಿರುವ ಅವರು ತಮ್ಮ ಪತಿ ಕೈಲಾಶ್‌ ತಿಪಟೂರು ಅವರೊಂದಿಗೆ ಸೇರಿ ‘ಎಲ್ಲರ ಪುಸ್ತಕ’ ಎಂಬ ಪ್ರಕಾಶನವನ್ನು ಆರಂಭಿಸಿ ಮಕ್ಕಳಿಗಾಗಿ ಚಿತ್ರಪುಸ್ತಕಗಳನ್ನು ಹೊರತರುತ್ತಿದ್ದಾರೆ.

‘ಟೊಮೊಟೋ ಫಿಶ್‌’, ‘ಮೊದಲ ಓದು’, ‘ರುಚಿ’, ‘ನವಿಲೂರ ಸಂತೆ’, ‘ಏಕೆ ಬೇಕು ಕನ್ನಡ’, ‘ಬೀಜ’, ‘ಚಿಟ್ಟೆ’ ಎಂಬ ಚಿತ್ರಪುಸ್ತಕಗಳನ್ನು ಹೊರತರಲಾಗಿದ್ದು, ಅದರಲ್ಲಿ ‘ಚಿಟ್ಟೆ’ ಚಿತ್ರಪುಸ್ತಕವು ಮೂರನೇ ತರಗತಿಯ ಪುಟಾಣಿ ಕಾವೇರಿ ಬರೆದದ್ದಾಗಿದೆ. ಕಳೆದ ಮಾರ್ಚ್‌‌ನಲ್ಲಿ ಪ್ರಕಾಶನ ಆರಂಭವಾಗಿದ್ದು, ಹೊಸ ಪ್ರಯೋಗಗಳ ಮೂಲಕ ಮಕ್ಕಳ ಮನೋವಿಕಾಸಕ್ಕೆ ಪ್ರೋತ್ಸಾಹಿಸುತ್ತಿದೆ. ಡಿಜಿಟಲ್‌ ಕಲೆಯನ್ನು ಬಳಸದೆ ಕೈಯಲ್ಲೇ ಚಿತ್ರಗಳನ್ನು ಬರೆದು ಪ್ರಕಟಿಸುತ್ತಿರುವುದು ಮತ್ತೊಂದು ವಿಶೇಷ. ಮಕ್ಕಳಿಗೆ ಚಿತ್ರಕಲೆಯ ಮೂಲ ಪರಿಚಯವೂ ಆಗಬೇಕೆಂಬುದು ವನಿತಾ ದಂಪತಿಯ ಆಶಯ.

“ಚಿಟ್ಟೆ ಪುಸ್ತಕದ ಕರ್ತೃ ಕಾವೇರಿ, ಪೂರ್ಣ ಶಾಲೆಯಲ್ಲಿ ನನ್ನ ವಿದ್ಯಾರ್ಥಿ ಆಗಿದ್ದಳು. ಪುಟ್ಟ ಮಕ್ಕಳಿಗೆ ಪೇಪರ್, ಪೇಂಟ್ ಕೊಟ್ಟು ಇಷ್ಟಪಟ್ಟದ್ದನ್ನು ಚಿತ್ರಿಸಲು ಬಿಡುತ್ತಿದ್ದೆವು. ಏಳು ವರ್ಷದ ಮಗು ಕಾವೇರಿ ಮೂವತ್ತು ನಿಮಿಷಗಳ ತರಗತಿಯಲ್ಲಿ 15ರಿಂದ 20 ಪೇಂಟಿಂಗ್ ಮಾಡಿರುತ್ತಿದ್ದಳು. ಕಾವೇರಿಗೆ 8 ವರ್ಷವಾಗುವ ಹೊತ್ತಿಗೆ ಹೆಚ್ಚು ನಿಖರವಾಗಿ ಪೇಂಟಿಂಗ್ ಮಾಡಿ, ವಸ್ತು ವಿಷಯವನ್ನು ಒಳಗೊಂಡು ಚಿತ್ರಿಸಲು ಶುರುಮಾಡಿದಳು. ಈ ಪುಸ್ತಕ ಆಕೆ ಮೂರನೇ ತರಗತಿಯಲ್ಲಿದ್ದಾಗ ಚಿತ್ರಿಸಿದ್ದು” ಎನ್ನುತ್ತಾರೆ ವನಿತಾ ಯಾಜಿ.

ಇದನ್ನೂ ಓದಿರಿ: ಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್

ಆನ್‌ಲೈನ್‌ ಮೂಲಕ ಮಕ್ಕಳಿಗೆ ತರಗತಿಗಳನ್ನು ವನಿತಾ ನಡೆಸಿಕೊಡುತ್ತಿದ್ದಾರೆ. ಕೇರಳಾ, ದೆಹಲಿಯ ಮಕ್ಕಳೂ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಚಿತ್ರಪುಸ್ತಕ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಈವರೆಗೆ ನಾಲ್ಕು ಪುಸ್ತಕಗಳನ್ನು ಹೊರತಂದಿದ್ದು, ಮಕ್ಕಳ ದಿನಾಚರಣೆಯಂದು (ಭಾನುವಾರ, ನವೆಂಬರ್‌‌ 14, 2021) ಮತ್ತೆ ಮೂರು ಪುಸ್ತಕಗಳನ್ನು ಎಲ್ಲರ ಪುಸ್ತಕ ಪ್ರಕಾಶನ ಪ್ರಕಟಿಸಿದೆ.

‘ಏಕೆ ಬೇಕು ಕನ್ನಡ!?’ ಪುಸ್ತಕವು ಕನ್ನಡ ಭಾಷೆಯ ಬೆಡಗು, ಕರ್ನಾಟಕದ ವೈವಿಧ್ಯತೆಯನ್ನು ಸರಳವಾಗಿ ಮಕ್ಕಳಿಗೆ ಪರಿಚಯಿಸುವ ಪುಸ್ತಕವಾಗಿದೆ. ‘ಟೊಮಾಟೊ ಫಿಶ್’ ಪ್ರಕಾಶನದ ಮೊದಲ ಕತೆ-ಚಿತ್ರ ಪುಸ್ತಕ. ‘ಚಿಟ್ಟೆ’ ಮಕ್ಕಳಲ್ಲಿ ಕಥೆಕಟ್ಟುವ, ಚಿತ್ರ ಬರೆಯುವ ಕೌಶಲವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಕಟವಾದ ಪುಸ್ತಕ.

“ನಮ್ಮ ಮೊದಲ ಎರಡು ಪುಸ್ತಕಗಳಿಂದಲೂ ಈವರೆಗೆ ಹೊಸತನ, ಗುಣಮಟ್ಟವನ್ನು ಹೆಚ್ಚಿಸಲು ಪರಿಶ್ರಮ ಪಡುತ್ತಿದ್ದೇವೆ. ನಮ್ಮ ಪುಸ್ತಕಗಳ ಪುಟವಿನ್ಯಾಸ ಮಾಡುತ್ತಿರುವ ಮನೋಜ್ ಹಾಗೂ ಎಲ್ಲಾ ಮುದ್ರಕರ ಶ್ರಮವನ್ನು ನಾವು ಇಲ್ಲಿ ನೆನೆಯಬಯಸುತ್ತೇವೆ. ಪ್ರಕಾಶನ ಪ್ರಾರಂಭವಾದ ಮೇಲೆ ನಮ್ಮ ಕಪಾಟಿನಲ್ಲಿ ಪುಸ್ತಕಗಳು ದ್ವಿಗುಣಗೊಂಡಿವೆ. ಹಲವು ಪ್ರಕಾಶಕರ ಅದ್ಭುತ ಪುಸ್ತಕಗಳು ನಮ್ಮನ್ನು ಬೆರಗುಗೊಳಿಸಿವೆ. ಕನ್ನಡದಲ್ಲಿ ಇಂಥ ಹತ್ತಾರು ಪುಸ್ತಕಗಳನ್ನು ರೂಪಿಸಬೇಕು ಎಂಬ ಉತ್ಸಾಹಕ್ಕೆ ಸ್ಫೂರ್ತಿ ನೀಡಿವೆ. ಇದರ ಫಲವಾಗಿ ಈ ಸಲದ ನಮ್ಮ ಪುಸ್ತಕಗಳು ಸುಂದರವಾಗಿ ಮೂಡಿಬಂದಿವೆ” ಎಂಬುದು ವನಿತಾ ದಂಪತಿಯ ಸಂತೃಪ್ತಿ.

ಮಕ್ಕಳಿಗಾಗಿ ಚಿತ್ರಪುಸ್ತಕಗಳನ್ನು ಪ್ರಕಟಿಸುತ್ತಿರುವ ವನಿತಾ ಯಾಜಿ, ಕೈಲಾಶ್‌ ತಿಪಟೂರು ಅವರು ತಮ್ಮ ಮಗು ಸುರಗಿಯೊಂದಿಗೆ.

“ಭಾಷೆಗೆ ಮೊದಲು ಮನುಷ್ಯ ಸಂವಹನಕ್ಕಾಗಿ ಚಿತ್ರಗಳನ್ನು ಬಿಡಿಸುತ್ತಿದ್ದ. ಬೇಟೆಯ ಸೊಗಸನ್ನು, ರೋಚಕತೆಯನ್ನು ಅಭಿನಯಿಸಿ ತೋರಿಸುತ್ತಿದ್ದ, ಚಪ್ಪಾಳೆ ಗಿಟ್ಟಿಸುತ್ತಿದ್ದ. ಪುರಾತನ ನಾಗರಿಕತೆಗಳ ಪುರಾವೆಯಂತೆ ಭೂಮಿಯ ತುಂಬ ಹಲವು ಚಿತ್ರ, ನಕಾಶೆಗಳು ಉಳಿದು ಹೋಗಿವೆ. ಚಿತ್ರ ಬರೆಯುವುದು ಆಡುವುದಕ್ಕೆ ಮೊದಲು ಮನುಷ್ಯ ಕಂಡುಕೊಂಡ ಅಭಿವ್ಯಕ್ತಿ. ಇಂದಿಗೆ ಚಿತ್ರಕಲೆಯನ್ನು ಆಡಲಾಗದ ಭಾವಗಳ ಅಭಿವ್ಯಕ್ತಿಗೆ ಬಳಸಿ ಚಿಕಿತ್ಸೆ ನೀಡುವುದಿದೆ. ಸಂತೋಷಕ್ಕೆ, ಏಕಾಗ್ರತೆಗೆ, ಕಾಲ ಕಳೆಯಲು, ಮಕ್ಕಳ ಬೆರಳುಗಳ ಸರಾಗ ಚಲನೆಗೆ, ಏನೂ ಕಾರಣವೇ ಇಲ್ಲದೆ ಚಿತ್ರ ಬರೆಯುವುದು ಎಲ್ಲಾ ವಯಸ್ಸಿನವರಿಗೂ ಅಚ್ಚು ಮೆಚ್ಚು. ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ. ಸರಿಯಾದ ಮಾರ್ಗದರ್ಶನವಿಲ್ಲದೆ, ಮುಜುಗರಕ್ಕೆ ಒಳಗಾಗಿ, ಬರೀ ಕೌಶಲವನ್ನು ಕಲೆಯೆಂದು ತಪ್ಪು ಗ್ರಹಿಸಿ ಚಿತ್ರಿಸುವುದ ಬಿಟ್ಟಿರುವ ಬಹುತೇಕ ಮಂದಿ ತಮ್ಮಗನಿಸಿದ್ದನ್ನು, ತಮ್ಮತನವನ್ನು ಚಿತ್ರಿಸಿದರೆ ನಿರಾಳವಾಗಿ ಬಿಡುತ್ತಾರೆ” ಎಂದು ಚಿತ್ರಕಲೆಯ ಮಹತ್ವವನ್ನು ವಿವರಿಸುತ್ತಾರೆ ವನಿತಾ ಯಾಜಿ.

(‘ಎಲ್ಲರ ಪುಸ್ತಕ’ ಪ್ರಕಾಶನದ ಚಿತ್ರಪುಸ್ತಕಗಳಿಗಾಗಿ ಮೊ.ಸಂ. 9141184535, ಇಮೇಲ್‌- [email protected] ಸಂಪರ್ಕಿಸಬಹುದು)


ಇದನ್ನೂ ಓದಿರಿ: ಕಿತ್ತೂರು ಕರ್ನಾಟಕಕ್ಕೆ ಉತ್ತರ ಕನ್ನಡ ಸೇರ್ಪಡೆ; ಜಿಲ್ಲೆಯಲ್ಲಿ ಗೊಂದಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...