- Advertisement -
- Advertisement -
ಫೆಬ್ರವರಿ 24 ಕ್ಕೆ ಅಹ್ಮದಾಬಾದ್ ನ ಮೊತೇರಾದ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಮೇರಿಕಾ ಅಧ್ಯಕ್ಷ ಟ್ರಂಪ್ ಭೇ ಟಿಯ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಸೇರಿಸುವಂತೆ ಶಿಕ್ಷಣ ಇಲಾಖೆಗೆ ನೀಡಲಾಗಿದೆ ಎಂದು ದಿ ಇಂಡಿಯ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದವರೆಗೆ ರೋಡ್ ಶೋ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಹಮದಾಬಾದ್ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದ ಶಿಕ್ಷಣ ಇಲಾಖೆಗಳಿಗೆ 25 ಸಾವಿರ ವಿದ್ಯಾರ್ಥಿಗಳನ್ನು ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದ್ದು, ಗುಜರಾತ್ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಇದೇ ರೀತಿಯ ಹಾಜರಾತಿಯನ್ನು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ . ಇದಲ್ಲದ ಗ್ರಾಮೀಣ ಮತ್ತು ನಗರದ ಸರ್ಕಾರಿ ಶಾಲೆಗಳಿಂದ ಸುಮಾರು 1,000 ಶಿಕ್ಷಕರು ಪ್ರೇಕ್ಷಕರ ಭಾಗವಾಗುವಂತೆ ಕೇಳಿಕೊಳ್ಳಲಾಗಿದೆ.
ಇದನ್ನೂ ಓದಿ: ಟ್ರಂಪ್ ಆಗಮನಕ್ಕೆ ತಯಾರಿ : ಸ್ಲಂಗಳಿಗೆ ಅಡ್ಡವಾಗಿ ಗೋಡೆ ಕಟ್ಟುತ್ತಿರುವ ಗುಜರಾತ್ ಸರ್ಕಾರ!!


