ಸಂವಿಧಾನ ವಿರೋಧಿ ಹಾಗೂ ದಲಿತ, ಹಿಂದುಳಿದ, ಮಹಿಳೆಯರ ಹಕ್ಕುಗಳ ಅಂದಿನ ಮನುವಾದಿ ಆರ್ಯಪಳೆಯುಳಿಕೆಗಳೆ ಇಂದೂ ಯುಜಿಸಿ- 2026ರ ಕರಡು ವಿರುದ್ಧ ಷಂಡ್ಯಂತ್ರ ರೂಪಿಸುತ್ತಿರುವುದು. ಕೇವಲ 3% ಜನಾಭಿಪ್ರಾಯವೇ ಭಾರತೀಯ ಒಟ್ಟು ಬಹುಸಮುದಾಯಗಳ ಅಭಿಪ್ರಾಯವೆಂಬಂತೆ ಬಿಂಬಿಸಿ, ಎಸ್ಸಿ, ಎಸ್ಟಿ, ಓಬಿಸಿ ಜನರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಮನುವಾದದ ಕುತಂತ್ರವನ್ನು ಅರಿಯುವುದು ಜರೂರಿದೆ.
ಅಸಮಾನತೆಯ ಅಮಾನವೀಯ ವ್ಯವಸ್ಥಗೆ ಬಲಿಯಾಗಿ ಅಪಮಾನವನ್ನು ನುಂಗಿ ಹಲವಾರು ಶತಮಾನಗಳಿಂದ ಪ್ರಾಣಿಗಳಿಗಿಂತ ಕಡೆಯಾಗಿ ಬದುಕು ಸಾಗಿಸಿದ ಶೋಷಿತ ಸಮುದಾಯಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದೂಳಿದ ವರ್ಗದ(ಶೂದ್ರ)ಸಮುದಾಯಗಳ ಏಳಿಗೆಗಾಗಿ, ವರ್ಣವ್ಯವಸ್ಥೆ ಪ್ರತಿಪಾದಿಸುವ ಮನುಧರ್ಮಶಸ್ತç ಸುಟ್ಟು. ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ. ಭಾರತದ ಶೋಷಿತ-ಹಿಂದುಳಿದ ಸಮುದಾಯಗಳ ವಿಮೋಚನೆಯ ಹೊಸಯುಗಕ್ಕೆ ನಾಂದಿ ಹಾಡಿದರು.
ಹಲವು ಅಪಸ್ವರಗಳ ನಡುವೆಯೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಭಾರತ ಸಂವಿಧಾನದ ಮೂಲಕ ಸ್ಥಾಯಿಗೊಳಿಸಿ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವವನ್ನು ರೂಪಿಸಿದರು. ಆದರೆ ವಿಪರ್ಯಾಸವೆಂದರೆ ಇಂತಃ ಸಮಾನತೆಯ ಪ್ರಜಾಪ್ರಭುತ್ವ ಮೌಲ್ಯಗಳ ತತ್ವಪ್ರತಿಪಾದಕ ಸಂವಿಧಾನವೇ ಆತಂಕದಲ್ಲಿದೆ. ಸಂವಿಧಾನ ಕಾರಣಕ್ಕಾಗಿ ಸಮಾಜಮುಖಿಯಾಗಿ ಬದುಕಲು ಹಕ್ಕು-ಅಧಿಕಾರದ ಅವಕಾಶ ಮತ್ತು ಮಾನವ ಹಕ್ಕುಗಳು ಭಾರತೀಯ ಎಲ್ಲ ವರ್ಗದವರಿಗೂ ಲಬಿಸಿದೆ. ಆದರೂ ಕೂಡ ಸಂವಿಧಾನ ವಿರೋಧಿ ದೋರಣೆಯ ಮನಸ್ಥಿತಿಗಳು ಇಂದಿಗೂ ಜೀವಂತವಾಗಿವೆ.
ಶಿಕ್ಷಣದ ಮೂಲಕ ಶತಮಾನದ ಜಾತಿ-ಲಿಂಗ, ವರ್ಗ ತಾರತಮ್ಯದಂತ ದಾರಿದ್ರ್ಯಗಳಿಂದ ಬಿಡುಗಡೆ ಬಯಸಿದ ಕನಸಿನ ಹೃದಯಗಳಾದ ದಲಿತ-ಹಿಂದುಳಿದ-ಬುಡಕಟ್ಟು ಸಮುದಾಯದ ವಿದ್ಯಾರ್ಥಿ ಸಮೂಹಗಳು, ಸಂವಿಧಾನ ಜಾರಿಯಾಗಿ 75ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ವ್ಯಾಕುಲಗೊಂಡಿವೆ. ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯದ ಸುಳಿಗಾಳಿಗೆ ಸಿಕ್ಕು ಪ್ರತಿ ಕ್ಷಣವೂ ನರಳುತ್ತಿವೆ.
ಕೋಮುವಾದಿ, ಜಾತಿವಾದಿ ಬಲಪಂಥೀಯ ಸಂಘಟನೆಗಳು ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿರುವ ಸಮಾಜ, ದೇಶ ವಿರೋಧಿ ಚಟುವಟಿಕೆಗಳು ವಿಶ್ವವಿದ್ಯಾಲಯದ ಸದುದ್ದೇಶವನ್ನೇ ಮಣ್ಣುಪಾಲು ಮಾಡುತ್ತಿವೆ. ಇದಕ್ಕೆ ಪೂರಕವೆಂಬಂತೆ, ಕೆಲವು ಜಾತಿವಾದಿ, ಕೋಮುವಾದಿ ಹಿನ್ನೆಲೆಯ ಕುಲಪತಿಗಳು, ಪ್ರಾಧ್ಯಾಪಕರು ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಿ ಆತ್ಮಹತ್ಯಗೆ ಪ್ರೇರಣೆ ನೀಡುವುದರ ಮುಖೇನವಾಗಿ ಸಾಂಸ್ಥಿಕ ಹತ್ಯಗಳನ್ನು ಮಾಡಿರುವಂತದ್ದು. ಇಂಥ ಘಟನೆಗಳ ಬಾಗವೇ 2016ರಲ್ಲಿ ‘ರೋಹಿತ್ ವೇಮುಲ’ ಎನ್ನುವ ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಯ ಸಾಂಸ್ಥಿಕ ಹತ್ಯೆ.
2019 ರಲ್ಲಿ ಮುಂಬಯಿಯ ವೈದ್ಯಕೀಯ ವಿದ್ಯಾರ್ಥಿನಿಯಾದ ‘ಪಾಯಲ್’ ಹಾಗು 2023 ರಲ್ಲಿ ಬಾಂಬೆ ಐಐಟಿ ವಿದ್ಯಾರ್ಥಿ ‘ದರ್ಶನ್ ಸೊಳಂಕಿ’ ಹೀಗೆ ಸಾಂಸ್ಥಿಕ ಹತ್ಯಗಳ ಪಟ್ಟಿ ಬೆಳೆಯುತ್ತ ಹೊಗುತ್ತದೆ. ಇದುವರೆಗಿನ ದಲಿತ ಮತ್ತು ಬುಡಕಟ್ಟು, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯಗಳನ್ನು ಸಹಿಸುವುದಾದರೂ ಹೇಗೆ..? ಇತ್ತೀಚಿನ ವರದಿಗಳ ಪ್ರಕಾರ 2007 ರಿಂದ 2011 ಅಂದರೆ ಈ ನಾಲ್ಕು ವರ್ಷಗಳಲ್ಲಿಯೇ 20 ದಲಿತ ವಿದ್ಯಾರ್ಥಿಗಳು ಜಾತಿ ದೌರ್ಜನ್ಯದ ಕಾರಣಕ್ಕಾಗಿಯೆ ಆತ್ಮಹತ್ಯೆ (ಸಾಂಸ್ಥಿಕ ಹತ್ಯ) ಮಾಡಿಕೊಂಡಿದ್ದಾರೆ.
2016-2017 ರಲ್ಲಿ 173 ಜಾತಿ ತಾರಯಮ್ಯದ ದೂರುಗಳು ದಾಖಲಾದರೆ. 2023-24ರ ಅವಧಿಯಲ್ಲಿ 350 ಜಾತಿ ತಾರತಮ್ಯ ಹಾಗು ದೌರ್ಜನ್ಯ ಪಕ್ರಣಗಳು ದಾಖಲಾಗಿವೆ. ಸ್ವತಃ ಕೇಂದ್ರ ಸರ್ಕಾರವೇ ಸುಪ್ರಿಂ ಕೋರ್ಟಿಗೆ ಸಲ್ಲಿಸಿರುವ, ಅಂಕಿ-ಅಂಶಗಳ ಪ್ರಕಾರ ಐಐಟಿ, ಐಐಎಂ, ಎನ್‌ಐಟಿ ಶಿಕ್ಷಣ ಸಂಸ್ಥೆಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ದಾಖಲೆಗಳು ತಿಳಿಸುತ್ತವೆ.
ಅಷ್ಟು ಮಾತ್ರವಲ್ಲದೆ ಜೆಎನ್‌ಯು ಕನ್ಹಯ್ಯ ಕುಮಾರರಿಂದ ಇವತ್ತಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳವರೆಗೆ ವಿಶ್ವವಿದ್ಯಾಲಯದೊಳಗಿನ ಹೋರಾಟವನ್ನು ಹತ್ತಿಕ್ಕಲು ಜಾತಿ ಕಿರುಕುಳ ಹಾಗು ಸುಳ್ಳು ಪೊಲೀಸ ಪ್ರಕರಣಗಳನ್ನು ದಾಖಲಿಸಿರುವುದನ್ನು ಗಮನಿಸಬಹುದು. ಇಂತಃ ಜಾತಿ ಕಿರುಕುಳ ಮತ್ತು ದೌರ್ಜನ್ಯ ಸಂಗತಿಗಳನ್ನು ತೊಡೆದಾಕಲೂ 2012ರ ಯುಜಿಸಿ ಕರುಡಲ್ಲಿ ನಿಯಾಮಾವಳಿಗಳು ಇದ್ದವಾದರು, ಅನುಷ್ಠಾನಗೊಳಿಸಲು ಪರಿಣಾಮಕಾರಿಯಾದ ನಿಯಮಗಳ ಕೊರೆತ ಇತ್ತು, ಹಿಗಾಗಿಯೇ ರೋಹಿತ್ ವೇಮುಲ್ ಮತ್ತು ಪಾಯಲ್ ಪೋಷಕರು ಸುಪ್ರೀಂ ಮೊರೆಹೋದ ಕಾರಣ. ಇವರ ಸಂಕಟದ ವಾದವನ್ನು ಆಲಿಸಿದಿ ಕೋರ್ಟ್ ಯುಜಿಸಿ ಗೆ ಮತ್ತೊಮ್ಮೆ 2012 ಕರುಡು ನಿಯಮಾಳಿಗನ್ನು ಪರಿಸಿಲಿಸಿ. ವಿಶ್ವವಿದ್ಯಾಲದೊಳಗಿನ ಜಾತಿ ಕಿರುಕುಳ ಮತ್ತು ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿತರುವಂತೆ 2025ರಲ್ಲಿ ಆದೇಶಿಸಿತು. ಇದರ ಭಾಗವಾಗಿಯೇ ಇವತ್ತೀನ ‘2026ರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ’ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗು ದಿವ್ಯಾಂಗ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಉದ್ದೇಶಿದ ಕರಡು ನಿಯಮವಾಗಿದೆ.
ಈಗ ಈ ನಿಯಾಮಾವಳಿಗಳ ವಿರುದ್ಧ ಸಾಮಾನ್ಯ ವರ್ಗದ (ಬ್ರಾಹ್ಮಣ, ಬನಿಯಾ ಇತ್ಯಾದಿ) ಮೇಲ್ಜಾತಿ ವಿದ್ಯಾಥಿಗಳು ಹಾಗು ಕೇಂದ್ರ ಬಿಜೆಪಿ ಸರ್ಕಾರದ ಅನೇಕ ಪದಾಧಿಕಾರಿಗಳು ತಮ್ಮ ತಮ್ಮ ಸ್ಥಾನಕ್ಕೆ ರಾಜಿನಾಮೆಗಳನ್ನು ನೀಡಿ, ಉತ್ತರ ಭಾರತದದ್ಯಾಂತ ಹೋರಾಟಕ್ಕಿಳಿದಿದ್ದಾರೆ.
ಶೋಷಕ ವರ್ಗಗಳು ಶೋಷಿತ ಸಮುದಾಯಗಳ ಸಂವಿಧಾನ ಬದ್ಧ ಹಕ್ಕುಗಳು ಜಾರಿಯಾಗುತ್ತಿರುವ ವೇಳೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲ್ಲಲ್ಲ. ಈ ಹಿಂದೆಯೂ ಕೂಡ 1979ರಲ್ಲಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 27% ಮೀಸಲಾತಿ ತಂದಂತ ‘ಮಂಡಲ ಆಯೋಗದ’ ವರದಿ ವಿರುದ್ಧ ಹಿಂಸಾತ್ಮಕ ಹೋರಾಟಗಳನ್ನು ಮಾಡಿದ್ದು ಇತಿಹಾಸ ಸಾಕ್ಷಿಕರಿಸುತ್ತದೆ.
ಪರಂರೆಯ ಸಂವಿಧಾನ ವಿರೋಧಿ ಹಾಗೂ ದಲಿತ, ಹಿಂದುಳಿದ, ಮಹಿಳೆಯರ ಹಕ್ಕುಗಳ ಅಂದಿನ ಮನುವಾದಿ ಆರ್ಯಪಳೆಯುಳಿಕೆಗಳೆ ಇಂದೂ ಯುಜಿಸಿ- 2026ರ ಕರಡು ವಿರುದ್ಧ ಷಂಡ್ಯಂತ್ರ ರೂಪಿಸುತ್ತಿರುವುದು. ಕೇವಲ 3% ಜನಾಭಿಪ್ರಾಯವೇ ಭಾರತೀಯ ಒಟ್ಟು ಬಹುಸಮುದಾಯಗಳ ಅಭಿಪ್ರಾಯವೆಂಬಂತೆ ಬಿಂಬಿಸಿ, ಎಸ್ಸಿ, ಎಸ್ಟಿ, ಓಬಿಸಿ ಜನರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಮನುವಾದದ ಕುತಂತ್ರವನ್ನು ಅರಿಯುವುದು ಜರೂರಿದೆ.
ಇನ್ನೂ ಬಹುಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಈಗ ಬೀದಿ ಹೋರಾಟ ಮಾಡುತ್ತಿರುವವರು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಬೆಂಬಲಿತರೇ ಆಗಿದ್ದಾರೆ. ಮುಂಬಾಗಿಲಿಂದ ನಿಯಾಮಾವಳಿಗಳ ಕರುಡು ಬಿಡುಗಡೆ ಮಾಡಿ. ಹಿಂಬಾಗಲಿನ ರಾಜಕೀಯ ಚತುರತೆಯನ್ನು ಪ್ರದರ್ಶಿಸಲು ಹೊರಟಿರುವುದು. ಇದೇ ಬಲಪಥೀಯ ಆರ್ ಎಸ್ ಎಸ್ ಕೃಪಾಟಾಕ್ಷದ ಕೇಂದ್ರ ಸರ್ಕಾರ ಎಂಬ ಸತ್ಯ ಸಂಗತಿ ಜನಸಾಮಾನ್ಯರಿಗೂ ಗೊತ್ತಿರುವಂತ್ತದ್ದೆ.
ಇನ್ನು ಈ ಯುಜಿಸಿ 2026ರ ಕರುಡಲ್ಲಿ ‘ಒಂದು ಕಣ್ಣಿಗೆ ಬೆಣ್ಣಿ ಇನ್ನೊಂದು ಕಣ್ಣಿಗೆ ಸುಣ್ಣ’ ಎನ್ನವ ಹಾಗೆ ಇ ಡಬ್ಲೂ ಸೇರಸಿ, ದಲಿತ, ಹಿಂದುಳಿದ, ಬುಡಕಟ್ಟು ಸಮುದಾಯಗಳ ಕಣ್ಣೊರಿಸುವ ನಾಟಕ ಮಾಡುತ್ತಿದೆ. ಇದರಲ್ಲಿ ಇನ್ನೂ ಕೆಲ ನೂನ್ಯತೆಗಳು ಇವೆ. ಇಷ್ಟೇಲ್ಲ ನಾಟಕೀಯ ಬೆಳವಣಿಗೆಯ ಮದ್ಯ ಘನ ಉಚ್ಛನ್ಯಾಯಾಲಯ 2026ರ ಯುಜಿಸಿ ಆದೇಶಕ್ಕೆ ತಡೆನೀಡಿದೆ. ದುರಂತವೆಂದರೆ ದೇಶದಲ್ಲಿ ಎಸ್‌ಐಆರ್‌ನಂತ ಗಂಭೀರವಾದ ಪ್ರಕರಣಗಳ ಸಂದರ್ಭದಲ್ಲಿ ಸಂವಿಧಾನದ ಮೌಲ್ಯಗಳ ಮತ್ತು ದೇಶದ ಪ್ರಜಾತಂತ್ರದ ಕುರಿತು ಜಾಣ ನಡೆಯನ್ನು ಅನುಸರಿಸುವ ಸುಪ್ರೀಂ ಕೋರ್ಟ್, ಸ್ವತಃ ಕೇಂದ್ರ ಸರ್ಕಾರವೇ ಸಲ್ಲಿಸಿರುವ ಜಾತಿ ತಾರತಮ್ಯ, ದೌರ್ಜನ್ಯ ಕಾರಣಕ್ಕಾಗಿ ವಿಶ್ವವಿದ್ಯಾಲಯಗಳಲ್ಲಿ ಇದುವರೆಗು ಆಗಿರುವ ಸಾಂಸ್ಥಿಕ ಹತ್ಯೆಗಳ(ಆತ್ಮಹತ್ಯ) ಅಂಕಿ-ಅಂಶಗಳನ್ನು ಪರಿಗಣಿಸದೆ. ಯುಜಿಸಿ ಆದೇಶಕ್ಕೆ ಏಕಾಏಕಿ ತಡೆನೀಡಿರುವುದ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಲಪಂಥೀಯರ ಬೆಂಬಲಿತ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಬಂದ ಹತ್ತು ವರ್ಷಗಳ ಅವಧಿಯಲ್ಲಿ ವಿಶ್ವವಿದ್ಯಾಲಯಗಳಲ್ಲಿರುವ ಮೇಲ್ಜಾತಿ ಮನುವಾದಿ ಆಡಳಿತ ವರ್ಗ ಅಲ್ಲಿನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಲಭೂತವಾದದ ವಿಷವನ್ನು ಬಿತ್ತುವ ಮೂಲಕ ಮತಾಂಧರನ್ನಾಗಿ ಪರಿವರ್ತಿಸುತ್ತ. ವಿಶ್ವವಿದ್ಯಾಲಯಗಳ ಶೈಕ್ಷಣಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ವಿಶ್ವವಿದ್ಯಾಲಯಕ್ಕೆ ವ್ಯಾಸಂಗ ಮಾಡಲು ಬರುವ ಬಡ-ದಲಿತ-ಹಿಂದುಳಿದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಬದಲಾಗಿ ಅವರ ಮನಸ್ಸಿನಲ್ಲಿ ಜಾತಿವಾದ, ಕೋಮುವಾದ, ಧರ್ಮಾಂಧತೆಯ ವಿಷವನ್ನು ಬಿತ್ತಿ, ಅವರನ್ನು ಸಮಾಜ ಕಂಟಕರನ್ನಾಗಿ ರೂಪಿಸಲಾಗುತ್ತಿದೆ.
ವಿಶ್ವವಿದ್ಯಾಲಯಗಳನ್ನು ಜಾತಿವಾದಿಗಳ, ಕೋಮುವಾದಿಗಳ, ಮತಾಂಧರ ಪ್ರಯೋಗ ಶಾಲೆಯನ್ನಾಗಿ ರೂಪಿಸಲು ಹೊರಟಿರುವುದು ಬೌದ್ಧಿಕ ದಾರಿದ್ರ್ಯವಲ್ಲದೇ ಮತ್ತೇನೂ ಅಲ್ಲ. ಇದರಿಂದಾಗಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವಾತಾವರಣವು ಕೋಮುವಾದೀಕರಣಕ್ಕೆ ಒಳಗಾಗುತ್ತಿವೆ.
ಆರ್.ಎಸ್.ಎಸ್. ಹಾಗೂ ಎ.ಬಿ.ವಿ.ಪಿ. ಬಲಪಂಥೀಯ ಸಂಘಟನೆಗಳು ಕೋಮುವಾದಿ ಹಿಂದುತ್ವದ ಧಾರ್ಮಿಕ ಆಚರಣೆಯಂತ ರಾಮನವಮಿ, ಸರಸ್ವತಿ ಪೂಜೆ, ಹೋಮ ಹವನ, ಯಜ್ಞ, ಸರಸ್ವತಿ ಪೂಜೆ, ಗಣೇಶ ಉತ್ಸವಗಳ ನೆಪದಲ್ಲಿ ಹಾಸ್ಟೇಲ್ ಗಳಲ್ಲಿ ಮಾಂಸ ಆಹಾರ ನಿಷೇಧವೇರುವುದರ ಮುಖೇನ ತಳಸಮುದಾಯ ವಿದ್ಯಾರ್ಥಿಗಳ ಆಹಾರದ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ. ಹೀಗೆ ಮನುಧರ್ಮಶಾಸ್ತ್ರದ ಅಸಮಾನತೆಯ ಚಾತೃವರ್ಣ ಪದ್ಧತಿ ಮತ್ತು ಭೂತದ ಗುರುಕುಲ ಪದ್ಧತಿಯನ್ನು ಹಂತಹಂತವಾಗಿ ಜಾರಿಗೊಳಿಸಿ. ದಲಿತ, ಹಿಂದುಳಿದ, ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಜಾತಿ ಕಿರುಕುಳದ ನೆಪದಲ್ಲಿ ಶಿಕ್ಷಣದಿಂದ ದೂರವಿಡವುದನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲಾಗುತ್ತಿದೆ.
ಇದರ ಹಿಂದಿನ ಹುನ್ನಾರವೆ ಎಸ್ಸಿ ಎಸ್ಟಿ, ಒಬಿಸಿ ವಿದ್ಯಾರ್ಥಿಗಳ ರಕ್ಷಣೆಯ ಯುಜಿಸಿ ಕರುಡು ವಿರುದ್ಧ ಮೇಲ್ಜಾತಿ ಪಟ್ಟಭದ್ರಹಿತಾಸಕ್ತಿಗಳ ಈಗಿನ ಹೋರಾಟದ ಸ್ವರೂಪವಾಗಿದೆ. ಸರ್ವಜನಾಂಗ ಶಾಂತಿಯ ತೋಟದಂತೆ, ಬಹುತ್ವ ಭಾರತದ ಮೌಲ್ಯಾಧಾರಿತ ವಾತಾವರಣದಲ್ಲಿ ಜಾತಿ ದೌರ್ಜನ್ಯ ಇಲ್ಲವಾಗಿಸುವ ಸಲುವಾಗಿ ಯುಜಿಸಿ ತಂದಿರುವ ಹೊಸ ನಿಯಮಗಳೊಟ್ಟಿಗೆ ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಳಿಗಾಗಿ ‘ರೋಹಿತ್ ವೇಮುಲ್’ ಅಂತ ಕಾಯ್ದೆ ಈ ಕಾಲಕ್ಕೆ ಅನಿವಾರ್ಯವಿದೆ.
ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾಥಿಗಳಿಗೆ ಜಾತಿ ನಿರ್ಭಯವಾದ ಶೈಕ್ಷಣಿಕ ವಾತಾವರಣವನ್ನು ವಿಶ್ವವಿದ್ಯಾಲಯಗಳಲ್ಲಿ ನಿರ್ಮಿಸಬೇಕಾದರೆ. ರಾಜ್ಯ ಮತ್ತು ಕೇಂದ್ರ ಸಕಾರವು ‘ರೋಹಿತ್ ವೇಮುಲ್’ ಕಾಯ್ದೆಯನ್ನು ತಡಮಾಡದೆ ಕಡ್ಡಾಯವಾಗಿ ಜಾರಿ ಮಾಡಲೇಬೇಕು. ಇಲ್ಲವಾದಲ್ಲಿ ವಿಶ್ವವಿದ್ಯಾಲಯಗಳಲ್ಲಿರುವ ಜಾತಿವಾದಿ, ಮನುವಾದಿ ಮೇಲ್ಜಾತಿ ಕುಲಪತಿಗಳು, ಕುಲಸಚಿವರು, ಪ್ರದ್ಯಾಪಕ ವರ್ಗ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆಯೆರೆಯುವ ಬದಲಾಗಿ, ಕೋಮುವಾದಿಗಳನ್ನಾಗಿ ರೂಪಿಸಿ ಅವರಲ್ಲಿ ತಮ್ಮದಲ್ಲದ ಜಾತಿ, ಧರ್ಮ, ಸಮುದಾಯದವರ ಬಗೆಗೆ ದ್ವೇಷ ತಾಳುವುದನ್ನು ವ್ಯವಸ್ಥಿತವಾಗಿ ಕಲಿಸುವ-ಕಲಿಸಲಾಗುತ್ತಿರುವ ವಾತವರಣ ಸೃಷ್ಟಿಸಿ. ವಿದ್ಯಾರ್ಥಿಗಳಲ್ಲಿ ‘ಸಹಿಷ್ಣು ಭಾವನೆ’ಯನ್ನು ಬೆಳೆಸುವುದಕ್ಕೆ ಬದಲಾಗಿ ‘ಅಸಹಿಷ್ಣು ಭಾವನೆ’ಯನ್ನು ನಿರ್ಮಿಸಲಾಗುತ್ತಿದೆ. ಆಮೂಲಕ ವಿದ್ಯಾರ್ಥಿಗಳಲ್ಲಿ ಹಿಂಸಾತ್ಮಕ ದ್ವೇಷದ ಭಾವನೆಯನ್ನು ತುಂಬಿ ಅವರನ್ನು ದೇಶದ್ರೋಹಿಗಳನ್ನಾಗಿಸಿ ಸಮಾಜಕ್ಕೆ ಕಳುಹಿಸುವ ಆತಂಕಕಾರಿ ವಾತಾವರಣ ಸೃಷ್ಟಿಯಾಗುವುದಕ್ಕೆ ನಮ್ಮನ್ನಾಳುವ ಸರ್ಕಾರಗಳು ಇಂಥ ದುರಂತವನ್ನು ಆಗುಮಾಡಿಕೋಳಬಾರದು.
ಅಲ್ಲದೆ ಈ ಜಾತಿವಾದಿ ಅಹಂಕಾರವನ್ನು ನಾಶ ಮಾಡದ ಹೊರತು ಭಾರತದ ವಿಶ್ವವಿದ್ಯಾಲಯಗಳಿಗೆ ಮತ್ತು ದಲಿತ ಹಿಂದುಳಿದ, ಬುಡಕಟ್ಟು ಸಮುದಾಯಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಭವಿಷ್ಯವಿಲ್ಲದಂತ್ತಾಗುತ್ತದೆ.


