ಶುಕ್ರವಾರ ರಾತ್ರಿ ನಡೆದ ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು 7 ವಿಕೆಟ್ ಅಂತರದ ಸೋಲು ಕಂಡ RCB ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆ ಮೂಲಕ ಕೋಟ್ಯಾಂತರ ಅಭಿಮಾನಿಗಳ ‘ಈ ಸಲ ಕಪ್ ನಮ್ದೆ’ ಎನ್ನುವ ಕನಸನ್ನು ಕನಸಾಗಿಯೇ ಇಟ್ಟಿದೆ. ಆದರೆ ಪಂದ್ಯದ ನಂತರ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನೆನೆದು RCB ಫ್ರಾಂಚೈಸಿ ಟ್ವೀಟ್ ಮಾಡುವ ಮೂಲಕ ಕ್ರಿಕೆಟ್ ಪ್ರಿಯರ ಮನಗೆದ್ದಿದೆ.
ಟಾಸ್ ಗೆದ್ದ ರಾಜಸ್ಥಾನ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ವೈಫಲ್ಯ ಕಂಡಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ರಜತ್ ಪಾಟಿದಾರ್ 42 ಎಸೆತೆಗಳಲ್ಲಿ 58 ರನ್ ಗಳಿಸಿದ್ದು ಬಿಟ್ಟರೆ ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನ ನೀಡಿದರು. 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಸಾಧ್ಯವಾಯಿತು. ರಾಜಸ್ಥಾನ್ ತಂಡದ ಪರವಾಗಿ ಪ್ರಸಿದ್ದ್ ಕೃಷ್ಣ ಮತ್ತು ಒಬೆಡ್ ಮ್ಯಕೊಯ್ ತಲಾ ಮೂರು ವಿಕೆಟ್ ಗಳಿಸಿ ಮಿಂಚಿದರು.
ಆರ್‌ಸಿಬಿ ಎದರು ರಾಜಸ್ಥಾನ್ ರಾಯಲ್ಸ್ ತಂಡ ಸ್ಪೋಟಕ ಬ್ಯಾಟಿಂಗ್ ದಾಳಿ ಆರಂಭಿಸಿತು. ಜಾಸ್ ಬಟ್ಲರ್ 60 ಎಸೆತಗಳಲ್ಲಿ 106 ರನ್ ಚಚ್ಚುವ ಮೂಲಕ ಆರ್‌ಆರ್ ಸುಲಭವಾಗಿ ಗೆಲುವಿನ ದಡ ಸೇರಿತು. 7 ವಿಕೆಟ್‌ಗಳ ಅಧಿಕಾರಯುತ ಗೆಲುವಿನೊಂದಿಗೆ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಿತು.
ಪಂದ್ಯದ ಬಳಿಕ RCB ಫ್ರಾಂಚೈಸಿ ರಾಜಸ್ಥಾನ್ ತಂಡಕ್ಕೆ ಶುಭ ಹಾರೈಸಿ ಮಾಡಿದ ಟ್ವೀಟ್ ಎಲ್ಲೆಡೆ ಗಮನ ಸೆಳೆಯಿತು. “ಇಂದು ರಾತ್ರಿ ಚೆನ್ನಾಗಿ ಆಡಿದಿರಿ. ದಿವಂಗತ ದಿ ಗ್ರೇಟ್ ಶೇನ್ ವಾರ್ನ್ ನಿಮ್ಮನ್ನು ನೋಡಿ ಖುಷಿಪಡುತ್ತಿರುತ್ತಾರೆ. ರಾಜಸ್ಥಾನ್ ರಾಯಲ್ಸ್ ಫೈನಲ್ ಪಂದಕ್ಕೆ ನಿಮಗೆ ಶುಭವಾಗಲಿ” ಎಂದು ಆರ್‌ಸಿಬಿ ಟ್ವೀಟ್ ಮಾಡಿತ್ತು. ಅದಕ್ಕೆ ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ ಹೃದಯ ಇಮೋಜಿ ಹಾಕಿ ಸಂಭ್ರಮ ವ್ಯಕ್ತಪಡಿಸಿತ್ತು.
💗♥️
— Rajasthan Royals (@rajasthanroyals) May 27, 2022
ಶೇನ್ ವಾರ್ನ್ 2008ರ ಮೊದಲ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದರು ಮತ್ತು ಆ ಬಾರಿ ರಾಜಸ್ಥಾನ್ ತಂಡ ಚಾಂಪಿಯನ್ ಆಗಿತ್ತು. ತದನಂತರ ಅದು ಫೈನಲ್ ಹಂತಕ್ಕೆ ತಲುಪಿರುವುದು ಈ ಬಾರಿ ಮಾತ್ರ. ಫೈನಲ್ ಪಂದ್ಯ ಭಾನುವಾರ ರಾತ್ರಿ 8 ಗಂಟಗೆ ನಡೆಯಲಿದ್ದು, ಪ್ರಶಸ್ತಿಗಾಗಿ ರಾಜಸ್ಥಾನ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಲಿವೆ.
RCB ಗೆ ಸೋಲು: ಮೀಮ್‌ಗಳ ಸುರಿಮಳೆ
RCB ತಂಡ ಪಂದ್ಯ ಸೋಲುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಸುರಿಮಳೆಯಾಗಿದೆ. ಈ ಸಲ ಕಪ್ ನಮ್ದೆ ಎನ್ನುವ ಸ್ಲೋಗನ್ ಅನ್ನು ಮುಂದಿನ ಸಲ ಕಪ್ ನಮ್ದೆ ಎಂದು ಬದಲಿಸಿ ಹಂಚಿಕೊಳ್ಳಲಾಗಿದೆ. ಆ ಮೂಲಕ ಭರವಸೆ ಕಳೆದುಕೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಲಾಗಿದೆ.
RCB fans after 15 years of pain pic.twitter.com/WWvPoGBq61
— Sagar (@sagarcasm) May 27, 2022
Next year cup namde 🥲🙏🏻 #RCB
— Varsha Bollamma (@VarshaBollamma) May 27, 2022
#EeSalaCupNamde RCB and their cups in IPL🙂😂@RCBTweets #TATAIPL2022#RCBvsRR pic.twitter.com/1N76QihibZ
— Thiyanesh_Vp (@Thiyaneswaran77) May 27, 2022
RCB fans waiting for their 1st IPL trophy…….! pic.twitter.com/OMdHw0reEK
— Krishna (@Atheist_Krishna) May 27, 2022
The loyalty for this franchise shall remain constant throughout. Comeback stronger next year @RCBTweets pic.twitter.com/S7hG7I5HDv
— Pari (@BluntIndianGal) May 27, 2022
Life of RCB fans :
#RRvsRCB #RCBvsRR #rcb #TATAIPL2022 pic.twitter.com/IiqJjxQvDy— Shadev Pundir (@pundirshadev1) May 27, 2022
#EeSalaCupNamde is permanent !#RRvsRCB #IPL2022
RCB . RCB
fans in. fans in
2008 :. 2091
Cup Namde. Ee Saal
Cup Namde pic.twitter.com/A2WIF4rL9K— π🦁 (@IAmIndianHitler) May 27, 2022
ಇದನ್ನೂ ಓದಿ; ರಾಜಕೀಯ ಅಸ್ತ್ರವಾಗಿ ಅತ್ಯಾಚಾರವನ್ನು ಸಮರ್ಥಿಸಿದ್ದ ಸಾವರ್ಕರ್!


