“ರಫೇಲ್ ವಿಚಾರ, ಅಯೋಧ್ಯಾ ತೀರ್ಪು, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ. ಇದು ಯಾವ ರೀತಿಯ ಅನಿಸಿಕೆ ಅಥವಾ ಚಿತ್ರಣವನ್ನು ಮೂಡಿಸುತ್ತದೆ?” ಎಂದು ಮಾಜಿ ಮುಖ್ಯ ನ್ಯಾಯಾಧೀಶ ಗೊಗೊಯ್ ವಿರುದ್ಧ ಸುಪ್ರೀಂಕೋರ್ಟ್ ವಕೀಲ ದುಷ್ಯಂತ್ ದವೆ ವಾಗ್ದಾಳಿ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ವಕೀಲ ದುಷ್ಯಂತ್ ದವೆಯವರು ಬುಧವಾರ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಪರವಾಗಿ ವಾದ ಮಂಡಿಸಿದರು. ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಸೇರಿದಂತೆ ಕೆಲವು ನಿರ್ದಿಷ್ಟ ನ್ಯಾಯಾಧೀಶರ ಅಡಿಯಲ್ಲಿ ನ್ಯಾಯಾಂಗದ ಸಮಗ್ರತೆಯ ಕೊರತೆಯ ವಿಷಯದಲ್ಲಿ ಇರುವ ವ್ಯಾಪಕ ಅಭಿಪ್ರಾಯದ ಪ್ರಶ್ನೆಯನ್ನು ಅವರು ಎತ್ತಿದರು.
ನ್ಯಾಯಾಂಗವು ಪತನಗೊಂಡಂತೆ ಕಾಣುವ ಅತ್ಯಂತ ಮಹತ್ವದ ಮತ್ತು ರಾಜಕೀಯವಾಗಿ ಸೂಕ್ಷ್ಮವಾದ ಹಲವಾರು ಪ್ರಕರಣಗಳಲ್ಲಿ ನೀಡಲಾದ ತೀರ್ಪಿನ ಮೇಲೆ ದವೆಯವರು ನ್ಯಾಯಾಲಯದ ಗಮನ ಸೆಳೆದರು.
ಗೊಗೋಯ್ ಅವರನ್ನು ಉಲ್ಲೇಖಿಸಿದ ಅವರು, ರಫೇಲ್, ಅಯೋಧ್ಯಾ ಮತ್ತು ಸಿಬಿಐ ಪ್ರಕರಣಗಳಂತಹ ಹಲವಾರು ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಪರವಾಗಿರುವ ತೀರ್ಪು ನೀಡಿದ ನಂತರ ರಾಜ್ಯಸಭಾ ನಾಮಕರಣ ಮತ್ತು ಝಡ್ ಶ್ರೇಣಿಯ ಭದ್ರತೆಯನ್ನು ಸ್ವೀಕರಿಸುವ ಮೂಲಕ ಮಾಜಿ ಮುಖ್ಯ ನ್ಯಾಯಾಧೀಶರು ನ್ಯಾಯಾಂಗದ ಬಗ್ಗೆ ಎಂತಹ ಒಂದು ಅಭಿಪ್ರಾಯ ಮೂಡಿಸಿದ್ದಾರೆ ಎಂದು ದವೆ ಪ್ರಶ್ನಿಸಿದರು.
Dave again refers to Ex CJI Ranjan Gogoi's sexual harassment issue..
"What impression does it give? we must take up these serious issues. A judge sits on a Saturday in his own cause regarding sexual harassment"— Live Law (@LiveLawIndia) August 5, 2020
“ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ…ಇದು ಯಾವ ಅಭಿಪ್ರಾಯ ಮೂಡಿಸುತ್ತದೆ?…ರಫೇಲ್ ತೀರ್ಪು, ಅಯೋಧ್ಯಾ ತೀರ್ಪು, ಸಿಬಿಐ ತೀರ್ಪು. ನೀವು ಈ ತೀರ್ಪುಗಳನ್ನು ನೀಡುತ್ತೀರಿ. ನಿಮಗೆ ಇಂತಹ ಸವಲತ್ತುಗಳು ಸಿಗುತ್ತವೆ. ಇವೆಲ್ಲವೂ ನ್ಯಾಯಾಂಗದ ಮೂಲಕ್ಕೇ ಹೊಡೆಯುವ ಗಂಭೀರವಾದ ವಿಷಯಗಳು” ಎಂದು ದವೆಯವರು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯ್ ಮತ್ತು ಕೃಷ್ಢ ಮುರಾರಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠಕ್ಕೆ ಹೇಳಿದರು.
ದವೆಯವರು ಅಲ್ಲಿಗೇ ನಿಲ್ಲಿಸಲಿಲ್ಲ. “ರಾಜಕೀಯವಾಗಿ ಸೂಕ್ಷ್ಮವಾದ ಪ್ರಕರಣಗಳು ಕೆಲವು ನಿರ್ದಿಷ್ಟ ನ್ಯಾಯಾಧೀಶರಿಗೆ ಮಾತ್ರ ಸಿಗುವುದು ಏಕೆ? ಉದಾಹರಣೆಗೆ ನ್ಯಾ. ನಾರಿಮನ್- ಅವರಿಗೆ ಎಂದೂ ಇಂತಹಾ ರಾಜಕೀಯ ಸೂಕ್ಷ್ಮ ಪ್ರಕರಣಗಳ ವಿಚಾರಣೆ ಸಿಗುವುದೇ ಇಲ್ಲ!” ಎಂದು ಅವರು ಪ್ರಶ್ನೆ ಮಾಡಿದರು.
‘ಲೈವ್ ಲಾ’ ವರದಿ ಪ್ರಕಾರ, ನ್ಯಾ. ಮಿಶ್ರಾ ಅವರು, “ನ್ಯಾ. ನಾರಿಮನ್ ಅವರು ಕೆಲವು ಸಾಂವಿಧಾನಿಕ ಪೀಠಗಳ ಭಾಗವಾಗಿದ್ದರು” ಎಂದು ಪ್ರತಿಯಾಡಿದರೆ, ನ್ಯಾ. ಗವಾಯ್ ಅವರು, ನ್ಯಾ. ನಾರಿಮನ್ ಅವರು ಮಣಿಪುರ ಪ್ರಕರಣದ ಭಾಗವಾಗಿದ್ದರು ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ದವೆಯವರು, ತಾನು ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರಕರಣಗಳ ಬಗ್ಗೆ ಮಾತನಾಡುತ್ತಿದ್ದು, ಬೇಕಾದರೆ ಇಂತಹ 50 ಪ್ರಕರಣಗಳ ಯಾದಿ ಕೊಡಬಲ್ಲೆ ಎಂದೂ ಸೇರಿಸಿದರು. ದೇಶದ 130 ಕೋಟಿ ಜನತೆಯ ಕುರಿತು ನ್ಯಾಯ ಪೀಠಕ್ಕೆ ಇರುವ ಜವಾಬ್ದಾರಿಯನ್ನು ಅವರು ನೆನಪಿಸಿದರು. “ನೀವು 130 ಕೋಟಿ ಜನರ ಹೆತ್ತವರಂತೆ. ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ನಮಗೆ ಗೊತ್ತು. ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುವುದು ಸುಪ್ರೀಂಕೋರ್ಟಿಗೆ ಬಿಟ್ಟದ್ದು” ಎಂದು ಅವರು ಹೇಳಿದರು.
Mishra J defends, says Justice Nariman has been part of many constitution bench matters.
Justice Gavai says Justice Nariman part of Manipur case.
Dave, however, stresses that he's talking of politically sensitive cases.
"Can list out 50 cases"
— Live Law (@LiveLawIndia) August 5, 2020
ತಾನು ಈ ಪೀಠದ ಮುಂದೆ ಬಹುಶಃ ಕೊನೆಯ ಬಾರಿ ಹಾಜರಾಗುತ್ತಿದ್ದೇನೆ ಎಂದು ಪ್ರಶಾಂತ್ ಭೂಷಣ್ ಅವರು ಸ್ಪಷ್ಟಪಡಿಸಿರುವಂತೆಯೇ, ಅವರು ಯಾವುದೇ ನ್ಯಾಯಾಂಗ ನಿಂದನೆ ಮಾಡಿಲ್ಲ ಎಂದು ಹೇಳುವ ಮೂಲಕ ಅವರು ತನ್ನ ವಾದವನ್ನು ಕೊನೆಗೊಳಿಸಿದರು.
ತನ್ನ ವಾದದ ವೇಳೆ ದವೆಯವರು, ಭಾರತೀಯ ನ್ಯಾಯಾಂಗಕ್ಕೆ ಪ್ರಶಾಂತ್ ಭೂಷಣ್ ಅವರು ನೀಡಿರುವ ಅಗಾಧವಾದ ಕೊಡುಗೆಯನ್ನು ನ್ಯಾಯಪೀಠಕ್ಕೆ ನೆನಪಿಸಿದರು. ವಿಚಾರಣೆಯನ್ನು ಮುಗಿಸಿದ ನ್ಯಾಯಪೀಠವು ತನ್ನ ಆದೇಶವನ್ನು ಕಾದಿರಿಸಿತು.
ಪ್ರಶಾಂತ್ ಭೂಷಣ ಅವರು ಹಿಂದಿನ ನಾಲ್ವರು ಮುಖ್ಯ ನ್ಯಾಯಾಧೀಶರ ನಡವಳಿಕೆಗಳನ್ನು ಉಲ್ಲೇಖಿಸಿ ನ್ಯಾಯಾಂಗದ ಸಮಗ್ರತೆಯ ಕುರಿತಂತೆ ಪ್ರಶ್ನೆಗಳನ್ನು ಎತ್ತುವ ಎರಡು ಟ್ವೀಟ್‌ಗಳನ್ನು ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್ ಕಳೆದ ತಿಂಗಳು ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನಾ ವಿಚಾರಣೆಯನ್ನು ಆರಂಭಿಸಿತ್ತು. ಜೂನ್ 29ರ ಟ್ವೀಟ್‌ನಲ್ಲಿ ಭೂಷಣ್ ಅವರು ಮುಖ್ಯ ನ್ಯಾಯಾಧೀಶ ಎಸ್.ಎ. ಬೋಬ್ಡೆ ಅವರು ನಾಗಪುರದಲ್ಲಿ ಬಿಜೆಪಿ ನಾಯಕನೊಬ್ಬನಿಗೆ ಸೇರಿದ ಐಷಾರಾಮಿ ಹ್ಯಾರ್ಲೀ ಡೇವಿಡ್‌ಸನ್ ಬೈಕಿನಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಇಲ್ಲದೇ ಕುಳಿತಿದ್ದಕ್ಕಾಗಿ ಅವರನ್ನು ಗುರಿಮಾಡಿ ಟೀಕಿಸಿದ್ದರು.
ಕೃಪೆ: ಜನತಾಕಿರಿಪೋರ್ಟರ್
ಅನುವಾದ: ನಿಖಿಲ್ ಕೋಲ್ಪೆ
ಇದನ್ನೂ ಓದಿ: ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ!


