Homeಮುಖಪುಟಗುತ್ತಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ ಎಂದು ರಿಲಾಯನ್ಸ್‌ನ ಅಂಬಾನಿಗಳು ಹೇಳುತ್ತಿರುವುದು ನಿಜವೆ?

ಗುತ್ತಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ ಎಂದು ರಿಲಾಯನ್ಸ್‌ನ ಅಂಬಾನಿಗಳು ಹೇಳುತ್ತಿರುವುದು ನಿಜವೆ?

ಪ್ರತಿಭಟನಾ ನಿರತ ರೈತರು ರಿಲಾಯನ್ಸ್ ಆಸ್ತಿಪಾಸ್ತಿಗಳಿಗೆ ಹಾನಿಮಾಡಿದ್ದ ಹಿನ್ನಲೆಯಲ್ಲಿ ಕಂಪೆನಿಯು ತನಗೆ ಗುತ್ತಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ ಎಂದು ಹೇಳಿತ್ತು

- Advertisement -
- Advertisement -

ಇಂದು ರಿಲಾಯನ್ಸ್ ಸಂಸ್ಥೆ ಮುದ್ದಾಂ ಆಗಿ ಬಹಳ ಎಚ್ಚರಿಕೆಯಿಂದ ಡ್ರಾಫ್ಟ್ ಮಾಡಿದ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ತಾನು ಈ ಹಿಂದೆಯಾಗಲೀ ಇನ್ನು ಮುಂದೆಯಾಗಲೀ “ಕಾಂಟ್ರಾಕ್ಟ್” ಮತ್ತು “ಕಾರ್ಪೋರೇಟ್” ಫಾರ್ಮಿಂಗ್ ನಲ್ಲಿ ತೊಡಗಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂದು ಹೇಳಿದೆ. ಪತ್ರಿಕಾ ಹೇಳಿಕೆಗೆ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಜಿಯೋ ಟವರ್ ಮೇಲಿನ ರೈತರ ದಾಳಿಗೆ ಬೆದರಿದ ರಿಲಾಯನ್ಸ್: ಗುತ್ತಿಗೆ ಕೃಷಿ ಮಾಡುವುದಿಲ್ಲವೆಂದು ಹೇಳಿಕೆ

6700 ಕ್ಕೂ ಹೆಚ್ಚು ನಗರಗಳಲ್ಲಿ ವರ್ಷಕ್ಕೆ 1,30,566 ಕೋಟಿ ರೂ.ಗಳ ವ್ಯವಹಾರ (2018-19) ನಡೆಸುವ ರಿಲಾಯನ್ಸ್ ರಿಟೇಲ್ ಲಿಮಿಟೆಡ್ ತನ್ನ ಕಚ್ಛಾಮಾಲುಗಳನ್ನು ಹೇಗೆ ಸಂಗ್ರಹಿಸುತ್ತದೆ, ಅದರ ಗುಣಮಟ್ಟವನ್ನು ಹೇಗೆ ಪರಿಶೀಲಿಸಿ ನಿಯಂತ್ರಿಸುತ್ತದೆ ಎಂಬ ಕುತೂಹಲದಿಂದ, ಅವರ ವೆಬ್ ಸೈಟ್ ಗಳನ್ನು ತಡಕಾಡಿದಾಗ ಸಿಕ್ಕಿದ ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

  • ರಿಲಾಯನ್ಸ್ ಫ್ರೆಶ್ ತನ್ನ ವೆಬ್ ಸೈಟಿನಲ್ಲಿ Continuing Reliance’s hallowed tradition of backward integration, Reliance Retail directly partners with a large number of farmers and small vendors in a farm-to-fork model ಎಂದು ಹೇಳುತ್ತದೆ. ಇಲ್ಲಿ ಫಾರ್ಮ್ ಟು ಫೋರ್ಕ್ (ಗದ್ದೆಯಿಂದ ಊಟದ ಬಟ್ಟಲ ತನಕ) ರೈತರ ಜೊತೆ ಪಾಲುದಾರಿಕೆ ಎಂಬ ಬಹಳ ಅಸ್ಪಷ್ಟವಾದ ಮಾಹಿತಿ ಸಿಗುತ್ತದೆ.
  • ಗಮನಾರ್ಹವಾದ ಮಾಹಿತಿ ಸಿಕ್ಕಿದ್ದು, ರಿಲಾಯನ್ಸ್‌ನ ಸ್ವಯಂಸೇವಾ ವಿಂಗ್ ಆಗಿರುವ ರಿಲಾಯನ್ಸ್ ಫೌಂಡೇಷನ್ ವೆಬ್ ಸೈಟಿನಲ್ಲಿ. ಅಲ್ಲಿ, ಅವರ “Reliance Foundation Bharat India Jodo (RF BIJ) ಕಾರ್ಯಕ್ರಮದಡಿ, ಅವರು ಬಹಳ ಸ್ಪಷ್ಟವಾಗಿ ತಮ್ಮ ಸಂಸ್ಥೆಯು ಸೆಪ್ಟಂಬರ್ 2020ರ ಹೊತ್ತಿಗೆ ದೇಶದ 12 ರಾಜ್ಯಗಳಲ್ಲಿ 26 FPO (ರೈತ ಉತ್ಪಾದಕ ಸಂಸ್ಥೆಯ)ಗಳಿಗೆ MENTOR ಆಗಿ ಕೆಲಸ ಮಾಡಿರುವ ಬಗ್ಗೆ ಮತ್ತು ಅವು ಒಟ್ಟಾಗಿ 50 ಕೋಟಿ ರೂಗಳ ವ್ಯವಹಾರ ಮಾಡಿರುವ ಬಗ್ಗೆ ಹೇಳುತ್ತಾರೆ. (ಅದರ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ). ಅಲ್ಲಿ ನೀಡಲಾಗಿರುವ ವಿವರಗಳೆಲ್ಲ, ಈಗ ಸರ್ಕಾರ ತಂದಿರುವ ಹೊಸ ಕೃಷಿ ನೀತಿಗೆ ಅನುಗುಣವಾಗಿಯೇ ಇರುವುದು ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ.

ಇದನ್ನೂ ಓದಿ: ಇತ್ತ ಮಾತುಕತೆ; ಅತ್ತ ರೈತರ ಮೇಲೆ ಅಶ್ರುವಾಯು ದಾಳಿ – ಪ್ರಭುತ್ವದ ದಬ್ಬಾಳಿಕೆ ನೋಡಿ!

  • ಈ ನಡುವೆ, ಒರಿಸ್ಸಾದಲ್ಲಿ ರಿಲಾಯನ್ಸ್ ಫ್ರೆಷ್ ವ್ಯವಹಾರಗಳ ಮಾಡೆಲ್ ಬಗ್ಗೆ ಅಧ್ಯಯನ ನಡೆಸಿರುವ ಉತ್ಕಲ ವಿವಿಯ ವ್ಯವಹಾರ ಆಡಳಿತ ವಿಭಾಗದ ಅಧ್ಯಯನ ತಂಡದ ಅಂತಾರಾಷ್ಟ್ರೀಯ ಸೆಮಿನಾರ್ ಪೇಪರ್ ಒಂದು, ರಿಲಾಯನ್ಸ್ ಫ್ರೆಷ್‌ನ SWOT ವಿಶ್ಲೇಷಣೆ ಮಾಡಿದೆ. ಅದರಲ್ಲಿ “ಕಾಂಟ್ರಾಕ್ಟ್ ಫಾರ್ಮಿಂಗ್” ಸಂಸ್ಥೆಯ ತಾಕತ್ತುಗಳಲ್ಲಿ ಒಂದು ಎಂದು ದಾಖಲಿಸಲಾಗಿದೆ. (ಆ ಸೆಮಿನಾರ್ ಪೇಪರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ)

ರಿಲಾಯನ್ಸ್ ಅಂಬಾನಿ ಬಳಗ ಈ ತನಕ ಕಾಂಟ್ರಾಕ್ಟ್/ಕಾರ್ಪೋರೇಟ್ ಫಾರ್ಮಿಂಗಿಗೆ ಇಳಿದಿದೆಯೋ ಇಲ್ಲವೇ ಎಂಬುದಕ್ಕಿಂತಲೂ, ಸರ್ಕಾರದ ಈಗಷ್ಟೇ ಹೊರಬರುತ್ತಿರುವ “ಹೊಸ ಕೃಷಿ” ನೀತಿಗೆ ಈ ಸಂಸ್ಥೆಯ ಬಹಳ ಹಿಂದೆಯೇ ಸೂಕ್ತ ತಯಾರಿ ನಡೆಸಿದೆ, ರಂಗ ಸಜ್ಜುಮಾಡಿಟ್ಟುಕೊಂಡಿದೆ ಎಂಬುದು ಸ್ಪಷ್ಟ. ಇಲ್ಲಿ ಕಾನೂನು ಬಾಹಿರ ಏನೂ ಇಲ್ಲದಿರಬಹುದು. ಆದರೆ, ಅನೈತಿಕ ಅನ್ನಿಸಬಹುದಾದದ್ದು ಬಹಳ ಇದೆ ಎಂಬುದರಲ್ಲಿ ಏನೂ ಸಂಶಯ ಇಲ್ಲ.

ಈಗ ದಿಲ್ಲಿಯಲ್ಲಿ ಸೇರಿರುವ ರೈತರು ಚೆನ್ನಾಗಿಯೇ ಬಿಸಿ ಮುಟ್ಟಿಸಿರುವುದರಿಂದ, ಮೂಗು ಒತ್ತಿಹೋಗಿರುವುದರಿಂದ ಅಂಬಾನಿ ಬಳಗಕ್ಕೆ ಬಾಯಿ ಕಳೆಯದೇ ಬೇರೆ ದಾರಿ ಇಲ್ಲವಾಗಿದೆ.

ಇದನ್ನೂ ಓದಿ: ಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...