Homeಚಳವಳಿಇತ್ತ ಮಾತುಕತೆ; ಅತ್ತ ರೈತರ ಮೇಲೆ ಅಶ್ರುವಾಯು ದಾಳಿ - ಪ್ರಭುತ್ವದ ದಬ್ಬಾಳಿಕೆ ನೋಡಿ!

ಇತ್ತ ಮಾತುಕತೆ; ಅತ್ತ ರೈತರ ಮೇಲೆ ಅಶ್ರುವಾಯು ದಾಳಿ – ಪ್ರಭುತ್ವದ ದಬ್ಬಾಳಿಕೆ ನೋಡಿ!

ಪ್ರಭುತ್ವವು ಈ ಹೋರಾಟವನ್ನು ತಡೆಯುವ ಸಲುವಾಗಿ ಎಲ್ಲಾ ಹಿಂಬಾಗಿಲ ಕುತಂತ್ರಗಳನ್ನೂ ಬಳಸಿ ವಿಫಲವಾದ ನಂತರ, ಈಗ ಭಯೋತ್ಪಾದಕರ ಮೇಲೆ ದಾಳಿ ಮಾಡುವಂತೆ ರೈತರ ಮೇಲೆ ದಾಳಿ ಮಾಡುತ್ತಿದೆ

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹೋರಾಟವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಆದರೆ ಪ್ರಭುತ್ವವು ಇದನ್ನು ತಡೆಯುವ ಸಲುವಾಗಿ ಎಲ್ಲಾ ಹಿಂಬಾಗಿಲ ಕುತಂತ್ರಗಳನ್ನೂ ಬಳಸಿ ವಿಫಲವಾದ ನಂತರ, ಈಗ ಭಯೋತ್ಪಾದಕರ ಮೇಲೆ ದಾಳಿ ಮಾಡುವಂತೆ ರೈತರ ಮೇಲೆ ದಾಳಿ ಮಾಡುತ್ತಿದೆ. ಹೋರಾಟ ಮಾಡಲು ರಾಷ್ಟ್ರ ರಾಜಧಾನಿಯತ್ತ ಮುನ್ನುಗ್ಗುತ್ತಿರುವ ರೈತರನ್ನು ಚದುರಿಸಲು ಅವರ ಮೇಲೆ ಅಶ್ರುವಾಯು, ಜಲಫಿರಂಗಿಗಳನ್ನು ಬಳಸುತ್ತಿದೆ.

ರೈತರು ಹೊರಟಿದ್ದ ಟ್ರ್ಯಾಕ್ಟರ್‌ಗಳ ಮೇಲೆ ಅಶ್ರುವಾಯು ಶೆಲ್‌ಗಳನ್ನು ಬಳಸಿ ದಾಳಿ ಮಾಡಲಾಗಿದೆ. ರೈತರನ್ನು ನೇರಾನೇರ ಎದುರುಗೊಳ್ಳಲು ಮುಖವಿಲ್ಲದ ಪ್ರಭುತ್ವ ಈಗ ಹಿಂಸೆಯಿಂದ ಹೋರಾಟವನ್ನು ಮಣಿಸಲು ಮುಂದಾಗಿದೆ ಎಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ಕಾಂಗ್ರೆಸ್ ಮುಖಂಡ ರೋಹನ್ ಗುಪ್ತಾ ವೀಡಿಯೋವೊಂದನ್ನು ಟ್ವೀಟ್ ಮಾಡಿ, “ಬಿಜೆಪಿ ಸರ್ಕಾರ ರೈತರ ಕಣ್ಣೀರನ್ನು ಒರೆಸುವ ಬದಲು ಅವರ ಮೇಲೆ ಅಶ್ರುವಾಯು ದಾಳಿ ಮಾಡುತ್ತಿದೆ. ನಿಜಕ್ಕೂ ನಾಚಿಕೆಗೇಡು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಂದು 7 ನೇ ಸುತ್ತಿನ ಮಾತುಕತೆ: ಎರಡು ಪ್ರಮುಖ ಅಂಶಗಳ ಬಗ್ಗೆ ಚರ್ಚೆ

ಇದನ್ನೂ ಓದಿ: ಜಿಯೋ ಟವರ್ ಮೇಲಿನ ರೈತರ ದಾಳಿಗೆ ಬೆದರಿದ ರಿಲಾಯನ್ಸ್: ಗುತ್ತಿಗೆ ಕೃಷಿ ಮಾಡುವುದಿಲ್ಲವೆಂದು ಹೇಳಿಕೆ

ನಿರೂಪಕ ಮತ್ತು ವರದಿಗಾರರಾದ ಸಾಹಿಲ್ ವೀಡಿಯೋವೊಂದನ್ನು ಟ್ವೀಟ್ ಮಾಡಿ, “ಇದು ಯಾವುದೋ ಗಡಿಯಲ್ಲಲ್ಲ. ಜೈಪುರ-ದೆಹಲಿಯ ಹೆದ್ದಾರಿಯಲ್ಲಿ. ರೈತರ ಮೇಲೆ ಅಶ್ರುವಾಯು ದಾಳಿ. ಈ ರೈತರು ಹರಿಯಾಣ, ರಾಜಸ್ತಾನ ಮತ್ತು ಮಹಾರಾಷ್ಟ್ರದಿಂದ ದೆಹಲಿಯ ಕಡೆ ಮೆರವಣಿಗೆ ಹೊರಟಿದ್ದರು. ದೆಹಲಿಯಿಂದ 60 ಕಿ.ಮೀ ದೂರದಲ್ಲಿ ಈ ಘಟನೆ ನಡೆಯುತ್ತಿದೆ. ಶೆಲ್‌ಗಳು ರೈತರ ಟ್ರ್ಯಾಕ್ಟರ್‌ಗಳ ಮೇಲೆ ಬೀಳುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ನೋಡಿದರೆ ಗಡಿಯಲ್ಲಿ ಯುದ್ಧ ನಡೆಯುತ್ತಿರುವಂತೆ ತೋರುತ್ತದೆ. ಆದರೆ ಇದು, “ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಹೇಳುತ್ತಿರುವ ಸರ್ಕಾರ ರೈತರ ಬೆನ್ನೆಲುಬನ್ನು ಮುರಿಯಲು ಬಳಸುತ್ತಿರುವ ಕುತಂತ್ರ.” ಪ್ರಸ್ತುತ ನಮ್ಮನ್ನಾಳುವ ಸರ್ಕಾರಗಳು ಭಯೋತ್ಪಾದಕರ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

ಇದನ್ನೂ ಓದಿ: ಎಸ್ಟಿ ಮೀಸಲು ಹೋರಾಟದ ಹಿಂದೆ RSS: ಕುರುಬ ಸಂಘದಲ್ಲಿ ಸ್ಫೋಟಗೊಂಡ ಅನುಮಾನ!

ಪ್ರತಿಭಟನಾನಿರತ ರೈತರೊಡನೆ ಕೇಂದ್ರ ಸರ್ಕಾರವು ಇದುವರೆಗೆ ಆರು ಸುತ್ತಿನ ಮಾತುಕತೆಗಳನ್ನು ನಡೆಸಿದೆ. ಆದರೆ ಅವುಗಳೆಲ್ಲವೂ ವಿಫಲವಾಗಿವೆ. ಡಿಸಂಬರ್ 30 ರಂದು ನಡೆದ ಮಾತುಕತೆಯಲ್ಲಿ ರೈತರ ಎರಡು ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಅಂದಿನ ಮಾತುಕತೆಯೂ ಅಪೂರ್ಣವಾಗಿತ್ತು. ಇದರ ಮುಂದುವರಿದ ಭಾಗವಾಗಿ ಇಂದು (ಜನವರಿ 4) ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಲಿದೆ.

ಆದರೆ ಇದರ ಮಧ್ಯೆ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಅಶ್ರುವಾಯು ದಾಳಿ ಮಾಡುತ್ತಿದೆ. ಇಲ್ಲಿ ಮಾತುಕತೆಗೆ ಕರೆದು, ಅಲ್ಲಿ ಅವರ ಮೇಲೆ ದಾಳಿ ಮಾಡುತ್ತಿದೆ. ಇದನ್ನು ಖಂಡಿಸಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಕೋವಿಡ್ ಲಸಿಕೆ ಮೂರನೇ ಹಂತದ ಪರಿಣಾಮಕಾರಿತ್ವದ ಡೇಟಾ ಮಿಸ್ಸಿಂಗ್!: ವಿಜ್ಞಾನಿಗಳ ಕಳವಳ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...