Homeಮುಖಪುಟಗ್ರಾ.ಪಂ ಚುನಾವಣೆ: 778 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 498ರಲ್ಲಿ ಆಯ್ಕೆಯಾಗಿ ದಾಖಲೆ ಸೃಷ್ಟಿಸಿದ ಗ್ರಾಕೂಸ್!

ಗ್ರಾ.ಪಂ ಚುನಾವಣೆ: 778 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 498ರಲ್ಲಿ ಆಯ್ಕೆಯಾಗಿ ದಾಖಲೆ ಸೃಷ್ಟಿಸಿದ ಗ್ರಾಕೂಸ್!

ಬೇರೆಲ್ಲಾ ಪಕ್ಷಗಳ ಬೆಂಬಲಿತರಿಗೆ ಹೋಲಿಸಿದರೆ ಗ್ರಾಕೂಸ್‌ ವತಿಯಿಂದ ಚುನಾವಣೆ ಎದುರಿಸಿದವರಲ್ಲಿ ಬಹುತೇಕರು ಆಯ್ಕೆಯಾಗಿದ್ದಾರೆ ಅಂದರೆ ಈ ಗ್ರಾಕೂಸ್‌ ಮೇಲಿನ ಜನರ ನಂಬಿಕೆಯನ್ನು ಅದು ತೋರಿಸುತ್ತದೆ.

- Advertisement -
- Advertisement -

ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶ ಹೊರಬಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಕಸರತ್ತುಗಳು ಆರಂಭವಾಗಿವೆ. ಈ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ಸೇರದೆ ಸ್ವತಂತ್ರವಾಗಿ 778 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ದಾಖಲೆಯ 498 ಜನರು ಆಯ್ಕೆಯಾಗುವ ಮೂಲಕ ಗ್ರಾಮೀಣ ಕೂಲಿಕಾರರ ಸಂಘಟನೆ (ಗ್ರಾಕೂಸ್) ಸಾಧನೆಗೈದಿದೆ.

ಗ್ರಾಮೀಣ ಕೂಲಿಕಾರರ ಸಂಘಟನೆಯು ರಾಯಚೂರು ಜಿಲ್ಲಾ ಕೇಂದ್ರಿತವಾಗಿ ರಾಜ್ಯದ್ಯಾಂತ ಹಲವು ಜಿಲ್ಲೆಗಳಲ್ಲಿ ಗ್ರಾಮೀಣ ಕೂಲಿಕಾರ್ಮಿಕರು, ಮಹಿಳೆಯರನ್ನು ಸಂಘಟಿಸಿ ಅವರ ಸಬಲೀಕರಣಕ್ಕಾಗಿ ಹಲವು ದಶಕಗಳಿಂದ ಹೋರಾಡುತ್ತಿದೆ. ಉದ್ಯೋಗ ಖಾತ್ರಿಯ ಸಮರ್ಪಕ ಅನುಷ್ಠಾನಕ್ಕಾಗಿ, ಮದ್ಯನಿಷೇಧಕ್ಕಾಗಿ ಅದು ಹಲವು ಹೋರಾಟಗಳನ್ನು ಸಂಘಟಿಸಿದೆ. ಅದು 2015ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸುಮಾರು 300 ಜನರು ಆಯ್ಕೆಯಾಗುವುದರೊಂದಿಗೆ ಗಮನ ಸೆಳೆದಿತ್ತು.

ಈ ಬಾರಿ ರಾಯಚೂರಿನೊಂದಿಗೆ ಸುಮಾರು 10 ಜಿಲ್ಲೆಗಳಲ್ಲಿ ಗ್ರಾಮೀಣ ಕೂಲಿಕಾರರ ಸಂಘಟನೆ ಮತ್ತು ಮಹಿಳಾ ಸಂಘಟನೆಗಳು 778 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ಅವರಲ್ಲಿ ದಾಖಲೆಯ 498 ಜನರು ಆಯ್ಕೆಯಾಗಿದ್ದಾರೆ. ಅಂದರೆ ಶೇ. 70ರಷ್ಟು ಜನರು ಆಯ್ಕೆಯಾಗಿದ್ದಾರೆ. 4-5 ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಕೂಸ್ ಸಂಪೂರ್ಣ‌ ಬಹುಮತ ಹೊಂದಿದೆ. 100ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಲ್ಲಿ ಶೇ.10-50ರವರೆಗೆ ನಮ್ಮ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಗ್ರಾಕೂಸ್‌ನ ಮುಖಂಡರಾದ ಅಭಯ್ ತಿಳಿಸಿದ್ದಾರೆ.

ಬೇರೆಲ್ಲಾ ಪಕ್ಷಗಳ ಬೆಂಬಲಿತರಿಗೆ ಹೋಲಿಸಿದರೆ ಇದು ಅತಿ ಹೆಚ್ಚಿನದಾಗಿದೆ. ಅಂದರೆ ಚುನಾವಣೆ ಎದುರಿಸಿದವರಲ್ಲಿ ಬಹುತೇಕರು ಆಯ್ಕೆಯಾಗಿದ್ದಾರೆ ಅಂದರೆ ಈ ಗ್ರಾಕೂಸ್‌ ಮೇಲಿನ ಜನರ ನಂಬಿಕೆಯನ್ನು ಅದು ತೋರಿಸುತ್ತದೆ.

ಈ ಬಾರಿ ಬಿಜೆಪಿ, ಕಾಂಗ್ರೆಸ್‌ನಂತಹ ದೊಡ್ಡ ರಾಜಕೀಯ ಪಕ್ಷಗಳು ನೇರವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭಾಗವಹಿಸಿದ್ದವು. ಮುಖ್ಯವಾಗಿ ಬಿಜೆಪಿಯು ತಮ್ಮ ಶಾಸಕರು, ಜಿ.ಪಂ/ತಾ.ಪಂ ಸಾಕಷ್ಟು ಹಣದ ಹೊಳೆ ಹರಿಸಿ ಚುನಾವಣೆ ಗೆಲ್ಲುವಂತೆ ನಿರ್ದೇಶನ ನೀಡಿತ್ತು. ಆ ಅಭ್ಯರ್ಥಿಗಳು ಒಂದು ವಾರ್ಡ್/ಸ್ಥಾನಕ್ಕೆ ಕನಿಷ್ಠ 3-4 ಲಕ್ಷ ರೂ ಹಣವನ್ನು ಖರ್ಚು ಮಾಡಿದ್ದವು. ಆದರೆ ನಮ್ಮ ಅಭ್ಯರ್ಥಿಗಳು ಕೇವಲ 2000-10000 ರೂ ಮಾತ್ರ ಖರ್ಚು ಮಾಡಿ ಪ್ರಾಮಾಣಿಕವಾಗಿ ಆಯ್ಕೆಯಾಗಿದ್ದೇವೆ ಎಂದು ಅಭಯ್ ಹೇಳಿದ್ದಾರೆ.

ಈ ಚುನಾವಣಾ ಖರ್ಚಿಗಾಗಿ ನಮ್ಮ ಸಂಘಟನೆಯ ಪ್ರತಿಯೊಂದು ಕುಟುಂಬವು ತಲಾ 50 ರೂಗಳ ದೇಣಿಗೆ ನೀಡಿವೆ. ಈ ಹಣದಿಂದಲೇ ನಾವು ಚುನಾವಣೆ ಎದುರಿಸಿದ್ದೇವೆ. ಅಲ್ಲದೇ ಪ್ರಾಮಾಣಿಕವಾಗಿ ಮತ ಕೇಳುವಂತೆ ಮತ್ತು ಗೆದ್ದ ನಂತರ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ನಮ್ಮ ಅಭ್ಯರ್ಥಿಗಳಿಗೆ ನಾವು ಷರತ್ತುಗಳನ್ನು ವಿಧಿಸಿದ್ದೆವು. ಈ ಷರತ್ತುಗಳನ್ನು ಪಾಲಿಸಲಾಗದೇ ಸುಮಾರು 150-200 ಜನರು ಚುನಾವಣೆಗೆ ನಿಂತು ಆಯ್ಕೆಯಾಗಿದ್ದಾರೆ. ಆದರೆ ಅವರನ್ನು ನಮ್ಮವರೆಂದು ನಾವು ಭಾವಿಸಿಲ್ಲ ಮತ್ತು ನಮ್ಮ ಫಲಿತಾಂಶದಲ್ಲಿ ಅವರನ್ನು ಸೇರಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳು ಮತ್ತು ಆಯ್ಕೆಯಾಗದ ಅಭ್ಯರ್ಥಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಗ್ರಾಮಗಳ ಅಭಿವೃದ್ದಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ನಮ್ಮ ಗುರು ಎಂದು ಗ್ರಾಕೂಸ್ ಹೇಳಿಕೆಯಲ್ಲಿ ತಿಳಿಸಿದೆ.

ಮದ್ಯ ನಿಷೇಧ ಆಂದೋಲನದ ಹೋರಾಟಗಾರ್ತಿ ಸ್ವರ್ಣ ಭಟ್ ಮಾತನಾಡಿ “ನಮ್ಮ ಅಭ್ಯರ್ಥಿಗಳಿಗೆ ಪ್ರಾಮಾಣಿಕವಾಗಿ ಚುನಾವಣೆ ಎದುರಿಸುವಂತೆ ಷರತ್ತುಗಳನ್ನು ವಿಧಿಸಿದ್ದೆವು. ಅಲ್ಲದೆ ಬೇರೆ ಪಕ್ಷದ ಉತ್ತಮ ಅಭ್ಯರ್ಥಿಗಳಿಗೂ ಬೆಂಬಲ ನೀಡಿದ್ದೇವೆ. ಆದರೆ ಅದಕ್ಕೂ ಮುನ್ನ ಅವರವರ ಧಾರ್ಮಿಕ ನಂಬಿಕೆಗನುಗುಣವಾಗಿ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳಲ್ಲಿ ಅವರಿಂದ ಪ್ರಾಮಾಣಿಕವಾಗಿ ಜನರ ಕೆಲಸ ಮಾಡುತ್ತೇವೆ. ಭ್ರಷ್ಟಾಚಾರ ಎಸಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿದ್ದೇವೆ” ಎಂದಿದ್ದಾರೆ.


ಇದನ್ನೂ ಓದಿ: ಪಕ್ಷಗಳಿಲ್ಲದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ‘ಈ ಪಕ್ಷಗಳ ಬೆಂಬಲಿತರ’ ಸಾಧನೆ ಎಷ್ಟು?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...