Homeಕರ್ನಾಟಕಭೈರಪ್ಪಾ, ಆಲಯದಿಂದ ಬಯಲಿಗೆ ಬಾರಪ್ಪ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

ಭೈರಪ್ಪಾ, ಆಲಯದಿಂದ ಬಯಲಿಗೆ ಬಾರಪ್ಪ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

- Advertisement -
- Advertisement -

‘‘ದೇಶದಲ್ಲಿ ಸುಮಾರು 35 ಸಾವಿರ ದೇವಾಲಯಗಳು ಒಡೆದು ಛಿದ್ರವಾಗಿವೆ. ಅವುಗಳನ್ನು ಮರುನಿರ್ಮಾಣ ಮಾಡಿ ಮೂಲ ವಾರಸುದಾರರಿಗೆ ಒಪ್ಪಿಸುವಂತಹ ಕಾನೂನನ್ನು ಸಂಸತ್ತು‌ ರೂಪಿಸಲಿ’’ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, “ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನವದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಪಂಜಾಬಿಗಳು ಮಾತ್ರ. ಈ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಕಮ್ಯುನಿಷ್ಟ್‌ ಪಕ್ಷಗಳು ಕೊಳಕು ರಾಜಕೀಯ ಮಾಡುತ್ತಿವೆ” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶದ ಜೊತೆಗೆ ಟ್ರೋಲ್‌ಗೂ ಒಳಗಾಗಿದ್ದಾರೆ. ವೈಚಾರಿಕ ಲೇಖಕ ಯೋಗೇಶ್ ಮೇಷ್ಟ್ರು, ಭೈರಪ್ಪಾ, ಆಲಯದಿಂದ ಬಯಲಿಗೆ ಬಾರಪ್ಪ ಎಂದು ವ್ಯಂಗ್ಯ ವ್ಯಕ್ತಪಡಿಸಿದ್ದು, “ದೇಶದಲ್ಲಿ 35 ಸಾವಿರ ದೇವಾಲಯಗಳು ಒಡೆದು ಛಿದ್ರವಾಗಿವೆ ಎಂಬುದು ಭೈರಪ್ಪನವರ ಲೆಕ್ಕ. ಇದೇ ದೇಶದಲ್ಲಿ ಕೋಟ್ಯಾಂತರ ಹೃದಯಗಳು ಈ ದೇವಾಲಯದ ರಾಜಕಾಣದಲ್ಲಿ ಛಿದ್ರವಾಗಿರುವುದು ನನಗೆ ಪಕ್ಕ. ದೇವಾಲಯಗಳನ್ನು ಮರು ನಿರ್ಮಾಣ ಮಾಡಿ ಅವುಗಳ ಮೂಲ ವಾರಸುದಾರರಿಗೆ ಒಪ್ಪಿಸುವ ಕಾನೂನಲ್ಲ ಪಾರ್ಲಿಮೆಂಟ್ ಮಾಡಬೇಕಾಗಿರುವುದು, ಮನಸುಗಳನ್ನು ಸ್ವಸ್ಥಗೊಳಿಸಿ, ಹೃದಯಗಳನ್ನು ಬೆಚ್ಚಗಿಡುವ ಜರೂರತ್ತು ಎಲ್ಲರಿಗಿರುವುದು” ಎಂದು ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಸಾಹಿತಿ ವಿ. ಆರ್‌. ಕಾರ್ಪೇಂಟರ್‌ ಅವರು, ಲೈಂಗಿಕತೆ ಮತ್ತು ಸ್ವಾರ್ಥಳನ್ನೇ ತನ್ನ ಕಾದಂಬರಿಗಳಲ್ಲಿ ತುಂಬಿ ಬರೆದ, ಮಾನವೀಯತೆಯ ಲವಶೇಷವಿಲ್ಲದ ಭೈರಪ್ಪ ಒಬ್ಬ ತೃತೀಯ ದರ್ಜೆಯ ಲೇಖಕ ಎಂದು ಆಕ್ರೋಶ ವ್ಯಕ್ತಪಡಿಸಿ, “ಐದರಿಂದ ಆರು ಕೋಟಿ ಜನಸಂಖ್ಯೆ ಇರುವ ನಿಮ್ಮ ಜಾತಿಯ ಜನಕ್ಕೆ ಬರೀ 35000 ಟೆಂಪಲ್‌ಗಳ? ಭೈರಪ್ಪ ತುಂಬಾ ಕಂಜೂಸ್ ಅನಿಸ್ತಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ಶರಣು ಚಕ್ರಸಾಲಿ ಅವರು, “ಎಸ್ ಎಲ್ ಭೈರಪ್ಪ ಅವರು ತಮ್ಮ ಶವಪೆಟ್ಟಿಗೆಗೆ ತಾವೇ ಕೊನೆ ಮೊಳೆ ಹೊಡೆದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆ. ಒಬ್ಬ ಲೇಖಕರಾಗಿ ಇಷ್ಟು ಲಜ್ಜಗೇಡಿ ಬದುಕನ್ನು ಬದುಕಬಾರದು. ಇವರ ಬಗ್ಗೆ ಇರುವ ಸಣ್ಣ ಗೌರವ ಕೂಡ ಇವತ್ತು ಮನಸ್ಸಿನಿಂದ ಮಾಯವಾಯಿತು” ಎಂದು ಬರೆದಿದ್ದಾರೆ.

ಸಂವಾದ ಕಾಲೇಜಿನ ಯೂತ್ ಮೇಂಟರ್‌ ಆಗಿರುವ ರುಕ್ಮಿಣಿ ನಾಗಣ್ಣನವರ್‌ ಅವರು, “ಬದುಕೋಕೆ ಮೂಲಭೂತವಾಗಿ ಬೇಕಿರೋದು ಮಂದಿರ, ಮಸೀದಿ, ಚರ್ಚುಗಳ ನಿರ್ಮಾಣವಲ್ಲ. ತಲೆ ಮೇಲೊಂದು ಸೂರು, ಬೆಚ್ಚನೆಯ ಬಟ್ಟೆ, ಹೊದಿಕೆ, ಶುದ್ಧ ಗಾಳಿ, ನೀರು. ಶಿಕ್ಷಣ ಅನ್ನೋ ಫ್ಯಾಕ್ಟ್ರರಿಯಲ್ಲಿ ವರ್ಷ ವರ್ಷ ಲಕ್ಷಾಂತರ ಯುವಜನರು ಡಿಗ್ರಿ ಪಡ್ಕೊಂಡ್ ನಿರುದ್ಯೋಗದ ಸಮಸ್ಯೆಯಿಂದ ತಮ್ಮೊಳಗಿನ ಆತ್ಮವಿಶ್ವಾಸವನ್ನೇ ಉಡುಗಿಸಿಕೊಂಡು ಕೈಚಲ್ಲಿ ಕೂತಿದ್ದಾರೆ. ಇಷ್ಟದ ಓದಿಲ್ಲ, ಓದಿಗೆ ತಕ್ಕನಂಥ ಉದ್ಯೋಗ ಇಲ್ಲ. ಉದ್ಯೋಗಕ್ಕೆ ತಕ್ಕದಾದ ಸಂಬಳ ಇಲ್ಲ. ಘನತೆ ಇದ್ಯಾ? ಪ್ರತಿವರ್ಷ ಎಸ್.ಎಸ್.ಎಲ್.ಸಿ ಪಾಸಾದ ಯುವಜನರಿಗೆ ಕರಿಯರ್ ಮಾರ್ಗದರ್ಶನ ಇಲ್ಲ. ಹರೆಯದಲ್ಲಿ ಅವರು ಅವರದ್ದೇ ಆದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ, ಗೊಂದಲಗಳಿಂದ ಒದ್ದಾಡ್ತಾ ಇದ್ದಾರೆ. ಇಂಥವನ್ನೆಲ್ಲ ಬಿಟ್ಟು… ಇನ್ನೇನೋ ಮಾತಾಡ್ತೀರಲ್ಲ ತಾತ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ಸಾಮಾಜಿಕ ಕಾರ್ಯಕರ್ತ ನಾಗರಾಜ್ ಮೈತ್ರಿ ಅವರು, “ಕೊನೆಯ ಬಾರಿ ಇವರಿಗೆ ಮಿಸ್ ಆಗಿದೆ. ಈ ಸಲಾ ಪಕ್ಕಾ ಇವರಿಗೆ ಕೊಡುತ್ತಾರೆ ಎಂದು ತೋರುತ್ತದೆ. ವರ್ಷದ ಮೊದಲ ವಾರದಲ್ಲೆ ಇವರು ಬ್ಯಾಟಿಂಗ್ ಪ್ರಾರಂಭಿಸಿದ್ದಾಲ್ಲ, ಅದಕ್ಕಾದರೂ ಕೊಡುತ್ತಾರೆ” ಎಂದು, ಜ್ಞಾನಪೀಠಕ್ಕಾಗಿ ಎಸ್‌.ಎಲ್. ಭೈರಪ್ಪ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಸೂಚಿಸಿದ್ದಾರೆ.

ಮೌರ್ಯಾಸ್ ಅವರು, “ಶಾಲೆ ನಿರ್ಮಾಣವಾಗಲಿ ಅನ್ನೋದು ಬಿಟ್ಟು ದೇವಸ್ಥಾನ ನಿರ್ಮಾಣವಾಗಲಿ ಎಂದು ಹೇಳುತ್ತಿರುವ ಸಾಹಿತಿ ಭೈರಪ್ಪ ಇನ್ನೂ ಆಧುನಿಕ ಜಗತ್ತಿಗೆ ಬಂದಿಲ್ಲವೆಂಬುದೇ ದುರಂತ. ಇವರೆಂತಹ ಸಾಹಿತಿ ಎಂಬುದು ಆರ್ಥವಾಗುತ್ತಿದೆ” ಎಂದು ಬರೆದಿದ್ದಾರೆ.

ವಿಠಲ್ ವಗ್ಗನ್ ಅವರು ,”ಶಾಲೆಗಳನ್ನು ಕಟ್ಟಿ ವಿದ್ಯಾವಂತರನ್ನು ಸೃಷ್ಟಿ ಮಾಡಿ ಎಂದು ಸಲಹೆ ಕೊಡದ S. L. ಭೈರಪ್ಪ. ಗುಡಿಗಳನ್ನು ಕಟ್ಟಿ ಭಿಕ್ಷುಕರನ್ನು ಮತ್ತು ಅಂಧ ಭಕ್ತರನ್ನು ಹೆಚ್ಚಿಸಿ ಎಂದು ಸಲಹೆ ಕೊಡುವ ಮನುವ್ಯಾದಿ ಯಾವ ಸೀಮೆ ಸಾಹಿತಿ ?” ಎಂದು ಬರೆದಿದ್ದಾರೆ.

ಗುರುಪ್ರಸಾದ್ ಅವರು, “ಭೈರಪ್ಪನವರಿಗೆ ಇನ್ನೂ ಯಾಕ ಯಾರು ದೇವಸ್ತಾನ ಕಟ್ಟಿಲ್ಲ. ಕಟ್ಟಿಬುಡ್ರೋ ಬೇಗ, ಟ್ರಂಪ್‌ಗೆ ಕಟ್ಟಿದ್ದೀರಂತೆ” ಎಂದು ಬಿಜೆಪಿ ಅಭಿಮಾನಿಗಳನ್ನು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಮೀಸಲಾತಿ ವಿರೋಧಿ-ಮೀಸಲಾತಿ ಹೆಚ್ಚಳ ಬೇಡಿಕೆಯ ರಾಜಕೀಯದ ನಡುವೆ ಸವಲತ್ತು ಉಳಿಸಿಕೊಳ್ಳುವ ಮಸಲತ್ತು!

ಇದನ್ನೂ ಓದಿ: ಮಹಿಷಾಸುರ ತೋಡಾ ಬುಡಕಟ್ಟಿನವನೇ? ನಾಗ ಕುಲದವನೇ? ಬೌದ್ಧ ಅರಸನೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. ನಗೆಯು ಬರುತಿದೆ ನನಗೆ ಈ ಲೇಖನಗಳನ್ನೆಲ್ಲ ನೋಡಿ
    ಅಪ್ಪಟ ಎಡಪಂಥೀಯ/ದೇಶವಿರೋಧಿ ಆಲೋಚನೆಗಳ ವಿವಿಧ ರಾಗಗಳ ಮೇಳಗಳ ಪ್ರಲಾಪ ಎಂದೆನಿಸುತ್ತಿದೆ
    ಮನಸ್ಸಾಕ್ಷಿ ಯೇ ಕಾಣುತ್ತಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...