ಉತ್ತರ ಗಾಜಾದಲ್ಲಿ ನಡೆಸುತ್ತಿರುವ ದಾಳಿಯನ್ನು ತಾತ್ಕಾಲಿಕ ವಿರಾಮ ನೀಡುವುದಾಗಿ ಇಸೇಲ್ ಹೇಳಿದೆ. ನಾವು ಹಮಾಸ್‌ಗೆ ಶರಣಾಗಿದ್ದೇವೆ ಎಂದು ಭಾವಿಸಬೇಡಿ, ಕದನ ವಿರಾಮ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
”ಹಮಾಸ್‌ನೊಂದಿಗೆ ಕದನ ವಿರಾಮ ಎಂದರೆ, ಹಮಾಸ್‌ಗೆ ಶರಣಾದಂತೆ, ಉಗ್ರವಾದಕ್ಕೆ ಶರಣಾದಂತೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಇಲ್ಲ” ಎಂದು ನೆತನ್ಯಾಹು ಹೇಳಿದ್ದಾರೆ.
”ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶ ಇಲ್ಲ. ಗಾಜಾವನ್ನು ಆಳಲು ನಾವು ಬಯಸುವುದಿಲ್ಲ, ನಾವು ಅದನ್ನು ವಶಪಡಿಸಿಕೊಳ್ಳುವುದಿಲ್ಲ. ನಾವು ನಮಗೆ ಮತ್ತು ಗಾಜಾಕ್ಕೆ ಉತ್ತಮ ಭವಿಷ್ಯ ನೀಡಲು ಯತ್ನಿಸುತ್ತೇವೆ” ಎಂದು ಹೇಳಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ವಿರಾಮಗಳನ್ನು ಸ್ವಾಗತಿಸಿದರು. ಉತ್ತರ ಗಾಜಾದಲ್ಲಿ ವಿನಾಶದಿಂದ ಪಾರಾಗಲು ಪ್ಯಾಲೆಸ್ಟೀನಿಯಾದವರಿಗೆ ಔಪಚಾರಿಕಗೊಳಿಸಿದ್ದಾರೆ, ಆದರೆ ಕದನ ವಿರಾಮದ “ಯಾವುದೇ ಸಾಧ್ಯತೆ” ಇಲ್ಲ ಎಂದು ಹೇಳಿದರು.
ಅಕ್ಟೋಬರ್ 7 ರಂದು ಹಮಾಸ್ ಹೋರಾಟಗಾರರು 1,400 ಜನರನ್ನು ಕೊಂದು, ಬಹುತೇಕ ನಾಗರಿಕರನ್ನು ಮತ್ತು ಸುಮಾರು 240 ಒತ್ತೆಯಾಳುಗಳನ್ನಾಗಿಸಿಕೊಂಡರು. ಆ ನಂತರ ಪ್ರಾರಂಭವಾದ ಆಕ್ರಮಣದಲ್ಲಿ ಇಸ್ರೇಲಿ ಪಡೆಗಳು “ಅಸಾಧಾರಣವಾಗಿ” ಕಾರ್ಯನಿರ್ವಹಿಸುತ್ತಿವೆ ಎಂದು ನೆತನ್ಯಾಹು ಹೇಳಿದರು.
ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿ 4 ಸಾವಿರಕ್ಕೂ ಅಧಿಕ ಮಕ್ಕಳು ಸೇರಿ 10 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಹಮಾಸ್ ಅನ್ನು ನಾಶಮಾಡುವುದಾಗಿ ಪ್ರತಿಜ್ಞೆ ಮಾಡಿದ ಇಸ್ರೇಲ್ ವೈಮಾನಿಕ ಬಾಂಬ್ ದಾಳಿ ಮತ್ತು ನೆಲದ ಆಕ್ರಮಣ ನಡೆಸಿದೆ. ಈ ಇಸ್ರೇಲ್ ದಾಳಿಯಲ್ಲಿ 10,800 ಕ್ಕೂ ಹೆಚ್ಚು ಜನರು, ಅದರಲ್ಲಿ ಹೆಚ್ಚಾಗಿ ನಾಗರಿಕರು ಮತ್ತು ಮಕ್ಕಳನ್ನು ಕೊಲ್ಲಲಾಗಿದೆ ಎಂದು ಗಾಜಾ ಪಟ್ಟಿಯಲ್ಲಿರುವ ಆರೋಗ್ಯ ಸಚಿವಾಲಯ ತಿಳಿಸಿದೆ.
ದಾಳಿಯಿಂದಾಗಿ ನವೆಂಬರ್ 4ರ ಬಳಿಕ ಸುಮಾರು 70 ಸಾವಿರ ಮಂದಿ ದಕ್ಷಿಣ ಭಾಗಕ್ಕೆ ಗುಳೆ ಹೋಗಿದ್ದಾರೆ. ಈ ಪೈಕಿ ಬಹು ಮಂದಿ ನಡೆದುಕೊಂಡೇ ಊರು ತೊರೆದಿದ್ದಾರೆ. ಅಂತರಿಕವಾಗಿ 16 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಸಾವಿರಾರು ಮಂದಿ ಯುದ್ಧಭೂಮಿಯಲ್ಲಿ ಉಳಿದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇದನ್ನೂ ಓದಿ: ಯುದ್ಧ ಪೀಡಿತ ಗಾಝಾದಲ್ಲಿ 61% ಉದ್ಯೋಗ ನಷ್ಟ: ILO ವರದಿ


