ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ತಮ್ಮ ಅಪರೂಪದ ಶುಕ್ರವಾರದ ಭಾಷಣದಲ್ಲಿ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಪ್ಯಾಲೆಸ್ತೀನ್ ಮತ್ತು ಲೆಬನಾನಿನ ಚಳುವಳಿಗಳನ್ನು ಬೆಂಬಲಿಸಿದ್ದು, “ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ” ಎಂದು ಹೇಳಿದ್ದಾರೆ. ಟೆಹ್ರಾನ್‌ನ ಮಸೀದಿಯೊಂದರಲ್ಲಿ ಹತ್ತಾರು ಸಾವಿರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಖಮೇನಿ, ಇಸ್ರೇಲ್ ಮೇಲೆ ಇರಾನ್‌ನ ಕ್ಷಿಪಣಿ ದಾಳಿಯನ್ನು “ಸಾರ್ವಜನಿಕ ಸೇವೆ” ಎಂದು ಸಮರ್ಥಿಸಿಕೊಂಡಿದ್ದಾರೆ.ಇಸ್ರೇಲ್ ಹೆಚ್ಚು ಕಾಲ ಉಳಿಯಲ್ಲ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹಮಾಸ್ ಅಥವಾ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ಮೇಲುಗೈ ಸಾಧಿಸುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. “ನಾವು ನಿಮ್ಮೊಂದಿಗಿದ್ದೇವೆ” ಎಂಬ ಅವರ ಘೋಷಣೆಯು ವಿಶಾಲವಾದ ಮಸೀದಿ ಮೈದಾನದಲ್ಲಿ ಪ್ರತಿಧ್ವನಿಸಿದವು.ಇಸ್ರೇಲ್ ಹೆಚ್ಚು ಕಾಲ ಉಳಿಯಲ್ಲ
ಕಳೆದ ಐದು ವರ್ಷಗಳಲ್ಲಿ ಇದು ಖಮೇನಿ ಅವರ ಮೊದಲ ಶುಕ್ರವಾರದ ಧರ್ಮೋಪದೇಶ ಭಾಷಣವಾಗಿದೆ. ಅವರ ಜೀವಕ್ಕೆ ಇರುವ ಬೆದರಿಕೆಗಳ ನಡುವೆಯು ಅವರು ಪ್ರತಿಭಟನೆಯ ಭಾಗವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ ಇರಾನ್ ಹಾರಿಸಿದ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದ್ದು, ಖಮೇನಿಯನ್ನು ಪ್ರಮುಖ ಗುರಿಯಾಗಿಸಿದೆ.
ಇದನ್ನೂಓದಿ: ‘ಮಗಳು ಸೆಕ್ಸ್ ರಾಕೆಟ್‌ನಲ್ಲಿ ಸಿಲುಕಿದ್ದಾಳೆ’ ಎಂದು ಹಣಕ್ಕೆ ಬೇಡಿಕೆ; ಹೃದಯಾಘಾತದಿಂದ ಪ್ರಾಣಬಿಟ್ಟ ಶಾಲಾ ಶಿಕ್ಷಕಿ
ಖಮೇನಿ ತಮ್ಮ ಭಾಷಣದಲ್ಲಿ ಕಳೆದ ವಾರ ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್ ಬೆಂಬಲಿತ ಲೆಬನಾನ್ ಬಂಡುಕೋರ ಗುಂಪಿನ ಹಿಜ್ಬುಲ್ಲಾದ ಮಾಜಿ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಶ್ಲಾಘಿಸಿದ್ದಾರೆ.
“ಸಯ್ಯದ್ ಹಸನ್ ನಸ್ರಲ್ಲಾ ಅವರು ಇನ್ನು ಮುಂದೆ ನಮ್ಮೊಂದಿಗಿಲ್ಲ, ಆದರೆ ಅವರ ಆತ್ಮ ಮತ್ತು ಅವರ ಮಾರ್ಗವು ನಮ್ಮನ್ನು ಶಾಶ್ವತವಾಗಿ ಪ್ರೇರೇಪಿಸುತ್ತದೆ. ಅವರು ಝಿಯೋನಿಸ್ಟ್ ಶತ್ರುಗಳ ವಿರುದ್ಧ ಉನ್ನತ ಧ್ವಜವಾಗಿದ್ದರು. ಅವರ ಹುತಾತ್ಮತೆಯು ಈ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಹೆಜ್ಬೊಲ್ಲಾ ಸಂಘಟನೆಯನ್ನು ನಸ್ರಲ್ಲಾ ಅವರ ನಾಯಕತ್ವದಲ್ಲಿ ಸ್ಥಿರವಾಗಿ ಬೆಳೆದ “ಆಶೀರ್ವಾದದ ಮರ” ಎಂದು ಖಮೇನಿ ಅವರು ಬಣ್ಣಿಸಿದ್ದಾರೆ. “ಲೆಬನಾನ್‌ನ ರಕ್ತಸಿಕ್ತ ಜನರಿಗೆ ಸಹಾಯ ಮಾಡುವುದು ಮತ್ತು ಲೆಬನಾನ್‌ನ ಜಿಹಾದ್ ಮತ್ತು ಅಲ್-ಅಕ್ಸಾ ಮಸೀದಿಗಾಗಿ ಯುದ್ಧವನ್ನು ಬೆಂಬಲಿಸುವುದು ಎಲ್ಲಾ ಮುಸ್ಲಿಮರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ” ಎಂದು ಅವರು ಘೋಷಿಸಿದ್ದಾರೆ.
ಇದನ್ನೂಓದಿ: ‘ಇಸ್ರೇಲಿ ಟೈಮ್ ಮೆಷಿನ್’ ಬಳಿಸಿ ಯುವಕರನ್ನಾಗಿ ಮಾಡುತ್ತೇವೆ ಎಂದು ₹35 ಕೋಟಿ ವಂಚನೆ: ಉತ್ತರ ಪ್ರದೇಶದಲ್ಲಿ ಘಟನೆ!
ಪ್ಯಾಲೆಸ್ತೀನಿ ಹಮಾಸ್ ಗುಂಪನ್ನು ಬೆಂಬಲಿಸಿರುವ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ, ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ಅಕ್ಟೋಬರ್ 7 ರ ದಾಳಿಯನ್ನು “ಸರಿಯಾದ ಕ್ರಮ” ಎಂದು ಕರೆದಿದ್ದಾರೆ.
“ಜಿಯೋನಿಸ್ಟ್‌ಗಳು ಮತ್ತು ಅಮೆರಿಕನ್ನರು ಕನಸು ಕಾಣುತ್ತಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಝಿಯೋನಿಸ್ಟ್ ಘಟಕವನ್ನು ನೆಲದಿಂದ ಕಿತ್ತುಹಾಕಲಾಗುತ್ತದೆ. ಅದಕ್ಕೆ ಯಾವುದೆ ಬೇರುಗಳಿಲ್ಲ, ಅದು ನಕಲಿಯಾಗಿದ್ದು, ಅಸ್ಥಿರವಾಗಿದೆ ಮತ್ತು ಅಮೇರಿಕದ ಬೆಂಬಲದಿಂದ ಮಾತ್ರ ಅಸ್ತಿತ್ವದಲ್ಲಿದೆ” ಎಂದು ಖಮೇನಿ ಹೇಳಿದ್ದಾರೆ.
ಇರಾನ್‌ನಲ್ಲಿ ಅತ್ಯುನ್ನತ ಅಧಿಕಾರವನ್ನು ಹೊಂದಿರುವ ಸರ್ವೋಚ್ಚ ನಾಯಕ ಖಮೇನಿ ಅವರು ಐದು ವರ್ಷಗಳ ಹಿಂದೆ ಕೊನೆಯ ಶುಕ್ರವಾರದಂದು ಭಾಷಣ ಮಾಡಿದ್ದರು. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಖಾಸೆಮ್ ಸೊಲೈಮಾನಿ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ ಇರಾಕ್‌ನಲ್ಲಿರುವ ಯುಎಸ್ ಸೇನಾ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ ಅವರು ಕೊನೆಯದಾಗಿ ಜನವರಿ 2020 ರಲ್ಲಿ ಶುಕ್ರವಾರದಂದು ಸಾರ್ವಜನಿಕವಾಗಿ ಭಾಷಣ ಮಾಡಿದ್ದರು.
ಇರಾನ್ ತನ್ನ ದೇಶದ ದಕ್ಷಿಣ ಮತ್ತು ಉತ್ತರದಲ್ಲಿ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಹಮಾಸ್ ಮತ್ತು ಹೆಜ್ಬೊಲ್ಲಾ ಎರಡನ್ನೂ ಬೆಂಬಲಿಸುತ್ತದೆ.
ವಿಡಿಯೊ ನೋಡಿ: ‘ಅಂಬೇಡ್ಕರ್ ರಚಿಸಲಿದ್ದ ಸಂವಿಧಾನವನ್ನು ಗುರಿಯಾಗಿಸಿಕೊಂಡಿದ್ದವರ ಮೊದಲ ಗುಂಡು ಬಿದ್ದಿದ್ದು ಗಾಂಧಿ ಎದೆಗೆ’: ಎ ನಾರಾಯಣ


