“ಇಸ್ರೇಲ್ ನಿರ್ಮಿತ ಟೈಮ್ ಮೆಷಿನ್” ಮೂಲಕ ಯುವಕರನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿ ಹತ್ತಾರು ವೃದ್ಧರಿಗೆ ₹35 ಕೋಟಿ ವಂಚಿಸಿರುವ ವಿಲಕ್ಷಣಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆರೋಪಿಗಳನ್ನು ರಾಜೀವ್ ಕುಮಾರ್ ದುಬೆ ಮತ್ತು ಅವರ ಪತ್ನಿ ರಶ್ಮಿ ದುಬೆ ಎಂದು ಗುರುತಿಸಲಾಗಿದ್ದು, ಅವರು ಕಾನ್ಪುರದಲ್ಲಿ ರಿವೈವಲ್ ವರ್ಲ್ಡ್ ಎನ್ನುವ ಥೆರಪಿ ಸೆಂಟರ್ ನಡೆಸುತ್ತಿದ್ದರು ಎಂದು ವರದಿ ಹೇಳಿದೆ.ಇಸ್ರೇಲಿ ಟೈಮ್ ಮೆಷಿನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಸ್ರೇಲ್‌ನಿಂದ ತರಲಾದ ಯಂತ್ರವನ್ನು ಬಳಸಿ 60 ವರ್ಷದ ವ್ಯಕ್ತಿಯನ್ನು 25 ವರ್ಷ ವಯಸ್ಸಿನವರನ್ನಾಗಿ ಪರಿವರ್ತಿಸುತ್ತೇವೆ ಎಂದು ಪ್ರತಿಪಾದಿಸಿ ಜನರನ್ನು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. “ಆಕ್ಸಿಜನ್ ಥೆರಪಿ” ಮೂಲಕ ವಯಸ್ಸಾದ ವ್ಯಕ್ತಿಗಳನ್ನು ಪುನಃ ಯುವಕರನ್ನಾಗಿ ಮಾಡುತ್ತೇವೆ ಎಂದು ದಂಪತಿ ತಮ್ಮ ಗ್ರಾಹಕರಿಗೆ ಭರವಸೆ ನೀಡಿ ನಂಬಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂಓದಿ: ತಮಿಳುನಾಡು : ಜಾತಿ ತಾರತಮ್ಯ ಪ್ರತಿಭಟಿಸಿದ ಬುಡಕಟ್ಟು ಪಂಚಾಯತ್ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು
ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ”ಕಲುಷಿತ ಗಾಳಿಯಿಂದಾಗಿ ಜನರು ವೇಗವಾಗಿ ವಯಸ್ಸಾಗುತ್ತಿದ್ದಾರೆ. ‘ಆಕ್ಸಿಜನ್ ಥೆರಪಿ’ ಪಡೆದರೆ ತಿಂಗಳೊಳಗೆ ಅವರು ಯುವಕರಾಗಿ ಪರಿವರ್ತನೆಯಾಗುತ್ತಾರೆ ಎಂದು ಹೇಳಿ ದಂಪತಿ ಜನರನ್ನು ವಂಚಿಸಿದ್ದಾರೆ.
”10 ಅವಧಿಗಳಿಗೆ ₹6,000 ಮತ್ತು ಮೂರು ವರ್ಷಗಳ ರಿವಾರ್ಡ್ ವ್ಯವಸ್ಥೆಗೆ ₹90,000 ಪ್ಯಾಕೇಜ್‌ಗಳನ್ನು ಅವರು ಗ್ರಾಹಕರಿಗೆ ನೀಡಿದ್ದರು’’ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಜಲಿ ವಿಶ್ವಕರ್ಮ ತಿಳಿಸಿದ್ದಾರೆ.ಇಸ್ರೇಲಿ ಟೈಮ್ ಮೆಷಿನ್
ಭಾರೀ ವಂಚನೆಗೆ ಒಳಗಾದವರಲ್ಲಿ ಒಬ್ಬರಾದ ರೇಣು ಸಿಂಗ್ ಅವರು ದಂಪತಿ ತಮಗೆ ₹10.75 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ನೂರಾರು ಜನರಿಗೆ ಸುಮಾರು ₹35 ಕೋಟಿ ವಂಚಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ರೇಣು ಸಿಂಗ್ ದೂರಿನ ಮೇರೆಗೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ದಂಪತಿಗಾಗಿ ಹುಡುಕಾಟ ನಡೆಸುತ್ತಿದ್ದು, ಆರೋಪಿಗಳು ವಿದೇಶಕ್ಕೆ ಪರಾರಿಯಾಗಿರುವ ಶಂಕೆ ಇದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂಓದಿ: ‘ಅಂಬೇಡ್ಕರ್ ರಚಿಸಲಿದ್ದ ಸಂವಿಧಾನವನ್ನು ಗುರಿಯಾಗಿಸಿಕೊಂಡಿದ್ದವರ ಮೊದಲ ಗುಂಡು ಬಿದ್ದಿದ್ದು ಗಾಂಧಿ ಎದೆಗೆ’: ಎ ನಾರಾಯಣ


